ಆತ್ಮೀಯ ರೈತ ಬಾಂಧವರೇ,
ಹೈನುಗಾರಿಕೆ ಪ್ರೋತ್ಸಾಹಿಸಬೇಕು, ರಾಜ್ಯ ಉತ್ತಮ ಹಾಲು ಉತ್ಪಾದನೆಯಲ್ಲಿ ಮುಂದಿದೆ ಎಂದು ಹೇಳುವ ಸರಕಾರ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದೆ ಚೆಲ್ಲಾಟ ಆಡುತ್ತಿದೆ. ಮೇವಿನ ಬೆಲೆ ಹೆಚ್ಚಳ, ಪಶು ಆಹಾರದ ಬೆಲೆ ಹೆಚ್ಚಳ, ಅತಿ ಮಳೆಯಿಂದಾಗಿ ರಾಸುಗಳಿಗೆ ಆರೋಗ್ಯ ಸಮಸ್ಯೆಗಳು ಮೊದಲಾದ ಸವಾಲುಗಳನ್ನು ಹೈನುಗಾರರು ಎದುರಿಸುತ್ತಿದ್ದು, ಇತ್ತ ಕೈಗೆ ಹಣವೂ ಸಿಗದೇ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನವನ್ನು ನೀಡಬೇಕು. ಆದರೆ ಸರಕಾರ ಇನ್ನು ಯಾವ ಹಣವನ್ನೂ ಕೂಡ ಜನೆ ಮಾಡಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಲಿ, ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಹಾಲುಮಂಡಳಿಗೆ ಹಾಲನ್ನು ಸರಬರಾಜು ಮಾಡುವ ರೈತರಿಗೆ ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಗೆ 5 ರೂ. (Incentive money) ನೀಡಲಾಗುತ್ತದೆ. ಇನ್ನು ಈ ಪ್ರೋತ್ಸಾಹ ಧನ ಯಾವಾಗ ನಮ್ಮ ಬ್ಯಾಂಕ್ ಖಾತೆ(Bank account)ಗೆ ಬಂತು? ಖಾತೆಗೆ ಜಮಾದ ಹಣ ಎಷ್ಟು? ಹಾಗೂ ಇದನ್ನು ಚೆಕ್ ಮಾಡುವುದು ಹೇಗೆ?ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ಮೊದಲಿಗೆ ಕ್ಷಿರಸಿರಿ ವೆಬ್ ಸೈಟ್ (website)
https://mahitikanaja.karnataka.gov.in/Klda/MilkIncentive?ServiceId=5399&Type=TABLE&DepartmentId=3119
ಭೇಟಿ ನೀಡಿ ಫಲಾನುಭವಿಯ FDI ನಂಬರ್ ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ವರ್ಷವನ್ನು ಕ್ಲಿಕ್ ಮಾಡಿ “View” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ಡೈರಿಗೆ ಪೂರೈಕೆ ಮಾಡಿದ ತಿಂಗಳುವಾರು ಹಾಲಿನ ವಿವರ ಮತ್ತು ಸಹಾಯಧನದ ಹಣ ವರ್ಗಾವಣೆ ಮಾಹಿತಿ ತೋರಿಸುತ್ತದೆ.
ಮೊಬೈಲ್ ಆಪ್ ನ (mobile app) ಮೂಲಕ ಚೆಕ್ ಮಾಡುವದು ಹೇಗೆ?
ಮೊದಲನೆಯದಾಗಿ ಗೂಗಲ್ ಪ್ಲೇ ಸ್ಟೋರ್ ಗೆ (Google play store) DBT karantaka ಮೊಬೈಲ್ ಆಪನ್ನು ಡೌನ್ಹೋಡ್ ಮಾಡಬೇಕು. ತದನಂತರ ನಿಮ್ಮಮನೆಯಲ್ಲಿ ಯಾರ ಹೆಸರಿನಲ್ಲಿ ಡೈರಿಗೆ ಹಾಲನ್ನು ಹಾಕುತ್ತಿರುತ್ತೀರೋ ಅವರ ಆಧಾರ್ ಸಂಖ್ಯೆಯನ್ನು ಹಾಕಬೇಕು.
ನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ (OTP)ಬರುತ್ತದೆ. ಓಟಿಪಿ (OTP) ನಮೂದಿಸಿದ ನಂತರ ನಾಲ್ಕು ಅಂಕಿಯ ಪಾಸ್ವರ್ಡ್ ಹಾಕಬೇಕು. ನಂತರ ಮುಖಪುಟಕ್ಕೆ ಹೋಗಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಬಲಬದಿಯಲ್ಲಿ ಕ್ಲಿಕ್ ಮಾಡುವ ಮೂಲಕ ಕನ್ನಡ ಅರ್ಥ APP ಇಂಗ್ಲಿಷ್ ಅನ್ನು ಆಯ್ಕೆ ಮಾಡಬೇಕು. ತದನಂತರ ಮುಖಪುಟದಲ್ಲಿ ಕಾಣುವ ಪಾವತಿ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು.
ಇನ್ನೂ ಕೊನೆಯ ಹಂತದಲ್ಲಿ ಫಲಾನುಭವಿಯ ಡಿಬಿಟಿ (DBT) ಯೋಜನೆಯ ಮಾಹಿತಿ ಗೋಚರಿಸುತ್ತದೆ. “ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಯಾವ ಯಾವ ತಿಂಗಳು ಎಷ್ಟು ಹಣ ಜಮಾ ಆಗಿದೆ ಹಾಗೂ ಯಾವ ಬ್ಯಾಂಕ್ ಖಾತೆಗೆ ಹೋಗಿದೆ ಎಂಬ ಎಲ್ಲಾ ಮಾಹಿತಿ, UTR ನಂಬರ್, ಎಷ್ಟು ಹಣ, ಬಿಡುಗಡೆ ಆದ ದಿನಾಂಕ ಹಾಗೂ ಬ್ಯಾಂಕ್ ಹೆಸರು ಈ ಎಲ್ಲಾ ಮಾಹಿತಿಗಳನ್ನು ತೋರಿಸುತ್ತದೆ.
https://chat.whatsapp.com/Gm6a0DqjrOGLAWzSIe62LU