ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ಆ್ಯಪ್ download madi ಕೊಳ್ಳಿ. ಆಮೇಲೆ mpin creat ಮಾಡಿ confirm ಮಾಡಿಕೊಳ್ಳಿ. ಆಮೇಲೆ ಕೆಳಗಿನ ರೀತಿ ಮಾಡಿ.
ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರಷ್ಟೇ ಪಾತ್ರ ಡಾ.ಬಿ.ಆರ್.ಅಂಬೇಡ್ಕರ ಅವರದ್ದೂ ಇದೆ: ಬೊಮ್ಮಾಯಿ
ಬ್ರಿಟಿಷರಿಂದ ಭಾರತ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ಮಹಾತ್ಮಾ ಗಾಂಧೀಜಿ ಬೀರಿರುವ ಪಾತ್ರದಷ್ಟೇ ಡಾ.ಬಿ.ಆರ್.ಅಂಬೇಡ್ಕರ ಅವರು ಬೀರಿರುವ ಹಿನ್ನೆಲೆಯಲ್ಲಿ ಅವರನ್ನು ಇನ್ನುಂದೆ ಮಹಾತ್ಮಾ ಡಾ. .ಬಿ.ಆರ್.ಅಂಬೇಡ್ಕರ ಎನ್ನಬೇಕೆಂದು ಹಾವೇರಿ ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಮುನ್ನೂಬಾಯಿ ಖೋಡೆ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಗದಗ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಶಿವಪ್ಪ ಮುಳಗುಂದ ನೇತೃತ್ವದಲ್ಲಿ ಜರುಗಿದ ಗದಗ ಶಹರ ಎಸ್.ಸಿ ಮೋರ್ಚಾ ಸಮಾವೇಶದಲ್ಲಿ ಅವರು ಮಾತನಾಡಿದರು. ಭಾರತ ದೇಶ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದಾಗ ಡಾ. ಬಿ.ಆರ್.ಅಂಬೇಡ್ಕರ ಅವರ ಮೇಲೆ ಬ್ರಿಟಿಷರು ಪ್ರಭಾವ ಬೀರಿದರು. ಆದರೆ ಡಾ.ಬಿ.ಆರ್. ಅಂಬೇಡ್ಕರ ಅವರು ಆ ಪ್ರಭಾವಕ್ಕೆ ಮಣಿಯದೇ ಹೆದರದೇ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಧುಮುಕಿದರು.
ಡಾ.ಬಿ.ಆರ್.ಅಂಬೇಡ್ಕರ ಅವರು ರಚಿಸಿದ ಸಂವಿಧಾನದಿಂದಲೇ ದೇಶದ ಪ್ರಧಾನಿ ಆಗಿದ್ದೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಸಂವಿಧಾನ ಆದೊಂದು ಪವಿತ್ರ ಧರ್ಮಗ್ರಂಥವಾಗಿದೆ. ಅದನ್ನು ಪೂಜ್ಯಭಾವನೆಯಿಂದಾಗಿ ಮೋದಿ ನೋಡುತ್ತಾರೆ. ಕಾಂಗ್ರೆಸ್ ಸೋಲುವ ಭೀತಿಯಿಂದಾಗಿ ಬಿಜೆಪಿ ಸಂವಿಧಾನ ಬದಲಾಯಿಸುವ ಬಗ್ಗೆ ತಪ್ಪು ಸಂದೇಶವನ್ನು ಬಿತ್ತರಿಸುತ್ತಿದ್ದಾರೆ. ಸಂವಿಧಾನ ಮೀಸಲಾತಿಯನ್ನು ಕೇವಲ 10 ವರ್ಷಕ್ಕೆ ಮೀಸಲಿಡಲಾಗಿತ್ತು.
ದಿ. ಅಟಲ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಮೀಸಲಾತಿ ಅವಧಿಯನ್ನು ತಲಾ 10 ವರ್ಷ ಹೆಚ್ಚಿಸಿ, ಆ ಮೀಸಲಾತಿನ್ನು ಮುಂದುವರೆಸಿದ್ದಾರೆ ಎಂದರು. ಗದಗ ಶಹರ ಎಸ್.ಸಿ ಸಮಾವೇಶ ಉದ್ಘಾಟಿಸಿದ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಮಾತನಾಡಿ, ದೇಶಕ್ಕೆ ಲಿಖಿತ ಸಂವಿಧಾನದ ಮೂಲಕ ಆಡಳಿತ ವ್ಯವಸ್ಥೆಗೆ ಸಂವಿಧಾನ ಎಂಬ ಮಹಾನ ಗ್ರಂಥ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ ಅವರ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಾ, ಮಹಾನ ನಾಯಕ ಅಂಬೇಡ್ಕರ ಅವರನ್ನ 2 ಬಾರಿ ಕಾಂಗ್ರೆಸ್ ಪಕ್ಷ ಸೋಲಿಸಿದೆ ಎಂದರು.
ಅಲ್ಲದೇ ಅವರ ಸಮಾದಿಗೆ ಜಾಗವನ್ನು ನೀಡದೇ ಅವರನ್ನ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಎಸ್.ಸಿ.ಎಸ್.ಟಿ ಕಲ್ಯಾಣಕ್ಕಾಗಿ 26 ಸಾವಿರ ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗಿತ್ತು, ಆದರೆ ಇದೀಗ ಬಂದ ಕಾಂಗ್ರೆಸ್ ಸರಕಾರ ಆ ಎಲ್ಲ ಹಣವನ್ನು ಬೇರೆ ಕಾರ್ಯಕ್ಕೆ ಬಳಸುವ ಮೂಲಕ ದಲಿತರಿಗೆ ವಂಚಿಸಿ ಅವರಿಂದ ಕೇವಲ ಮತ ಪೀಕುವ ಕಾರ್ಯದಲ್ಲಿ ತೊಡಗಿದೆ ಎಂದರು. ಆ 26 ಸಾವಿರ ಹಣದ ಮೇಲೆ ದಲಿತ ಹಕ್ಕಿದೆ. ದಲಿತರೆಲ್ಲರೂ ಈ ಬಗ್ಗೆ ದನಿ ಎತ್ತಿ, ಈ ಪೈಕಿ ಜಿಲ್ಲೆಗೆ 1 ಸಾವಿರ ಹಣ ಹಂಚಿಕೆ ಆದರೆ ದಲಿತರೆಲ್ಲರೂ ಆರ್ಥಿಕವಾಗಿ ಸ್ವಾವಲಂಬಿಯಾಗಿ ಸ್ವಾಭಿಮಾನಿ ಶಕ್ತಿಗಳಾಗಿ ಭವಿಷ್ಯದಲ್ಲಿ ಪ್ರಗತಿ ಹೊಂದಲಿದ್ದಾರೆ ಎಂದರು.
ಬಿಜೆಪಿ ಯುವಮುಖಂಡ ಅನೀಲ ಮೆಣಸಿನಕಾಯಿ ಮಾತನಾಡಿದರು. ಗದಗ ನಗರದಲ್ಲಿ ಪ್ರಥಮ ಬಾರಿಗೆ ನಡೆದ ಎಸ್.ಸಿ ಸಮಾವೇಶದಲ್ಲಿ ಮೋಚಿ, ಮಾದಿಗ, ಸಮಗಾರ, ಬೋವಿ, ದಾಸರ ಸೇರಿದಂತೆ ಹಲವು ಸಮುದಾಯಗಳ ಸಾವಿರಾರು ಬಾಂಧವರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿಪ ಮಾಯಪ್ಪ ಭಜಂತ್ರಿ, ಬೀಮಸಿಂಗ್ ರಾಠೋಡ, ರಾಜೇಶ ಕಟ್ಟಿಮನಿ, ರಾಜೇಶ ಮುಟಗಾರ, ಮೋಹನ ಅಲಮೇಲಕರ, ನ್ಯಾಯವಾದಿ ಶ್ರೀಕಾಂತ, ಅಶೋಕ ಮುಳಗುಂದ ಸೇರಿದಂತೆ ಹಲವರಿದ್ದರು.
ಪ್ರಸಕ್ತ ಸಮುದಾಯದಲ್ಲಿರುವ ದಲಿತ, ಮಹಿಳಾ ಮತ್ತು ಯುವ ಶಕ್ತಿಗಳು ಎಲ್ಲರೂ ಒಟ್ಟಾಗಿ ಈ ಬಾರಿ ನನಗೆ ಬೆಂಬಲಿಸಿ ಆಶೀರ್ವಧಿಸಿ ದೆಹಲಿ ಸಂಸತ್ತಿಗೆ ಕಳುಹಿಸಿರಿ, ನಿಮ್ಮ ಶಕ್ತಿ ಪೈಕಿ ನಾನು ಗುಲಗುಂಜಿಯಷ್ಟು ನನ್ನ ವೈಯಕ್ತಿಕ ಹಿತಕ್ಕೆ ಬಳಸುವುದಿಲ್ಲಾ, ಅದನ್ನು ನಿಮಗಾಗಿ ನಿಮ್ಮ ಸಮುದಾಯ ಬೆಳವಣಿಗೆಗಾಗಿ ಬಳಸುವೆ. ಮಂಜುನಾಥ ಶಿವಪ್ಪ ಮುಳಗುಂದ ನೇತೃತ್ವದಲ್ಲಿ ನಡೆದ ಎಸ್.ಸಿ ಸಮಾವೇಶದಿಂದ ಬಲ ಬಂದಿದೆ. ಬಸವರಾಜ ಬೊಮ್ಮಾಯಿ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ.
ಗದಗ ಜಿಲ್ಲಾ ಎಸ್.ಸಿ ಸಮುದಾಯಗಳ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರು ಮೇ 7 ರಂದು ಬಸವರಾಜ ಬೊಮ್ಮಾಯಿ ಅವರ ಕಮಲದ ಗುರುತಿಗೆ ಮತ ನೀಡಿ ಅವರನ್ನ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಹಾವೇರಿ ಗದಗ ಲೋಕಸಭಾ ಮತಕ್ಷೇತ್ರದಲ್ಲಿ ಮೆರೆಯಬೇಕಿದೆ. ರಾಜಕೀಯ ದಾಖಲೆ ಮಂಜುನಾಥ ಶಿವಪ್ಪ ಮುಳಗುಂದ ಅಧ್ಯಕ್ಷರು ಬಿಜೆಪಿ ಎಸ್.ಸಿ ಮೋರ್ಚಾ.
ಇಂದ್ರಿಗಳ ನಿಯಂತ್ರಣವೇ ಸರ್ವ ಸಾಧನೆಗೆ ಶಕ್ತಿ : ಯೋಗಾಚಾರ್ಯ ಪಲ್ಲೇದ
ಯೋಗ ಇಂದಿನ ಸಮೃದ್ದ ಬದುಕಿನ ಸಾಧನವಾಗಿ ಆರೋಗ್ಯ ಭಾಗ್ಯವನ್ನು ಕರುಣಿಸುವ ಶಕ್ತಿ ಯೋಗದಲ್ಲಿದೆ. ನಮ್ಮ ಮನಸ್ಸಿನ ಆಶಾ ಬದುಕನ್ನು ನಿಯಂತ್ರಿಸಲು ಯೋಗ ಒಂದು ಅತ್ಯುತ್ತಮ ಸಾಧನವಾಗಿದೆ. ಯೋಗವೆಂದರೆ ನಮ್ಮ ಜೀವನೋತ್ಸಾಹವನ್ನು ಕಾಪಾಡಿಕೊಳ್ಳುವದು. ಆತ್ಮಸ್ಥೆರ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಬಸವಯೋಗ ಮಂದಿರದ ಪ್ರಾಚಾರ್ಯರಾದ ಯೋಗಾಚಾರ್ಯ ಕೆ.ಎಸ್ ಪಲ್ಲೇದ ಮಾತನಾಡಿದರು.
ಶ್ರೀ ಶಿವಶರಣಮ್ಮನವರ ಧ್ಯಾನಯೋಗಾಶ್ರಮ ಜಲ್ಲಿಗೇರಿ ತಾ॥ ಶಿರಹಟ್ಟಿ ಜಿ।। ಗದಗ, ನವರಸ ಕಲಾ ಸಂಘ (ರಿ) ಬೆಟಗೇರಿ ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ಮುಂಡರಗಿ, ಚೇತಕ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ನಯನತಾರ ಕಲಾ ಸಂಘ ಗಣೇಶ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ಬೆಟಗೇರಿ ಇವುಗಳ ಸಹಯೋಗದಲ್ಲಿಯೋಗ ಶಿಬಿರ ಹಾಗೂ ಸಿರಿಧಾನ್ಯ ಕಾರ್ಯಗಾರ ಹಾಗೂ ಮತದಾನಜಾಗೃತ ಕವಿಗೋಷ್ಠಿ ಕಾರ್ಯಕ್ರಮವನ್ನು ಕಿತ್ತೂರ ಚನ್ನಮ್ಮಗಾರ್ಡನ್ ಹೆಲ್ತ್ಕ್ಯಾಂಪ್, ಬೆಟಗೇರಿಯಲ್ಲಿ ಉದ್ಘಾಟಿಸಿ ಮಾತನಾಡುತ್ತ ನಿತ್ಯ ನಮ್ಮ ಜೀವನೋತ್ಸಾಹವನ್ನು ಕಾಪಾಡಿಕೊಳ್ಳಲು ಆಸನಗಳು ಮತ್ತು ಪ್ರಾಣಾಯಾಮ ಪರಿಣಾಮಕಾರಿಯಾದವುಗಳು ಅವುಗಳನ್ನು ನಿತ್ಯ ಪಾರಾಯಣ ಮಾಡಬೇಕು.
ಇಂದಿನ ನಮ್ಮ ನಿತ್ಯ ಬದುಕಿನ ಶೈಲಿ ಶಿಸ್ತು ಬದ್ಧತೆಯನ್ನು ಕಳೆದುಕೊಂಡಿವೆ. ಅವುಳನ್ನು ನಿಯಮ ಬದ್ಧತೆಗೆತೆಗೆದುಕೊಂಡಾಗ ಮಾತ್ರ ಮನಸ್ಸು ಮತ್ತುದೇಹಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆಎಂದುಅಭಿಮತ ವ್ಯಕ್ತಪಡಿಸಿದರು ಕಾರ್ಯಕ್ರಮದ ಸಾನಿರ್ಧಯವಹಿಸಿ. ಮಾತನಾಡಿದ ಮಹೇಶ್ವರಸ್ವಾಮಿ ಹೊಸಳ್ಳಿಮಠ ಆಶೀರ್ವಚನ ನೀಡಿ ನಮ್ಮ ಜೀವನ ಶೈಲಿ ಇಂದಿನ ಒತ್ತಡ ಬದುಕಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಸಂಸ್ಕಾರ ನೀತಿ ನಿಯಮಗಳನ್ನು ಮರೆತಿರುವದರಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ.
ನಮ್ಮ ಬದುಕಿಗೆ ಶಿಸ್ತು ಸಂಯಮ ಸದೃಢ ಮನಸ್ಸನ್ನು ರೂಪಿಸಿಕೊಳ್ಳಬೇಕಾದರೆ ಯೋಗ ಮತ್ತು ನಮ್ಮ ನಿತ್ಯ ಬದುಕಿನ ಆಹಾರ ಅಮೂಲ್ಯವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅತಿಥಿಗಳಾದ ಸಿರಿಧಾನ್ಯ ಘಟಕದ ಮಾಲತೇಶ ನೆಗಳೂರ ಮಾತನಾಡಿ ನಮ್ಮಆಹಾರ ಧಾನ್ಯಗಳೆಲ್ಲ ಫಾಲಿಶ್ ವ್ಯವಸ್ಥೆಯನ್ನು ಒಳಗೊಂಡು ಸತ್ವವನ್ನು ಕಳೆದುಕೊಳ್ಳುತ್ತವೆ.” ಮತ್ತುಅತಿಯಾದ ಸೌಲಭ್ಯದಿಂದ ಸಮಯದ ಅಭಾವದ ಕಾರಣದಿಂದ ಆಹಾರ ಪದ್ದತಿ, ಸಂಸ್ಕೃತಿ, ಆಚರಣೆಗಳನ್ನು ಕಾಲೆದುಕೊಳ್ಳುವದರ ಜೊತೆಗೆ ನಮ್ಮ ಮಾನಸಿಕ ದೈಹಿಕ ಸಾಮರ್ಥ್ಯ ಕುಗ್ಗಿಸಿಕೊಂಡು ಅನೇಕ ರೋಗಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ ಆದ್ದರಿಂದ ಸಿರಿ ಧಾನ್ಯಗಳ ಸೇವನೆ ಅನಿವಾರ್ಯವೆಂದು ಅಭಿಪ್ರಾಯಪಟ್ಟರು ವೇದಿಕೆಯ ಮೇಲೆ ಲಿಂಗರಾಜ ಬಗಲಿ ಸಾಮಾಜಿಕಕಾರ್ಯಕರ್ತರು, ಬೆಟಗೇರಿ, ಗವಿಸಿದ್ದಯ್ಯ ಹಳ್ಳಿಕೇರಿಮಠ ಜನಪದಕಲಾವಿದರು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಜಂತ್ರಿ- ಶಿರೂರ. ಚಂದ್ರು ನಾವಿ ಮಾಲಕರು, ಮಹಾಂತೇಶ ಬೇಕರಿ, ಮುಂಡರಗಿ, ಶ್ರೀಮತಿ ಸುನಿತಾ ಕುಬೇರಸಿಂಗ್ ದೊಡ್ಡಮನಿ ಅಧ್ಯಕ್ಷರು.
ಚೇತಕ ವಿವಿಧೋದ್ದೇಗಳ ಸೇವಾಸಂಸ್ಥೆ, ಬೆಟಗೇರಿಶ್ರೀಮತಿ ನಾಗರತ್ನ ಬಡಿಗಣ್ಣವರ ಶೋಭಾ, ರಾಜು ಧೂಳಉಪಸಿತರಿದ್ದರು ಶ್ರೀಮತಿ ನಿರ್ಮಲಾಗಣಪತಿತರವಾಡೆ ಅಧ್ಯಕ್ಷರು, ನಿರ್ಮಲ ವಿವಿಧೋದ್ದೇಶಗಳ ಸೆವಾ ಸಂಸ್ಥೆ, ಮುಂಡರಗಿ ಉಪಸ್ಥಿತಿ ವಹಿಸಿದ್ದರು. ಬಂಗಾರಗುಂಡಗುಡದಪ್ಪ, ಮರುಳಸಿದ್ದಪ್ಪ ದೊಡ್ಡಮನಿ.ಕು.ಸ್ಪೂರ್ತಿ ಮಹತ್ವವನ್ನು ಕವಿತೆಯಲ್ಲಿ ಸಾರಿದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು. ಸವಿತಾ ಹಂದ್ರಾಳ ಯೋಗ ವಿದ್ಯಾರ್ಥಿಯಿಂದಯೋಗ ಪ್ರದರ್ಶನಜನಮನ ಸೆಳೆಯಿತು. ಮೇ 15 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7-30 ರವರೆಗೆ ಯೋಗ ಶಿಬಿರ ಜರುಗಲಿದೆ ಇದರ ಸದುಪಯೋಗ ಪಡೆಯಲು ಸಂಘಟಕರು ತಿಳಿಸಿದ್ದಾರೆ. ಗಣೇಶಕಬಾಡಿ, ದ್ಯಾಮಣ್ಣ ಉಗಲಾಟ, ಧಮೇಂದ್ರ ಇಟಗಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.