ಹೆಸರು ಬೆಳೆಗೆ ಬೆಳೆವಿಮೆ ಅರ್ಜಿ ಸಲ್ಲಿಸಲು ಕೇವಲ 4 ದಿನ ಮಾತ್ರ ಉಳಿದಿದೆ. ಕೊನೆಯ ದಿನಾಂಕ 15-07-2024.
ಬೆಳೆವಿಮೆ ಮುಂಗಾರಿನ ಗ್ರಾಮ ಅರ್ಜಿ ಹಾಕಲಾಗುವುದು. ಬೆಳೆ ವಿಮೆ ಫಾರ್ಮ್ ಸಿಗುತ್ತದೆ.
ಬೆಳೆ ವಿಮೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್‌ಬುಕ್
3. ಹೊಲದ ಉತಾರ (ಪಹಣಿ)
https://bhoomisuddi.com/this-is-the-last-date-to-pay-crop-insurance-get-your-crop-insurance/
ಬೆಳೆಯಲ್ಲಿ ಚಿಕ್ಕುಂಟಿ ಹೊಡೆಯಲು ಟ್ರ್ಯಾಕ್ಟರ್ ನೆರವು
ಎತ್ತುಗಳ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚಕ್ಕೆ ಪರ್ಯಾಯವಾಗಿ ರೈತರು ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿಸುತ್ತಿದ್ದಾರೆ. ಉಳುಮೆ, ಬಿತ್ತನೆಗೆ ಬಳಕೆಯಾಗುತ್ತಿದ್ದ ಟ್ಯಾಕ್ಟರ್, ಇದೀಗ ಕಳೆ ನಿರ್ವಹಣೆಗಾಗಿ ಚಿಕ್ಕ ಕುಂಟಿ ಹೊಡೆಯಲೂ ಕೂಡ ಬಳಕೆಯಾಗುತ್ತಿದೆ. ಪಟ್ಟಣ ಸಮೀಪದ ಜಮೀನುಗಳಲ್ಲಿ ಇತ್ತೀಚೆಗೆ ಈ ದೃಶ್ಯ ಸಾಮಾನ್ಯವಾಗಿದೆ. ಕೃಷಿ ಕೂಲಿ ವೆಚ್ಚ, ಜಾನುವಾರುಗಳ ದುಬಾರಿ ನಿರ್ವಹಣೆಯ ಫಲವಾಗಿ ಅನ್ನದಾತರು ಟ್ರ್ಯಾಕ್ಟರ್ ಮೇಲೆ ಇನ್ನಷ್ಟು ಮತ್ತಷ್ಟು ಅವಲಂಬನೆಯಾಗುತ್ತಿದ್ದಾರೆ. ಟ್ಯಾಕ್ಟರ್ ಬಳಸಿಕೊಂಡು ಅತ್ಯಂತ ವೇಗದಲ್ಲಿ ಕಳೆಕೀಳುವ ಮೂಲಕ ಸಮಯದ ಜತೆಗೆ ಹಣವನ್ನೂ ಉಳಿಸಬಹುದು ಎನ್ನುವುದು ರೈತರ ಲೆಕ್ಕಾಚಾರ.
ಕಡಿಮೆ ಅವಧಿಯಲ್ಲಿ ಹೆಚ್ಚಿನ ಜಮೀನಿನಲ್ಲಿ ಕಳೆ ಕೀಳಲು ರೈತರು ಟ್ಯಾಕ್ಟರ್ ಬಳಕೆ ಮುಂದಾಗಿದ್ದಾರೆ. ಎರಡು ಎತ್ತುಗಳನ್ನು ಬಳಸಿಕೊಂಡು ಮೂರು ಚಿಕ್ಕುಂಟಿ ಕಟ್ಟಿದರೆ ಮೂರು ಕೂಲಿಕಾರರ ಸಹಾಯದೊಂದಿಗೆ ಒಂದು ದಿನದಲ್ಲಿ 3ರಿಂದ 4 ಎಕರೆ ಕುಂಟಿ ಹೊಡೆಯಬಹುದು. ಅದೇ ಟ್ಯಾಕ್ಟರ್‌ಗೆ ನೊಗ ಕಟ್ಟಿ, ಅದಕ್ಕೆ ಚಿಕ್ಕುಂಟಿ ಜೋಡಿಸಿದರೆ, ಆರು ಕೂಲಿಕಾರರ ಸಹಾಯದೊಂದಿಗೆ ಒಂದೇ ದಿನದಲ್ಲಿ 20 ರಿಂದ 25 ಎಕರೆ ಜಮೀನಿನಲ್ಲಿ ಚಿಕ್ಕುಂಟಿ ಹೊಡೆಯಬಹುದು’ ಎಂದು ರೈತ ಹನುಮಂತ ಹೇಳುತ್ತಾರೆ.
ಎತ್ತುಗಳ ಜಾಗವನ್ನು ಟ್ರ್ಯಾಕ್ಟರ್ ಮತ್ತಿತರ ಯಂತ್ರಗಳು ಆವರಿಸಿಕೊಂಡಿವೆ. ಮಳೆ ಕೊರತೆ, ಬರ ಪರಿಸ್ಥಿತಿ, ಮೇವು, ಕೂಲಿಕಾರ್ಮಿಕರ ಕೊರತೆ ಹೀಗೆ ಅನೇಕ ಕಾರಣಗಳಿಂದ ಎತ್ತುಗಳ ಸಾಕಣೆಗಿಂತ ಟ್ರ್ಯಾಕ್ಟರ್ ನಿರ್ವಹಣೆ ಉತ್ತಮ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೆಚ್ಚಿನ ರೈತರು ಯಂತ್ರಗಳನ್ನು ಅವಲಂಬಿಸಿದ್ದಾರೆ’ ಎಂದು ರೈತ ಶಿವಲಿಂಗಪ್ಪ ಅಭಿಪ್ರಾಯಪಟ್ಟರು. ಇತ್ತೀಚೆಗೆ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ಕೈಗೊಳ್ಳುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಕೆಲವು ರೈತರು ನೂರಾರು ಎಕರೆ ಜಮೀನು ಗುತ್ತಿಗೆ ಪಡೆದು ಕೃಷಿ ನಡೆಸುತ್ತಿದ್ದಾರೆ. ಅವರಿಗೆಲ್ಲ ಕಡಿಮೆ ಅವಧಿಯಲ್ಲಿ ಜಮೀನು ಹದಗೊಳಿಸುವುದು ಮತ್ತು ಕಳೆ ಕೀಳುವುದು ಸವಾಲು. ಅದಕ್ಕೆ ಅವರು ಟ್ಯಾಕ್ಟರ್ ಬಳಕೆ ಮಾಡುವುದು ಅನಿವಾರ್ಯ’ ಎಂದು ರೈತ ಮೌನೇಶ ಹಿರೇಕುರಬರ್ ಪ್ರತಿಪಾದಿಸಿದರು.
ಗಿಡ ಮರಗಳನ್ನು ಬೆಳಸುವದರಿಂದ ನೆಲ-ಜಲ ಸಂರಕ್ಷಿಣೆ
ಅರಣ್ಯ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳು ಯಾವುದೇ ವೈದ್ಯಕೀಯ ಉಪಚಾರ ವಿಲ್ಲದೇ ಆರೋಗ್ಯದಿಂದ ಬದಕುತ್ತವೆ. ಇದಕ್ಕೆ ಕಾರಣ ನಿಸರ್ಗ. ನಿಸರ್ಗದೊಂದಿಗೆ ನಮ್ಮ ಜೀವನವನ್ನು ಸಮ್ಮಿಳಿತ ಮಾಡಿದರೆ, ನಿಸರ್ಗ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ. ಮರಗಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೇ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ ಅವರು ಹೇಳಿದರು.
ಅವರು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಟಿ) ಆವರಣದಲ್ಲಿ ಆಯೋಜಿಸಿದ ವನಮಹೋತ್ಸವ-2024 ಕಾರ್ಯಕ್ರಮವನ್ನು ಸಸಿಗಳನ್ನು ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಣೆಕಟ್ಟು ಪ್ರದೇಶದ ಮೇಲ್ಬಾಗದ ಪ್ರದೇಶದಲ್ಲಿ ಅರಣ್ಯದ ಮಹತ್ವ ಹೆಚ್ಚಾಗಿದೆ. ಮಳೆ ನೀರು ಹರಿದು ಬರುವ ಸಂದರ್ಭದಲ್ಲಿ ಮೇಲ್ಮಣ್ಣನ್ನೂ ಹೊತ್ತು ತರುವುದರಿಂದ ಅಣೆ ಕಟ್ಟೆಗಳಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಆದ್ದರಿಂದ ಹೆಚ್ಚು ಮರಗಿಡಗಳನ್ನು ನೆಡ ುವುದರ ಮೂಲಕ ನೀರಿನ ಹರಿವಿನ ವೇಗವನ್ನು ತಗ್ಗಿಸಿ ಭೂಮಿಯ ಸಂರಕ್ಷಣೆ ಮಾಡಬಹುದು. ವೃಕ್ಷಗಳು ಬರಿ ವೃಕ್ಷಗಳಲ್ಲ ಅವು ದೇವರು ಕೊಟ್ಟ ವರಗಳು. ಸೃಷ್ಟಿಯಲ್ಲಿನ ಎಲ್ಲ ಜೀವರಾಶಿಯ ಜೊತೆಗೆ ಸಹಭಾಳ್ವೆ ಮಾಡಬೇಕಾದರೆ ನಾವು ಬದುಕುವುದರ ಜೊತೆಗೆ ಇತರೆ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು.
ಅದಕ್ಕಾಗಿ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು. ಮನುಷ್ಯ ನಿಸರ್ಗದ ಜೊತೆ ಸಮೀಕರಣಗೊಂಡು ಬಾಳಬೇಕು. ಗಿಡಮ ರಗಳು ದೈವಸಮಾನವೆಂದು ನಮ್ಮ ಪೂರ್ವಜರು ಹೇಳಿದ್ದಾರೆ. ಆದರೆ ಮನು ವ್ಯ ಅಭಿವೃದ್ಧಿಯ ಪಥದಲ್ಲಿ ನಿಸರ್ಗ ಕೈ ಸಾಕಷ್ಟು ಹಾನಿ ಮಾಡುತ್ತಿದ್ದಾನೆ. ಸಕಲ ಜೀವರಾಶಿಗಳಿಗೂ ನಿಸರ್ಗವೇ ಆಶ್ರಯ ತಾಣವೆಂದರು. ಪ್ರತಿಯೊಬ್ಬರು ಪ್ರತಿ ವರ್ಷ ಒಂದು ಗಿಡ ನೆಟ್ಟು ಪೋಷಿಸುವುದು ಇಂದಿನ ಅನಿವಾರ್ಯವಾಗಿದೆಯೆಂದರು. ಧಾರವಾಡ ಪೀಠ ಕರ್ನಾಟಕ ಉಚ್ಛನ್ಯಾಯಾಲಯದ ಅಪರ ವಿಲೇಖ ನಾಧಿಕಾರಿ ಶಾಂತವೀರ ಶಿವಪ್ಪ ಅವರು ಮಾತನಾಡಿ, ವನ್ಯ ಸಂಪತ್ತಿನ ರಕ್ಷಣೆ ಕೇವಲ ಇಲಾಖೆಯ ಕಾರ್ಯವಲ್ಲ. ಪ್ರತಿಯೊಬ್ಬ ನಾಗರೀಕರು ಗಿಡಗಳನ್ನು ನೆಡುವುದರ ಜೊತೆಗೆ ಸಂಕರಕ್ಷಣೆ ಜವಾಬ್ದಾರಿಯನ್ನು ವಹಿ ಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಾಲ್ಟಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅವರು ಮಾತನಾಡಿ, ಜಾಗತೀಕರಣ, ವಾಣಿಜ್ಯಕರಣ ಮತ್ತು ನವ ಉದಾರೀಕರಣ, ಅರ್ಥಶಾಸ್ತ್ರ ಸಿದ್ಧಾಂತ ಅಡಿಯಲ್ಲಿ ಲಾಭವೇ ಸರ್ವಸ್ವ ಆಗಿರುವಾಗ ವೈಯಕ್ತಿಕ ಲಾಭಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಹನನವಾಗುತ್ತಿದೆ. ಭಾರತ ಸಾವಿರಾರು ವರ್ಷಗಳಿಂದ ತನ್ನದೇ ಆದ ಸುಸ್ಥಿರ ಅರ್ಥಶಾಸ್ತ್ರದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದೆ. ಭಕ್ತಿ ಪರಂಪರೆ, ವಚನ ಪರಂಪರೆಗಳ ಆಧಾರದ ಮೇಲೆ ನಿಸರ್ಗದ ಸಂಪನ್ಮೂಲಗಳ ಸಂರಕ್ಷಣೆಯನ್ನು ಸಾಧಿಸಲಾಗುತ್ತಿತ್ತು. ಇದೀಗ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಲಾಭಕೋರತನ ಮತ್ತು ಕೊಳ್ಳುಬಾಕತನ ಹೆಚ್ಚಾಗುತ್ತಿರುವುದು ವನ್ಯ ಸಂಪನ್ಮೂಲದ ನಾಶಕ್ಕೆ ಕಾರಣ ವಾಗುತ್ತಿದೆ. ಇದನ್ನು ತಡೆಗಟ್ಟು ಜಾಗೃತಿ ಹಾಗೂ ಅನುಷ್ಠಾನ ಅವಶ್ಯಕವಾಗಿದೆ ಎಂದು ತಿಳಿಸಿದರು.
ಭಾರತೀಯರು ನಿಸರ್ಗವನ್ನು ಭೂತಾಯಿಯನ್ನು ದೈವತ್ವಕ್ಕೆ ಹೋಲಿಸಿ ನಿಸರ್ಗಕ್ಕನುಗುಣವಾಗಿ ಸುಸ್ಥಿರ ಜೀವನ ನಡೆಸುತ್ತಿದ್ದರು. ಈಗ ನಾವು ಸುಸ್ಥಿರ ಅಬಿ ವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ನೆಲ-ಜಲ ನಿಸರ್ಗದ ಕುರಿತು ಚಿಂತನ ಮಂತನ ಮಾಡುವ ಅಗತ್ಯವಿದೆಯೆಂದರು. ನವ ಉದಾರೀಕರಣ, ಅರ್ಥಶಾಸ್ತ್ರದಿಂದ ಪಾಶ್ಚಾತ್ಯ ರಾಷ್ಟ್ರಗಳು, ನೈಸರ್ಗಿಕ ಮೂಲಗಳನ್ನು ಖಾಲಿ ಮಾಡುತ್ತಿದೆ. ಭಾರತೀಯ ಅರ್ಥಶಾಸ್ತ್ರ ಸುಸ್ಥಿರ ಅಭಿವೃದ್ಧಿಗೆ ಮಹತ್ವ ನೀಡಿದೆಯೆಂದರು.
ವಲಯ ಅರಣ್ಯ ಸಂರಕ್ಷಣಾ ಧಿಕಾರಿಪ್ರದೀಪ ಪವಾರ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿ ದ್ಯಾಲಯದ ನಿರ್ದೇಶಕ ಡಾ. ಮಂಜುನಾಥ ಘಾಟೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಜಲ ಸಂಪನ್ಮೂಲ ಇಲಾಖೆ ಯ ಅಭಿಯಂತರರು ಮತ್ತು ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವ ಹಿಸಿದ್ದರು.
ರಾಜ್ಯದಲ್ಲಿ ಡೆಂಗ್ಯೂ ಉಲ್ಬಣ : ಟಾಸ್ಕ್‌ಪೋರ್ಸ್ ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣ ಜನರಲ್ಲಿ ಭೀತಿ ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ಜಿಲ್ಲಾಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸೂಚನೆ ನೀಡಿದರು. ಡಿಸಿ-ಸಿಇಒ ಸಭೆಯಲ್ಲಿ ಡೆಂಗ್ಯೂ ತಡೆಗೆ ಅಗತ್ಯ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ವೇಳೆ ಸೋಂಕು ನಿಯಂತ್ರಿಸಲು ರೋಗಿಗಳ ಆರೈಕೆ, ಮೃತರ ಕುಟುಂಬದವರಿಗೆ ನೈತಿಕವಾಗಿ ಬಲ ತುಂಬುವ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಎರಡು ತಿಂಗಳ ಮಟ್ಟಿಗಾದರೂ ಜಿಲ್ಲಾ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಅನ್ನು ಆರಂಭಿಸಬೇಕು. ಹೈ ಅಲರ್ಟ್ ಆಗಿದ್ದು ಡೆಂಗ್ಯೂ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕೆ ಡಿಸಿ ಹಾಗೂ ಸಿಇಒಗಳೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಹಣದ ಕೊರತೆಯಂತೂ ಇಲ್ಲ. ವಿವೇಚನೆ ಬಳಸಿ ಹಣ ಬಳಕೆ ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಇದುವರೆಗೆ 7,362 ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ 303 ಸಕ್ರಿಯ ನೀಡಿದರು. ಮೆಡಿಕಲ್ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು. ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ನಿತ್ಯ ಸಭೆಗಳನ್ನು ನಡೆಸಿ ಪರಿಶೀಲನೆ ನಡೆಸಬೇಕು ಎಂದು ತಾಕೀತು ಮಾಡಿದರು.