Breaking
Wed. Dec 18th, 2024

ರಾಜೀವ್ ಗಾಂಧಿ ವಸತಿ ಯೋಜನೆ ಸ್ವಂತ ಮನೆ ಕಟ್ಟಲು 6.5 ಲಕ್ಷ ರೂಪಾಯಿ ಹಣ

Spread the love

ರಾಜೀವ್ ಗಾಂಧಿ ವಸತಿ ಯೋಜನೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರವು 6.5 ಲಕ್ಷ ರೂಪಾಯಿ ಸಹಾಯಧನ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ. https://ashraya.karnataka.gov.in/nannamane/index.aspx

ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ವಸತಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿದಾರರು ಹೊಂದಿರಬೇಕಾದ ಅರ್ಹತೆಗಳು

ಅರ್ಜಿದಾರರು ವಸತಿ ಯೋಜನೆಗಳಡಿಯಲ್ಲಿ ಸೌಲಭ್ಯವನ್ನು ಪಡೆಯಲು ಈ ಕೆಳಕಂಡ ಎಲ್ಲಾ ಆರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗಿರುತ್ತದೆ. ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು (ವಿವಾಹಿತ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿ), ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷರು ಸಹ ಅರ್ಹರಾಗಿರುತ್ತಾರೆ. ಅರ್ಜಿದಾರರ ಕುಟುಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು ವಾರ್ಷಿಕ ಆದಾಯ ರೂ. 32000/- ಕ್ಕಿಂತ ಕಡಿಮೆ ಇರಬೇಕು. ಅರ್ಜಿದಾರರ ಕುಟುಂಬವು ವಸತಿರಹಿತರಾಗಿದ್ದು, ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು.

ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಬರ್ಹರಾಗಿರುತ್ತಾರೆ. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕು (ಪಾರಂಪರಿಕ ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಜಿಲ್ಲಾ ಸಮಿತಿಯಿಂದ ನೀಡಲಾದ ಹಕ್ಕುಪತ್ರ ಪಡೆದಿದ್ದಲ್ಲಿ ವಸತಿ ಸೌಕರ್ಯ ಪಡೆಯಲು ಪರಿಗಣಿಸಬಹುದಾಗಿದೆ.) ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು. ಪ್ರಧಾನ ಮಂತ್ರಿ ಅವಾಸ್ ಯೋಜನೆ(ಗ್ರಾ) ಯಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದಿಂದ ನೀಡಲಾದ ಸಾಮಾಜಿಕ ಆರ್ಥಿಕ ಮತ್ತು ಪಾತಿ ಜನಗಣತಿ 2011ರ ಪಟ್ಟಿಯಲ್ಲಿ ಹೆಸರು ಸೇರಿರಬೇಕು. ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು.

ಈ ವರ್ಗದ ವಸತಿ ರಹಿತರಿಗೆ ಬೇಡಿಕೆ ಆಧಾರಿತವಾಗಿ ವಸತಿ ಕಲ್ಪಿಸಲಾಗುವುದು, (2017-18) ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಅರ್ಹ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ನಿರ್ವಹಣೆ ಮತ್ತು ವಾರ್ಷಿಕ ಪರಿಷ್ಕರಣೆ. ಪ್ರತಿ ವರ್ಷದ ಜನವರಿ ಮಾಹೆಯ ಮೊದಲ ವಾರದಲ್ಲಿ ಗ್ರಾಮಪಂಚಾಯಿತಿಗಳು ಈಗಾಗಲೇ ಲಭ್ಯವಿರುವ ವಸತಿ ಮತ್ತು ನಿವೇಶನ ರಹಿತರ ಪಟ್ಟಿಯನ್ನು ಪ್ರಚುರಪಡಿಸಿ, ಸದರಿ ಪಟ್ಟಿಗೆ ಅರ್ಹ ಫಲಾನುಭವಿಗಳನ್ನು ಸೇರಿಸಲು ಅಥವಾ ಅನರ್ಹರನ್ನು ಪಟ್ಟಿಯಿಂದ ಕೈಬಿಡಲು ವ್ಯಾಪಕ ಪ್ರಚಾರ ನೀಡಿ ಅರ್ಜಿ/ಆಕ್ಷೇಪಣೆಗಳನ್ನು ಆಹ್ವಾನಿಸುವುದು.

ಫಲಾನುಭವಿಗಳ ಆಯ್ಕೆ

ಸರ್ಕಾರ ಗುರಿ ನಿಗದಿಪಡಿಸಿದ ನಂತರ ಗ್ರಾಮಪಂಚಾಯಿತಿಗಳು ಸದರಿ ಗುರಿಗೆ ಎದುರಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮಸಭೆಯ ದಿನಾಂಕ, ವೇಳೆ, ಮತ್ತು ಸ್ಥಳವನ್ನು ನಿಗದಿಪಡಿಸಿ ಜ್ಞಾಪನಾ ಪತ್ರವನ್ನು ಹೊರಡಿಸಿದ ದಿನದಂದೇ ಸದಲ ವಿವರವನ್ನು ಆನ್‌ಲೈನ್‌ಗೆ ಅಳವಡಿಸಿ, ಜೆರಾಕ್ಸ್ ಪ್ರತಿಯನ್ನು ಸ್ಕ್ಯಾನ್ ಮೂಲಕ ಅಳವಡಿಸತಕ್ಕದ್ದು. ಗ್ರಾಮಪಂಚಾಯಿತಿಗಳು ಸರ್ಕಾರ ಗುರಿ ನಿಗದಿಪಡಿಸಿದ ನಂತರ 30 ದಿನಗಳ ಒಳಗೆ ಗ್ರಾಮಸಭೆಯನ್ನು ಕಡ್ಡಾಯವಾಗಿ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು.

ಒಂದು ವೇಳೆ ಗ್ರಾಮಪಂಚಾಯಿತಿಯು ನಿಗದಿತ ಅವಧಿಯೊಳಗೆ ಗ್ರಾಮಸಭೆಯ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲು ವಿಫಲವಾದಲ್ಲಿ ಸಂಬಂಧಪಟ್ಟ ಕಾರ್ಯನಿರ್ವಹಣಾಧಿಕಾರಿಗಳು 15 ದಿನಗಳೊಳಗೆ ನಿಯಮಾನುಸಾರ ಗ್ರಾಮಸಭೆ ಕರೆದು ಅರ್ಹ ಫಲಾನುಭವಿಗಳನ್ನು ಆಯ್ಕೆಗೊಳಿಸುವುದು. ಒಂದು ವೇಳೆ ಗ್ರಾಮಸಭೆ ಮೂಲಕ ಫಲಾನುಭವಿಗಳನ್ನು ಆಯ್ಕೆಗೊಳಿಸಲು ಕಾರ್ಯನಿರ್ವಹಣಾಧಿಕಾರಿಗಳು ವಿಫಲರಾದ್ದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶಿಸ್ತಿನ ಕ್ರಮ ಕೈಗೊಳ್ಳುವುದು.

ಗ್ರಾಮಪಂಚಾಯಿತಿಗಳು ಅರ್ಹ ವಸತಿರಹಿತರನ್ನು ಆಯ್ಕೆ ಮಾಡುವಾಗ ಕ್ರಮ ಸಂಖ್ಯೆ 12 ರಂತೆ ತಯಾರಿಸಲಾದ ಫಲಾನುಭವಿಗಳ ಪಟ್ಟಿಯನ್ನು ಮಾತ್ರ ಪಲಗಣಿಸಿ ಈ ಕೆಳಕಂಡಂತೆ ಆಯ್ಕೆ ಮಾಡುವುದು. ಗ್ರಾಮಪಂಚಾಯಿತಿಗಳು ಫಲಾನುಭವಿಗಳ ಆಯ್ಕೆಗಾಗಿ ಒಂದು ವಾರ ಮುಂಚಿತವಾಗಿ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಟಾಂಟಾಂ/ಸೂಚನಾ ಫಲಕ/ಕರಪತ್ರ/ಜಾಹೀರಾತು ಫಲಕದ ಮೂಲಕ ಗ್ರಾಮಸಭೆಯ ದಿನಾಂಕವನ್ನು ಗೊತ್ತುಪಡಿಸುವುದು. ಕ್ರಮ ಸಂಖ್ಯೆ 12 ರಂತೆ ತಯಾರಿಸಿದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಗ್ರಾಮಸಭೆಯಲ್ಲಿ ವರ್ಗವಾರು ಓದಿ ಹೇಳುವುದು. ಸದರಿ ಪಟ್ಟಿಯಲ್ಲಿ ಅನರ್ಹರಿರುವುದು ಕಂಡುಬಂದಲ್ಲಿ ಸೂಕ್ತ ಕಾರಣಗಳನ್ನು ನಮೂದಿಸಿ ಸದರಿ ಫಲಾನುಭವಿಗಳನ್ನು ಪಟ್ಟಿಯಿಂದ ಕೈ ಬಿಡುವುದು.

ಆದರೆ ಯಾವುದೇ ಕಾರಣಕ್ಕೂ ಹೊಸದಾಗಿ ಫಲಾನುಭವಿಗಳನ್ನು ಸೇರಿಸಲು ಅವಕಾಶವಿರುವುದಿಲ್ಲ. ಗ್ರಾಮಪಂಚಾಯಿತಿಗಳು ವಸತಿ ಯೋಜನೆಗಳಡಿಯಲ್ಲಿ ಸರ್ಕಾರ ನಿಗದಿಪಡಿಸಿದ ವರ್ಗಾವಾರು ಗುರಿಗಿಂತ ಅರ್ಹ ವಸತಿರಹಿತರು ಅಧಿಕವಾಗಿದ್ದಲ್ಲಿ ಗುರಿಗೆ ಅನುಗುಣವಾಗಿ ಅರ್ಹ ವಸತಿ ರಹಿತರ ಪಟ್ಟಿಯಿಂದ ಫಲಾನುಭವಿಗಳನ್ನು ಲಾಟರಿ ಎತ್ತುವ ಮೂಲಕ ಗ್ರಾಮಸಭೆಯಲ್ಲಿ ಆಯ್ಕೆ ಮಾಡುವುದು. ಗ್ರಾಮಪಂಚಾಯಿತಿಯು ಆಯಾ ವರ್ಷಕ್ಕೆ ಸರ್ಕಾರ ನಿಗದಿಪಡಿಸಿದ ಗುರಿಗೆ ಎದುರಾಗಿ ಒಂದು ಅಥವಾ ಕೆಲವು ಗ್ರಾಮಗಳನ್ನೊಳಗೊಂಡಂತೆ ಗುಂಪು ಮನೆ ನಿರ್ಮಿಸಲು ಇಚ್ಛಿಸಿದ್ದಲ್ಲಿ ಗುಂಪು ಮನೆ ಯೋಜನೆಯ ಮಾರ್ಗಸೂಚಿಗಳನ್ವಯ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ. ಮೇಲೆ ತಿಳಿಸಿದ ಪದ್ಧತಿಯು ಕೇವಲ ರಾಜ್ಯಸರ್ಕಾರ ಪುರಸ್ಕೃತ ಯೋಜನೆಗಳಿಗೆ ಅನ್ವಯವಾಗುತ್ತದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ(ಗ್ರಾ) ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ನಿಯಮಗಳಂತೆ ಆಯ್ಕೆ ಮಾಡುವುದು.

ಗ್ರಾಮಸಭೆಯಲ್ಲಿ ನಡೆದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿಖರತೆ ಹೊಂದುವ ಸಲುವಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಈ ವಿಡಿಯೋ ಚಿತ್ರೀಕರಣವನ್ನು ನಿಗಮದ ವೆಬ್‌ಸೈಟ್‌ನಲ್ಲಿ ಅಳವಡಿಸುವುದು ಹಾಗೂ ಒಂದು ಪ್ರತಿಯನ್ನು ತಾಲ್ಲೂಕುಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯ ಮಾಹಿತಿಗಾಗಿ ಸಲ್ಲಿಸುವುದು. ಗ್ರಾಮಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು ನಿಗದಿತ ನಮೂನೆ 4ರಲ್ಲಿ ತಯಾರಿಸಿ ಠರಾವು ಹೊರಡಿಸುವುದು.

ಈ ರೀತಿಯಾಗಿ ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು ಗ್ರಾಮಪಂಚಾಯಿತಿಯ ಫಲಕದಲ್ಲಿ ಪ್ರಚುರಪಡಿಸುವುದು. ಅರ್ಹ ವಸತಿ ಮತ್ತು ನಿವೇಶನರಹಿತರ ಪಟ್ಟಿಯನ್ನು ಗ್ರಾಮಸಭೆಯಲ್ಲಿ ಅಂತಿಮಗೊಳಿಸಿದ ನಂತರ ಗ್ರಾಮ ಪಂಚಾಯ್ತಿಯ ಸಾಮಾನ್ಯಸಭೆಯಲ್ಲಿಟ್ಟು ಅನುಮೋದಿಸುವ ಅವಶ್ಯಕತೆ ಇರುವುದಿಲ್ಲ, ಬದಲಾಗಿ ಸದರಿ ಪಟ್ಟಿಯನ್ನು ನೇರವಾಗಿ ತಾಲ್ಲೂಕು ಜಾಗೃತ ಸಮಿತಿಗೆ ಸಲ್ಲಿಸುವುದು.

Related Post

Leave a Reply

Your email address will not be published. Required fields are marked *