Breaking
Tue. Dec 17th, 2024
Spread the love

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2024-25 ಮುಂಗಾರು ಬೆಳೆ ವಿಮೆ ಅರ್ಜಿ ಹಾಕಲಾಗುವುದು. ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಕ್ಕೇ ಭೇಟಿ ನೀಡಿ.

ಬೇಕಾಗುವ ದಾಖಲೆಗಳು

ಆಧಾರ ಕಾರ್ಡ, ಉತಾರ ಮತ್ತು ಬ್ಯಾಂಕ ಪಾಸ್ ಬುಕ್

ಯಾವ್ ಬೆಳೆ ಎಷ್ಟು ಬೆಳೆವಿಮೆ ತುಂಬಬೇಕು, ಕೊನೆಯ ದಿನಾಂಕ ಯಾವುದು?

ಜೂ. 13ರವರೆಗೆ ರಾಜ್ಯದಲ್ಲಿ ಭಾರೀ ಮಳೆ, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಭಾರತೀಯ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳಲ್ಲಿ ಮಧ್ಯ ಮತ್ತು ದಕ್ಷಿಣ ಪ್ರದೇಶಗಳು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಗುಡುಗು- ಸಿಡಿಲು ಸಹಿತ ಮಳೆಯ ಮುನ್ನೆಚ್ಚರಿಕೆ ನೀಡಿದ್ದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಐಎಂಡಿ ಪ್ರಕಾರ, ನೈಋತ್ಯ ಮಾನ್ಸೂನ್ ಮಧ್ಯ ಅರೇಬಿಯನ್ ಸಮುದ್ರ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಕರಾವಳಿ ಆಂಧ್ರಪ್ರದೇಶ, ಮತ್ತು ಬಂಗಾಳ ಕೊಲ್ಲಿಯ ಹೆಚ್ಚಿನ ಪ್ರದೇಶಗಳನ್ನು ಒಳಗೊಂಡಂತೆ ಇನ್ನಷ್ಟು ಪ್ರದೇಶಗಳಿಗೆ ಮುಂದುವರೆದಿದೆ.

ಮುಂದಿನ ನಾಲ್ಕು ದಿನಗಳಲ್ಲಿ ಕೊಂಕಣ, ಗೋವಾ, ಮಹಾರಾಷ್ಟ್ರ, ಮರಾಠವಾಡ, ಸೌರಾಷ್ಟ್ರ, ಕಚ್, ಕರಾವಳಿ ಆಂಧ್ರ ಪ್ರದೇಶ, ಯಾನಂ, ರಾಯಲಸೀಮಾ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಈಶಾನ್ಯ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ವ್ಯಾಪಕ ಮಳೆ, ಗುಡುಗು ಮತ್ತು ಸಿಡಿಲು ಸಹ ಖಒಆ ಮುನ್ಸೂಚನೆ ನೀಡಿದೆ. ವಾಯುವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಇಂದು ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ.

ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಡಿಟ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಇದೇ ರೀತಿಯ ಹವಾಮಾನದ ಸಾಧ್ಯತೆ ಇದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಸೋಮವಾರದವರೆಗೆ ತೀವ್ರ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ. ಮುಂದಿನ ಎರಡು ಮೂರು ದಿನಗಳ ಕಾಲ ಮಧ್ಯಪ್ರದೇಶ, ಜಾಖರ್ಂಡ್, ಪಂಜಾಬ್, ಹರಿಯಾಣ, ಬಿಹಾರ ಮತ್ತು ಒಡಿಶಾದಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆಯಿದೆ.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಸ್ಥಗಿತದ ಬಗ್ಗೆ ಅಪ್ಲೇಟ್ ಕೊಟ್ಟ ಗೃಹ ಸಚಿವ ಪರಮೇಶ್ವರ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ, ರಾಜ್ಯದ ಜನತೆ ಹಸಿವಿನಿಂದ ಬಳಲುತ್ತಿರುವಾಗ ಯಾವ ಅಭಿವೃದ್ಧಿ ಮಾಡಿದರೇನು ಪ್ರಯೋಜನ ಹೇಳಿ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ವರದಿಗಾರರು ಕೇಳಿದ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ತೆಗೆದುಹಾಕಲು ಶಾಸಕರು ಒತ್ತಡ ಹೇರುತ್ತಿದ್ದಾರೆಂಬ ವಿಚಾರದ ಬಗ್ಗೆ ಉತ್ತರ ನೀಡಿದರು. ಲೋಕಸಭಾ ಚುನಾವಣೆಗೆ ಮೊದಲೆ ಈ ರೀತಿಯಾದ ಪ್ರಶ್ನೆಗಳು ಬಂದಿದ್ದವು. ವಿಪಕ್ಷಗಳಿಂದ ಲೋಕಸಭೆ ಎಲೆಕ್ಷನ್ ನಂತರ ಗ್ಯಾರಂಟಿ ನಿಲ್ಲಿಸ್ತಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆಗಲೇ ಗ್ಯಾರಂಟಿ ನಿಲ್ಲಿಸಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಉತ್ತರಕೊಟ್ಟಿದ್ದಾರೆ. ನಾವು ಯಾವ ಕಾರಣಕ್ಕೂ ಗ್ಯಾರಂಟಿಗಳನ್ನ ನಿಲ್ಲಿಸಲ್ಲ ಅಂತ ಹೇಳಿದ್ದೇವೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲು ಒಂದಷ್ಟು ಹಣಕಾಸಿನ ತೊಂದರೆಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋದೆ. ಅದನ್ನು ಯಾವ ರೀತಿ ಬಳಕೆ ಮಾಡಬಹುದುಅನ್ನೋದನ್ನ ನಾವು ಮಾಡಿಕೊಳ್ಳುತ್ತೇವೆ. ಯಾವ ಹಣ ಖರ್ಚು ಮಾಡಬೇಕು ಅಂತ ಗೊತ್ತಿದೆ. ಈ ಹಣ ಇದ್ದಿದ್ರೆ ಇನ್ನಷ್ಟು ಯೋಜನೆ ಮಾಡಬಹುದು ಅಂತಲೂ ಗೊತ್ತಿದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ ಆಗುತ್ತದೆ ನೀವೇ ಹೇಳಿ. ಇನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸಚಿವ ಸ್ಥಾನಕ್ಕೆ ಎಷ್ಟೇ ಪೈಪೋಟಿ ಇದ್ದರೂ ಅದನ್ನು ಸಿಎಂ ಸಿದ್ದರಾಮಯ್ಯಅವರೇ ತೀರ್ಮಾನ ಮಾಡಿ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು. ಡಾ. ಪರಮೇಶ್ವರ ಭೇಟಿಯಾದ ಬಿಜೆಪಿಯನ್ನು ಮಣಿಸಿ ಪ್ರಿಯಾಂಕಾ ಜಾರಕಿಹೊಳಿ ಗೆದ್ದುದ್ದಾರೆ. ಈಗ ಗೆದ್ದ ನಂತರ ಎಲ್ಲರ ಆಶೀರ್ವಾದ ಪಡೆಯುತ್ತಿದ್ದಾರೆ. ಅದೇ ರೀತಿ ನಮ್ಮ ಮನೆಗೂ ಬಂದಿದ್ದಾರೆ. ಬಹಳ ಸಂತೋಷ ಆಗಿದೆ. ಕತ್ತೂರು ಕರ್ನಾಟಕ ಮಾತ್ರವಲ್ಲದೇ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಗೆಲ್ಲಬೇಕಿತ್ತು. ಆದರೆ, ಜನರ ತೀರ್ಮಾನ ನಾವು ಒಪ್ಪಿಕೊಳ್ಳಬೇಕು. ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿ ಯಶಸ್ವಿಯಾಗಿದ್ದಾರೆ.

ಬಿಜೆಪಿ : ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ ಹಿನ್ನಡೆ, ಸಚಿವ ಮಹದೇವಪ್ಪ

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಮತದಾರರು ಶಾಂತಿಯುತವಾಗಿ ಮತದಾನ ಮಾಡಿದ್ದಾರೆ. 70% ಮತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 100% ಆಗಲಿ. ಮತದಾನ ಮಾಡಿದವರಿಗೆ ಧನ್ಯವಾದಗಳು. 2019 ರಲ್ಲಿ ಒಂದು ಸ್ಥಾನ ಗೆದ್ದಿದ್ವಿ, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಕನಿಷ್ಠ 12-14 ಸ್ಥಾನ ಗೆಲ್ಲಬೇಕಿತ್ತು. ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಮತಗಳ ಧ್ರುವೀಕರಣ ಆಗಿದೆ. ಇದರಿಂದಾಗಿ 5-6 ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ. ಇಂದು(ಶನಿವಾರ) ನಗರದಲ್ಲಿ ಮಾಧ್ಯಮದರರೊಂದಿಗೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ ಅವರು, ಬಿಜೆಪಿಗೆ ಜನ ಎಚ್ಚರಿಕೆ ಗಂಟೆ ನೀಡಿದ್ದಾರೆ. ವಿಧಾನದ ವಿರೋಧಿ ನೀತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಬೇರೆ ಪಕ್ಷಗಳನ್ನು ಆಶ್ರಯಿಸೇ ಸರ್ಕಾರ ರಚನೆ ಮಾಡಬೇಕು. ಬಿಜೆಪಿ ಹಿಡನ್ ಅಜೆಂಡಾ ಜಾರಿ ಮಾಡುವುದು ಸುಲಭವಲ್ಲ. ಎಚ್ಚರಿಕೆಯ ಹೆಜ್ಜೆ ಇಡುವ ರಾಜಕೀಯ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂಡಿಯಾ ಮೈತ್ರಿಕೂಟ ವಿಪಕ್ಷವಾಗಿ ಗಟ್ಟಿ ಧ್ವನಿಯಾಗಲಿದೆ ಎಂದು ಹೇಳಿದ್ದಾರೆ. ಸಚಿವ ಕ್ಷೇತ್ರದಲ್ಲಿ ಹಿನ್ನಡೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಮಗೆ ಹಿನ್ನಡೆ ಅಲ್ಲಿ ಬರಲಿದೆ. ಅಹಿಂದ ಮತಗಳು ಸಾಲಿಡ್ ಆಗಿ ಮತ ಹಾಕಿದ್ದಾರೆ. ಅವರು (ಒಕ್ಕಲಿಗರು) ಒಂದಾಗಿದ್ದಾರೆ. ಎಚ್ಚರಿಕೆಯಿಂದ ನಡೆಯಬೇಕು ಎಂಬ ವಾತಾವರಣ ಸೃಷ್ಟಿಸುವ ಫಲಿತಾಂಶ ಬಂದಿದೆ. ಕೇಂದ್ರದ ಎನ್‌ಡಿಎ ಸರ್ಕಾರ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಬೇಕು. ವಿರೋಧ ಪಕ್ಷವಾಗಿ ಇಂಡಿಯಾ ಮಿತ್ರ ಪಕ್ಷಗಳು ಕೆಲಸ ಮಾಡಲಿವೆ. ಬಿಜೆಪಿಯವರು ಸಂವಿಧಾನ ಬದಲಾವಣೆಯ ಮಾತುಗಳನ್ನ ಆಡಿದ್ದರು. ಈಗ ಮೋದಿ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಸಂವಿಧಾನದ ಪೀಠಿಕೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ನಾವು ಅದೇ ಕಾರಣಕ್ಕೆ ಜಾಗೃತಿ ಜಾಥಾ ಮಾಡಿದೆವು. ಸಂವಿಧಾನ ಪೀಠಿಕೆಯ ಜಾಥಾ ಮಾಡಿದ್ದೆವು ಎಂದು ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *