ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ ಬಳಿಕ, ವಿದ್ಯುತ್ ದರದಲ್ಲಿ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಸಾರ್ವಜನಿಕರು ಖಂಡಿಸುತ್ತಿದ್ದಾರೆ. ‘ಪ್ರತಿ ತಿಂಗಳು ನಮ್ಮ ಮನೆಗೆ ತಿಂಗಳಿಗೆ 300 ರೂ. ಒಳಗೆ ಕರೆಂಟ್ ಬಿಲ್ ಬರುತ್ತಿತ್ತು. ಈ ತಿಂಗಳು 600 ರೂಪಾಯಿಯಷ್ಟು ಬಿಲ್ ಬಂದಿದೆ’ ಎಂದು ಜನರು ಆರೋಪಿಸುತ್ತಿದ್ದಾರೆ.ಸರ್ಕಾರ ಒಂದೆಡೆ ಉಚಿತ ವಿದ್ಯುತ್ ಎಂದು ಘೋಷಣೆ ಮಾಡಿದ್ದು, ಇನ್ನೊಂದೆಡೆ ದರ ಹೆಚ್ಚಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರ ಗಮನಕ್ಕೆ ಬಾರದಂತೆ ವಿದ್ಯುತ್ ಬಿಲ್ ಏರಿಕೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕುಮಟಾದಲ್ಲಿ ವಿದ್ಯುತ್ ಗ್ರಾಹಕರಿಗೆ ಶಾಕ್ಉತ್ತರಕನ್ನಡ: ಕುಮಟಾದಲ್ಲಿ ಹಳ್ಕಾರ ಗ್ರಾಮದ ಅರುಣ್ ಎಂಬುವವರ ವಿದ್ಯುತ್ ಬಿಲ್ 10963 ರೂ. ಬಂದಿರುವುದು ನೋಡಿ ಒಂದು ಕ್ಷಣ ಗೊಂದಲಗೊಂಡಿದ್ದಾರೆ. ಬಳಕೆಯಾದ 69 ಯುನಿಟ್‌ಗೆ 10963ರೂ. ಕರೆಂಟ್ ಬಿಲ್ ಬಂದಿದೆ. ಪ್ರತಿ ತಿಂಗಳು 200ರಿಂದ 300ರೂ. ಬರುತ್ತಿದ್ದ ವಿದ್ಯುತ್ ಬಿಲ್ ಏಕಾಏಕಿ ಹೆಚ್ಚಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ.
ವಿದ್ಯುತ್ ಬಿಲ್ ನೋಡಿ ಕಂಗಾಲಾದ ಜನರುಹುಬ್ಬಳ್ಳಿ: ಗ್ಯಾರಂಟಿ ಯೋಜನೆ ಜಾರಿಗೆ ಬಳಿಕ ವಿದ್ಯುತ್ ದರ ಹೆಚ್ಚು ಮಾಡಿರುವ ಹೆಸ್ಕಾಂ ವಿರುದ್ಧ ಉತ್ತರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗಳು ಹೋರಾಟದ ಹಾದಿ ಹಿಡಿಯಲು ಮುಂದಾಗಿವೆ. ಕೆಇಆರ್‌ಸಿಯಿಂದ ಮನಸೋ ಇಚ್ಚೆ ವಿದ್ಯುತ್ ದರ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಜನರು ಕಂಗಾಲಾಗಿದ್ದಾರೆ.ಹೆಸ್ಕಾಂ ಕೆಇಆರ್‌ಸಿ ಮುಂದೆ ಪ್ರತಿ ಯುನಿಟ್ಗೆ 50% ಹೆಚ್ಚಳದ ಬೇಡಿಕೆ ಇಟ್ಟಿತ್ತು. ಈ ರೀತಿಯ ಬೇಡಿಕೆ ಇಟ್ಟಾಗ ಕೇವಲ 20 ರಿಂದ 30 ಪೈಸೆ ರೂ. ಹೆಚ್ಚಳ ಮಾಡುತ್ತಿದ್ದ ಕೆಇಆರ್‌ಸಿ, ಈ ವರ್ಷ ಪ್ರತಿ ಯುನಿಟ್‌ಗೆ 2.54 ರೂ. ನಿಗದಿ ಮಾಡಿದೆ.
ವಿದ್ಯುತ್ ದರ ಹೆಚ್ಚಿಗೆ ಮಾಡುವ ಮೂಲಕ ವಾಣಿಜ್ಯೋದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಹಾಗೂ ಜನಸಾಮಾನ್ಯರಿಗೆ ಹೊರೆ ಹಾಕಿದೆ.ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ವಿದ್ಯುತ್ ದರ ಹೆಚ್ಚಿಗೆ ಹಿನ್ನೆಲೆ ಹೆಸ್ಕಾಂಗೆ ಏಳು ದಿನಗಳ ಕಾಲ ಗಡುವು ನೀಡಿವೆ. ಏಳು ದಿನಗಳಲ್ಲಿ ಬಿಲ್ ಕಡಿಮೆ ಮಾಡಬೇಕು. ಒಂದು ವೇಳೆ ಬಿಲ್ ಕಡಿಮೆ ಮಾಡದೆ ಹೋದರೆ, ಕೈಗಾರಿಕೆಗಳನ್ನು ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು. ಈ ಮೂಲಕ ಜನಸಾಮಾನ್ಯರ ಮೇಲೆ ಹೇರಿರುವ ಹೊರೆ ತಗ್ಗಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮುಂಗಾರು ಭೀತಿ ಇದೆ ಕೂಡಲೇ ತಿಳಿಯಿರಿ
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆ ಬಾಡಿಗೆದಾರರು 200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ಇಲ್ಲಿದೆ ಮಾರ್ಗ
ಭತ್ತದ ಎಂಎಸ್‌ಪಿ 143 ರೂಪಾಯಿ ಹೆಚ್ಚಳ, ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ಶಕ್ತಿ ಸ್ಮಾರ್ಟ್ ಕಾರ್ಡ್ ಮಾಡಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡಿ, ಸೇವಾ ಸಿಂಧು ಮೂಲಕ ಅರ್ಜಿ