ನಿಮ್ಮ ತಾಯಿಯ ತಂದೆಯ ಸ್ವಯಾರ್ಜಿತ ಆಸ್ತಿ ಅವರ ಮಕ್ಕಳಿಗೆ ಸಮವಾಗಿ ಹೋಗುತ್ತದೆ. ನಿಮ್ಮ ತಾಯಿ, ನಿಮ್ಮ ಪತಿ ಮತ್ತು ನಿಮ್ಮ ಗಂಡನ ಅಣ್ಣ ಮೂವರಿಗೂ ಸಮವಾಗಿ ಮೂರನೇ ಒಂದು ಭಾಗ ಬರುತ್ತದೆ. ನಿಮ್ಮ ಪತಿಯ ಮೂರನೇ ಒಂದು ಭಾಗ ನಿಮಗೂ ನಿಮ್ಮ ಮಕ್ಕಳಿಗೂ ಸಮವಾಗಿ ಹೋಗುತ್ತದೆ. ನಿಮ್ಮ ತಾಯಿಯ ಮೂರನೇ ಒಂದುಭಾಗವನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು ಅಥವಾ ತಾವೇ ಉಪಯೋಗಿಸಬಹುದು. ನೀವು ದಾವೆ ಹಾಕಿದರೆ ನಿಮ್ಮ ಪತಿಯ ಮೂರನೇ ಒಂದು ಭಾಗ ನಿಮಗೂ ನಿಮ್ಮ ಮಕ್ಕಳಿಗೂ ಸಿಗುತ್ತದೆ, ಇಷ್ಟವಿದ್ದರೆ ಸ್ವಲ್ಪ ಹೆಚ್ಚು ಕಡಿಮೆ ಹಂಚಿಕೆಗೆ ರಾಜಿ ಮಾಡಿಕೊಳ್ಳಬಹುದು.
ನೋಟಿಸು ಜಾರಿ ಮಾಡುವ ವಿಧಾನ
ಹಿತಾಸಕ್ತ ಪಕ್ಷಕಾರರಿಗೆ ನೋಟೀಸುಗಳನ್ನು ಯಾವ ರೀತಿಯಲ್ಲಿ ಜಾರಿಮಾಡಬೇಕೆಂಬ ವಿಷಯವನ್ನು ಕಲಮು ೩೦ರಲ್ಲಿ ಉಪಂದಿಸಲಾಗಿದೆ. ಈ ಕಾಯಿದೆಯಡಿಯಲ್ಲಿಯ ಪ್ರತಿಯೊಂದು ನೋಟೀಸನ್ನು ಜಾರಿಮಾಡಬೇಕಾದ ವ್ಯಕ್ತಿ ಅಥವಾ ಅವನು ನೇಮಿಸಿದ್ದರೆ ಅವನ ಪ್ರತಿನಿಧಿಗೆ ನೋಟೀಸಿನ ಒಂದು ಪ್ರತಿಯನ್ನ ಕೊಡುವುದರ ಮೂಲಕ ಜಾರಿ ಮಾಡಬೇಕು. ಒಂದು ವೇಳೆ ಆ ವ್ಯಕ್ತಿಯ ಲಭ್ಯವಾಗದಿದ್ದಲ್ಲಿ, ನೋಟೀಸು ಯಾವ ಜಮೀನಿಗೆ ಸಂಬಂಧಪಟ್ಟಿದೆಯೋ ಆ ಜಮೀನಿನಲ್ಲಿ ಎದ್ದು ಕಾಣುವ ಸ್ಥಳವೊಂದರ ಮೇಲೆ ನೋಟೀಸಿನ ಒಂದು ಪ್ರತಿಯನ್ನು ಪ್ರದರ್ಶಿಸಿದರೆ (ಆ೦ಟಿಸಿದರೆ) ಆ ವ್ಯಕ್ತಿಗೆ ನೋಟೀಸನ್ನು ಜಾರಿ ಮಾಡಿದಂತಾಗುತ್ತದೆ. ಆದರೆ ಆ ರೀತಿ ಜಮೀನಿನಲ್ಲಿಯ ಸ್ಥಳವೊಂದಕ್ಕೆ ಅಂಟಿಸುವ ಸಂದರ್ಭದಲ್ಲಿ ಆ ಗ್ರಾಮದ ಮೂರಾಟ್ಟು ಗೌರವಾತ ಜನರ ಸಮಕ್ಷಮ ಪಂಚನಾಮೆಯನ್ನು ಮಾಡುವುದು ಅತೀ ಅವಶ್ಯ ಬೇರ ಜಿಲ್ಲೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯ ಮೇಲೆ ಆ ಜಿಲ್ಲೆಯ ಜಿಲ್ಲಾಧಿಕಾರಿಯ ಮುಖಾಂತರ ನೋಟೀಸನ್ನು ಜಾರಿಮಾಡಿಸಬೇಕು. ನೋಟೀಸು ಜಾರಿಯಾಗಬೇಕಾದ ವ್ಯಕ್ತಿಯು ಲಭ್ಯವಾಗದಿದ್ದಲ್ಲಿ, ಅವನ ಕುಟುಂಬದ ವಯಸ್ಕ ವ್ಯಕ್ತಿಯ ಮೇಲೆ ನೋಟೀಸು ಜಾರಿಮಾಡಲು ಅವಕಾಶವಿಲ್ಲವೆಂಬುದನ್ನು ಗಮನಿಸಬೇಕು.
ವ್ಯಕ್ತಿಯು ನೋಟಿಸ್ ಅನ್ನು ಸ್ವೀಕರಿಸಲು ತಿರಸ್ಕರಿಸಿದಾಗ ಏನು ಮಾಡಬೇಕು ?
ಅದೇ ರೀತಿ ಅವನು ವಾಸಿಸುವ ಮನೆಯ ಬಾಗಿಲಿಗೆ ನೋಟಿಸನ್ನು ಢಕಾಯಿಸುವುದರ ಮೂಲಕ ನೋಟೀಸು ಜಾರಿಮಾಡಲು ಅವಕಾಶವಿಲ್ಲವೆಂಬುದು ಬಹು ಮುಖ್ಯ. ಕೆಲವು ಸಂದರ್ಭಗಳಲ್ಲಿ ನೋಟೀಸನ್ನು ಸ್ವೀಕರಿಸಬೇಕಾದ ವ್ಯಕ್ತಿಯು ಅದನ್ನು ಸ್ವೀಕರಿಸದೇ ತಿರಸ್ಕರಿಸಿದ ಉದಾಹರಣೆಗಳಿವೆ. ಅಂಥ ಪ್ರಸಂಗದಲ್ಲಿ ಅಂಚೆ ಇಲಾಖೆಯಿಂದ ಅವು ನ್ಯಾಯಾಲಯಕ್ಕೆ ವಾಪಸು ಬರುತ್ತವೆ. ಸ್ವೀಕರಿಸಬೇಕಾದ್ದ ವ್ಯಕ್ತಿಯು ನೋಟೀಸನ್ನು ತಿರಸ್ಕರಿಸಿ, ಅದು ಅಂಚೆ ಇಲಾಖೆಯ ಶರಾದೊಂದಿಗೆ ವಾಪಸು ಬಂದರೆ ಆ ನೋಟೀಸು ಆ ವ್ಯಕ್ತಿಗೆ ಜಾರಿಯಾಗಿದೆಯೆಂದು ಭಾವಿಸತಕ್ಕದ್ದು.
ಇದನ್ನೂ ಓದಿ :- HDFC ಬ್ಯಾಂಕ್ ನಿಂದ ಕೃಷಿ ಸಾಲ ಕೊಡುತ್ತಿದ್ದಾರೆ ಬೇಗನೆ ಅರ್ಜಿ ಸಲ್ಲಿಸಿ
ಟ್ರಾಕ್ಟರ್ ಖರೀದಿಸಲು, ಕುರಿ ಸಾಕಾಣಿಕೆ ಮಾಡಲು ಹಾಗೂ ಎಲ್ಲಾ ಕೃಷಿ ಸಾಲವನ್ನು ಕೊಡುತ್ತಿದ್ದಾರೆ
ಇದನ್ನೂ ಓದಿ :- ಬೆಳೆವಿಮಾ ಜಮಾ ಆಗಿದೆ ಒಂದೇ ನಿಮಿಷದಲ್ಲಿ ಚೆಕ್ ಮಾಡಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?