ಯಾವುದೇ ಕಾರಣದಿಂದ ನೈಸರ್ಗಿಕ ತಡೆ ದುರ್ಬಲವಾದರೆ ಅಥವಾ ಮುರಿದರೆ ಸಂಬಂಧಿಸಿದ ಕೀಟದ ಸಂಖ್ಯೆ ಹೆಚ್ಚುತ್ತದೆ. ಪರಿಸರದಲ್ಲಿ ಕೀಡೆಗಳ ಸಂಖ್ಯೆ ಹೆಚ್ಚಾಗಲು ಪ್ರಮುಖವಾದ ಕಾರಣಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
• ಒಂದೇ ಬೆಳೆಯನ್ನು ಅತಿ ವಿಸ್ತಾರವಾದ ಕ್ಷೇತ್ರದಲ್ಲಿ ಮತ್ತು ಒಂದು ಬೆಳೆಯ ನಂತರ ಅದೇ ಬೆಳೆಯನ್ನು ಒಂದೇ ಕ್ಷೇತ್ರದಲ್ಲಿ ಬೆಳೆಯುವುದರಿಂದ ಕೀಟಪೀಡೆಗಳಿಗೆ ಸತತವಾಗಿ ಕೀಟದ ಬಾಧೆ ಹೆಚ್ಚುತ್ತದೆ.
• ಅರಣ್ಯ ನಾಶದಿಂದ ಅರಣ್ಯದಲ್ಲಿರುವ ಕೀಟ ಪೀಡೆಗಳು
ಬೆಳೆಯನ್ನು ಆಕ್ರಮಿಸಿ ಹಾನಿಯನ್ನುಂಟು ಮಾಡುತ್ತವೆ.
• ಅತಿಯಾದ ಕೀಟನಾಶಕಗಳ ಸಿಂಪರಣೆಯಿಂದಾಗಿ ಸ್ವಾಭಾವಿಕ ಶತ್ರುಗಳು ನಾಶವಾಗಿ ಕೀಟ ಪೀಡೆಗಳು ಹೆಚ್ಚಾಗುತ್ತವೆ.
• ಹೊಸ ಬೆಳೆಗಳನ್ನು ಮತ್ತು ಬೆಳೆಗಳ ಸುಧಾರಿತ ತಳಿಗಳನ್ನು ಬೆಳೆಯುವುದರಿಂದ ಕೀಟಗಳಿಗೆ ಒಳ್ಳೆಯ ಆಹಾರ ಲಭ್ಯವಾಗಿ ಅವುಗಳ ಸಂಖ್ಯೆ ಅಧಿಕಗೊಳ್ಳುತ್ತದೆ.
• ಸುಧಾರಿಸಿದ ಬೇಸಾಯ ಕ್ರಮಗಳನ್ನು ಅಳವಡಿಸುವುದರಿಂದ ಬೆಳೆಗಳು ಚೆನ್ನಾಗಿ ಬೆಳೆದು ಕೀಡೆಗಳು ಆಹಾರಕ್ಕಾಗಿ ಸ್ಪರ್ಧಿಸದೆ ಒಳ್ಳೆಯ ಆಶ್ರಯ ಪಡೆಯುವವು.
ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
*ಕೃಷಿ ಮೇಳ-2023 ಸಿಎಂ ಸಿದ್ದರಾಮಯ್ಯ ಆಗಮನ, ಇಲ್ಲಿ ಯಾವ ಯಾವ ಕಾರ್ಯಗಳು ನಡೆಯುತ್ತವೆ?*