ಆತ್ಮೀಯ ರೈತ ಬಾಂಧವರೇ ಈಗಾಗಲೇ PM KISAN ಹಲವಾರು ಕಂತುಗಳು ಬಂದು ನಿಮ್ಮ ಖಾತೆಗೆ ತಲುಪಿವೆ. ಈಗ ರೈತರು ಅತಿ ಸುಲಭವಾಗಿ ಮುಂದಿನ ಕಂತು ನಿಮಗೆ ಬರುತ್ತದೆ ಎಂದು ತಿಳಿದುಕೊಳ್ಳಲು ನಾವು ತಿಳಿಸುವ ಹಾಗೆ ಭೇಟಿ ನೀಡಿ ಅಲ್ಲಿ ಅರ್ಹರ ಪಟ್ಟಿ ಮತ್ತು ಅನರ್ಹರ ಪಟ್ಟಿ ನೋಡಿಕೊಳ್ಳಬಹುದು. ಅದನ್ನು ಹೇಗೆ ನೋಡುವುದು ಎಂದು ತಿಳಿಯುವುದು ಹೇಗೆ? ಯಾವ ವೆಬ್ ಸೈಟಿಗೆ ಭೇಟಿ ಕೊಡಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
PM ಕಿಸಾನ್ ಮುಂದಿನ ಕಂತಿನ ಅರ್ಹರ ಪಟ್ಟಿ ನೋಡುವುದು ಹೇಗೆ?
ರೈತ ಬಾಂಧವರೇ ಮೊದಲು ನೀವು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. https://pmkisan.gov.in/ ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ನಿಮ್ಮ ಮುಂದೆ ಒಂದು ವೆಬ್ಸೈಟ್ ಕಂಡುಬರುತ್ತದೆ. ಅಲ್ಲಿ ನಾವು ಕೆಳಗಿನ ಚಿತ್ರವನ್ನು ತೋರಿಸಿದ ಹಾಗೆ ಅಲ್ಲಿ ಕಾಣುವ beneficiary list ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಮೇಲಿನ ಚಿತ್ರದಲ್ಲಿ ಕಾಣುವಹಾಗೆ ನಿಮ್ಮ ಮುಂದೆ ನಿಮ್ಮ ರಾಜ್ಯ, ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಬ್ಲಾಕ್, ನಿಮ್ಮ ಹಳ್ಳಿ ಎಲ್ಲವನ್ನೂ ಅಲ್ಲಿ ಸೆಲೆಕ್ಟ್ ಮಾಡಬೇಕಾಗುತ್ತದೆ. ಇಷ್ಟು ಮಾಡಿದ ತಕ್ಷಣ ನಿಮ್ಮ ಮುಂದೆ ಒಂದು ಪರದೇ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಹೆಸರನ್ನು ಹುಡುಕಿಕೊಳ್ಳಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಖಚಿತವಾಗಿ ವರ್ಷಕ್ಕೆ 6000 ಬಂದೇ ಬರುತ್ತದೆ.
PM kisan ಅನರ್ಹ ಪಟ್ಟಿಯನ್ನು ನೋಡುವುದು ಹೇಗೆ?
ರೈತ ಬಾಂಧವರೇ, ನೀವು ಮೊದಲು ನಾವು ಕೆಳಗೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮನ್ನು ಒಂದು ವೆಬ್ಸೈಟ್ಗೆ ಕರೆದುಕೊಂಡು ಹೋಗುತ್ತದೆ.
https://pmkisan.gov.in/VillageDashboard_Portal.aspx
ಅಲ್ಲಿ ನೀವು ಕೆಳಗಿನ ಚಿತ್ರದಲ್ಲಿ ಕಾಣುವಹಾಗೆ ನಿಮ್ಮ ರಾಜ್ಯ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹಳ್ಳಿಯನ್ನು ಹಾಕಿದರೆ ನಿಮ್ಮ ಮುಂದೆ Aadhaar Authentication Status ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಎದುರು ಒಂದು ಪರದೆ ಬರುತ್ತದೆ ಅಲ್ಲಿ ಸಂಪೂರ್ಣವಾದ ಅನರ್ಹ ಪಟ್ಟಿ ಕಾಣುತ್ತದೆ.
ನಿಮ್ಮ ಜಾನುವಾರಗಳ ಪಾಲನೆ ಪೋಷಣೆ ಮಾಡಲು 5,962 ಪಶು ಸಖಿಯರ ನೇಮಕ
NLM ಯೋಜನೆ ಕುರಿ ಸಾಕಾಣಿಕೆ ಮಾಡಲು 50 ಲಕ್ಷ ಸಾಲ, ಅದರಲ್ಲಿ 25 ಲಕ್ಷ ಸಬ್ಸಿಡಿ
ರೈತರ 2 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮ ಮಾಡಲಾಗುತ್ತದೆ ಡಿಕೆಶಿ ಹೇಳಿಕೆ
ಅಣಬೆ ಬೇಸಾಯ ಮಾಡುವುದು ಹೇಗೆ ಎಂದು ತಿಳಿಯಿರಿ ಲಕ್ಷಗಟ್ಟಲೆ ಹಣ ಸಂಪಾದಿಸಿ, ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ 🍄🍄🐑🐑