2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಕೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವಂಗಡದ ರೈತ ಫಲಾನುಭವಿಗಳಿಗೆ ಶೇ.90 ರಷ್ಟು ಸಹಾಯಧನವಿದ್ದು ಹಾಗೂ ಎಲ್ಲಾ ಸಾಮಾನ್ಯ ವರ್ಗದ ರೈತರಿಗೆ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ ಶೇ.75 ರಷ್ಟು ಸಹಾಯಧನವಿದ್ದು ಆಸಕ್ತಿಯುಳ್ಳ ರೈತರಿಂದ ಸಹಾಯಧನ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಡಿಸೆಂಬರ್ 07 ರೊಳಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಕಲಘಟಗಿ ಕಛೇರಿಗೆ ಸಲ್ಲಿಸಬೇಕು. ಮೊದಲು ಬಂದ ರೈತರಿಗೆ ಆದ್ಯತೆ ಮೇರೆಗೆ ಜೇಷ್ಠತೆ ಅನುಸಾರವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು. ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಕಲಘಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೆಚ್.ವಾಯ್. ಆಸಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೂವಿನ ಹಡಗಲಿ ತೋಟಗಾರಿಕೆ ಇಲಾಖೆ
ಹೂವಿನ ಹಡಗಲಿ ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಸ್ವಂತ ಜಮೀನು, ನೀರಾವರಿವುಳ್ಳವರಾಗಿರಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ.
ಹನಿ ನೀರಾವರಿ ನೀರಾವರಿ ಕಾರ್ಯಕ್ರಮದಡಿ ಸರ್ಕಾರದ ಮಾರ್ಗ ಸೂಚಿಯನ್ವಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ.9 0ರಷ್ಟು ಸಹಾಯಧನ ಇತರೆ ವರ್ಗದ ರೈತರಿಗೆ ಶೇ.75 ರಷ್ಟು ಸಹಾಯಧನವನ್ನು ಮೊದಲ 2.00 ಹೆಕ್ಟರ್ ಗೆ ನಂತರದ ಪ್ರದೇಶಕ್ಕೆ ಶೇ.45 ರಷ್ಟು ಸಹಾಯಧನ ಪಾವತಿಸಲಾಗುವುದು.
ಪರಿಶಿಷ್ಟ ಜಾತಿ, ಪಂಗಡ ರೈತರು ಆರ್. ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಹ ರೈತ ಫಲಾನುಭವಿಗಳು ಡಿಸೆಂಬರ್22 ರೊಳಗೆ ಅರ್ಜಿ ಸಲ್ಲಿಸಿ ಇಲಾಖೆಯಿಂದ ಹನಿ ನೀರಾವರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ
ಹಡಗಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಸುಧಾಕರ ಮೊ.ನಂ:8105166176, ತೋಟಗಾರಿಕೆ ಸಹಾಯಕಿ ಶಿವಕಲ್ಲವ್ವ ಕೆ ಕುರಿ 7760553810, ಇಟ್ಟಗಿರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶಎಂ. 9743674669 ಹಾಗೂ ತೋಟಗಾರಿಕೆ ಇಲಾಖೆ 9535910697 ಹಾಗೂ ಹಿರೇ ಹಡಗಲಿ ರೈತ ಸಂಪರ್ಕಕೇಂದ್ರ ತೋಟಗಾರಿಕೆ ಅಧಿಕಾರಿಬಸಮ್ಮ – .: 8497812276, 25 ರನ್ನು ಸಂಪರ್ಕಿಸಬಹುದಾಗಿದೆ ಎಂದು ಹೂವಿನ ‘ಹಡಗಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರಗಾಲದ ಪರಿಣಾಮ
ತಾಲ್ಲೂಕಿನಾದ್ಯಂತ ಬರಗಾಲದ ಪರಿಣಾಮ ಬಹುತೇಕ ಈ ಭಾಗದ ಪ್ರಮುಖ ಬೆಳೆಗಳಾದ ಮೆಣಸಿನಕಾಯಿ ಇಳುವರಿಯು ಬಹಳ ಕುಂಠಿತವಾಗಿದ್ದು, ಅಲ್ಲಲ್ಲಿ ಅಲ್ಪ ಸ್ವಲ್ಪ ತೇವಾಂಶದಿಂದ ಮೆಣಸಿನಕಾಯಿ ಬೆಳೆಯು ಬೆಳೆದು ನಿಂತಿದ್ದು ಮೆಣಸಿನಕಾಯಿ ದರ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಏರಿಕೆ ಕಂಡಿ- ದ್ದರಿಂದ ಕೆಂಪು ಬಂಗಾರ ಎಂದೇ ಕರೆಸಿಕೊಳ್ಳುವ ಮೆಣಸಿನಕಾಯಿ ಬೆಳೆಗೆ ಕಳ್ಳರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ರೈತಾಪಿ ವರ್ಗದವರು ಜಮೀನುಗಳಲ್ಲಿ ಟ್ರಾಕ್ಟರ್ ಟೆಂಟ್ ಹಾಕಿ ಹಗಲು ರಾತ್ರಿ ಕಣ್ಣಿಗೆ ನಿದ್ದೆ ಇಲ್ಲದೆ ಬೆಳಕಾಗುವವರೆಗೂ ಮೆಣಸಿನಕಾಯಿ ಬೆಳೆಯನ್ನು ಕಾಯುವಂತಹ ಪರಿಸ್ಥಿತಿ ಬಂದಿದೆ.
ಲಕ್ಷೇಶ್ವರ ಭಾಗದಲ್ಲಿ ಕೆಲವೇ ಕೆಲವು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆಯುತ್ತಿದ್ದಂತಹ ರೈತ ಈ ಬಾರಿಯ ಹಣಾವೃಷ್ಟಿಯ ಹೊಡೆತಕ್ಕೆ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆಯನ್ನು ಬೆಳೆಯದಾರುಲಾರದಂತಹ ಪರಿಸ್ಥಿತಿಗೆ ಬಂದಿದ್ದಾನೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಅಲ್ಪ ಸ್ವಲ್ಪ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗೆ ಕಳ್ಳರ ಕಾಟವು ಹೆಚ್ಚಾಗಿದ್ದು ರೈತರ ನೋವು ನಲಿವುಗಳಿಗೆ ಸ್ಪಂದಿಸುವವರು ಇಲ್ಲವೇ ಎಂಬ ಪ್ರಶ್ನೆ ಕಾಡುವಂತಾಗಿದೆ. ಈ ವರ್ಷದಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದಾಗಿ ಚಳಿಗಾಲದ ಬೆಳೆ ಅಷ್ಟೊಂದು ಕಂಡು ಬರುತ್ತಿಲ್ಲ. ಕಳ್ಳರ ಕಾಟ ದಿಂದಾಗಿ ರೈತರು ನಿದ್ದೆಗೆಟ್ಟು ರಾತ್ರಿಯ ವೇಳೆ ಕೈಯಲ್ಲಿ ಕೋಲು ಹಿಡಿದು ಬ್ಯಾಟರಿ ಹಿಡಿದುಕೊಂಡು ರಾತ್ರಿ ಪೂರ್ತಿ ಜಮೀನು ಸುತ್ತಾಪಹರೆ ಸುತ್ತುವಂತಾಗಿದೆ.
ಯಾಕೆಂದರೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆ, ಕಳ್ಳತನ ವಾಗುತ್ತಿದ್ದು ಅದರ ಹಿನ್ನೆಲೆಯಲ್ಲಿ ರೈತರು ಜಮೀನುಗಳಲ್ಲಿಯೇ ಟೆಂಟ್ ಹಾಕಿಕೊಂಡು ಅಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುತ್ತಿದ್ದಾರೆ.
ಗಗನಕೇರಿದ ಕೆಂಪು ಬಂಗಾರ
ಮೆಣಸಿನಕಾಯಿ ದರ ಹೋದ ವರ್ಷಕ್ಕಿಂತಲೂ ಈ ವರ್ಷವೂ ಏರಿಕೆಯಾಗಿದ್ದು, ಒಂದು ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ 30 ರಿಂದ 60 ಸಾವಿರ ವರೆಗೂ ಅಧಿಕ ಬೆಲೆ ದೊರೆಯುತ್ತಿದೆ. ದುಬಾರಿ ಬೆಲೆ ಮೆಣಸಿನಕಾಯಿ ಕಳ್ಳತನಕ್ಕೆ ಕಳ್ಳ ಕಾಕರ ಕಾಟ ಹೆಚ್ಚಾಗಿದ್ದು, ತಾಲೂಕಿನ ಬಟ್ಟೂರು, ಕುಂದ್ರಳ್ಳಿ, ರಾಮಗೇರಿ, ಯಳವತ್ತಿ, ಯತ್ತಿನಹಳ್ಳಿ, ಶಿಗ್ಲಿ, ಗದಗ ರಸ್ತೆಯ ಅಕ್ಕಪಕ್ಕ ಸೇರಿದಂತೆ ಅನೇಕ ಕಡೆಗಳಲ್ಲಿ ಮೆಣಸಿನಕಾಯಿ ಕಳ್ಳತನಗಳು ನಡೆದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇಲ್ಲಿಯವರೆಗೂ ಯಾವುದೇ ದೂರು ಪೊಲೀಸ್ ಠಾಣೆಯವರೆಗೂ ಹೋಗಿ ದಾಖಲಾಗಿಲ್ಲ.
ಆದರೂ ಈ ವರ್ಷದ ಮೆಣಸಿನಕಾಯಿ ಇಳುವರಿ ರಕ್ಷಿಸಿಕೊಳ್ಳಲು ರೈತರು ತಮ್ಮ ಜಮೀನುಗಳಲ್ಲಿ ಟ್ರ್ಯಾಕ್ಟರ್ ಟೆಂಟ್ ಹಾಕಿಕೊಂಡು ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದ ಖುಷಿಯಲ್ಲಿದ್ದರೆ ಬೆಳೆದಿರುವ ಬೆಳೆಯನ್ನ ರಕ್ಷಿಸಿಕೊಳ್ಳಲು ಮೆಣಸಿನಕಾಯಿಗೆ ಕಳ್ಳರ ಕಾಟ ತಪ್ಪಿಸಿಕೊಳ್ಳಲು ಹಗಲು ರಾತ್ರಿ ಹೊಲದಲ್ಲಿಯೇ ಇದ್ದುಕೊಂಡು ಕಾಯುತ್ತಿದ್ದಾರೆ.