Breaking
Tue. Dec 17th, 2024

ಜನೆವರಿ ತಿಂಗಳ ಅನ್ನಭಾಗ್ಯ ಹಣ ಜಮೆ ಆಗುವ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ

Spread the love

ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ahara.kar.nic.in/WebForms/Show_Village_List.aspx

ನಂತರ ಎಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ go ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆಗ ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನಿಮ್ಮ ಮುಂದೆ ಒಂದು ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ ಹೆಸರು ಇದೆಯಾ ಎಂದು ನೋಡಿ.

ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ

ಹೊಸಪೇಟೆ : ಪ್ರವಾಸೋದ್ಯಮ ಇಲಾಖೆಯಿಂದ 2023- 24ನೇ ಸಾಲಿನಲ್ಲಿ ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 2023- 24ನೇ ಸಾಲಿನಲ್ಲಿ 50 ಇತರೆ ಪ್ರವಾಸಿ ಗೈಡ್ಗಳಿಗೆ 03 ತಿಂಗಳ ಕಾಲ ತರಬೇತಿ ಹಾಗೂ ಜಲಪಾತ, ಅರಣ್ಯಧಾಮ, ಪರಿಸರಧಾಮ ಇನ್ನಿತರೆ ಪ್ರಾಕೃತಿಕ ನೈಸರ್ಗಿಕ ಪ್ರವಾಸಿ ತಾಣಗಳಲ್ಲಿ ಕಾರ್ಯ ನಿರ್ವಹಿಸಲು 50 ನೇಚರ್ ಗೈಡ್ಗಳಿಗೆ 02 ತಿಂಗಳ ಕಾಲ ತರಬೇತಿ ಒಟ್ಟು 100 ಜನ ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿಯನ್ನು ನೀಡಲಾಗುತ್ತದೆ.

ಆಸಕ್ತರು ಪ್ರವಾಸೋದ್ಯಮ ಇಲಾಖೆಯಲ್ಲಿ ಫೆಬ್ರವರಿ 5 ರಿಂದ ಅರ್ಜಿ ಪಡೆದುಕೊಂಡು, ಎಲ್ಲಾ ಮಾಹಿತಿಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ ಹಾಗೂ ಸರಿಯಾದ ದಾಖಲೆಗಳೊಂದಿಗೆ ಫೆ.29 ರೊಳಗೆ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಸಲ್ಲಿಸಬೇಕು. ಅಪೂರ್ಣ ಹಾಗೂ ಅಸ್ಪಷ್ಟ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ವಿದ್ಯಾರ್ಹತೆ, ಆಯ್ಕೆಯ ಮಾನದಂಡಗಳು, ಸಲ್ಲಿಸಬೇಕಾದ ದಾಖಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆ, ಲೋಟಸ್ ಮಹಲ್ ಹತ್ತಿರ, ಕಮಲಾಪುರ ಕಚೇರಿ ದೂರವಾಣಿ ಸಂಖ್ಯೆ: 08394-295640 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮತ್ತುಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತ ಸಂಘ ಬಲಿಷ್ಠ ಪಡಿಸಲು ವರ್ಷವಿಡಿ ಸಂಘಟನೆ ಅವಶ್ಯ

ಕೃಷ್ಣಾನದಿ ಮತ್ತು ಆಲಿಮಟ್ಟಿ ಜಲಾಶಯಕ್ಕೆ ಸಂಬಂಧಿಸಿದಂತೆ ಜಲಾಶಯದ ಎತ್ತರ, ನಷ್ಟಗೊಂಡ ರೈತರಿಗೆ ಪರಿಹಾರ, ಪುರ್ನವಸತಿ, ಬೆಳೆ ಪರಿಹಾರ, ಬರಗಾಲ ಪರಿಹಾರ, ಸೇರಿದಂತೆ ಹಲವಾರು ರೈತರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಇಂದು ನಾವೆಲ್ಲರೂ ಸೇರಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

2024 ನೇ ಸಾಲಿನ ಸಮಗ್ರ ಹೋರಾಟ ಹಾಗೂ ವರ್ಷವಿಡಿ ಹೋರಾಟದ ರೂಪರೇಷಗಳನ್ನು ಸಿದ್ದಪಡಿಸಲು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರ್ಷವಿಡಿ ಕಾರ್ಯಕ್ರಮದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಈ ಜಿಲ್ಲೆಯಲ್ಲಿ ರೈತ ಸಂಘ ಬಲಿಷ್ಠಗೊಳ್ಳಬೇಕಾದರೆ ವರ್ಷವಿಡಿ ಸಂಘಟನೆ ಹಾಗೂ ಹೋರಾಟ ಹಾಗೂ ತರಬೇತಿ ಅವಶ್ಯಕ ಎಂದು ಹೇಳಿದರು.

ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡುತ್ತಾ ಆಲಿಮಟ್ಟಿ ಜಲಾಶಯ ಎತ್ತರಗೊಂಡರೆ ಮಾತ್ರ ವಿಜಯಪುರ ಜಿಲ್ಲೆಯ ಕಟ್ಟಕಡೆಯ ಹಳ್ಳಿಯ ಕೊನೆಯ ರೈತನಿಗೂ ನೀರು ಸಿಗುತ್ತದೆ. ಆ ನೀರು ಸಿಗಬೇಕಾದರೆ ಜಿಲ್ಲೆಯ 13 ತಾಲೂಕು ಹಾಗೂ ಅದರಲ್ಲಿನ ಎಲ್ಲಾ ಹಳ್ಳಿಗಳಲ್ಲಿ ಸಂಘಟನೆ ಮಾಡುತ್ತಾ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಬೇಕು ಆಗ ಮಾತ್ರ ಇದು ಸಾಧ್ಯವಾಗುವುದು. ಅದೇರೀತಿ ಯುವ, ಮಹಿಳಾ ಹಾಗೂ ಕಾರ್ಮಿಕ ಸಂಘಟನೆಯನ್ನು ಮಾಡಬೇಕು ಎಂದರು.

Related Post

Leave a Reply

Your email address will not be published. Required fields are marked *