ಅತ್ಮೀಯ ರೈತ ಬಾಂಧವರೇ, ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) 2023-24ನೇ ಬೆಳೆ ವರ್ಷಕ್ಕೆ (ಜುಲೈ-ಜೂನ್) ಪ್ರತಿ ಕ್ವಿಂಟಲ್‌ಗೆ 7143ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಭತ್ತದ ಎಂಎಸ್‌ಪಿ ಪ್ರತಿ ಕ್ವಿಂಟಲ್‌ಗೆ 72,183ಕ್ಕೆ ತಲುಪಿದೆ.
ಈ ಏರಿಕೆಯು ಒಂದು ದಶಕದ ಅವಧಿಯಲ್ಲಿ ಅಗಿರುವ ಎರಡನೆಯ ಅತಿಹೆಚ್ಚಿನ ಏರಿಕೆ. ಈ ಹಿಂದೆ 2018-19ರಲ್ಲಿ ಕ್ವಿಂಟಲ್‌ಗೆ ಎಂಎಸ್‌ಪಿ ಯನ್ನು 1200ರಷ್ಟು ಹೆಚ್ಚಿಸಲಾಗಿತ್ತು.
ರೈತರು ಭತ್ತವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವಂತೆ ಉತ್ತೇಜನ ನೀಡಲು ಮತ್ತು ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2023-245e ಮುಂಗಾರು ಬೆಳೆಗಳಿಗೆ ಎಂಎಸ್‌ಪಿಯನ್ನು ಶೇ 5.3ರಿಂದ ಶೇ 10.35ರ ವರೆಗೆ ಹೆಚ್ಚಿಸಲಾಗಿದೆ. ಬೆಲೆಯ ಲೆಕ್ಕದಲ್ಲಿ ಕ್ವಿಂಟಲ್‌ಗೆ 1128ರಿಂದ 1805ರವರೆಗೆ ಏರಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಎಂಎಸ್‌ಪಿ ಹೆಚ್ಚಿಸಲು ಒಪ್ಪಿಗೆ ನೀಡಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪನಿಯ ಪುನ- ಶ್ವೇತನಕ್ಕೆ ಕೇಂದ್ರ ಸಚಿವ ಸಂಪುಟವು 189,047 ಕೋಟಿ ಮೊತ್ತದ ಮೂರನೆಯ ಆರ್ಥಿಕ ಪ್ಯಾಕೇಜ್‌ಗೆ ಬುಧವಾರ ಒಪ್ಪಿಗೆ ಸೂಚಿಸಿದೆ. ಬಿಎಸ್‌ಎನ್‌ಎಲ್ ಕಂಪನಿಗೆ 4ಜಿ ಮತ್ತು 5ಜಿ ತರಂಗಾಂತರ ಹಂಚಿಕೆ ಕೂಡ ಪ್ಯಾಕೇಜ್‌ನ ಒಂದು ಭಾಗ ಎಂದು ಪ್ರಕಟಣೆ ತಿಳಿಸಿದೆ. ತರಂಗಾಂತರ ಹಂಚಿಕೆಯು ಬಿಎಸ್‌ಎನ್‌ಎಲ್‌ಗೆ 4ಜಿ ಹಾಗೂ 5ಜಿ ಸೇವೆಗಳನ್ನು ದೇಶದಾದ್ಯಂತ ಆರಂಭಿಸಲು, ಮೊಬೈಲ್ ಸಂಪರ್ಕ ಇಲ್ಲದ ಹಳ್ಳಿಗಳಲ್ಲಿ 4ಜಿ ಸೇವೆ ಆರಂಭಿಸಲು ನೆರವಾಗುತ್ತದೆ. ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್ ಕಂಪನಿಯ ಪುನಶ್ವೇತನಕ್ಕೆ ಈ ಹಿಂದೆಯೂ ಪ್ಯಾಕೇಜ್ ನೀಡಿತ್ತು. 2019ರಲ್ಲಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಪುನಶ್ಚ ತನಕ್ಕೆ 769 ಸಾವಿರ ಕೋಟಿ ನೀಡಲಾಗಿತ್ತು.
2022ರಲ್ಲಿ 71.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಲಾಗಿತ್ತು. ಬಂಡವಾಳ ವೆಚ್ಚಕ್ಕೆ, ಸಾಲದ ಹೊರೆ ತಗ್ಗಿಸಿಕೊಳ್ಳಲು, ಹೊಂದಾಣಿಕೆ ಮಾಡಿದ ಒಟ್ಟು ವರಮಾನದ ಬಾಕಿ ಪಾವತಿಗೆ, ಬಿಬಿಎನ್ಎಎಲ್ ಮತ್ತು ಬಿಎಸ್‌ಎನ್‌ಎಲ್ ವಿಲೀನಕ್ಕೆ ಈ ಹಣಕಾಸಿನ ನೆರವುಗಳನ್ನು ಬಳಸಿಕೊಳ್ಳಲಾಗಿತ್ತು.
ಇದನ್ನೂ ಓದಿ :- ಶಕ್ತಿ ಸ್ಮಾರ್ಟ್ ಕಾರ್ಡ್ ಮಾಡಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿ ಸೇವಾ ಸಿಂಧು ಮೂಲಕ ಅರ್ಜಿ
ಇದನ್ನೂ ಓದಿ :- ನಮ್ಮ ಸರ್ಕಾರವು ರೈತರ ಉದ್ದಾರಕ್ಕಾಗಿ ತಾಡಪತಿ ವಿತರಿಸಲು ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ