Breaking
Thu. Dec 19th, 2024

PM ಕಿಸಾನ್ 18 ನೆ ಕಂತು ಯಾರಿಗೆ ಜಮಾ ಆಗುತ್ತದೆ New list ಬಿಡುಗಡೆ ಆಗಿದೆ

Spread the love

ಆತ್ಮೀಯ ರೈತ ಬಾಂಧವರೇ,
ಪಿಎಂ ಕಿಸಾನ್ ಯೋಜನೆ ಈಗಾಗಲೇ 17 ಕಂತಿನಲ್ಲಿ ನಿಮ್ಮೆಲ್ಲರಿಗೂ ಜಮಾ ಆಗಿದ್ದು. ಇನ್ನು ಕೆಲವು ದಿನಗಳಲ್ಲಿ 18 ನೆ ಕಂತು ಕೂಡ ಜಮಾ ಆಗಲಿದ್ದು ಅದರ ಫಲಾನುಭವಿಗಳ ಪಟ್ಟಿ ಇದೀಗ ಸರ್ಕಾರವು ಬಿಡುಗಡೆ ಮಾಡಿದೆ.
ನೀವು ಯಾವುದೇ ವೆಬ್ಸೈಟ್ ಗೆ ಭೇಟಿ ನೀಡದೆ ನಿಮ್ಮ ಹೆಸರನ್ನು ಇಲ್ಲಿ ಚೆಕ್ ಮಾಡಿಕೊಳ್ಳಬಹುದು.
ಅದು ಹೇಗೆಂದರೆ ಈ ಅಂಕಣ ಕೊನೆಯಲ್ಲಿ ನಿಮಗೆ ಒಂದು ಫೈಲನ್ನು ಹಾಕಿದ್ದು ಅದನ್ನು ಓಪನ್ ಮಾಡಿ ನಿಮ್ಮ ಹೆಸರನ್ನು ಪರಿಶೀಲಿಸಿ ನೋಡಬಹುದಾಗಿದೆ. ಒಂದು ವೇಳೆ ನಿಮ್ಮ ಹೆಸ್ರು ಆಯಾ ಫೈಲ್ ನಲ್ಲಿ ದೊರಕದಿದ್ದರೆ ನೀವು ಕೂಡಲೇ e kyc ಮಾಡಿಸಬೇಕು.

ಏಕೆ ಇ-ಕೆವೈಸಿ?

ಪಿ.ಎಂ.ಕಿಸಾನ್ ಯೋಜನೆಯ ಪ್ರಯೋಜನವು ಯಾವುದೇ ಮಧ್ಯವರ್ತಿಗಳಿಲ್ಲದೆ ಅವರ ಆಧಾರ್ ಜೋಡಿತ ಬ್ಯಾಂಕ್ ಖಾತೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು.

ಇ-ಕೆವೈಸಿ ಯ ವಿಧಾನಗಳು

ಪಿ.ಎಂ.ಕಿಸಾನ್ ಯೋಜನೆಯಡಿ ರೈತರಿಗೆ eKYC ಮಾಡಿಸಲು ಕೆಳಗಿನ ಮೂರು ವಿಧಾನಗಳು ಲಭ್ಯವಿರುತ್ತದೆ:

1. OTP ಆಧಾರಿತ e KYC (ಪಿ.ಎಂ.ಕಿಸಾನ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ).

2. ಬಯೋಮೆಟ್ರಿಕ್ ಆಧಾರಿತ e-KYC (ನಾಗರೀಕ ಸೇವಾ ಕೇಂದ್ರಗಳು) ಮತ್ತು ರಾಜ್ಯ ಸೇವಾ ಕೇಂದ್ರ (SSK ಗಳು) ನಲ್ಲಿ ಲಭ್ಯವಿದೆ).

3. ಮುಖ ಚರ್ಯೆ ಆಧಾರಿತ e-KYC (Face Recognition) (ಲಕ್ಷಾಂತರ ರೈತರು ಬಳಸುವ ಪಿ.ಎಂ. ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ)

OTP ಆಧಾರಿತ e-KYC

OTP ಆಧಾರಿತ eKYC ಅನ್ನು ಕಾರ್ಯಗತಗೊಳಿಸಲು, ರೈತರು ಆಧಾರ್ ಲಿಂಕ್ ಮಾಡಿದ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಇದಕ್ಕಾಗಿ ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ.

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/Rpt_BeneficiaryStatus_pub.aspx

ಆಮೇಲೆ ಅಲ್ಲಿ ನಿಮ್ಮ State

–Select State–

District

–Select District-

Sub-District

-Select Sub District–

Block

–Select Block–

Village

Get Report ಮೇಲೆ ಕ್ಲಿಕ್ ಮಾಡಿ.

16.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ರಾತ್ರಿ ಹಾಗೂ ಮುಂಜಾನೆ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಈಗಿನಂತೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ವಾತಾವರಣವು ಇನ್ನು 2 ಅಥವಾ 3 ದಿನಗಳವರೆಗೆ ಮುಂದುವರಿಯುವ ಲಕ್ಷಣಗಳಿವೆ. ನಂತರ ಬಿಸಿಲಿನ ವಾತಾವರಣ ಇರಬಹುದು.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ ಈ ವಾತಾವರಣವು ಇನ್ನು 2 ಅಥವಾ 3 ದಿನಗಳ ಕಾಲ ಇರಲಿದ್ದು, ನಂತರ ಬಿಸಿಲಿನ ಅವಧಿ ಹೆಚ್ಚಿರಬಹುದು.

ಒಳನಾಡು : ಉತ್ತರ ಹಾಗೂ ದಕ್ಷಿಣ ಒಳನಾಡು ಹೆಚ್ಚಿನ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಆಗಾಗ ಸ್ವಲ್ಪ ಮೋಡದ ವಾತಾವರಣದ ಮುನ್ಸೂಚೆನೆ ಇದೆ.
ಈಗಿನಂತೆ ಸೆಪ್ಟೆಂಬರ್ 21ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಬಂಗಾಳಕೂಲ್ಲಿಯ ವಾಯುಭಾರ ಕುಸಿತವು ಇನ್ನೆರಡು ದಿನಗಳಲ್ಲಿ ದುರ್ಬಲಗೊಂಡು ಪಶ್ಚಿಮಾಭಿಮುಖವಾಗಿ ಚಲಿಸಿ ಸೆಪ್ಟೆಂಬರ್ 18ರ ಸಮಯಕ್ಕೆ ಉತ್ತರಾಖಂಡ ತಲುಪಿ ಶಿಥಿಲಗೊಳ್ಳುವ ಲಕ್ಷಣಗಳಿವೆ.

14.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಉಡುಪಿ ಕರಾವಳಿ ತೀರ ಭಾಗಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳ ಒಂದೆರಡು ಕಡೆ ಒಂದೊಂದು ಸಾಮಾನ್ಯ ಮಳೆಯ ಸಾಧ್ಯತೆಯೂ ಇದೆ.
ಈಗಿನಂತೆ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆ ತೀರಾ ಕಡಿಮೆ.

ಮಲೆನಾಡು : ಕೊಡಗಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಒಂದೆರಡು ಕಡೆ ಮೋಡ ಹಾಗೂ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ.

ಒಳನಾಡು : ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ.

ಉತ್ತರಾಖಂಡ್ ನಲ್ಲಿರುವ ವಾಯುಭಾರ ಕುಸಿತವು ಇಂದು ಶಿಥಿಲಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಆರಂಭವಾಗುವ ಲಕ್ಷಣಗಳಿವೆ. ಆದರೆ ಇದರಿಂದ ಕರ್ನಾಟಕದ ಮೇಲೆ ಯಾವುದೇ ಪರಿಣಾಮಗಳಿಲ್ಲ.

Related Post

Leave a Reply

Your email address will not be published. Required fields are marked *