ಹಿಂದೆಂದೂ ಕಂಡು ಕಾಣದಂತಹ ಬೀಕರ ಬರಗಾಲ ನಮ್ಮ ರಾಜ್ಯಕ್ಕೆ ಹೊಕ್ಕರಿಸಿದೆ ಕಳೆದ 7-8 ತಿಂಗಳಿನಿಂದ ಮಳೆ ಕಾಣದೇ ಕಂಗಾಲಾಗಿರುವ ರೈತ ಸಮುದಾಯವನ್ನು ಗಣನೆಗೆ ತೆಗೆದುಕೊಂಡು ನಾಳೆ ನಡೆಯಲಿರುವ ಬಜೆಟ್ ಪೂರ್ವ ಅಧಿವೇಶನದಲ್ಲಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ 8 ಶಾಸಕರುಗಳು ರೈತರ ಪರವಾಗಿ ಧ್ವನಿ ಎತ್ತಿ ರೈತರ ಮತದಿಂದ ಆರಿಸಿ ಬಂದಿರುವ ತಾವುಗಳು ಅವರ ಋಣ ತೀರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ. ಅಧಿವೇಶನವೆಂದರೆ ಕೇವಲ ಜಗಳವಾಡುವುದು ಆಗಬಾರದು.
ಜಿಲ್ಲೆಗೆ ಹಾಗೂ ಜಿಲ್ಲೆಯ ರೈತರಿಗೆ ಅವಶ್ಯವಾಗಿ ಬೇಕಾಗಿರುವ ಹೊಸ ಯೋಜನೆಗಳ ಕುರಿತು ಹಾಗೆ ಹಿಂದೆ ನೆನಗುದಿಗೆ ಬಿದ್ದಿರುವ ಕಾಮಗಾರಿಗಳ ಹಣವನ್ನು ಮಂಜೂರು ಮಾಡುವಂತೆ ಜಿಲ್ಲೆಯ 8 ಶಾಸಕರು ಸಧನದಲ್ಲಿ ಧ್ವನಿ ಎತ್ತಬೇಕು, ಕೇಳದಿದ್ದರೇ ಯಾರು ಏನು ಕೊಡುವುದಿಲ್ಲ ಈಗ ಸಮಯ ಬಂದಿದೆ. ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಧ್ವನಿಯಾಗುವಂತೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಕನಿಕರ ತೊರದೇ ಬರಗಾಲದಿಂದ ತತ್ತರಿಸಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆದಿರುವ ಎಲ್ಲಾ ಬೆಳೆಗಳಿಗೆ ವರ್ಷಪೂರ್ತಿ ಬೆಂಬಲ ಬೆಲೆ ನೀಡಿ ಖರೀದಿಸಬೇಕು.
ಕೃಷಿಗೆ ಬಡ್ಡಿ ರಹಿತ ಬೇಷರತ್ತ ಸಾಲ ಸಿಗುವಂತಾಗಬೇಕು, ಕೃಷಿ ಚಟುವಟಿಕೆ ನಡೆಯದೇ ರೈತ ಕಾರ್ಮಿಕರು ಗುಳೆ ಹೋಗುತ್ತಿರುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿಸಬೇಕು. ರೈತರಿಗೆ ಸಂಬಂಧಿಸಿದ ಕೃಷಿ, ಅರಣ್ಯ, ತೋಟಗಾರಿಕೆ, ಮೀನು, ಪಶುಸಂಗೋಪನೆ, ಇಲಾಖೆಯಲ್ಲಿ ಅವಶ್ಯವಿರುವ ಎಲ್ಲಾ ಸಾಧನ ಸಲಕರಣೆಗಳು, ಬೀಜ, ಗೊಬ್ಬರ, ಸ್ಪಿಂಕಲರ್ ಪೈಪ ಸೇರಿದಂತೆ ಎಲ್ಲ ಉಪಕರಣಗಳು ದೊರೆಯಬೇಕು ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಬೇಕು ಎಂದರು. ಆಲಿಮಟ್ಟಿ ಆಣೆಕಟ್ಟು 519.6 ರಿಂದ 524.256ಕ್ಕೆ ಎತ್ತರಿಸಿ, ಪರಿಹಾರ ಹಾಗೂ ಪುರ್ನವಸತಿ ಕಲ್ಪಿಸಬೇಕು. ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಗುಣಮಟ್ಟದಿಂದ ನಿರ್ಮಿಸಿ, ಜಿಲ್ಲೆಯ ಕಡೆಯ ಹಳ್ಳಿಯ ಜಮೀನಿಗೂ ನೀರು ಹರೆಯಬೇಕು.
ಕಟ್ಟಕಡೆಯ ರೈತರ ರೈತರಿಗೆ ಮರಣ ಶಾಸನವಾಗಿರುವ ಭೂ ಸುಧಾರಣಾ ಕಾಯ್ದೆ, ಕೃಷಿ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ, ಜಾನುವಾರ ಹತ್ಯೆ. ಸರಿಸುಮಾರು 75% ರೈತರು ಕೃಷಿಯನ್ನೇ ಅವಲಂಭಿಸಿರುವ ಈ ರಾಜ್ಯದಲ್ಲಿ ರೈತಪರ ಚಿಂತನೆಗಳನ್ನು ಮಾಡಿ ತಜ್ಞರಿಂದ, ಹಿರಿಯ ರೈತ ಹೋರಾಟಗಾರರಿಂದ ಮಾರ್ಗದರ್ಶನ ಪಡೆದು ರೈತಪರ ಬಜೇಟ್ ಮಂಡನೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಸಮಸ್ತ ರೈತ ಬಾಂಧವರ ಪರವಾಗಿ ಕೇಳಿಕೊಳ್ಳುತ್ತೆವೆ.
ಕಳೆದ ಐದು ವರ್ಷಗಳಲ್ಲಿ ದೇಶ ದೊಡ್ಡ ಬದಲಾವಣೆ ಕಂಡಿದೆ : ಪ್ರಧಾನಿ ಮೋದಿ
17ನೇ ಲೋಕಸಭೆಯ ಐದು ವರ್ಷಗಳು ‘ಸುಧಾರಣೆ, ಸಾಧನೆ ಮತ್ತು ಪರಿವರ್ತನೆ’ಯ ಅವಧಿಯಾಗಿದ್ದು, ದೇಶ ದೊಡ್ಡ ಬದಲಾವಣೆಯ ವೇಗದಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. ಸಂಸತ್ ಬಜೆಟ್ ಅಧಿವೇಶಕ್ಕೆ ಇಂದು ತೆರೆ ಬಿದ್ದಿದ್ದು, 17ನೇ ಲೋಕಸಭೆ ಅಧಿವೇಶನದ ಕೊನೆಯ ಕಲಾಪವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಐದು ವರ್ಷಗಳಲ್ಲಿ ದೇಶ ದೊಡ್ಡ ಬದಲಾವಣೆ ಕಂಡಿದೆ. ಈ ಲೋಕಸಭೆಯು ಕೋವಿಡ್‌ನ ಸವಾಲನ್ನು ಎದುರಿಸಿ ಹೊಸ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.
ದೇಶವು ತ್ವರಿತ ಗತಿಯಲ್ಲಿ ದೊಡ್ಡ ಬದಲಾವಣೆಗಳತ್ತ ಸಾಗಿದೆ ಮತ್ತು ಸದನದ ಎಲ್ಲಾ ಸದಸ್ಯರು ಮಹತ್ವದ ಕೊಡುಗೆ ನೀಡಿದ್ದಾರೆ. ಜನರು ಶತಮಾನಗಳಿಂದ ಕಾಯುತ್ತಿದ್ದ ಮಹತ್ವದ ಕೆಲಸಗಳು ಪೂರ್ಣಗೊಂಡಿವೆ” ಎಂದು ಲೋಕಸಭೆ ಚುನಾವಣೆಗೆ ಮುನ್ನ ನಡೆದ ಕೊನೆಯ ಅಧಿವೇಶನದಲ್ಲಿ ಪ್ರಧಾನಿ ಹೇಳಿದರು. 17ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಎಲ್ಲರಿಗೂ, ವಿಶೇಷವಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, “ಏನೇ ಸಂಭವಿಸಿದರೂ ನಿಮ್ಮ ಮುಖದಲ್ಲಿ ಯಾವಾಗಲೂ ನಗು ಇರುತ್ತಿತ್ತು. ನೀವು ನಿಷ್ಪಕ್ಷಪಾತವಾಗಿ ಈ ಸದನವನ್ನು ಮುನ್ನಡೆಸಿದ್ದೀರಿ ಮತ್ತು ಅದಕ್ಕಾಗಿ ನಾನು ನಿಮ್ಮನ್ನು ಶ್ಲಾಘಿಸುತ್ತೇನೆ. ಕೋಪ ಮತ್ತು ಆರೋಪಗಳ ಸಂದರ್ಭಗಳು ಇದ್ದವು.
ಆದರೆ ನೀವು ಈ ಸಂದರ್ಭಗಳನ್ನು ತಾಳ್ಮೆಯಿಂದ ನಿಭಾಯಿಸಿದ್ದೀರಿ ಮತ್ತು ಬುದ್ಧಿವಂತಿಕೆಯಿಂದ ಕಲಾಪವನ್ನು ನಡೆಸಿದ್ದೀರಿ’ ಎಂದು ಜಿರ್ಲಾ ಅವರನ್ನು ಅಭಿನಂದಿಸಿದರು. ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, 370ನೇ ವಿಧಿಯನ್ನು ರದ್ದುಗೊಳಿಸಿರುವುದು, ತ್ರಿವಳಿ ತಲಾಖ್ ಮಸೂದೆಯ ಅಂಗೀಕಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಮುಂಬರುವ 25 ವರ್ಷಗಳು ದೇಶಕ್ಕೆ ಬಹಳ ನಿರ್ಣಾಯಕವಾಗಿದೆ, ಒಂದು ಕಡೆ, ರಾಜಕೀಯ ಆಕಾಂಕ್ಷೆಗಳಿವೆ, ಮತ್ತೊಂದೆಡೆ ದೇಶಕ್ಕಾಗಿ ಕನಸುಗಳಿವೆ. ಮುಂದಿನ 25 ವರ್ಷಗಳಲ್ಲಿ ಭಾರತವು ‘ವಿಕಸಿತ್ ಭಾರತ’ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.