ಅತ್ಮೀಯ ರೈತರೇ, ನಿಮಗೆ ಬೆಳೆವಿಮೆ ಹಾನಿ , ಪಿಎಂ ಕಿಸಾನ್ ಹಣದ ಸ್ಟೇಟಸ್, ಹಾಗೂ ಬೆಳೆಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಸುಲಭ ದಾರಿ ಇದೆ. ಮೊಬೈಲ್ ನಲ್ಲಿಯೇ ಹೇಗೆ ಚೆಕ್ ಮಾಡಬೇಕು ಎಂಬುದನ್ನು ಒಂದೊಂದಾಗಿ ತಿಳಿಯೋಣ ಬನ್ನಿ.
ಬೆಳೆವಿಮೆ ಪರಿಹಾರ ಸ್ಟೇಟಸ್ ಚೆಕ್ ಹೇಗೆ ಮಾಡಬೇಕು?
ಈ ಬೆಳೆ ವಿಮೆಯನ್ನು ಎಲ್ಲಿ ಮಾಡಿಸುವುದೆಂದರೆ’ ಪ್ರಧಾನ್ ಮಂತ್ರಿ ಫಸಲ್ ಭೀಮ ಯೋಜನೆ ‘ ಅಡಿಯಲ್ಲಿ ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ. ಬೆಳೆ ಸಾಲ ಪಡೆಯದ ರೈತರು’ ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ’ ಅಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕುಗಳಲ್ಲಾಗಲಿ ಅಥವಾ ಗ್ರಾಮಾ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
ಅರ್ಜಿಯೊಂದಿಗೆ ಜಮೀನು ಹೊಂದಿದ ಪಹಣಿಯನ್ನು ನೀಡಬೇಕು. ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ನೀಡಬೇಕು.ಅರ್ಜಿಯೊಂದಿಗೆ ಯಾವ ಬೆಳೆಗೆ ವಿಮೆ ಮಾಡಿಸಿದ್ದೋರೋ ವಿಮೆ ಕಂಪನಿಗೆ ನೀವು ಬೆಳೆ ವಿಮಾ ಕಂತನ್ನು ಕಟ್ಟಬೇಕಾಗುತ್ತದೆ. ರೈತರು ಬೆಳೆ ವಿಮೆ ಮಾಡಿಸುತ್ತಾರೆ ಆದರೆ ಯಾವ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸುತ್ತಾರೋ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ರೈತರು http://www.samrakshane.karnataka. gov ಲಿಂಕ್ ಮೇಲೆ ಕ್ಲಿಕ್ ಮಾಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ಇದೆ ಎಂಬ ಪಟ್ಟಿ ಸಿಗುತ್ತದೆ.
ಇದನ್ನೂ ಓದಿ :- ಇನ್ನೂ ಮುಂದೆ ರೈತರಿಗೆ 5 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಬೆಳೆ ಸಾಲ ಸಿಗುತ್ತದೆ
ಇದನ್ನೂ ಓದಿ :- ಈ ಟ್ರಾಕ್ಟರ್ ಖರೀದಿಸಿ ಜೊತೆಗೆ ರೋಟೋವೇಟರ್ ಮತ್ತು ಒಂದು ಗ್ರಾಂ ಚಿನ್ನವನ್ನು ಬಹುಮಾನವಾಗಿ ಪಡೆಯಿರಿ
ಇದನ್ನೂ ಓದಿ :- ರೇಷ್ಮೆ ಹುಳು ಮನೆ ನಿರ್ಮಿಸಲು ಸರ್ಕಾರದಿಂದ 67000 – 3,60,000 ರೂಪಾಯಿಗಳ ಸಹಾಯಧನ