Breaking
Tue. Dec 17th, 2024

ಹೊಸ ವೋಟರ್ ಐಡಿ ಪಡೆಯಲು ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಏಪ್ರಿಲ್ 11 ರವರೆಗೆ ಅರ್ಜಿ ಸಲ್ಲಿಸಬಹುದು

Spread the love

ಆತ್ಮೀಯ ನಾಡ ಜನರೇ, ಈ ಸಾಲಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಿಲ್ಲವೇ? ಚಿಂತೆ ಬೇಡ. ಮತಪಟ್ಟಿಗೆ ಹೆಸರು ಸೇರಿಸಲು ಇನ್ನೂ 7 ದಿನಗಳ ಕಾಲಾವಕಾಶವಿದೆ. ಮೇ 10ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಮತದಾರರ ಅಂತಿಮ ಪಟ್ಟಿಯೂ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ, ಏಪ್ರಿಲ್ 1ರಂದು 18 ವರ್ಷ ತುಂಬುವ ಎಲ್ಲರಿಗೂ ಮತದಾನದ ಹಕ್ಕು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಭಾಗವಹಿಸಬೇಕೆಂಬುದು ಚುನಾವಣಾ ಆಯೋಗದ ಆಶಯ, ಅಂತಹವರು ಏಪ್ರಿಲ್ 11 ರೊಳಗೆ ತಮ್ಮ ಹೆಸರನ್ನು ಸೇರಿಸಲು ಆಯೋಗ ಅವಕಾಶ ಕಲ್ಪಿಸಿದ್ದು, ಈ ಬಾರಿಯೇ ಮತ ಚಲಾಯಿಸಬಹುದು.

ಮತದಾರರ ಐಡಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವೋಟರ್ ಹೆಲ್ತ್ ಲೈನ್ ಆ್ಯಪ್ ಹಾಗೂ 1950 ಟೋಲ್ ಫ್ರೀ ನಂಬರ್ ಮೂಲಕವೂ ಹೆಸರು ಸೇರಿಸಬಹುದು. ಬೂತ್ ಮಟ್ಟದಲ್ಲಿರುವ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿದರೆ ‘ಗರುಡ’ ಆ್ಯಪ್‌ನಲ್ಲೂ ಆನ್‌ಲೈನ್ ಮೂಲಕ ಹೆಸರು ಸೇರ್ಪಡೆ ಮಾಡಿಸಿಕೊಳ್ಳುತ್ತಾರೆ. ಹೊಸದಾಗಿ ಹೆಸರು ಸೇರಿಸಲು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಶಾಲಾ-ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ವಿಳಾಸದ ಪುರಾವೆಯ ಜೆರಾಕ್ಸ್‌ (ಬ್ಯಾಂಕ್ ಅಥವಾ ಅ೦ಚೆ ಪಾಸ್ ಬುಕ್, ಪಡಿತರ ಚೀಟಿ, ಡೈವಿಂಗ್ ಲೈಸೆನ್ಸ್, ಗ್ಯಾಸ್ ಬಿಲ್ ಇತ್ಯಾದಿ) ಪ್ರತಿಯನ್ನು ತಮ್ಮ ದೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವಾಗ ಈ ತಪ್ಪು ಮಾಡಬೇಡಿ?

ಚುನಾವಣಾ ಆಯೋಗದ ವೆಬ್ ಪ್ರಾಬ್ಲಂ ಸೈಟಿನಲ್ಲಿ ಫಾರಂ ಅನ್ನು ಆನ್ಲೈನ್ ಮೂಲಕ ಭರ್ತಿ ಮಾಡಲು ಹೊರಟರೆ ಕನ್ನಡ ಭಾಷಾ ಸಮಸ್ಯೆ ಎದುರಾಗಿದೆ. ರಾಜೇಶ್ವರಿ ಎಂಬ ಹೆಸರನ್ನು ಇಂಗ್ಲಿಷ್‌ ನಲ್ಲಿ ಟೈಪಿಸಿದರೆ ಅದು ಸರಿ ಇರುತ್ತೆ. ಆದರೆ, ಅದನ್ನು ಆನ್‌ಲೈನ್ ಕನ್ನಡೀಕರಿಸುವ ವೇಳೆ ರಾಜಈಶ್ವರಿ ಆಗುತ್ತೆ . ಫಾದರ್ ಎಂದು ಟೈಪಿಸಿದರೆ ತಂದೆ ಬದಲು ಫಾತರ್ ಎಂದು ಕನ್ನಡೀಕರಿಸುತ್ತೆ. ಇದನ್ನು ಸರಿಪಡಿಸುವ ಆಯ್ಕೆಯೂ ಆನ್‌ಲೈನಿನಲ್ಲಿ ಇಲ್ಲದಂತಾಗಿದೆ. ಅಲ್ಲಿರುವ ಕೀ ಬೋರ್ಡ್ ಕೂಡ ಸಹಕರಿಸುತ್ತಿಲ್ಲಎಂದು ವೋಟರ್ ದೂರಿದ್ದಾರೆ.

ಈ ವೋಟರ್ ಹೆಲ್ಪ್ ಲೈನ ಆ್ಯಪ್ ನ ಉಪಯೋಗಗಳೇನು?

ಮತದಾರರ ಹೆಲ್ಪ್‌ಲೈನ್ ಅಪ್ಲಿಕೇಶನ್ ಭಾರತೀಯ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹುಡುಕಲು, ಮತದಾರರ ನೋಂದಣಿ ಮತ್ತು ಮಾರ್ಪಾಡುಗಾಗಿ ಫಾರ್ಮ್‌ಗಳನ್ನು ಸಲ್ಲಿಸಲು, ಅವರ ಡಿಜಿಟಲ್ ಫೋಟೋ ವೋಟರ್ ಸ್ಲಿಪ್‌ಗಳನ್ನು ಡೌನ್‌ಲೋಡ್ ಮಾಡಲು, ದೂರುಗಳನ್ನು ಮಾಡಲು, ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ವಿವರಗಳನ್ನು ಕಂಡುಹಿಡಿಯಲು ಮತ್ತು ಮುಖ್ಯವಾಗಿ ನೈಜ-ಅನ್ನು ನೋಡಲು ಸಮಗ್ರ ಅಪ್ಲಿಕೇಶನ್ ಆಗಿದೆ. ಚುನಾವಣಾ ಸಮಯದ ಫಲಿತಾಂಶಗಳು.

ಇದನ್ನು ಓದಿ:- ಇಂದಿನ ಮಾರುಕಟ್ಟೆಯ ದರದಲ್ಲಿ ಭಾರಿ ಏರು ಪೇರು ಎಲ್ಲಾ ಬೆಳೆಗಳ ಮಾರುಕಟ್ಟೆ ದರಗಳನ್ನು ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿಯಿರಿ

ಇದನ್ನೂ ಓದಿ :- ದನಗಳ ಶೆಡ್ ನಿರ್ಮಾಣ ಮಾಡಲು 57,000 ರೂಪಾಯಿಗಳ ಸಹಾಯಧನ ನೀಡುತ್ತಿದ್ದಾರೆ ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ :- ನಿಮ್ಮ ಮನೆಯಲ್ಲಿ ಗರ್ಭಿಣಿ ಹೆಂಗಸರು ಇದ್ದರೆ ನಿಮಗೆ ಸಿಗುತ್ತೆ 6000 ರೂಪಾಯಿ

Related Post

Leave a Reply

Your email address will not be published. Required fields are marked *