ಹೊಸ ರೇಷನ್ ಕಾರ್ಡು ದಿನಾಂಕ : 08/03/2024, 09/03/2024 ರಂದು ಬೆಳಿಗ್ಗೆ 10 ಗಂಟೆ ಇಂದ 12 ಗಂಟೆ ವರೆಗೆ ಪ್ರಾರಂಭ ಇರುತ್ತೆ.
ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ದಿನಾಂಕ:08/03/2024 ಮತ್ತು 09/03/2024 ರಂದು ಮಧ್ಯಾಹ್ನ 02:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಸರ್ಕಾರವು ಅವಕಾಶ ಕಲ್ಪಿಸಿರುತ್ತದೆ. ಪಡಿತರ ಚೀಟಿದಾರರು ತಾಲೂಕಿನ ಗ್ರಾಮ ಒನ್ ಕರ್ನಾಟಕ ಒನ್ ಗಳಲ್ಲಿ ಮಾತ್ರ ಪಡಿತರ ಚೀಟಿ ತಿದ್ದುಪಡಿ ಮತ್ತು ಸೇರ್ಪಡೆ ಆನಲೈನ್ ಮುಖಾಂತರ ಸಕಾಲದಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಕೌಶಲ್ಯ ಉನ್ನತೀಕರಣ ತರಬೇತಿಗೆ ಅರ್ಜಿ ಆಹ್ವಾನ
2023-24 ನೇ ಸಾಲಿನಲ್ಲಿ ಅನಿಷ್ಠಾನಗೊಳಿಸುತ್ತಿರುವ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಕೌಶಲ್ಯ ಉನ್ನತೀಕರಣ ತರಬೇತಿ ಪಡೆಯಲು ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ ಮತ್ತು ಡಿಪ್ಲೋಮ ಆದ ಚರ್ಮಕುಶಲ ಕರ್ಮಿಗಳಿಗೆ ಉತ್ತರ ಪ್ರದೇಶದ ಆಗ್ರಾದಲ್ಲಿ 60 ದಿನಗಳ ಕೌಶಲ್ಯ ಉನ್ನತೀಕರಣ ತರಬೇತಿ ನೀಡಲಾಗುತ್ತದೆ. ಆಸಕ್ತರು ಆಧಾರ್ ಕಾರ್ಡ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಗುರುತಿನ ಚೀಟಿ, ಬ್ಯಾಂಕ್ ಖಾತೆಯ ಪ್ರತಿ, 2 ಪಾಸ್ ಪೋಟೋಗಳನ್ನು ತೆಗೆದುಕೊಂಡು ಮಾರ್ಚ 5ರಿಂದ ಮಾರ್ಚ 12ರೊಳಗಾಗಿ ಲಿಡ್ ಕರ್ ಲೆದರ್ ಎಂಪೋರಿಯಂ, ಬಿಡಾ ಕಾಂಪ್ಲೇಕ್ಸ್, ಶಾಪ್ ನಂ.24, ಗೌಂಡ್ ಪ್ಲೋರ್, ಮೊತಿ ಸರ್ಕಲ್, ಬಳ್ಳಾರಿ ಜಿಲ್ಲೆಯ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 08393371741, 9480886274, 7676591259 ಸಂಖ್ಯೆಗೆ ಸಂಪರ್ಕಿಸಿ ಎಂದು ವಿಜಯನಗರ ಜಿಲ್ಲೆಯ ಲಿಡಕರ್ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸದ್ದಾರೆ.
ಬರಗಾಲ : ಸಹಾಯವಾಣಿ ಆರಂಭ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಸಾರ್ವಜನಿಕರಿಗಾಗಿ ಸಹಾಯವಾಣಿಗಳನ್ನು ತಾಲೂಕಾವಾರು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿದ್ದಾರೆ. ಸಾರ್ವಜನಿಕರು ಸಹಾಯವಾಣಿಯ ಸದುಪಯೋಗಪಡಿಸಿಕೊಳ್ಳಬೇ ಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಕೋರಿದ್ದಾರೆ.
ಹಣ್ಣುಗಳು, ಅಣಬೆ, ಜೇನು ಪ್ರದರ್ಶನ : ಮಾರಾಟ ಮೇಳಕ್ಕೆ ಶಾಸಕರಿಂದ ಚಾಲನೆ
ಮಹಾ ಶಿವರಾತ್ರಿ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಕೊಪ್ಪಳ ನಗರದಲ್ಲಿ ಮಾರ್ಚ್ 6 ರಿಂದ ಮಾ.9 ರವರೆಗೆ ಹಮ್ಮಿಕೊಳ್ಳಲಾದ ವಿವಿಧ ಬಗೆಯ ಹಣ್ಣುಗಳು, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬುಧವಾರ ಚಾಲನೆ ಸಿಕ್ಕಿತು. ಪ್ರತಿ ವರ್ಷ ಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ಗಮನ ಸೆಳೆದಿರುವ ಕೊಪ್ಪಳ ರೈತರಿಂದ ನೇರ ಗ್ರಾಹಕರಿಗೆ ಎಂಬ ಆಶಯದಡಿ ಆಯೋಜಿಸಲಾದ ಹಣ್ಣುಗಳು ಮತ್ತು ಜೇನು ಹಬ್ಬಕ್ಕೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಶಾಸಕರು ಜೇನು, ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪಾಯ, ಅಣಬೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಮತ್ತು ಹಾಗೂ ಉತ್ಪನ್ನಗಳನ್ನು ವಿಕ್ಷೀಸಿದರು. ಬಳಿಕ ಹಣ್ಣುಗಳಿಂದ ಅಲಂಕೃತವಾದ ಫೋಟೋ ಪಾಯಿಂಟ್ನಲ್ಲಿ ಫೋಟೋ ತೆಗೆಯಿಸಿಕೊಂಡು, ತೋಟಗಾರಿಕೆ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಇಓ ಭೇಟಿ: ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ, ಜೇನು, ಅಣಬೆ ಸೇರಿದಂತೆ ವಿವಿಧ ಹಣ್ಣುಗಳನ್ನು ಮತ್ತು ಹಾಗೂ ಉತ್ಪನ್ನಗಳನ್ನು ವಿಕ್ಷೀಸಿ, ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಈ ಮೇಳದ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಸ್ಥೆಗಳ ಅಧ್ಯಕ್ಷರು, ಪ್ರತಿನಿಧಿಗಳು, ಹಲವು ಗಣ್ಯರು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಇಲಾಖೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಮೇಳದಲ್ಲಿ ಎಲ್ಲಾ ಹಣ್ಣುಗಳು ಹಾಗೂ ಅವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕರ ಆರೋಗ್ಯ ವೃದ್ಧಿ ದೃಷ್ಟಿಯಿಂದ ಮಾರಾಟ ಮಾಡಲಾಗುತ್ತಿದೆ. ಮೇಳದಲ್ಲಿ ರೈತರಿಗೆ ಉಚಿತವಾಗಿ ಸ್ಟಾಲ್‌ಗಳನ್ನು ಹಾಕಲು ಅವಕಾಶ ಕಲ್ಪಿಸಲಾಗಿದ್ದು, 17ಕ್ಕೂ ಹೆಚ್ಚು ಹಣ್ಣು ಬೆಳೆಗಾರರು, 10 ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಕೂಡ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಎಕರೆಗೆ ಔಷಧಿ ಸಿಂಪಡಿಸಬಹುದು.
ಸಮ ಸಿಂಪಡಣೆಯಿಂದ ಶೇ.20ರಷ್ಟು ಬೆಳೆ ಇಳುವರಿಯನ್ನು ಹೆಚ್ಚಿಸುತ್ತದೆ. ರಸಾಯನಿಕಗಳೊಂದಿಗೆ ನೇರ ಸಂಪರ್ಕದ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ನೀರಿನ ಬಳಕೆಯನ್ನು ಶೇ.90ರಷ್ಟು ಕಡಿಮೆ ಮಾಡುತ್ತದೆ. ಶಾಸಕರು, ಅಧಿಕಾರಿಗಳಿಗೆ ಮತ್ತು ರೈತರಿಗೆ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಅವಿನಾಶ ಕುಲಕರ್ಣಿ ಅವರು ಕೃಷಿ ಡೋನ್ ಬಗ್ಗೆ ಮಾಹಿತಿ ನೀಡಿದರು.
Jobs