Breaking
Tue. Dec 17th, 2024

ಹೆಚ್ಚುವರಿ ರೈತರಿಗೆ ಪಿಎಂ ಕಿಸಾನ್ 2000 ರೂಪಾಯಿ ಹಣ ಜಮಾ, ಯಾರಿಗೆ ಬರಲ್ಲ?

Spread the love

ಪಿಎಂ kisan ಹಣ ಯಾರಿಗೆ ಜಮಾ ಆಗುತ್ತೆ ಸ್ಟೇಟಸ್ ಚೆಕ್ ಮಾಡಿ?

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://pmkisan.gov.in/Rpt_BeneficiaryStatus_pub.aspx

ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಬ್ಲಾಕ್ ಎಲ್ಲಾ ಹಾಕಿ. Get report ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆಗ ನಿಮ್ಮ ಮುಂದೆ ಒಂದು ಲಿಸ್ಟ್ ಬರುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ. ಅದರಲ್ಲಿ ನಿಮ್ಮ ಹೆಸರು ಇದ್ದರೆ ಆದಷ್ಟು ಬೇಗ ನಿಮಗೆ ಹಣ ಜಮಾ ಮಾಡಲಾಗುವುದು.

ಆದರೆ ಈ ರೈತರಿಗೆ ಮಾತ್ರ ಬರಲ್ಲ ಹಣ ?

ಅನರ್ಹ ಪಟ್ಟಿಯಲ್ಲಿರುವ ರೈತರಿಗೆ ಬರಲ್ಲ ಅಂದ್ರೆ ಯಾರು npci seeding, bank to aadhar link, ekyc ಮಾಡಿಸಿಲ್ಲ ಅವರಿಗೆ ಹಣ ಬರಲ್ಲ.

E kyc ಮಾಡಿಸಲು ಏನು ಮಾಡಬೇಕು?

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://fw.pmkisan.gov.in/aadharekyc.aspx

ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ, ನಿಮ್ಮ ರಿಜಿಸ್ಟರ್ mobile ನಂಬರ್ ಗೆ ಒಂದು otp ಬರುತ್ತದೆ ಅದನ್ನು ಹಾಕಿ. ಆಗ ನಿಮ್ಮ ekyc ಸಂಪೂರ್ಣ ಆಗುತ್ತದೆ.

Npci seeding ಮಾಡುವುದು ಹೇಗೆ?

ನಿಮ್ಮ ಬ್ಯಾಂಕ್ ಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಗೆ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಿ.

ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಲಿಸಿ :

ಸಫಾಯಿ ಕರ್ಮಚಾರಿಗಳಿಗೆ ನ್ಯಾಯಯುತವಾಗಿ ಸಿಗಬೇಕಾಗ ಸರಕಾರದ ಎಲ್ಲ ಯೋಜನೆಗಳನ್ನು ತಲುಪಿಸುವ ಕೆಲಸವಾಗಬೇಕೆಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು. ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಸಫಾಯಿ ಕರ್ಮಚಾರಿ ಮತ್ತು ಸಂಘಟನೆಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೌರಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪೂರೈಸುವುದು ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಕರ್ತವ್ಯವಾಗಿದೆ.

ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ಸರಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಕೆಲಸವಾಗಬೇಕು ಎಂದರು. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸಾಮೂಹಿತ ಶೌಚಾಲಯದ ಸ್ಥಿತಿಗತಿಗಳ ಬಗ್ಗೆ ಪ್ರಶ್ನಿಸಿದ ಅವರು ಜಮಖಂಡಿ ಭಾಗದಲ್ಲಿ ಡಿ ಗ್ರೂಪ್ ನೌಕರರ ಉಪಯೋಗಿಸಿ ಸಾಮೂಹಿಕ ಶೌಚಾಲಯಗಳನ್ನು ಶುಚಿಗೊಳಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಇದ್ದಲ್ಲಿ ಜಟ್ಟಿಂಗ್ ಮಷೀನ್ ಉಪಯೋಗಿಸಲಾಗುವುದೆಂದು ಪೌರಾಯುಕ್ತ ಲಕ್ಷ್ಮೀ ಅಸ್ಪಗಿ ಸಭೆಗೆ ತಿಳಿಸಿದರು. ನಗರಸಭೆಯಲ್ಲಿ ಖಾಯಂಗೊಂಡ ಕೆಲ ಸಿಬ್ಬಂದಿಗಳಿಗೆ ಮನೆ ಇಲ್ಲದ್ದನ್ನು ಗಮನಿಸಿದ ಅಧ್ಯಕ್ಷರು ಮುಂಬರುವ ದಿನಗಳಲ್ಲಿ ನಿವೇಶನ ರಹಿತ, ನಿವೇಶನ ಸಹಿತ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಆಯುಕ್ತರಿಗೆ ನಿವೇಶನ ಗುರುತಿಸಲು ಸೂಚಿಸಿದರು.

ಪ್ರತಿ ಗ್ರಾಮ ಪಂಚಾಯತಿಯಲ್ಲಿ 5 ಜನ ಸಿಬ್ಬಂದಿಗಳಿರುವುದು ಸಾಮಾನ್ಯ ಜನಸಂಖ್ಯೆ ಹೆಚ್ಚಾಗಿರುವ ಗ್ರಾ.ಪಂಗಳಿಗೆ ಹೆಚ್ಚುವರಿಯಾಗಿ ಹೊರಗುತ್ತಿಗೆ ಆಧಾರ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲು ಹೇಳಿದರು. ಪ್ರತಿ ಕಾರ್ಮಿಕರ ಆರೋಗ್ಯಕ್ಕೆ ಹೆಚ್ಚಿನ ನಿಗಾ ಇಡುವದಲ್ಲದೇ ವಿಮಾ ಯೋಜನೆ. ಸುರಕ್ಷತಾ ಪರಿಕರಣಗಳನ್ನು ಒದಗಿಸಬೇಕು ಎಂದರು. ಸೀಮಿಕೇರಿ, ಮುರನಾಳ ಹಾಗೂ ಯಡಹಳ್ಳಿ ಸಿಬ್ಬಂದಿಗಳನ್ನು ಮಾತನಡಿದ ಅವರು ಕಸ ವಿಲೇವಾರಿ ವಾಹನ ಮಹಿಳಾ ಚಾಲಕಿಗಳಿಗೆ ವಿಮೆ ಪಾಲಸಿ ಬಗ್ಗೆ ಖಾಯಂ ಗೊಳಿಸುವದ ಬಗ್ಗೆ ತಿಳಿಸಿದರು. 1997 ರಲ್ಲಿ ಗುರುತಿಸಲಾದ ಸಿಬ್ಬಂದಿಗಳನ್ನು ಮಾತ್ರ ಖಾಯಂಗೆ ಪರಿಗಣಿಸಲಾಗುತ್ತಿದೆ. ಪ್ರಚಲಿತವಾಗಿ ಕೆಲಸಕ್ಕೆ ಸೇರಿದ ಪೌರಕಾರ್ಮಿಕರ ಖಾಯಂಗೆ ಸರಕಾರ ನಿಯಮಗಳು ಬಂದಿರುವದಿಲ್ಲ.

ಪ್ರತಿ ಪೌರಕಾರ್ಮಿಕರಿಗೆ ನಿವೇಶನ ಮಾಡಿಕೊಳ್ಳಲು 7,50,000 ರೂ. ಗಳನ್ನು ಕೊಡಲಾಗುತ್ತಿದೆ. ಪ್ರತಿ ನಗರ ಹಾಗೂ ಗ್ರಾಮೀಣ ಸಂಸ್ಥೆಗಳು ಪ್ರತಿ ಪೌರಕಾರ್ಮಿಕರ ವೇತನ, ವಿಮೆ, ಇಎಸ್‌ಐ, ಪಿಎಫ್‌ಗಳ ಬಗ್ಗೆ ಸಮಗ್ರ ವಿವರಣೆ ನೀಡಲು ಸೂಚಿಸಿದರು. ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳಿಗೆ ಶೌಚಾಲವುಳ್ಳ ದೂರು ದಾಖಲಿಸಬಹುದಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕ ಮಾಹಿತಿಯನ್ನು ಸಭೆಗೆ ತಿಳಿಸಿದರೆ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮಾಹಿತಿಯನ್ನು ಜಿ.ಪಂ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ನಿರ್ದೇಶಕ ಜಗದೀಶ ಹಿರೇಮನಿ, ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸಿಂಗ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಫಾಯಿ ಕರ್ಮಚಾರಿಗಳಿಗೆ ಕಾನೂನಾತ್ಮಕವಾಗಿ ಎಲ್ಲ ಸೌಲಭ್ಯಗಳು ಸೀಗಬೇಕು

ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳಿಂದ ಕಾನೂನಾತ್ಮಕವಾಗಿ ಸೀಗಬೇಕಾದ ಎಲ್ಲ ಸೌಕರ್ಯ, ಸೌಲಭ್ಯಗಳನ್ನು ಪೂರೈಸುವುದು ಆಯಾ ಸ್ಥಳೀಯ ಸಂಸ್ಥೆ, ಇಲಾಖೆಗಳ ಮುಖ್ಯಸ್ಥರ ಕರ್ತವ್ಯವಾಗಿದೆ. ಪೌರಕಾರ್ಮಿಕರಿಗೆ ಸೀಗಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಅನಗತ್ಯ ವಿಳಂಬ ಅಥವಾ ಅವುಗಳನ್ನು ತೀರಸ್ಕರಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡುವದಾಗಿ ರಾಷ್ಟ್ರೀಯ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಅವರು ತಿಳಿಸಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು. ಪೌರಕಾರ್ಮಿಕರು ಸಮಸ್ಯೆಗಳಿದ್ದಲ್ಲಿ ನೇರ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ದೂರು ಸಲ್ಲಿಸಬಹುದು. ಪೌರಕಾರ್ಮಿಕರಿಗೆ ಸೀಗಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತೊಂದರೆಗಳಿದ್ದಲ್ಲಿ ಪರಿಹರಿಸಲಾಗುವುದು ಎಂದರು.

ಸರಕಾರದ ನೀತಿ ವಿಷಯಗಳಾಗಿದ್ದಲ್ಲಿ ಅದನ್ನು ಸರಕಾರದ ಗಮನಕ್ಕೆ ತರಲಾಗುವುದು. ಜಿಲ್ಲಾ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಆರು ನಗರ ಸ್ಥಳೀಯ ಸಂಸ್ಥೆಗಳು, ಎರಡು ಪಟ್ಟಣ ಪಂಚಾಯತಿ ಹಾಗೂ ಹು-ಧಾ ಮಹಾನಗರ ಎಲ್ಲ ಸೇರಿ 182 ವಾರ್ಡಗಳಲ್ಲಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗೃಹಭಾಗ್ಯ ಯೋಜನೆಯಲ್ಲಿ 468 ಖಾಯಂ ಪೌರಕಾರ್ಮಿಕರ ಪೈಕಿ 378 ಮನೆ ಒದಗಿಸಲಾಗಿದ್ದು, 89 ಕಾರ್ಮಿಕರಿಗೆ ಇನ್ನೂ ನಿವೇಶನವಿಲ್ಲದವರಿಗೆ ಮನೆ ಕಲ್ಪಿಸಲಾಗಿಲ್ಲ. ಅವಳಿನಗರಗಳಲ್ಲಿ ಮೂರು ಅಂತಸ್ಥಿನ 320 ಮನೆಗಳನ್ನು ಕಟ್ಟಿಸಲಾಗಿದೆ ಎಂದರು. ಪೌರಕಾರ್ಮಿಕರಿಗೆ ಅಗತ್ಯ ರಕ್ಷಣಾ ಪರಿಕರಗಳನ್ನು ಕೈಗೆ ಗೌಸ್, ಗಬೂಟ್, ಹೆಲೈಟ್, ಸಮವಸ್ತ್ರ, ಉಪಹಾರವನ್ನು ಒದಗಿಸಲಾಗುತ್ತಿದೆ. ಒಟ್ಟು 59 ಏಜೆನ್ಸಿಗಳಿಂದ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಲಾಗುತ್ತಿದೆ.

146 ಶೌಚಾಲಯಕ್ಕೆ ಹು-ಧಾ ಪಾಲಿಕೆಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಎರಡು ಸ್ಥಳಗಳಿದ್ದು, ಒಳಚರಂಡಿ ಕಾಮಗಾರಿಗೆ ಪ್ರತ್ಯೇಕ 52 ಕಾರ್ಮಿಕರು ವಿಶೇಷ ಮಶೀನ್ ಬಳಸಿ ಕಾರ್ಯನಿರ್ವಹಿಸುತ್ತಾರೆಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಆದೇಶದಂತೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಮವಸ್ತ್ರ ಹಾಗೂ ಸುರಕ್ಷಾ ಪರಿಕರಗಳನ್ನು ನೀಡಲಾಗಿದೆ. ಮ್ಯಾಹೊಲ್ ಸ್ವಚ್ಚತೆಗೆ ಮಾನವ ಬಳಕೆಯನ್ನು ನಿಷೇಧಿಸಲಾಗಿದೆ. ಜಟ್ಟಿಂಗ್ ಮಶೀಗಳನ್ನು ಬಳಸಲಾಗುತ್ತದೆ. ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ, ಅವರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪೌರ ಕಾರ್ಮಿಕರು, ಪೌರ ಕಾರ್ಮಿಕರ ಸಂಘಟನೆಗಳ ಪ್ರಮುಖರು, ಸಫಾಯಿ ಕರ್ಮಚಾರಿ ಜಿಲ್ಲಾ ಸದಸ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *