ಪಲ್ಸ್ ಮ್ಯಾಜಿಕ್ ಒಂದು ಮುಖ್ಯ ಲಘು ಪೋಷಕಾಂಶಗಳ ಮಿಶ್ರಣವನ್ನು ಮತ್ತು ಸಸ್ಯ ವರ್ಧಕಗಳನ್ನು ಹೊಂದಿದೆ. ಬೆಳೆಗಳ ಬೆಳವಣಿಗೆಯನ್ನು ಹೆಚ್ಚಿಸಿ ಹೂ ಮತ್ತು ಕಾಯಿ ಉದುರುವುದನ್ನು ತಡೆಗಟ್ಟಿ ತೊಗರಿ ಮತ್ತು ಕಡಲೆ ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸುತ್ತದೆ ಮತ್ತು ಕಾಳುಗಳ ಗಾತ್ರವನ್ನು ಉತ್ತಮಗೊಳಿಸುತ್ತದೆ. ಇದರ ಬಳಕೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾಹಿತಿ ನೀಡಿದ್ದಾರೆ.
• ಪಲ್ಸ್ ಮ್ಯಾಜಿಕ್‌ನಲ್ಲಿ ಸಾರಜನಕ ಶೇ.10, ರಂಜಕ ಶೇ.40, ಲಘು ಪೋಷಕಾಂಶಗಳು ಶೇ. 3 ಮತ್ತು ನಸ್ಯ ಪ್ರಚೋದಕಗಳು 20 ಪಿಪಿಎಮ್ ನಷ್ಟು ಹೊಂದಿದೆ. • ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸುವುದರಿಂದ ತೊಗರಿ ಮತ್ತು ಇತರ ದ್ವಿದಳ ಧಾನ್ಯದ ಬೆಳೆಗಳು ದಷ್ಟ-ಪುಷ್ಪಾಗಿ ಬೆಳೆಯುತ್ತವೆ.
• ಹೂ ಮತ್ತು ಕಾಯಿಗಳ ಉದುರುವಿಕೆಯನ್ನು ತಡೆಗಟ್ಟುತ್ತದೆ. ಪಲ್ಸ್ ಮ್ಯಾಜಿಕ್ ಸಿಂಪರಣಿಯಿಂದ ಕಾಯಿ ಕಟ್ಟುವಿಕೆ ಹೆಚ್ಚಾಗುತ್ತದೆ. ಪ್ರತಿ ಗಿಡದಲ್ಲಿ ಕಾಯಿಗಳ ಸಂಖ್ಯೆ ಹೆಚ್ಚಾಗಿ ಮಾಗುವಿಕೆ ಸಮನಾಗಿರುತ್ತದೆ. ಇದರ ಸಿಂಪರಣೆಯಿಂದ ಪ್ರತಿ ಕಾಳುಗಳು ದಪ್ಪವಾಗಿ ಕಾಳಿನ ತೂಕದಲ್ಲಿ ಗಣನೀಯವಾಗಿ ತೂಕ ಹೆಚ್ಚುತ್ತದೆ.
ದ್ವಿದಳ ಧಾನ್ಯದ ಬೆಳೆಗಳಲ್ಲಿ ಶೇ. 17 ರಿಂದ 20 ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಪಲ್ಸ್ ಮ್ಯಾಜಿಕ್ ಹೆಚ್ಚಿನ ಮಾಹಿತಿಗೆ ತಮ್ಮ ಸಮೀಪದ ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಕೇವಲ 1.5 ಲಕ್ಷದಲ್ಲಿ ಸ್ವರಾಜ್ ಕೋಡ್ ಬೈಕ್ ಟ್ಯಾಕ್ಟರ್
ತೋಟಗಾರಿಕಾ ಇಲಾಖೆಯಿಂದ ಜೇನು ಪೆಟ್ಟಿಗೆ ಮತ್ತು ಸ್ಟ್ಯಾಂಡ್ ಖರೀದಿಗೆ ಸಹಾಯಧನ
Electric tractor ಅತಿ ಕಡಿಮೆ ಖರ್ಚಿನಲ್ಲಿ ಬಹಳ ಲಾಭದಾಯಕ ಬಳಕೆ ಮತ್ತು ಮೈಲೇಜ್*
*PM ಕಿಸಾನ್ ಮುಂದಿನ ಕಂತಿನ ಅರ್ಹರು ಮತ್ತು ಅನರ್ಹರ ಪಟ್ಟಿ*
ನಿಮ್ಮ ಜಾನುವಾರಗಳ ಪಾಲನೆ ಪೋಷಣೆ ಮಾಡಲು 5,962 ಪಶು ಸಖಿಯರ ನೇಮಕ*