Pu result ನೋಡಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://karresults.nic.in/slpufirst.asp
ಆಮೇಲೆ ನೀವು ನಿಮ್ಮ ರಿಜಿಸ್ಟರ್ number ಹಾಕಿ. ಆಮೇಲೆ ಕೆಳಗೆ ಚಿತ್ರದಲ್ಲಿ ಕಾಣುವ ಹಾಗೆ ನೀವು ನಿಮ್ಮ combination ಅಂದರೆ Science, Arts, Commerce ಯಾವದೂ ಎಂದು ಸೆಲೆಕ್ಟ್ ಮಾಡಿ. Submit ಆಯ್ಕೆ ಮೇಲೆ click ಮಾಡಿ.
ಆಗ ನಿಮ್ಮ ಮುಂದೆ ರಿಸಲ್ಟ್ ಬರುತ್ತದೆ.
ಎಂಡಿಆರ್‌ಎಸ್ ವಸತಿ ಶಾಲೆ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿವ ನಿರ್ವಹಣೆಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ|ಎ.ಪಿ.ಜೆ.ಅಬ್ದುಲ್ ಕಲಾಂ ಶಾಲೆಗಳಲ್ಲಿ 2024-25 ನೇ ಸಾಲಿಗೆ 6 ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ ಪೋಷಕರು/ವಿದ್ಯಾರ್ಥಿಗಳು ಹತ್ತಿರದ ವಸತಿ ಶಾಲೆ/ಮಾಹಿತಿ ಕೇಂದ್ರ ಕಛೇರಿಗಳಲ್ಲಿ ಎಲ್ಲಾ ದಾಖಲೆಗಳೊಂದಿಗೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಸೇವಾಸಿಂಧು ಪೋರ್ಟಲ್ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 15 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುಕನೂರು: 9844040035, 6361118478, ಕುದರಿಮೋತಿ: 9740702035, ಟಣಕನಕಲ್ 9902690349, ಹಿರೇಬೆಣಕಲ್-1 9483395708, 8150924173, 9591439223, ಅಲ್ಪಸಂಖ್ಯಾತರ ನವೋದಯ ಮಾದರಿಯ ವಸತಿ ಶಾಲೆ ಹಿರೇಸಿಂದೋಗಿ: 8747092789 ಮಾಹಿತಿ ಕೇಂದ್ರ ಯಲಬುರ್ಗಾ ಕುಷ್ಟಗಿ ಗಂಗಾವತಿ, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಕೊಪ್ಪಳ ಇಲ್ಲಿಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 5 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಡಾ||ಎ.ಪಿ.ಜೆ.ಅಬ್ದುಲ್ ಕಲಾಂ
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಮಾಸಿಕ ಸಭೆ
ರಾಜ್ಯ ಸರಕಾರಿ ನಿವೃತ್ತ ನೌಕರರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಗದಗ ಇದರ ಮಾಸಿಕ ಸಭೆ ಜರುಗಿತು. ಬಿ.ಎ. ವಸ್ತ್ರದ, ಜಿ.ಎಸ್. ಹಿರೇಮಠ ಉಪಸ್ಥಿತಿಯಲ್ಲಿ ಸಭೆ ಜರುಗಿತು. ಸಭೆಯಲ್ಲಿ ಕೆ.ಎ. ಬಳಿಗೇರ ತಾಲೂಕ ಘಟಕ ಶರಣ ಸಾಹಿತ್ಯ ಪರಿಷತ್ತು ಶಿರಹಟ್ಟಿ ಮಾತನಾಡಿ, ಹಿರಿಯ ನಾಗರಿಕರಾದವರು ಈ ಹಂತದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು, ಪ್ರತಿ ಮನುಷ್ಯನಿಗೂ ಮುಪ್ಪು ಮತ್ತು ಸಾವು ಕರೆಯದೇ ಬರುವಂತವುಗಳು, ನಿವೃತ್ತಿ ಇದೊಂದು ಸಮಸ್ಯೆಯಲ್ಲ ಸವಾಲೆಂದು ತಿಳಿದು ನಮ್ಮ ಮನಸ್ಥಿತಿ ಸರಿಮಾಡಿಕೊಂಡಾಗ ಮನಸ್ಥಿತಿಯು ಸರಿಯಿರುತ್ತದೆ. ಈ ಹಂತದಲ್ಲಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬೆರೆತು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ವಲಯಗಳ ಪ್ರತಿನಿಧಿಗಳಾದ ಹೊಳೆಆಲೂರ ಪಿ.ಡಿ. ಸೇಬಣ್ಣವರ, ನರಗುಂದ ಬೆಳಹಾಲ, ನರೇಗಲ್ ಅರವಟಗಿಮಠ, ಮುಂಡರಗಿ ಮರಳರಾಧ್ಯರು, ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ನಮ್ಮ ಸಂಘದ ಹಿರಿಯ ನಾಗರಿಕರಾದ ಪಂಚಣ್ಣ ಚನ್ನಬಸಪ್ಪ ಕತ್ತಿ ಸಂಘಕ್ಕೆ ಧನಸಹಾಯ ಮಾಡಿದ ಶಾರದಾ ಚಂದ್ರಶೇಖರಪ್ಪ ಮುನವಳ್ಳಿ ಹಾಗೂ ನಿವೃತ್ತ ನೌಕರರ ಸಂಘದ ಸದಸ್ಯ ಕೆ.ಎಸ್. ಮಂಜುಳಾ ಈ ಮೂವರು ನಿಧನರಾದ್ದರಿಂದ ಅವರ ಆತ್ಮಕ್ಕೆ ಶಾಂತಿ ಕೋರಿ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಬಿ.ಎ. ವಸ್ತದರವರು ಮುಂದಿನ ದಿನಮಾನಗಳಲ್ಲಿ ಸಂಘ ಉಳಿಯಬೇಕಾದರೆ ಸಂಘಟನೆ ಹೆಚ್ಚಾಗಬೇಕು ಪ್ರತಿ ಸದಸ್ಯರು ಹೆಚ್ಚು ಹೆಚ್ಚು ಅಜೀವ ಸದಸ್ಯರನ್ನು ಕರೆದುಕೊಂಡು ಬಂದು ಸಂಘ ಬಲಪಡಿಸಬೇಕೆಂದರು. ಮಹಿಳಾ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಹೊನ್ನಗುಡಿಯವರ ಹುಟ್ಟಿದ ದಿನ ಮಾರ್ಚ ತಿಂಗಳಲ್ಲಿ ಇದ್ದುದ್ದರಿಂದ ಸಭೆಯಲ್ಲಿ ಹಾಜರಿದ್ದ ಸದಸ್ಯರಿಗೆ ಅಲೋಪಹಾರ ವ್ಯವಸ್ಥೆ ಮಾಡಿದ್ದರು. ಅಧ್ಯಕ್ಷರು ಅವರಿಗೆ ಶುಭ ಹಾರೈಕೆಗಳೊಂದಿಗೆ ಅಭಿನಂದನೆಯನ್ನು ಎಲ್ಲರ ಪರವಾಗಿ ಸಲ್ಲಿಸಿದರು. ಎಂ.ಎಚ್. ಹುಲ್ಲೂರ ನಿರೂಪಿಸಿದರು. ಎಲ್.ಎಸ್. ಒಂಟಗುಡಿ ವಂದಿಸಿದರು.