ಆತ್ಮೀಯ ರೈತ ಬಾಂಧವರೇ,
ಈಗಾಗಲೇ ಹಲವಾರು ರೈತರಿಗೆ ಮೂರು ಕಂತಿನ ಬೆಳೆ ಪರಿಹಾರ ಹಣಗಳು ಕೂಡ ಜಮಾ ಆಗಿದೆ. ನಿಮ್ಮ ಊರಿನಲ್ಲಿ ಯಾವ ಯಾವ ರೈತರಿಗೆ ಹಣ ಜಮಾವಾಗಿದೆ ಎಂದು ಮತ್ತು ಜಮಾ ಆದವರ ಪಟ್ಟಿಗಳಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಲು ಈ ಒಂದು ಡೈರೆಕ್ಟ್ ಲಿಂಕ್ ಅನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಹಾಗಾದರೆ ಈ ಲಿಂಕಿನ ಮೂಲಕ ಯಾರಿಗೆ ಜಮಾ ಆಗಿದೆ ಮತ್ತು ನಿಮ್ಮ ಊರಿನ ಹಾಗೂ ನಿಮಗೆ ಹಣ ಜಮವಾಗದೇಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದಾಗಿದೆ.
ಇದನ್ನೂ ಓದಿ :- 44.34 ಕೋಟಿ ಬೆಳೆವಿಮೆ ಹಣ ಬಿಡುಗಡೆ!! ರೈತರ ಖಾತೆಗೆ ಜಮಾ ಕೂಡಲೇ ಇಲ್ಲಿ ಚೆಕ್ ಮಾಡಿ
ಹಂತ 1 – ಈ ಕೆಳಗಿನ ಲಿಂಕ್ ಅನ್ನು ಪ್ರೆಸ್ ಮಾಡಿ ಹಾಗೂ ನಿಮ್ಮ ಜಿಲ್ಲೆ ಹೋಬಳಿ ತಾಲೂಕು ಹಾಗೂ ವರ್ಷ ಮತ್ತು ಸೀಸನ್ ಅನ್ನು ಆಯ್ಕೆ ಮಾಡಿ. ವರ್ಷ ಇದ್ದಲ್ಲಿ 2023-24 ಹಾಗೂ ಸೀಸನ್ ಇದ್ದಲ್ಲಿ ಮುಂಗಾರು ಎಂದು ಆಯ್ಕೆ ಮಾಡಿ ಮುಂದುವರಿಸಿ ಎಂದು ಕೊಡಿ.
ಹಂತ 2 – ಈ ರೀತಿ ಆಯ್ಕೆ ಮಾಡಿದ ನಂತರ ನಿಮ್ಮ ಊರಿನ ಯಾರೇ ಯಾರಿಗೆ ಹಣ ಜಮಾವಾಗಿದೆ ಮತ್ತು ಯಾರು ಯಾರಿಗೆ ಜಮವಾಗಿಲ್ಲ ಎನ್ನುವ ಎರಡು ಕಾಲಂ ಅನ್ನು ನಿಮ್ಮ ಪುಟದಲ್ಲಿ ತೋರಿಸುತ್ತದೆ ಅದರ ಮೂಲಕ ನೀವು ನಿಮ್ಮ ಹೆಸರುಗಳನ್ನು ಚೆಕ್ ಮಾಡಿಕೊಳ್ಳಬಹುದು. ಹಾಗೂ ನಿಮ್ಮ ಊರಿನ ಯಾರ್ಯಾರಿಗೆ ಬೆಳೆ ಪರಿಹಾರ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ :- ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು? ಬೆಳೆ ವಿಮೆ ಕಟ್ಟುವ ದಿನಾಂಕ ಬಿಡುಗಡೆ ಆಗಿದೆ
ಪೇಮೆಂಟ್ failed ಎಂದು ತೋರಿಸಿ ತ್ತಿರುವ ರೈತರು ಯಾವ ತಪ್ಪನ್ನು ಮಾಡಿದ್ದೀರಾ ಎಂದು ಇಲ್ಲಿ ತಿಳಿಯಿರಿ
ನಿಮ್ಮ ಬ್ಯಾಂಕ್ ಖಾತೆಗೆ NPCI ಲಿಂಕ್ ಆಗದೇ ಇರುವುದು
ನಿಮ್ಮ ಜಮೀನಿನ ಪಹಣಿಗೆ FID ಸಂಖ್ಯೆ ಇಲ್ಲದಿರುವುದು
NPCI ಹಾಗೂ FID ನಲ್ಲಿ ಬ್ಯಾಂಕ್ ಖಾತೆ ಬೇರೆ ಬೇರೆ ಆಗಿರುವುದು
ಆಧಾರ ಕಾರ್ಡ ನಲ್ಲಿರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹೆಸರು ಬೇರೆ ಬೇರೆ ಆಗಿರುವುದು
ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿರುವುದು, ಬ್ಲಾಕ್ ಆಗಿರುವುದು ಅಥವಾ ಆಧಾರ ಕಾರ್ಡ ಬ್ಯಾಂಕ್ ಖಾತೆಗೆ ಸೀಡ್ ಆಗದೇ ಇರುವುದು.
ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರದಲ್ಲಿ ಹೆಸರು ಬೇರೆ ಬೇರೆ ಆಗಿರುವುದು.
ಈ ಮೇಲಿನ ಎಲ್ಲ ತಪ್ಪುಗಳನ್ನು ಸರಿ ಮಾಡಿಸಿಕೊಂಡಿದ್ದಲ್ಲಿ ನಿಮಗೆ ಮೂರು ಕಂತಿನ ಹಣಗಳು ಕೂಡ ಜಮಾ ಆಗುತ್ತದೆ.
ಇದನ್ನೂ ಓದಿ :- ಮೂರನೇ ಕಂತಿನ ಬೆಳೆ ಪರಿಹಾರದ ಹಣ ಜಮಾ ಈ ರೈತರಿಗೆ ಮಾತ್ರ 3000 ರೂಪಾಯಿ ಜಮಾ ಕೂಡಲೇ ಚೆಕ್ ಮಾಡಿ
ಸಂಕಷ್ಟದಲ್ಲಿರುವ ರೈತರು ಧಾರವಾಡದಲ್ಲಿ ಬೀಜ ವಿತರಣೆಯಲ್ಲಿ ಲೋಪ :-
ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ 31 ಕೇಂದ್ರಗಳ ಮೂಲಕ ರೈತರಿಗೆ ಅಗತ್ಯ ಬೀಜಗಳನ್ನು ಮತ್ತು ಸೊಸೈಟಿ, ಖಾಸಗಿ ಮಾರಾಟಗಾರರು ಸುಮಾರು ಐನೂರಕ್ಕು ಹೆಚ್ಚು ಕೇಂದ್ರಗಳಲ್ಲಿ ರಸಗೊಬ್ಬರ ವಿತರಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಅದಾಗ್ಯೂ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ಗೊಬ್ಬರ ನೀಡಲು ಅನಗತ್ಯ ಷರತ್ತು ವಿಧಿಸುವುದು, ಬೀಜ ಮತ್ತು ಗೊಬ್ಬರದ ಕೃತಕ ಅಭಾವ ಸೃಷ್ಟಿಸುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಲೈಸನ್ಸ್ ರದ್ದು ಪಡಿಸಿ, ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚರಿಕೆ ನೀಡಿದ್ದಾರೆ. ಆದರೂ ಕೆಲವು ಕೃಷಿ ಪರಿಕರ ಮಾರಾಟಗಾರರು, ಸೊಸೈಟಿಗಳ
ಸಿಬ್ಬಂದಿಗಳು ಬೀಜ ಖರೀದಿಗೆ ಬರುವ ರೈತರಿಗೆ ಅನಗತ್ಯ ಷರತ್ತು ವಿಧಿಸುವುದು, ಬೀಜ, ಗೊಬ್ಬರದ ಕೊರತೆ ಇದೆ ಎಂದು ಬಿಂಬಿಸಿ, ಬೀಜ ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಅಂತಹ ಮಾರಾಟಗಾರರ ಲೈಸನ್ಸ್ ತಕ್ಷಣ. ರದ್ದುಪಡಿಸಿ, ಅವರ ಮೇಲೆ ಕಾನೂನು ಮಿಶ್ರಣ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕ್ರಮಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ
ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ಚಿಲ್ಲರೆ ಮತ್ತು ಸಗಟು 10,444.37 ಮೆ.ಟನ್, ಕಾಪು ದಾಸ್ತಾನಾಗಿ 3744.50 ., . ದಾಸ್ತಾನಾಗಿ 12343.90 ಮೆ. ಟನ್ ಹಾಗೂ ಸಾಗಾಣಿಕೆ ಮತ್ತು ಮಿಶ್ರಣ ಘಟಕಗಳಲ್ಲಿರುವ ದಾಸ್ತಾನು ಸೇರಿದಂತೆ ಯೂರಿಯಾ- 10,272, ಕಾಂಪ್ಲೇಕ್ಸ್- 12,794, ಎಸ್ಎಸ್‌ಪಿ 481 ໙໖ 29,507.39 ລ້ ಟನ್ ದಷ್ಟು ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಹುಬ್ಬ ಪ್ರಭು ಅವರು ತಿಳಿಸಿದ್ದಾರೆ. ಹೆಚ್ಚಿನ ದರ, ಕೃತಕ ಅಭಾವ ಮಾಡಿದರೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ, ದೂರು ನೀಡಿ: ಜಿಲ್ಲೆಯಲ್ಲಿ ರೈತರಿಗೆ ಅವಶ್ಯಕವಾದ ಎಲ್ಲ ಕೃಷಿ ಪರಿಕರಗಳ ದಾಸ್ತಾನು ಇದ್ದು, ಎಮ್.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ತಾಲೂಕುವಾರು ಕೃಷಿ ಪರಿಕರ ಮಾರಾಟಗಾರರ ಸಭೆ ಜರುಗಿಸಿ, ಎಚ್ಚರಿಕೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಲೈಸನ್ಸ್ ಅಮಾನತು, ರದ್ದತಿ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ದೂರುಗಳಿದ್ದಲ್ಲಿ ರೈತರು, ಧಾರವಾಡ ಉಪ ಕೃಷಿ ನಿರ್ದೇಶಕರು(8277931271), ಧಾರವಾಡ ಸಹಾಯಕ ಕೃಷಿ ನಿರ್ದೇಶಕರು(8277931285) ಧಾರವಾಡ ಜಂಟಿ ಕೃಷಿ ನಿರ್ದೇಶಕರು (8277931270) ಮತ್ತು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳಿಗೆ ಸಂಪರ್ಕಿಸಿ ಮಾಹಿತಿ ಮತ್ತು ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.