ಬೆಳೆಗಳಲ್ಲಿ ಕಬ್ಬಿಣ,ಸತುವಿನ ಪೋಷಕಾಂಶ ನಿರ್ವಹಣೆ :-
ವಿವಿಧ ಬೆಳೆಗಳ ಬೆಳವಣಿಗೆ ಮತ್ತು ಪೋಷಣೆಗೆ ಪೋಷಕಾಂಶಗಳು ಅವಶ್ಯಕವಾಗಿ ಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಬ್ಬಿಣ ಮತ್ತು ಸತುವಿನ ಅವಶ್ಯಕತೆ ಹೆಚ್ಚಿಗೆ ಇರುತ್ತವೆ. ಇವುಗಳ ಸರಿಯಾದ ಪ್ರಮಾಣ ಮತ್ತು ಸಕಾಲದಲ್ಲಿ ಸಸ್ಯಗಳಿಗೆ ಒದಗಿಸಿದಲ್ಲಿ ರೈತರು ಇಳುವರಿಯನ್ನು ಹೆಚ್ಚಾಗಿ ಪಡೆಯಬಹುದು. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ. ಬೆಳೆ ಉತ್ಕೃಷ್ಟವಾಗಿ ಬೆಳೆಯಲು ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳು ಬೇಕಾಗುತ್ತವೆ.
ಕಬ್ಬಿಣ ಒಂದು ಲಘು ಪೋಷಕಾಂಶವಾಗಿದ್ದು, ಇದರ ಕೊರತೆಯಾದರೆ ಹೊಸ ಎಲೆಗಳ ನರಗಳ ಮಧ್ಯಭಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ.
ಇದರ ನಿವಾರಣೆಗೆ ರೈತರು ಶೇ 0.5 ರಷ್ಟು ಕಬ್ಬಿಣದ ಸಲೈಟ್‌ನ್ನು ಬೆಳೆಗಳಿಗೆ ಸಿಂಪಡಿಸಬೇಕು.
ಸತುವಿನ ಕೊರತೆಯಿಂದ ಎಲೆಗಳು ಸಣ್ಣದಾಗಿ ಮಧ್ಯದ ಭಾಗ ದಟ್ಟ ಹಸಿರಾಗುತ್ತದೆ. ಬೆಳೆಯ ಬೆಳವಣಿಗೆ ಕುಂಠಿತಗೊಂಡು ಬೂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
ಕಬ್ಬಿಣದ ಕೊರತೆಯ ಪ್ರಾಥಮಿಕ ಲಕ್ಷಣವೆಂದರೆ ಇಂಟರ್ವೆನಲ್ ಕ್ಲೋರೋಸಿಸ್, ಕಡು ಹಸಿರು ಸಿರೆಗಳ ಜಾಲದೊಂದಿಗೆ ಹಳದಿ ಎಲೆಯ ಬೆಳವಣಿಗೆ. ತೀವ್ರತರವಾದ ಪ್ರಕರಣಗಳಲ್ಲಿ, ಸಂಪೂರ್ಣ ಎಲೆಯು ಹಳದಿ ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಸಸ್ಯ ಕೋಶಗಳು ಸಾಯುತ್ತಿದ್ದಂತೆ ಹೊರ ಅಂಚುಗಳು ಸುಟ್ಟು ಕಂದು ಬಣ್ಣಕ್ಕೆ ತಿರುಗಬಹುದು.
ಸಸ್ಯಗಳಲ್ಲಿ, ದ್ಯುತಿಸಂಶ್ಲೇಷಣೆ ಮತ್ತು ಕ್ಲೋರೊಫಿಲ್ ಸಂಶ್ಲೇಷಣೆಗೆ ಕಬ್ಬಿಣದ ಅಗತ್ಯವಿರುತ್ತದೆ. ಮಣ್ಣಿನಲ್ಲಿ ಕಬ್ಬಿಣದ ಲಭ್ಯತೆಯು ನೈಸರ್ಗಿಕ ಪರಿಸರ ವ್ಯವಸ್ಥೆಗಳಲ್ಲಿ ಸಸ್ಯ ಪ್ರಭೇದಗಳ ವಿತರಣೆಯನ್ನು ನಿರ್ದೇಶಿಸುತ್ತದೆ ಮತ್ತು ಬೆಳೆಗಳ ಇಳುವರಿ ಮತ್ತು ಪೌಷ್ಟಿಕಾಂಶದ ಗುಣಮಟ್ಟವನ್ನು ಮಿತಿಗೊಳಿಸುತ್ತದೆ.
ಇದರ ಕೊರತೆ ನಿವಾರಣೆಗೆ ಬೆಳೆಗಳಿಗೆ ಶೇ 0.5 ರ ಸತುವಿನ ಸಟ್ ಸಿಂಪರಣಿ ಮಾಡಬೇಕು.
ಮಾಹಿತಿಗೆ ಮೊ: 9448418389 ಸಂಪರ್ಕಿಸಿ.