Breaking
Wed. Dec 18th, 2024

ಕೃಷಿ ಇಲಾಖೆಯಲ್ಲಿ ನೇಮಕಾತಿ 2023-24

Spread the love

ಪ್ರಿಯಾ ಓದಿದರೇ,

ಕೃಷಿ ಇಲಾಖೆಯಿಂದ ನೇಮಕಾತಿಯನ್ನು ಪ್ರಾರಂಭಿಸಲಾಗಿದೆ. ನಮ್ಮ ಕೃಷಿ ಇಲಾಖೆಯಲ್ಲಿ ತುಂಬಾ ಹುದ್ದೆಗಳು ಖಾಲಿ ಇವೆ. ಬಹಳ ವರ್ಷಗಳಿಂದ ಇಲಾಖೆಯಲ್ಲಿ ಹುದ್ದೆಗಳ ಖಾಲಿ ಇದ್ದರೂ ನೇಮಕಾತಿಯನ್ನು ತೆಗೆದುಕೊಂಡಿಲ್ಲ. ನೇಮಕಾತಿಯನ್ನು ಮಾಡಿಕೊಳ್ಳುವ ಸಂಸ್ಥೆ ಕೃಷಿ ಇಲಾಖೆ. ಆದಕಾರಣ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಆದಕಾರಣ ಆಸಕ್ತವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮತ್ತು ಉದ್ಯೋಗವನ್ನು ಪಡೆಯಿರಿ. ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗೆ ತಿಳಿಸಿರುವ ದಿನಾಂಕದ ಒಳಗೆ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬೇಕು. ಯಾವ ಯಾವ ಹುದ್ದೆಗಳಿಗೆ ಎಷ್ಟು ವಿದ್ಯಾ ಅರ್ಹತೆ, ವಯಸ್ಸಿನ ಮಿತಿ ಮತ್ತು ಎಷ್ಟು ಸಂಭವಿದೆ ಎಂದು ವಿವರವಾಗಿ ತಿಳಿಯಿರಿ. ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಒಂದು ವಿಷಯವನ್ನು ಬಿಡದೆ ಸರಿಯಾಗಿ ಓದಿ, ತದನಂತರ ಅರ್ಜಿಯನ್ನು ಸಲ್ಲಿಸಿ.
ಮೊದಲು ನೀವು ವೇತನ ಶ್ರೇಣಿಯನ್ನು ತಿಳಿಯಿರಿ, ವೇತನ ಶ್ರೇಣಿಯು ಮೂವತ್ತು ಸಾವಿರ ರೂಪಾಯಿಗಳು ಆಗಿದೆ. ಇನ್ನು ನೀವು ಉದ್ಯೋಗ ಮಾಡುವ ಸ್ಥಳ ಕರ್ನಾಟಕ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 06-03-2023.

ಯಾವ ಹುದ್ದೆಗೆ ಯಾವ ಶೈಕ್ಷಣಿಕ ಅರ್ಹತೆ ಹೊಂದಿರಬೇಕು?


ಇಲ್ಲಿ ಖಾಲಿ ಇರುವ ಹುದ್ದೆಗಳು ಯಾವುವೆಂದರೆ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಯನ್ನು ಪ್ರತಿಷ್ಠಿತ ಸಂಸ್ಥೆಯಿಂದ ಬಿ.ಟೆಕ್ / ಎಂ.ಸಿ.ಎ ಮಾಡಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಡಿಪ್ಲೋಮೋ ಪದವಿಯನ್ನು ಹೊಂದಿರುವ ಕಂಪ್ಯೂಟರ್ ಅಪ್ಲಿಕೇಶನ್ ಅನ್ನು ಕಲೆತಿರುವ ಅಭ್ಯರ್ಥಿಗಳು ಉಳಿದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ಅದರ ಜೊತೆ ಕಂಪ್ಯೂಟರ್ ಅನ್ನು ಬಳಕೆ ಮಾಡಲು ಬರುವ ಅಭ್ಯರ್ಥಿಗಳನ್ನು ತಾಲೂಕು ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಸೇರಿಸಿಕೊಳ್ಳಲಾಗುತ್ತದೆ. ಇನ್ನು ಖುಷಿ ಅಥವಾ ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಸೇರಿಸ್ಕೊಳ್ಳಲಾಗುತ್ತದೆ.

ಇದನ್ನು ಓದಿ :- ಕೇವಲ ಈ ಒಂದು ಕಾರ್ಡ್ ಇದ್ದರೆ ಸಾಕು 5000 ರೂಪಾಯಿ ಇಂದ 75000 ರೂಪಾಯಿ ಸಹಾಯಧನ ಪಡೆಯಬಹುದು

ಎಷ್ಟು ಹುದ್ದೆಗಳಿವೆ ಮತ್ತು ಎಷ್ಟು ಸಂಬಳ ಎಂದು ತಿಳಿಯೋಣ?


16,000 ರೂ ಕಂಪ್ಯೂಟರ್ ಪ್ರೋಗ್ರಾಮರ್/ಆಪರೇಟರ್ ಹುದ್ದೆಗೆ ಕೊಡುತ್ತಾರೆ. 30,000 ರೂ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಕೊಡುತ್ತಾರೆ. 25,000 ರೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಕೊಡುತ್ತಾರೆ. ಕಂಪ್ಯೂಟರ್ ಆಪರೇಟರ್ ಒಂದು ಹುದ್ದೆ ಖಾಲಿ ಇದೆ. ತಾಲೂಕು ತಾಂತ್ರಿಕ ವ್ಯವಸ್ಥಾಪಕ ಮೂರು ಹುದ್ದೆ ಖಾಲಿ ಇದೆ. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ನಾಲ್ಕು ಹುದ್ದೆ ಖಾಲಿ ಇದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?


ಅರ್ಹ ಮತ್ತು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಮೊದಲು ಜಂಟಿ ಕೃಷಿ ನಿರ್ದೇಶಕರು ಮಂಡ್ಯ ಜಿಲ್ಲೆಯ ಕಚೇರಿಗೆ ದಿನಾಂಕ ಫೆಬ್ರವರಿ 17 ರಿಂದ ಮಾರ್ಚ್ 3 ರ ಒಳಗಾಗಿ ಈ ಹುದ್ದೆಗಳ ಅರ್ಜಿಯನ್ನು ತೆಗೆದುಕೊಂಡು, ಸಂಪೂರ್ಣವಾಗಿ ದಾಖಲೆಗಳನ್ನು ನೀಡಿ. ಮಾರ್ಚ್ ಒಳಗಾಗಿ ಕಚೇರಿಗೆ ಭೇಟಿ ನೀಡಿ ಅಥವಾ ನೀವು ಅಂಚೆಯ ಮೂಲಕವೂ ಕಚೇರಿಗೆ ಈ ಅರ್ಜಿಗಳನ್ನು ಸಲ್ಲಿಸಬಹುದು.

ಇದನ್ನು ಓದಿ :- ಕಡಲೆಯನ್ನು ಸರ್ಕಾರ ನಿರ್ಧರಿಸಿದ ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಲು ಬಯಸುತಿದ್ದರೆ ಬೆಂಬಲ ಬೆಲೆಗೆ ಕಡಲೆ ಖರೀದಿ ಆರಂಭವಾಗಿದೆ.
5335 ರೂಪಾಯಿ ಕಡಲೆಯ MSP ದರವಾಗಿದೆ

Related Post

Leave a Reply

Your email address will not be published. Required fields are marked *