ಅಖಂಡ ಕನಾಟಕ ರೈತ ಸಂಘಂದ ಕಾರ್ಯಕರ್ತರಿಂದ ಗುರುವಾರ ರೈತರ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಹಾಗೂ ರೈತರ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ ಹಾಗೂ ಹೆಸ್ಕಾಂ ಅಧಿಕಾರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಮೆರವಣಿಗೆ ಮೂಲಕ ಹೆಚ್ಚಾ ಕಚೇರಿ ಹಾಗೂ ತಹಶೀಲ್ದಾರ ಕಾರ್ಯಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಈಗಾಗಲೇ ಜೂನ್ ತಿಂಗಳು ಅರ್ಧ ಕಳೆದರು. ಮುಂಗಾರು ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ, ತೆರದ ಬಾವಿಯಲ್ಲಿ ಹಾಗೂ ಕೊಳವೆ ಬಾವಿಯಲ್ಲಿರುವ ಅಲ್ಪ ಸ್ವಲ್ಪ ನೀರನ್ನು ಬಳಸಲು ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ರೈತರ ಪಂಪಸೆಟ್‌ಗಳಿಗೆ ಕನಿಷ್ಠ ಎಂಟು ತಾಸು ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆಯನ್ನು ಕುರಿತು ಕೂಡಲೇ ಸರ್ಕಾರ ಅಧಿಸೂಚನೆ ಹೊರಡಿಬೇಕು.
ಅಖಂಡ ಕರ್ನಾಟಕ ರೈತ ಸಂಘ ನಡೆಸಿದ್ದ ಹೋರಾಟವನ್ನು ಗಣನೆಗೆ ತೆಗೆದುಕೊಂಡಿದ್ದ ಹಿಂದಿನ ಬಿ.ಜೆ.ಪಿ ಸರ್ಕಾರ ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕರೆದಿದ್ದ ಜಿಲ್ಲಾಧಿಕಾರಿಗಳ30ಸಭೆಯಲ್ಲಿ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವರಾಗಿದ್ದ ಜಿ. ಮಾಧುಸ್ವಾಮಿ, ಸಭೆಯಲ್ಲಿ ನಿರ್ಣಯಿಸಿ ಜಮೀನುಗಳ ದಾರಿಸಮಸ್ಯೆ ಇತ್ಯರ್ಥ ಪಡಿಸಲು ತಹಶೀಲ್ದಾರರುಗಳಿಗೆ ಅಧಿಕಾರ ನೀಡಲಾಗಿದೆ, ಈ ಕುರಿತು ಶೀಘ್ರದಲ್ಲಿ ಕಾನೂನು ತಿದ್ದುಪಡಿ 3 ತಂದು ಅಧಿಸೂಚನೆ ಹೊರಡಿಸಲಾಗುವದೆಂದು ಸಭೆಯಲ್ಲಿಘೋಷಹಿಸಿದ್ದರು.
ಆದರೆ, ಬಿ.ಜೆ.ಪಿ ಸರ್ಕಾರ ಕೊನೆಗೂ ಅಧಿಸೂಚನೆ ಹೊರಡಿಸಲಿಲ್ಲ.ದಾರಿ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ದಾರಿ ಸಮಸ್ಯೆ ರಾಜ್ಯಾದ್ಯಂತ ಗಂಭೀರವಾಗಿದೆ. ರೈತರ ನಡುವೆ ದಾರಿಗಾಗಿ ಇನ್ನು ಹೊಡೆದಾಟಗಳು ನಡೆಯುತ್ತಲೆ ಇವೆ. ಸದ್ಯಕ್ಕೆ ದಾರಿ ಸಮಸ್ಯೆ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಾರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾನೂನು
ಸಾವಯವ ಕೃಷಿ ಮಾಡಿ ವರ್ಷಕ್ಕೆ 50 ಲಕ್ಷ ಆದಾಯ ಪಡೆದುಕೊಂಡ ರೈತ
ಗೃಹ ಲಕ್ಷ್ಮೀ ಯೋಜನೆ ಜಾರಿ, 2000 ರೂ. ಜಮಾ ಅರ್ಜಿ ಸಲ್ಲಿಕೆ ಹೇಗೆ?