ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ :- 02/07/2024 ರಿಂದ 03/07/2024. ಸಮಯ:- ಬೆಳಿಗ್ಗೆ 10AM ರಿಂದ 12PM, ರೇಷನ್ ಕಾರ್ಡ್ ನಲ್ಲಿನ ತಿದ್ದುಪಡಿಗೆ ಸಂಬಂಧ ಪಟ್ಟಂತೆ ರೇಷನ್ ಕಾರ್ಡ್ ನಲ್ಲಿನ ಸದಸ್ಯರನ್ನು ತೆಗೆಸುವುದು ( ಡಿಲೀಟ್} ಮಾಡಿಸುವವರಿದ್ದರೆ ಇಂದು ಮದ್ಯಾಹ್ನ 2 ಘಂಟೆಯಿಂದ ಸಾಯಂಕಾಲ 4 ಘಂಟೆ ವರೆಗೆ ಪ್ರಾರಂಭ ಇರುತ್ತದೆ,
ಸೂಚನೆ : ಅರ್ಜಿ ಸಲ್ಲಿಕೆ ಮದ್ಯದಲ್ಲಿ ಸರ್ವರ್ ಸಮಸ್ಯೆ ಎದುರಾದಲ್ಲಿ ನಾವು ಜವಾಬ್ದಾರರಲ್ಲ. ಆಹಾರ ಇಲಾಖೆಯ ನಿಯಮಾವಳಿಗಳು ಅನ್ವಯಿಸುತ್ತವೆ 2 ದಿನ ಕಾಲಾವಕಾಶ.
ಉಚಿತ ಆರೋಗ್ಯ ತಪಾಸಣೆ ಶಿಬಿರ
ಶಕ್ತಿನಗರ : ರಾಯಚೂರು ತಾಲ್ಲೂಕಿನ ಮರ್ಚೆಡ್ ಕಾರ್ಯಕ್ಷೇತ್ರದ ಸ್ಫೂರ್ತಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಈ ಗಣ್ಯರು ಚಾಲನೆ ನೀಡಿದರು. ದೃಷ್ಟಿ ಆಸ್ಪತ್ರೆಯ ಸಿಬ್ಬಂದಿ, ಸಂಘದ ಸದಸ್ಯರಿಗೆ ಕಣ್ಣು ತಪಾಸಣೆ ಮತ್ತು ಬಿಪಿ, ಶುಗರ್ ತಪಾಸಣೆ ಮಾಡಿದರು. 21 ಜನರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಶಿವಾಜಿ, ಒಕ್ಕೂಟ ಅಧ್ಯಕ್ಷ ಮೈಮುನ್ನಿಸ್, ದೃಷ್ಟಿ ಆಸ್ಪತ್ರೆಯ ಸಿಬ್ಬಂದಿ ನರಸಪ್ಪ ಮುಸ್ತಫಾ, ಸರ್ಕಾರಿ ಆರೋಗ್ಯ ಸಹಾಯಕ ಶ್ರೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನ್ಯಾಸಕ ಗಿರಿಜ, ಮರ್ಚೆಡ್ ಗ್ರಾಮ ಪಂಚಾಯತಿಯ ಸದಸ್ಯ ಅನಿಲ್ ನಾಗೇಶ, ವಲಯದ ಮೇಲ್ವಿಚಾರಕ ವಿಜಯಲಕ್ಷ್ಮಿ ಇತರರಿದ್ದರು.
ಸರ್ಕಾರದ ಭ್ರಷ್ಟಾಚಾರ ಖಂಡಿಸಿ ರಾಜ್ಯಪಾಲರಿಗೆ ಮನವಿ
ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ರೈತರ ಪ್ರೋತ್ಸಾಹ ಧನ ಬಿಡುಗಡೆ, ಬೆಲೆ ಏರಿಕೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ರೈತ ಮೋರ್ಚಾ ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ಕರೂರ ಮನವಿ ಸಲ್ಲಿಸಿ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಪ್ರೋತ್ಸಾಹ ಧನಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಪಶುಪಲನಾ ಇಲಾಖೆ ಇತರೆ ಖರ್ಚು ವೆಚ್ಚಗಳಿಗೆ ಬಳಕೆಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಷಯದ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನು ನೀಡಬೇಕು.
ಬಾಕಿ ಉಳಿದಿರುವ ಎಂಟು ತಿಂಗಳ ಹಣವನ್ನು ಯಾವಾಗ ಕೊಡುತ್ತಾರೆ ಎಂದು ರೈತರು ಪ್ರಶ್ನಿಸಿದರೆ, ಹಾಲು ಒಕ್ಕೂಟದ ಅಧಿಕಾರಿಗಳು ಸಹಕಾರಿ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಸಹಕಾರ ಇಲಾಖೆಯವರು ಆರ್ಥಿಕ ಇಲಾಖೆ ಮೇಲೆ ಬೊಟ್ಟು ಮಾಡುತ್ತಾರೆ. ಈ ಗೊಂದಲದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. ರಮೇಶ ವಕ್ಕರ ಪ್ರಧಾನ ಕಾರ್ಯದರ್ಶಿ ರೈತ ಮೋರ್ಚಾ ಬಿಜೆಪಿ ಜಿಲ್ಲೆ ಇವರು ಮಾತನಾಡಿ, ರಾಜ್ಯ ಸರ್ಕಾರ ಹಾಲಿನ ಪ್ರೋತ್ಸಹ ಧನವೂ ರೈತರಿಗೆ ನೀಡಿಲ್ಲ ಇಲ್ಲ. ಬರ ಪರಿಹಾರದ ಹಣವೂ ಇಲ್ಲ. ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಭೂ ಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ. ರೈತ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಲಾಗಿದೆ.
ದುಪ್ಪಟ್ಟು ಹಣವನ್ನು ವಿದ್ಯುತ್ ಟ್ರಾನ್ಸ್ ಫಾರ್ಮ‌್ರಗಳಿಗೆ ನೀಡುವಂತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆಮಾಡಲಾಗಿದೆ, ಮುದ್ರಾಂಕ ದರವನ್ನು ಏರಿಸಿದೆ. ಆಸ್ತಿ ನೋಂದಣಿ ಶೇ.30 ರಷ್ಟು ಹೆಚ್ಚಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಯಾಕೆ ಪ್ರಾರಂಭಿಸಿಲ್ಲ, 824 ರೈತರ ಆತ್ಮಹತ್ಯೆಗೆ ಕಾರಣಗಳೇನು? ಮತ್ತು ರೈತರಿಗೆ ಅತ್ಯಂತ ನಿಕಟವಾಗಿರುವ ಇಲಾಖೆ ಕಂದಾಯ ಇಲಾಖೆ, ಆ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೇ.40 ಸರ್ಕಾರ ಎಂದಿದ್ದ ಕಾಂಗ್ರೆಸ್ ಈಗ ಅದೇ ಆರೋಪ ಎದುರಿಸುತ್ತಿದೆ ಎಂದುಮನವಿ
ಗದಗ : ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ರೈತರ ಪ್ರೋತ್ಸಾಹ ಧನ ಬಿಡುಗಡೆ, ಬೆಲೆ ಏರಿಕೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ರೈತ ಮೋರ್ಚಾ ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ಕರೂರ ಮನವಿ ಸಲ್ಲಿಸಿ ಮಾತನಾಡಿ, ರಾನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಬೆಲೆ ಏರಿಕೆಯನ್ನು ಬಳುವಳಿಯಾಗಿ ಕೊಟ್ಟ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ, ಪಶು ಆಹಾರಕ್ಕೆ ಪ್ರತಿ ಮೆಟ್ರಿಕ್ ಟನ್ ಗೆ ರೂ. 500 ಹೆಚ್ಚಿಸಿದೆ. ಹಾಲಿನ ದರವನ್ನು ರೂ.4ರಷ್ಟನ್ನು ಏರಿಸಿ ಆ ಹಣವನ್ನು ರೈತರಿಗೆ ತಲುಪಿಸಲಾಗುವುದು ಎಂದು ಹೇಳಿಕೆ ಕೊಟ್ಟು, ಏಕೆ ರೈತರಿಗೆ ತಲುಪಿಸಿಲ್ಲ.
ಮತ್ತೆ ಈಗ ಅದೇ ಕಾರಣವನ್ನು ನೀಡಿ 2 ರೂ. ಹೆಚ್ಚಿಸಲಾಗಿದೆ. ಒಟ್ಟು ಈ 6ರೂಗಳನ್ನು ಯಾವಾಗ ರೈತರಿಗೆ ನೀಡುತ್ತೀರ? ಇಷ್ಟೆಲ್ಲಾ ರಾಜ್ಯದ ಕಾಂಗ್ರೇಸ್ ಸರ್ಕಾರದ ರೈತ ವಿರೋಧಿ ಧೋರಣೆಗಳಿದ್ದುಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಪ್ರೋತ್ಸಾಹ ಧನಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಪಶುಪಲನಾ ಇಲಾಖೆ ಇತರೆ ಖರ್ಚು ವೆಚ್ಚಗಳಿಗೆ ಬಳಕೆಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಷಯದ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನು ನೀಡಬೇಕು. ಬಾಕಿ ಉಳಿದಿರುವ ಎಂಟು ತಿಂಗಳ ಹಣವನ್ನು ಯಾವಾಗ ಕೊಡುತ್ತಾರೆ ಎಂದು ರೈತರು ಪ್ರಶ್ನಿಸಿದರೆ, ಹಾಲು ಒಕ್ಕೂಟದ ಅಧಿಕಾರಿಗಳು ಸಹಕಾರಿ ಇಲಾಖೆಯತ್ತ ಆಕ್ರೋಶ ವ್ಯಕ್ತಪಡಿಸಿದ ಅವರು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ನೀಗದ ರಕ್ತದ ಕೊರತೆ
ಜಗತ್ತಿನಲ್ಲಿ ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗದ ವಸ್ತುಗಳಲ್ಲಿ ರಕ್ತ ಪ್ರಮುಖವಾದದ್ದು. ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂವರ ಜೀವ ಉಳಿಸಬಹುದು. ಒಂದೆಡೆ ಹೆಚ್ಚುತ್ತಿರುವ ಅಪಘಾತ ಪ್ರಮಾಣ, ರೋಗಿಗಳು, ರಕ್ತಹೀನತೆ ಸಮಸ್ಯೆಯಿಂದ ರಕ್ತಕ್ಕಾಗಿ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ರಕ್ತದಾನಿಗಳ ಕೊರತೆಯಿಂದ ರಕ್ತದ ಕೊರತೆ ಕಾಡುತ್ತಿದೆ. ಬೇಡಿಕೆ ಹೆಚ್ಚಿದ್ದರೂ ಜಿಲ್ಲೆಯ ರಕ್ತನಿಧಿ ಕೇಂದ್ರಗಳಿಗೆ ಸಕಾಲಕ್ಕೆ ಅಗತ್ಯ ಇರುವವರಿಗೆ ರಕ್ತ ಪೂರೈಸುವುದು ಸವಾಲಾಗಿದೆ.
ಹುಬ್ಬಳ್ಳಿ ಮಹಾನಗರ ಹೇಗೆ ವಾಣಿಜ್ಯನಗರಿಯಾಗಿ ಜನರನ್ನು ತನ್ನತ್ತ ಸೆಳೆಯುತ್ತಿದೆಯೋ ಹಾಗೇ ಇಡೀ ಉತ್ತರ ಕರ್ನಾಟಕ ಭಾಗದ ಜನರು ಆರೋಗ್ಯಸೇವೆಗಾಗಿಯೂ ಹುಬ್ಬಳ್ಳಿ ಅವಲಂಬಿಸಿದ್ದಾರೆ. ಅಪಘಾತಕ್ಕೊಳಗಾದವರು, ಹೆರಿಗೆಗಾಗಿ ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚೆ ಇದೆ. ಕಿಮ್ಸ್, ಜಿಲ್ಲಾ ಆಸ್ಪತ್ರೆ ಸಮೇತ ಜಿಲ್ಲೆಯಲ್ಲಿರುವ ಪ್ರಮುಖ ಆಸ್ಪತ್ರೆಗಳಲ್ಲಿ ರಕ್ತನಿಧಿ ಕೇಂದ್ರಗಳಿರುವುದರಿಂದ ಆಯಾ ಆಸ್ಪತ್ರೆಯಲ್ಲಿ ಅಗತ್ಯವಿರುವ ರಕ್ತವನ್ನು ಅಲ್ಲಲ್ಲಿಯೇ ಸಂಗ್ರಹಿಸಿ ಹೊಂದಿಸಲಾಗುತ್ತಿದೆ.
2023-24ನೇ ಸಾಲಿನಲ್ಲಿ ಕಿಮ್ಸ್‌ನಲ್ಲಿ 18,942 ಯುನಿಟ್, ರಾಷ್ಟೋತ್ಥಾನ ರಕ್ತನಿಧಿ ಕೇಂದ್ರದಲ್ಲಿ 8,145 ಯುನಿಟ್, ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತನಿಧಿಯಲ್ಲಿ 1746 ಯುನಿಟ್, ಧಾರವಾಡ ರಕ್ತನಿಧಿ ಕೇಂದ್ರದಲ್ಲಿ 2,465 ಯುನಿಟ್, ಪ್ರೇಮಬಿಂದು ರಕ್ತನಿಧಿಯಲ್ಲಿ 4,200 ಯುನಿಟ್, ನವನಗರದ ಕೆಸಿಟಿ&ಆರ್‌ಐ ರಕ್ತನಿಧಿಯಲ್ಲಿ 2,500, ಸುಚಿರಾಯು ಬ್ಲಡ್ ಬ್ಯಾಂಕ್‌ನಲ್ಲಿ 2,274 ಯುನಿಟ್, ಎಸ್‌ಡಿಎಂ ವೈದ್ಯಕೀಯ ಮತ್ತು ವಿಜ್ಞಾನ ಆಸ್ಪತ್ರೆಯಲ್ಲಿ 7,000 ಯುನಿಟ್, ಲೈಫ್‌ಲೈನ್ 24ಘಿ7 ರಕ್ತನಿಧಿಯಲ್ಲಿ 1750 ಯುನಿಟ್, ಡಾ.ಜೀವಣ್ಣನವರ್ ರಕ್ತನಿಧಿಯಲ್ಲಿ 250 ಯುನಿಟ್ ರಕ್ತ ಸಂಗ್ರಹವಾಗಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೋವಿಡ್ ಕಾಲಕ್ಕೆ ಹೋಲಿಸಿದಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಿ ರಕ್ತ ಸಂಗ್ರಹ ಹೆಚ್ಚಿದ್ದರೂ ರಕ್ತಕೊರತೆ ಜಿಲ್ಲೆಯನ್ನು ಕಾಡುತ್ತಿದೆ. ರಕ್ತದ ಕೊರತೆಯನ್ನು ನೀಗಿಸಲು ಇಲ್ಲಿನ ಪ್ರಮುಖ ರಕ್ತನಿಧಿ ಕೇಂದ್ರಗಳಿಂದ ರಕ್ತ ಸಂಗ್ರಹಕ್ಕಾಗಿ ರಕ್ತದಾನಿಗಳ ಮನವೊಲಿಸುವುದು, ರಕ್ತನಿಧಿ ಕೇಂದ್ರಗಳಲ್ಲೇ ಶಿಬಿರ ನಡೆಸುವುದು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಕ್ತದಾನದ ಜಾಗೃತಿ ಮೂಡಿಸುವುದು, ಬೇರೆ ಬೇರೆ ಪ್ರದೇಶಗಳಲ್ಲಿ ಶಿಬಿರ ನಡೆಸುವುದು ಇತ್ಯಾದಿ ಪ್ರಯತ್ನಗಳು ನಡೆಯುತ್ತಲೇ ಇದ್ದರೂ ಅಗತ್ಯಕ್ಕೆ ತಕ್ಕಷ್ಟು ರಕ್ತದ ಸಂಗ್ರಹ ಮಾತ್ರ ಆಗುತ್ತಿಲ್ಲ ಎಂಬುದನ್ನು ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳ ಮಾಹಿತಿ ಪುಷ್ಟಿಕರಿಸುತ್ತಿದೆ.
ಧಾರವಾಡ ಜಿಲ್ಲೆಯಲ್ಲೇ ಕಿಮ್ಸ್ ಕಡೆಯಿಂದ ರಕ್ತದ ರಿಪ್ಲೇಸ್ ಪಡೆದರೆ ಕೆಲವು ಬಾರಿ ಅದು ಸಾಧ್ಯವಾಗದು. ರಕ್ತನಿಧಿ ಕೇಂದ್ರದ ಅಧಿಕಾರಿಯ ಪ್ರಕಾರ ಕಿಮ್ಸ್‌ನಲ್ಲಿ ನಿತ್ಯ ಸರಾಸರಿ 30 ರಷ್ಟು ಮಂದಿ ರಕ್ತದಾನ ಮಾಡುವ ಮೂಲಕ 30 ಯುನಿಟ್ ರಕ್ತ ಸಂಗ್ರಹವಾದರೆ ಸರಾಸರಿ ಅಗತ್ಯವಿರುವುದು 90 ಯುನಿಟ್ ರಕ್ತ. ಒಮ್ಮೊಮ್ಮೆ 100 ಯುನಿಟ್ ರಕ್ತವೂ ಬೇಕಾಗಬಹುದು. ಈ ಅಂಶವೇ ಜಿಲ್ಲೆಯಲ್ಲಿ ರಕ್ತದ ಕೊರತೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕುದಾಗಿ ರಕ್ತ ಪೂರೈಕೆಯಾಗುತ್ತಿಲ್ಲವೆನ್ನಲು ಕಾರಣಗಳು ಹಲವು. ಕಿಮ್ಸ್ ಉತ್ತರ ಕರ್ನಾಟಕದ ಆರೋಗ್ಯಧಾಮ. ಹಾವೇರಿ, ಗದಗ, ಉತ್ತರಕನ್ನಡ, ಬಾಗಲಕೋಟೆ, ವಿಜಯಪುರ ಹೊಸಪೇಟೆ, ಕೊಪ್ಪಳಗಳಿಂದಲೂ ರೋಗಿಗಳು ಬಂದು ದಾಖಲಾಗುತ್ತಾರೆ. ಅವರಲ್ಲಿ ಹಾಗಾದರೆ ರಕ್ತದ ಕೊರತೆ ನೀಗಿಸುವಲ್ಲಿ ರಕ್ತನಿಧಿ ಕೇಂದ್ರಗಳ ಪ್ರಯತ್ನವೂ ಜಾರಿಯಲ್ಲಿದೆ. ವಾರ್ಷಿಕ ಸರಾಸರಿ 400 ರಕ್ತದಾನ ಶಿಬಿರಗಳು ನಡೆಯುತ್ತವೆ. ಈ ಪೈಕಿ ಸರ್ಕಾರದಿಂದ 100, ರಾಷ್ಟೋತ್ಥಾನ ರಕ್ತನಿಧಿಯಿಂದ 120 150ರಷ್ಟು ಶಿಬಿರಗಳು ನಡೆಯುತ್ತಿವೆ. ವಿವಿಧ ಜಯಂತಿ, ಆಚರಣೆ, ಗಣ್ಯರ ಜನ್ಮದಿನ ಆಚರಣೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಲಾಗುತ್ತಿದೆ.