2023-24 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಖುದ್ದಾಗಿ ಗೂಗಲ್ ಪ್ಲೇಸ್ಟೋನಿಂದ “ಹಿಂಗಾರು ರೈತರ ಬೆಳೆ ಸಮೀಕ್ಷೆ 2023” ನ್ನು ಡೌನ್ಲೋಡ್ ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕಾಗಿದೆ.
ಹಿಂಗಾರು ಬೆಳೆ ಸಮೀಕ್ಷೆ ಪ್ರಾರಂಭ್ ಆಗಿದೆ, rabi crop survey ಉತ್ಸವ 2023-24
ಹೀಗೆ ವಿವರಗಳನ್ನು ದಾಖಲಿಸುವದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುವದರಿಂದ ಎಲ್ಲ ರೈತರು ಬೆಳೆ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಆತ್ಮೀಯ ರೈತ ಬಾಂಧವರೇ, ಗಮನಿಸಿ ನಿಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ನೀವೇ ಬೆಳೆ ಸಮೀಕ್ಷೆ ಮಾಡಿ, ಅಪ್ಲೋಡ್ ಮಾಡಿ. ಬೆಳೆ ಸಮೀಕ್ಷೆ ಮಾಹಿತಿ ಸರಿಯಾಗಿ ದಾಖಲಾದಲ್ಲಿ ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಖರೀದಿ ಕೇಂದ್ರದಲ್ಲಿ ಉತ್ಪನ್ನ ನೀಡಲು ಮತ್ತು ಬೆಳೆ ಸಾಲ ಪಡೆಯಲು ತೊಂದರೆಯಾಗುವುದಿಲ್ಲ. ಬೆಳೆ ಸಮೀಕ್ಷೆ ಪ್ರಕಾರ ದಾಖಲಾದ ಬೆಳೆ ವಿವರ ನಿಮ್ಮ ಪಹಣಿಯಲ್ಲಿ ನಮೂದಾಗುತ್ತದೆ. ಈಗಾಗಲೇ ಬೆಳೆ ಸಮೀಕ್ಷೆ ಮಾಡಿಕೊಂಡ ರೈತರ ಮಾತುಗಳನ್ನು ಈ ಕೆಳಗಿನ ಲಿಂಕಿನಲ್ಲಿರುವ ವಿಡಿಯೋಗಳಲ್ಲಿ ನೋಡಿ.
https://youtube.com/playlist?list=PLnxNq_WLWBagLqpIdT3ib1IfuLiXEUuo6
💁🏻♂️ ಬನ್ನಿ ಇಂದೇ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿಕೊಳ್ಳಿ.🤳🏻 ಹಿಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ. https://play.google.com/store/apps/details?id=com.csk.farmer23_24.cropsurvey
ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಬಳಸುವ ವಿಧಾನಕ್ಕಾಗಿ ಈ ಕೆಳಗಿನ ಮಾರ್ಗದರ್ಶಿ ವಿಡಿಯೋ ನೋಡಿ. https://youtu.be/12y0D8uyTMs*
ಬೆಳೆ ಸಮೀಕ್ಷೆ ಪ್ರಕಾರ ನಿಮ್ಮ ಜಮೀನಿನಲ್ಲಿ ದಾಖಲಾದ ಬೆಳೆ ವಿವರದ ಮಾಹಿತಿಯನ್ನು *ಬೆಳೆ ದರ್ಶಕ 2023* ಅಪ್ಲಿಕೇಶನ್ ನಲ್ಲಿ ಪರಿಶೀಲಿಸಿಕೊಳ್ಳಿ. ಬೆಳೆ ಸಮೀಕ್ಷೆಗೆ ಬಳಸುವ *ಬೆಳೆ ಕೋಡ್* ಗಳನ್ನು ಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಿ.
https://drive.google.com/file/d/1BMliO5N8g3eJYOQ7wb6k4jdi3IbHKZoH/view
ರೈತರು ಬೆಳೆ ವಿವರಗಳನ್ನು ಅಪ್ ಲೋಡ್ ಮಾಡದಿದ್ದಲ್ಲಿ ಮೇಲೆ ತಿಳಿಸಿದ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ದಾಖಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಜಿ. ಹೆಚ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಮತ್ತು ಬ್ಯಾಟರಿ ಚಾಲಿತ ಈರುಳ್ಳಿ ದೇಟು ಕತ್ತರಿಸುವ ಯಂತ್ರದ ಪ್ರಾತ್ಯಕ್ಷಿಕೆ
ದಿನಾಂಕ 13-12-2023ರಂದು ಐ.ಸಿ.ಎ.ಆರ್ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ ವತಿಯಿಂದ, 2023-24 ನೇ ಸಾಲಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿ ಮುಂಡರಗಿ ತಾಲೂಕಿನ ಶಿಂಗಟರಾಯನ ಕೇರಿ ಗ್ರಾಮ ದ ಶ್ರೀ ಶಂಕರಗೌಡ ಪಾಟೀಲ ಇವರ ಹೊಲದಲ್ಲಿ ಭೀಮಾ ಸೂಪರ”ಎಂಬ ಈರುಳ್ಳಿ ತಳಿಯ ಕ್ಷೇತ್ರೋತ್ಸವವನ್ನು ಏರ್ಪಡಿಸಲಾಯಿತು. ಪ್ರಾತ್ಯಕ್ಷಿಕೆಯಲ್ಲಿತ ‘ಗೆದುಕೊಂಡ 10 ಜನ ರೈತರು ಭೀಮಾ ಸೂಪರ ತಳಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ, ಈ ತಳಿಯ ಗಡ್ಡೆಗಳು ಒಂದೇ ಆಕಾರದಲ್ಲಿಇದ್ದು, ಉತ್ತಮ ಗುಣ ಮಟ್ಟದ ಆಕರ್ಷಕ ಬಣ್ಣವನ್ನು ಹೊಂದಿದ್ದು ಒಳ್ಳೆಯ ಧಾರಣೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಕೆವಿಕೆಯ ತೋಟಗಾರಿಕೆ ವಿಜ್ಞಾನಿಯಾದ ಹೇಮಾವತಿ ಹಿರೇಗೌಡರ ಮಾತನಾಡಿ ಭೀಮಾ ಸೂಪರ ತಳಿಯು ಸುಧಾರಿತ ಈರುಳ್ಳಿ ತಳಿಯಾಗಿದ್ದು, ಇದು ಈರುಳ್ಳಿ ಮತ್ತು ಬಳ್ಕೊಳ್ಳಿ ನಿರ್ದೇಶನಾಲಯ, ಪುಣೆಇಂದ ಬಿಡುಗಡೆಯಾಗಿದ್ದು, ಎಲೆಗಳಿಗೆ ಬರುವ ನೇರಳೆ ಚುಕ್ಕೆ ರೋಗವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.ಪ್ರತಿಎಕರೆಗೆ 190 ಕ್ವಿಂಟಾಲ್ ನಷ್ಟು ಇಳುವರಿ ಕೊಡುವ ಸಾಮರ್ಥ್ಯ ಇದೆಎಂದು ತಿಳಿಸಿದರು. ಜೊತೆಗೆ ಈರುಳ್ಳಿ ಬೆಳೆಗೆ ಜಿಪ್ಪಂ ಹಾಕಿರುವದರಿಂದ ಗಡ್ಡೆಗಳು ಕೊಳೆಯುವುದಿಲ್ಲ, ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮತ್ತುಐ.ಐ.ಎಚ್. ಆರ್. ಬೆಂಗಳೂರಿನಿಂದ ಬಿಡುಗಡೆಯಾದ ತರಕಾರಿ ಸ್ಪೇಷಲ್ (ಲಘು ಪೋಷಕಾಂಶಗಳ ಮಿಶ್ರಣ) ಸಿಂಪರಣೆ ಮಾಡುವುದರಿಂದ ಅಧಿಕ ಇಳುವರಿ ಹಾಗೂ ಗುಣಮಟ್ಟದ ಗಡ್ಡೆಗಳನ್ನು ಪಡೆಯಬಹುದು ಎಂದು ನೆರೆದಿರುವರೈತರಿಗೆ ತಿಳಿಸಿದರು.
ಕೃಷಿ ಇಂಜಿನಿಯರಿಂಗ್ ವಿಜ್ಞಾನಿಯಾದಡಾ। ವಿನಾಯಕ ನಿರಂಜನ್ ಇವರು ಬ್ಯಾಟರಿ ಚಾಲಿತ ಈರುಳ್ಳಿ ದೇಟು ಹಾಗೂ ಬೇರು ಕತ್ತರಿಸುವ ಯಂತ್ರದ ಪ್ರಾತ್ಯಕಿ ಕೆಯನ್ನುಕೈಗೊಂಡು ಸಾಂಪ್ರದಾಯಿ ಕ ಈರುಳ್ಳಿ ದೇಟು ಕತ್ತರಿಸುವ ಪದ್ಧತಿಗೆ ಹೋಲಿಸಿದಾಗ ಯಂತ್ರದಿಂದ ಈರುಳ್ಳಿ ದೇಟು ಕತ್ತರಿಸಲು ಸಮಯದ ಉಳಿತಾಯವಾಗುತ್ತದೆ ಹಾಗೂ ಕಾರ್ಯಾಚರಣೆಯ ಶ್ರಮ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಿದರು. ಕಡಿಮೆ ಶ್ರಮವಹಿಸಿ ಕೆಲಸ ಮಾಡಲುರೈತರು ಹಾಗೂ ಕೂಲಿಯಾಳುಗಳು ಯಾಂತ್ರೀಕರಣವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾತ್ಯಕ್ಷಿಕೆ ತಾಕುಗಳಿಗೆ ರೈತರ ಭೆಟ್ಟಿಯನ್ನು ಏರ್ಪಡಿಸಿ ಪ್ರಾತ್ಯಕ್ಷಿಕೆಗಳ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರಾದ ಚಂದ್ರಪ್ಪಕದ ಕೆಂಪೂರ, ಮರಿಯಪ್ಪಪೂಜಾರ, ರಾಮನಗೌಡ ಹಿರೇಗೌಡರ, ದೇವಪ್ಪ ಭಿಂಗಿ ಸೇರಿದಂತೆ ಸುಮಾರು 50 ಜನರೈತರುಈ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.