ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ ಬೀಳುವ ಸಾಧ್ಯತೆಯಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಕೋಲಾರ, ಮೈಸೂರು, ಮಂಡ್ಯ ಹಾಗೂ ರಾಮನಗರದಲ್ಲಿ ಮೇ 20 ರಿಂದ 24 ರವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ.
ಚಿತ್ರದುರ್ಗ, ದಾವಣಗೆರೆ, ತುಮಕೂರು, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮೇ 23ರಿಂದ ಮುಂದಿನ ಎರಡು ದಿನ ಗುಡುಗು ಮಿಂಚುಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾಪಮಾನ ಹೆಚ್ಚಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಳವಾಗಿದೆ. ವಿಜಯಪುರ, ರಾಯಚೂರು, ಕಲಬುರಗಿ, ಬಳ್ಳಾರಿಯಲ್ಲಿ ಶುಕ್ರವಾರ ಗರಿಷ್ಠ ತಾಪಮಾನದಲ್ಲಿ 40ಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಚಿತ್ರದುರ್ಗ, ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆ ಹಾಗೂ ಬಾದಾಮಿಯಲ್ಲಿ 38 ಡಿಗ್ರಿ ಸೆಲ್ಸಿಯಸ್ ವರದಿಯಾದರೆ, ಬೆಂಗಳೂರು, ಮಂಗಳೂರು, ಹಾಸನ, ಮೈಸೂರಿನಲ್ಲಿ 35ರ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದೆ.
ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲನ ಶಾಖಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಜನರು 1 ಮಳೆನಾದ್ರೂ ಬಂದಿದ್ದರೆ ಎಂದು ಆಕಾಶದತ್ತ ಮುಖ ಮಾಡುತ್ತಿದ್ದಾರೆ. ಬಿಸಿಲಿನ ಬೇಗೆ ಬೆಂದಿದ್ದ ಜನರಿಗೆ ಇಂದು ಮಳೆರಾಯ ತಂಪೆರಲಿದ್ದಾನೆ. ಮುಂಬರುವ ಮಾನ್ಸೂನ್ ದೀರ್ಘಾವಧಿಯ ಸರಾಸರಿಯ 94 % ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಈ ಮೂಲಕ ದೇಶದಲ್ಲಿ ಶೇಕಡಾ 20ರಷ್ಟು ಬರಗಾಲ ಉಂಟಾಗುವ ಸಾಧ್ಯತೆ ಹೇಳಲಾಗಿದೆ.
ಇದನ್ನೂ ಓದಿ :- ಒಂದು ಲೀಟರ್ ಎಣ್ಣೆಗೆ 1500 ರೂಪಾಯಿಗಳು ಅತಿ ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ಹಣ ಗಳಿಸುವ ಸುಲಭ ಕೃಷಿ