ದೇಶದಲ್ಲಿ ಪ್ರತಿ ವರ್ಷ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ 2.39 ಲಕ್ಷ ಕೋಟಿ ರೂ.ಗಳ ಸಬ್ಸಿಡಿ ನೀಡಲಾಗುತ್ತಿದೆ. ಆ ಸಬ್ಸಿಡಿ ಮೊತ್ತವನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆ.ಹೀಗಾಗಿ ನೈಸರ್ಗಿಕ ಕೃಷಿ ಮಾಡಲು ಸರ್ಕಾರದಿಂದ 17000 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರವರು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.ಇದಕ್ಕೆ ಬೇಕಾದ ದಾಖಲಾತಿಗಳನ್ನು ನಮ್ಮ ಅಂಕಣದ ಕೊನೆಯಲ್ಲಿ ನೀಡಲಾಗಿದೆ.
ನೈಸರ್ಗಿಕ ಕೃಷಿ ಏಕೆ ಮಾಡಬೇಕು?
ಮಣ್ಣಿನ ಫಲವತ್ತತೆ ಕಡಿಮೆ ಆಗುವುದನ್ನು ತಪ್ಪಿಸುವುದು ಸಾಂಪ್ರದಾಯಿಕ ಕೃಷಿಯಿಂದ ಆಗುವ ವೆಚ್ಚ ಹೆಚ್ಚಳಕ್ಕೆ ಬ್ರೇಕ್ ಹಾಕಲು ಈ ತರಹದ ಕೃಷಿಯನ್ನು ಅಳವಡಿಸಿಕೊಳ್ಳಲು ತಿಳಿಸಿದ್ದಾರೆ.ರಸಗೊಬ್ಬರ ಬಳಕೆ ಕಡಿಮೆ ಮಾಡುವುದು,ಆಹಾರ ಸುರಕ್ಷತೆಯ ಹೆಚ್ಚಳ ಮಾಡುವುದು,ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಹಾಗೂ ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಮುಖ್ಯ ಗುರಿಯಾಗಿದೆ.
ಆಹಾರ ಉತ್ಪಾದನೆ ಕಡಿಮೆಯಾಗದಂತೆ ನೋಡಿಕೊಳ್ಳುವುದು, ಭೂಮಿಯನ್ನು ಫಲವತ್ತಾಗಿಯೇ ಉಳಿಸಿಕೊಳ್ಳುವ ಸಲುವಾಗಿ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಮುಖ್ಯತೆಯ ಮೂಲಕ ರೈತರಿಗೆ ನೆರವಾಗುವ ಉದ್ದೇಶವಿದೆ. ಮಣ್ಣು ಫಲವತ್ತತೆ ಕಾಪಾಡಲು 88 ಲಕ್ಷ
ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರವರು ತಿಳಿಸಿದ್ದಾರೆ.
ನೈಸರ್ಗಿಕ ಕೃಷಿ:
ರೈತರನ್ನು ಸ್ವಾವಲಂಬಿಯಾಗಿಸುವ ಕೃಷಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಸೂಕ್ತ ಬಳಕೆಯಿಂದ ಹಾಗೂ ಹೊರಗಡೆಯಿಂದ ಖರೀದಿಸಿದ > ಪರಿಕರಗಳನ್ನು ಬಳಸದೆ ನೈಸರ್ಗಿಕ ತತ್ವಗಳ ಆಧಾರದ ಮೇಲೆ ಕೈಗೊಳ್ಳುವ ಪರಿಸರ ಸ್ನೇಹಿ ಕೃಷಿ ನೈಸರ್ಗಿಕ ಕೃಷಿ ರಾಸಾಯನಿಕ ಕೃಷಿಗಿಂತ ಹೆಚ್ಚು ವೈಜ್ಞಾನಿಕ ಹಾಗೂ ಕೌಶಲ್ಯಯುತವಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ತಂತ್ರಜ್ಞಾನ ಹಾಗೂ ಸುಸ್ಥಿರ ಬೇಸಾಯ ಪದ್ಧತಿಗಳನ್ನು ಅಳವಡಿಸಿ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಮತ್ತು ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ಸಮರ್ಥವಾಗಿ ಉಪಯೋಗ ಮಾಡಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
ಗುರಿ
- ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆ ಆದರ ಆರೋಗ್ಯದ ಮೇಲೆ ಅವಲಂಬಿಸಿದ್ದು, ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಪದಾರ್ಥಗಳಿಂದ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳನ್ನು ವೃದ್ಧಿಸಿ ಮಣ್ಣನ್ನು ಜೀವಂತಗೊಳಿಸುವದು.
- ನೈಸರ್ಗಿಕ ಸ್ವಾಭಾವಿಕ ಕ್ರಿಯೆಗಳಾದ ಸಾರಜನಕ ಸ್ಥಿರೀಕರಣ, ಸಾವಯವ ಪದಾರ್ಥಗಳ ಕರಗಿಸುವಿಕೆ, ಪೋಷಕಾಂಶಗಳ ಹಿಡಿದಿಟ್ಟುಕೊಳ್ಳುವಿಕೆ, ಪೋಷಕಾಂಶಗಳ, ಚಲನಶೀಲತೆ ಹಾಗೂ ಲಭ್ಯತೆ ಹೆಚ್ಚಿಸಿ ಮಣ್ಣನ್ನು ಪುನರುಜ್ಜಿವನಗೊಳಿಸಿ ಫಲವತ್ತಾಗಿಸಿ ಸಸ್ಯಗಳಿಗೆ ಅವಶ್ಯವಿರುವ ಪೋಷಕಾಂಶಗಳನ್ನು ಪೂರೈಸುವುದು.
ಕೃಷಿ ಕ್ಷೇತ್ರದ ಜೀವ ವೈವಿಧ್ಯತೆ ಹೆಚ್ಚಿಸಿ ನೈಸರ್ಗಿಕ ಕ್ರಿಯೆ ಹಾಗೂ ವಿಧಾನಗಳಿಂದ ಕಳೆಗಳ ಕೀಟ ಹಾಗೂ ರೋಗಗಳ ನಿರ್ವಹಣೆ ಕೈಗೊಂಡು ಆರೋಗ್ಯ ಆಹಾರ ಉತ್ಪಾದನೆ ಮಾಡುವುದು.
- ಕೃಷಿ ಉತ್ಪಾದನೆ ವೃದ್ಧಿಗೊಳಿಸಿ ಬೇಸಾಯದ ವೆಚ್ಚವನ್ನು ಕಡಿಮೆ ಮಾಡಿ ರೈತರ ಆದಾಯ ದ್ವಿಗುಣಗೊಳಿಸುವುದು. ಭಾರತ ದೇಶದಲ್ಲಿ ಶ್ರೀ ಸುಭಾಸ ಪಾಳೇಕರರವರು ಕಳೆದ ದಶಕದಿಂದ ಈ ಶೂನ ಬಂಡವಾಳ ನೈಸರ್ಗಿಕ ಕೃಷಿಯನ್ನು ಅಧ್ಯಯನ ಮಾಡಿ, ರೈತರ ಸಹಭಾಗಿತ್ವದೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ಹೆಚ್ಚು ಜನಪ್ರಿಯಗೊಳಿಸಿದ್ದಾರೆ. ಕರ್ನಾಟಕ ಸರಕಾರ 2018-19 ರಿಂದ ಈ ಕೃಷಿ ಪದ್ಧತಿಯನ್ನು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ರೈತರ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆಗಳ ಮುಖಾಂತರ ಪ್ರತಿವರ್ಷ 20,000 ಹೆಕ್ಟೇರ್ ಪ್ರದೇಶವನ್ನು ನೈಸರ್ಗಿಕ ಕೃಷಿಗೆ ಪರಿವರ್ತಿಸುವ ಮಹಾತ್ವಾಕಾಂಕ್ಷಿ ಯೋಜನೆ ಹಾಕಿಕೊಂಡಿದೆ.
ಈ ಹಸ್ತಪತ್ರಿಕೆಯಲ್ಲಿ ಶ್ರೀ. ಸುಭಾಸ ಪಾಳೇಕರವರು ಪತಿಪಾದಿಸಿದ ಹಾಗೂ ನೈಸರ್ಗಿಕ ಕೃಷಿಗೆ ಸೂಕ್ತವಾದ ಹಲವು ಉತ್ತಮ ಕೃಷಿ ಪದ್ಧತಿಗಳನ್ನು ರೈತರ ತಿಳುವಳಿಕೆ ಹಾಗೂ ಅಳವಡಿಕೆಗೆ ಈ ಕೆಳಕಂಡಂತೆ ವಿವರಿಸಲಾಗಿದ್ದು, ಇವುಗಳ ಸಮಗ್ರ ಅನುಷ್ಠಾನದಿಂದ ನೈಸರ್ಗಿಕ ಕೃಷಿ ಫಲಪ್ರದವಾಗುವದರಲ್ಲಿ ಸಂಶಯವಿಲ್ಲ.
ಬೀಜಾಮೃತ:
ಬೀಜಾಮೃತ ಪ್ರಾಣಿಜನ್ಯ ಬೀಜೋಪಚಾರ ದ್ರಾವಣ, ಇದರ ಉಪಚಾರದಿಂದ ಬೀಜದ ಮೊಳಕೆ ಪ್ರಮಾಣ ಹೆಚ್ಚುತ್ತದೆ, ಉತ್ತಮ ಬೆಳವಣಿಗೆ ಹೊಂದುತ್ತದೆ ಹಾಗೂ ಬರ ನಿರೋಧಕತೆಯನ್ನು ಕೂಡ ಪಡೆಯಬಹುದು.
- 5 ಕೆ.ಜಿ. ದೇಶಿ ಆಕಳ ಸಗಣಿ ತಿಳಿಯಾದ ಬಟ್ಟೆಯಲ್ಲಿ ಕಟ್ಟಿ
- 50 ಲೀಟರ್ ನೀರಿನ ಡ್ರಮ್‌ನಲ್ಲಿ ಒಂದು ರಾತ್ರಿ ತೂಗಿ ಹಾಕಿ ಇಡುವುದು ಅದೇ ರಾತ್ರಿ ಪ್ರತ್ಯೇಕವಾಗಿ 50 ಗ್ರಾಂ, ಸುಣ್ಣವನ್ನು ಲೀ ನೀರಿನಲ್ಲಿ ಹಾಕಿ ದ್ರಾವಣ ತಯಾರಿಸಿ
- ಮಾರನೆದಿನ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದ್ದಿ ತೆಗೆಯುವುದು ಹಾಗೂ ಸಗಣಿಯನ್ನು ಹಿಂಡುವುದು ಹಾಗೂ ಇದಕ್ಕೆ 5 ಲೀ. ಗೋಮೂತ್ರ ಮತ್ತು ಸುಣ್ಣದ ನೀರನ್ನು ಬೆರೆಸಿ
- ಬೀಜ ಹಾಗೂ ಸಸಿಗಳ ಕಾಂಡ, ಬೇರುಗಳನ್ನು 5-10 ನಿಮಿಷ ಬೀಜಾಮೃತದಲ್ಲಿ ಅದ್ದಿ ತೆಗೆದು ನೆರಳಿನಲ್ಲಿ ಆರಿಸಿ ಬಿತ್ತನೆ, ನಾಟಿಗೆಗೆ ಉಪಯೋಗಿಸುವುದು.
ಘನ ಜೀವಾಮೃತ
ಘನ ಜೀವಾಮೃತ ಬೆಳೆಗಳಿಗೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಘನ ರೂಪದ ನೈಸರ್ಗಿಕ ಗೊಬ್ಬರವಾಗಿದ್ದು, ಮಣ್ಣಿನ ಫಲವತ್ತತೆ ಹಾಗೂ ಜೈಏಕ ಕ್ರಿಯೆ ವೃದ್ಧಿಸುತ್ತದೆ. ಇದನ್ನು ಮೂಲಗೊಬ್ಬರವಾಗಿ ಹಾಗೂ ಮೇಲುಗೊಬ್ಬರವಾಗಿ ಬೆಳೆಗಳ ಅವಶ್ಯಕತೆಗೆ
ತಕ್ಕಂತೆ (400 ಕೆ.ಜಿ. ಪ್ರತಿ ಎಕರೆಗೆ) ಭೂಮಿಗೆ ಕೊಡುವುದರಿಂದ ಮಣ್ಣಿನ ಫಲವತ್ತತೆ ವೃದ್ಧಿಗೊಂಡು ಅಧಿಕ ಇಳುವರಿ ಪಡೆಯಬಹುದು.
- 100 ಕೆಜಿ ದೇಶಿ ಆಕಳ ಸಗಣಿ
- 2 ಕೆಜಿ ಬೆಲ್ಲ + 2 ಕೆಜಿ ದ್ವಿದಳ ಧಾನ್ಯಗಳ ಹಿಟ್ಟು
- 2 ಹಿಡಿ ಬದುವಿನ ಮಣ್ಣು + ದೇಶಿ ಆಕಳ ಗಂಜಲು ಚುಮುಕಿಸಿ ಕಲಸಬೇಕು
- ಈ ಮಿಶ್ರಣವನ್ನು 24 ಘಂಟೆಗಳವರೆಗೆ ಗೋಣಿ ಚೀಲದಿಂದ ಮುಚ್ಚಿಡಬೇಕು
ಮಾರನೆ ದಿನ ಪ್ಲಾಸ್ಟಿಕ್ ಹಾಳೆಯ ಮೇಲೆ ಸಣ್ಣ ಸಣ್ಣ ಉಂಡೆ ಮಾಡಿ ನೆರಳಿನಲ್ಲಿ ಮಳೆ ಮತ್ತು ಬಿಸಿಲಿನ ಆಶ್ರಯವಿರುವ ಜಾಗೆಯಲ್ಲಿ ಒಣಗಿದ ಹುಲ್ಲನ್ನು ಮುಚ್ಚಿ ಒಂದು ವಾರ ಕಳೆಯಲಿಕ್ಕೆ ಇಡುವುದು, ಈ ಉಂಡೆಗಳಲ್ಲಿ ಕನಿಷ್ಠ 50 ಪ್ರತಿಶತ ತೇವಾಂಶ ಕಾಪಾಡಿಕೊಳ್ಳಲು, ಅವಶ್ಯಕತೆಗೆ
ತಕ್ಕಂತೆ ನೀರನ್ನು ಚಿಮುಕಿಸುವುದು. ಒಂದು ವಾರ ಕಳೆತ ನಂತರ ಈ ಉಂಡೆಗಳು ತಿಕ್ಕಿದಾಗ ಹುಡಿ ಹುಡಿಯಾದ ಉತ್ತಮ ಘನಜೀವಾಮೃತ ತಯಾರಾಗುವುದು, ಇದನ್ನು ತಂಪಾದ ಪ್ರದೇಶದಲ್ಲಿ ಸಂಗ್ರಹಿಸಿಟ್ಟು ಮೇಲೆ ಗೋಣಿ ಚೀಲ ಹೊದಿಸಿ ನೀರನ್ನು ಚಿಮುಕಿಸುತ್ತಿರುವುದರಿಂದ ಇದರಲ್ಲಿರುವ ಪೋಷಕಾಂಶಗಳನ್ನು ಸಾಕಷ್ಟು ದಿವಸ ಕಾಪಾಡಿಕೊಂಡು ಬರಬಹುದು.
ಜೀವಾಮೃತ
ಒಂದು ಉತ್ತಮ ಜೈವಿಕ ಕ್ರಿಯೆ ಹೊಂದಿದ ದ್ರವರೂಪದ ಗೊಬ್ಬರ, ರೈತರು ಇದನ್ನು ತಮ್ಮ ಕ್ಷೇತ್ರದಲ್ಲಿಯೇ ತಯಾರಿಸಿ ಉಪಯೋಗಿಸಬಹುದು. ಇದು ಬೆಳೆಗಳಿಗೆ ಅವಶ್ಯಕ ಶೋಷಕಾಂಶಗಳಲ್ಲದೇ ಬೆಳೆ ಪ್ರಚೋಧಕಗಳನ್ನು ಮತ್ತು ಮಣ್ಣಿನ ಜೈವಿಕ ಕ್ರಿಯೆಗೆ ಅವಶ್ಯವಿರುವ ಸೂಕ್ಷ್ಮಾಣುಗಳನ್ನು ಮಣ್ಣಿಗೆ ಸೇರಿಸಿ ಮಣ್ಣಿನ ಫಲವತ್ತತೆ ವೃದ್ಧಿಸುತ್ತದೆ. ಇದನ್ನು ಪ್ರತಿ ಎಕರೆಗೆ 200 ಲೀಟರ ಪ್ರಮಾಣದಲ್ಲಿ ಭೂಮಿಯ ಮೇಲೆ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದ್ದಾಗ ಸಿಂಪರಣೆ ಮಾಡುವುದು ಅಥವಾ ನೀರಾವರಿಯಲ್ಲಿ ನೀರಿನ ಜೊತೆಗೆ ಹರಿಬಿಡಬಹುದು. ಅಲ್ಲದೇ ಬೆಳೆಗಳ ಬೆಳವಣಿಗೆ ಹಂತ, ಹೂವಾಡುವ ಹಂತ ಮತ್ತು ಕಾಯಿ/ ಕಾಳು ಕಟ್ಟುವ ಹಂತದಲ್ಲಿ ಪ್ರತಿಶತ 10 ರ ಪ್ರಮಾಣದಲ್ಲಿ ಬೆಳೆಯ ಮೇಲೆ ಸಿಂಪರಣೆ ಮಾಡಬೇಕು.
1.200 ಲೀ ನೀರು + 10 ಕಿ.ಗ್ರಾಂ, ಆಕಳ ಸಗಣಿ + 10 ಲೀ. ಗೋಮೂತ್ರ
2.2 ಕೆ.ಜಿ.ಬೆಲ್ಲ + 2 ಕೆ.ಜಿ. ದ್ವಿದಳ ಧಾನ್ಯಗಳ ಹಿಟ್ಟು
3.500 ಗ್ರಾಂ ನಷ್ಟು ಅರಳಿ, ಬನ್ನಿ, ಆಲದ ಗಿಡಗಳ ಕೆಳಗಿನ ಮಣ್ಣನ್ನು ಸೇರಿಸಿ
1 ವಾರದವರೆಗೆ ದಿನಕ್ಕೆ ಎರಡು ಮೂರು ಸಲ ಕೋಲಿನಿಂದ ಪ್ರದಕ್ಷಿಣಾಕಾರ ದಿಕ್ಕಿನಲ್ಲಿ ತಿರುಗಿಸಿ ಮಿಶ್ರಣ ಮಾಡಿದಾಗ ಚೆನ್ನಾಗಿ ಕಳೆತ ಜೀವಾಮೃತ ತಯಾರಾಗುತ್ತದೆ.
ಒಂದು ವಾರದ ಮೇಲೆ ಇದನ್ನು ಸಸ್ಯ ಪೋಷಕಾಂಶ ಒದಗಿಸಲು ಹಾಗೂ ಸಸ್ಯ. ಪ್ರಚೋದಕವಾಗಿ ವಿವಿಧ ಬೆಳೆಗಳಿಗೆ ಬಿತ್ತುವ ಸಮಯದಲ್ಲಿ ಮಣ್ಣಿನ ಮೇಲೆ ಸಿಂಪಡಿಸಬೇಕು ಅಥವಾ ನೀರಾವರಿಯಲ್ಲಿ ನೀರಿನೊಂದಿಗೆ ಬೆಳೆಗಳಿಗೆ ಒದಗಿಸಬಹುದು. ಬೆಳೆಗಳಿಗೆ ಕೂಡ ಈ ದ್ರಾವಣವನ್ನು ಸಿಂಪಡಿಸಬಹುದು. ಇದನ್ನು ಪ್ರತಿ ಹೆಕ್ಟೇರಿಗೆ 50 ಲೀ. ಪ್ರಮಾಣದಲ್ಲಿ ಉಪಯೋಗಿಸಬೇಕು. ಶೇಕಡಾ 10 ರಷ್ಟು ಜೀವಾಮೃತವನ್ನು ಬೆಳೆಗಳ ಮೇಲೆ ಸಿಂಪರಣೆಯಾಗಿ ಉಪಯೋಗಿಸಬೇಕು.
ಭೂ ಮೇಲ್ಮೈ ಹೊದಿಕೆ
ಸತತವಾಗಿ ಕೃಷಿ ಕ್ಷೇತ್ರದಲ್ಲಿ ಉತ್ಪಾದಿಸಲಾಗುತ್ತಿರುವ ಸಸ್ಯಾವಶೇಷಗಳು, ಕಳೆಗಳು, ಹಸಿರೆಲೆಗಳು, ಇತ್ಯಾದಿ ಭೂಮಿಗೆ ಮರುಕಳಿಸುವದರಿಂದ ಅಥವಾ ಆಚ್ಛಾದನೆ ಮಾಡುವದರಿಂದ `ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಕಾಪಾಡಿಕೊಂಡು ಬರುವುದು, ಅಚ್ಚಾದನೆಯಿಂದ ಮಣ್ಣಿನ ಭೌತಿಕ ಗುಣಧರ್ಮ ವೃದ್ಧಿಯಾಗುವುದು, ಜೀವ ಜಂತುಗಳ ವೈವಿಧ್ಯತೆ ಹಾಗೂ ಸಂಖ್ಯೆ ಹೆಚ್ಚಾಗಿ ಮಣ್ಣಿನ ಜೀವ ಚೈತನ್ಯ ಶಕ್ತಿ ಹೆಚ್ಚುವುದು, ಆಚ್ಚಾದನೆಯಿಂದ ಬಿದ್ದ ಮಳೆ ನೀರು ಸ್ಥಳದಲ್ಲಿಯೇ ಇಂಗುವದರಿಂದ ಮಣ್ಣು ಮತ್ತು ನೀರು. ಸಂರಕ್ಷಣೆಯಾಗಿ ಹಾಗೂ ಆವಿಯಾಗುವಿಕೆಯ ಪ್ರಮಾಣ ಕಡಿಮೆಯಾಗುವುದರಿಂದ ಬರ ನಿರೋಧಕತೆಯನ್ನು ಕೂಡ ಪಡೆಯಬಹುದು. ತೋಟಗಾರಿಕೆ ಬೆಳೆಗಳಲ್ಲಿ ಹಾಗೂ ವಾರ್ಷಿಕ ಬೆಳೆಗಳಾದ ಕಬ್ಬು, ಬಾಳೆ ಹಾಗೂ ಅಗಲ ಸಾಲುಗಳಲ್ಲಿ ಬೆಳೆಯುವ ಹತ್ತಿ, ತೊಗರಿ, ಸೂರ್ಯ ಕಾಂತಿ, ಗೋವಿನ ಜೋಳ, ಜೋಳ, -ಇತ್ಯಾದಿ ಬೆಳೆಗಳಲ್ಲಿ: ಸಾಲಿನ ನಡುವೆ ಆಚ್ಛಾದನೆ ಮಾಡುವದರಿಂದ ಸೂರ್ಯನ ಶಾಖದಿಂದ ಧರ್ಮಕ್ಕೆ ರಕ್ಷಿಸಿ ಸಾವಯವ ಇಂಗಾಲ ಬಿದ್ದ ಮಳೆ ನೀರು ಸಂರಕ್ಷಣೆ ಹೊಂದುವುದಲ್ಲದೆ ತೇವಾಂಶ ಆವಿಯಾಗುವ ಪ್ರಮಾಣ ಕಡಿಮೆಯಾಗುವುದು,
ಹೊದಿಕೆ ಬೆಳೆಗಳು
ಸಾಗುವಳಿ ಪ್ರದೇಶಗಳಲ್ಲಿ ದ್ವಿದಳ ಜಾತಿಗೆ ಸೇರಿದ ಬೇಗನೆ ಬೆಳೆದ ರ ಪಸರಿಸುವ ಆಲಸಂದಿ, ಹೆಸರು, ಉದ್ದು, ಸೋಯಾ ಅವರೆ ಅಥವಾ ಹಸಿರು 100 ಬೆಳೆಗಳಾದ ಹನು, ಡೈಂಚಾ, ಒಲ್ಲಿ ಪಸರಾ ಇತ್ಯಾದಿಗಳನ್ನು ಬೆಳದು ದ ಸೇರಿಸುವುದರಿಂದ ಅಥವಾ ಭೂ ಮೇಲೆ ಆಚ್ಚಾದನೆ ಮಾಡುವುದರಿಂದ ಮಣ್ಣಿನ ಫಲವತ್ತ ಹೆಚ್ಚುವುದು. ಆಗಲವಾದ ಸಾಲುಗಳಲ್ಲಿ ಬೆಳೆಯುವ ಕಬ್ಬು, ಗೋವಿನಜೋಳ, ಜೋಳ, ಸಜ್ಜೆ ತೊಗರಿ, ಹತ್ತಿ, ಔಡಲ ಬೆಳೆಗಳಲ್ಲಿ ನಡುವೆ ಆಹ್ಲಾದನೆ ಬೆಳೆಗಳನ್ನು ಬೆಳೆದು ಹೂವಾಡುವ ಹಂತಗಳಲ್ಲಿ ಭೂಮಿಗೆ ಸೇರಿಸುವುದು ಅಥವಾ ಅಚ್ಚಾದನೆ ಮಾಡುವುದರಿಂದ ಮಣ್ಣಿನ ಗುಣಧಮ ವೃದ್ಧಿಯಾಗುವುದು, ಬಹುವಾರ್ಷಿಕ ತೋಟಗಾರಿಕ ಬೆಳೆಗಳಲ್ಲಿ ವೆಲ್‌ವೆಟ್ ಬೀನ್ ಸ್ಟೈಲೋಜಾಂತಸ್, ಸಿಲ್ಯಾಟೋ, ಸೆಂಟೋಸೀಮಾ ಬೆಳೆಯುವುದರಿಂದ ನಿರಂತರವಾಗಿ ಸಾರಜನಕ ರೀಕರಣಗೊಳ್ಳುವುದು, ಹಾಗೂ ಸಾವಯವ ಪದಾರ್ಥಗಳು ಭೂ ಮೇಲೆ ಅಚ್ಚಾದನೆಗೊಂಡ ಮಣ್ಣು ಮತ್ತು ನೀರು ಸಂರಕ್ಷಣೆಯಾಗುವುದು ಮತ್ತು ಮಣ್ಣಿನ ಫಲವತ್ತತೆ ಹೆಚ್ಚುವುದು.
ಹಸಿರು ಗೊಬ್ಬರಗಳು
ದ್ವಿದಳ ಜಾತಿಗೆ ಸೇರಿದ ಹಸಿರು ಗೊಬ್ಬರದ ಬೆಳೆಗಳಾದ ಸಣಬು, ಡೈಯಿಂಜಾ, ಅಲಸಂದಿ, ಹೆಸರು, ಉದ್ದು, ಸೋಯಾ ಅವರೆ, ಲೂಸರ್ನ ಇತ್ಯಾದಿ, ಹೊಲದಲ್ಲಿ ಬೆಳೆದು ಇವು ಹೂ ಬಿಡುವ ಹಂತದಲ್ಲಿ ಭೂಮಿಗೆ ಮರುಕಳಿಸುವದರಿಂದ ಪೋಷಕಾಂಶಗಳ ಲಭ್ಯತೆಯ ಜೊತೆಗೆ ಮಣ್ಣಿನ ಭೌತಿಕ, ರಸಾಯನಿಕ ಹಾಗೂ ಜೈವಿಕ ಕ್ರಿಯೆ ಉತ್ತಮಗೊಳ್ಳುತ್ತದೆ.
ಹಸಿರೆಲೆಗೊಬ್ಬರ ಬೆಳೆಗಳು
ಹೊರಗಡೆಯಿಂದ ಬದುವಿನ ಮೇಲೆ, ಪಡೆ ಜಮೀನಗಳಲ್ಲಿ ಹಳ್ಳಕೊಳ್ಳಗಳ ಗುಂಟ ಗಿಂಡಗಳನ್ನು ಬೆಳೆದು ಆದರ ಹಸಿರೆಲೆಗಳು ಹಾಗೂ ಟೊಂಗೆಗಳನ್ನು ತಂದು ಭೂಮಿಗೆ ಸೇರಿಸುವ ಪದ್ಧತಿಗೆ ಹಸಿರೆಲೆಗೊಬ್ಬರವೆಂದು ಕರೆಯುವುದುಂಟು.
ಬಹುವಾರ್ಷಿಕ ಗಿಡವಾಗಿ ಬೆಳೆಯುವಂತಹ ಗ್ಲಿರಿಸಿಡಿಯಾ, ಹೊಂಗೆ, ಚೊಗ ಸುಬಾಬು, ದಲ್ಬರ್ಜಿಯಾ ಸಿಸ್ಸು ಕ್ಯಾಲಿಯಾಂಡಾ ಡೆಸ್‌ಮೆಂಥಸ್, ಬಹುವಾರ್ಷಿಕ ಆರಣ್ಯ ಕಳೆಗಳಾದ ಯುಪಟೋರಿಯಂ ಮತ್ತು ಕ್ಯಾಸಿಯಾ ಗಿಡಗಳನ್ನು ಹಸಿರೆಲೆಗೊಬ್ಬರಗಳಾಗಿ ಉಪಯೋಗಿಸಬಹುದು.
ದ್ರವರೂಪದ ಗೊಬ್ಬರಗಳು
ದ್ರವರೂಪದ ಗೊಬ್ಬರಗಳನ್ನು ಸಗಣಿ, ಗಂಜಲ, ಎರೆಹುಳು, ಹಾಗೂ ಇತರ ಸಸ್ಯಜನ್ಯ
ಪ್ರಾಣಿಜನ್ಯ ಪದಾರ್ಥಗಳನ್ನು ಮತ್ತು ಅಣುಜೀವಿಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಇವುಗಳಲ್ಲಿ ಗಂಜಲ, ಎರೆಜಲ, ಬಯೋಡೈಜೆಸ್ಟರ್, ಪಂಚಗವ್ಯ, ಸಸ್ಯಾಮೃತ, ಇ.ಎಮ್. ಸೂಕ್ಷ್ಮಾಣು ರಾವಣ ಮು ದವುಗಳು. ಇವುಗಳನ್ನು ಪ್ರತಿಶತ 10 ರ ಪ್ರಮಾಣದಲ್ಲಿ ಬೆಳೆಗಳ ಮೇಲೆ ಮಾಡುವ, ಕಾಯಿ ಕಾಳು ಕಟ್ಟುವ ಹಂತಗಳಲ್ಲಿ ಸಿಂಪರಣೆ ಮಾಡುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದು.
ಈ ಎಲ್ಲ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿ ಸ್ಥಳೀಯವಾಗಿ ಲಭ್ಯವಿರುವ ಪಾರಂಪರಿಕ ಕೃಷಿ ಜ್ಞಾನವನ್ನು ಹಾಗೂ ಇತ್ತೀಚೆಗೆ ಕೃಷಿ ಕ್ಷೇತ್ರದಲ್ಲಿ ನೈಸರ್ಗಿಕ ಕೃಷಿಗೆ ಪೂರಕವಾಗಿರುವ ವೈಜ್ಞಾನಿಕ ತಾಂತ್ರಿಕತೆಗಳನ್ನು ಬಳಸಿಕೊಂಡು ಸುಸ್ಥಿರ ಇಳುವರಿ ಪಡೆಯಬಹುದಲ್ಲದೇ ಬೇಸಾಯದ ಖರ್ಚನ್ನು ಕಡಿಮೆ ಮಾಡಿ ಹೆಚ್ಚಿನ ಆದಾಯಗಳಿಸಬಹುದು.
7000ರೂಪಾಯಿ ಸಹಾಯಧನದ ಲಾಭವನ್ನು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೈಸರ್ಗಿಕ ಕೃಷಿಯ ಕಡೆ ತಿರುಗಿದರೆ ಎಲ್ಲಾ ರೀತಿಯಿಂದ ಭೂಮಿಗೆ ಹಾಗೂ ಮನುಷ್ಯನ ಆರೋಗ್ಯಕ್ಕೆ ಕೂಡ ಒಳ್ಳೆಯದು.ಈ ಸಹಾಯಧನದ ಸಂಪೂರ್ಣ ಮಾಹಿತಿಯನ್ನು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಡೆಯಬಹುದು ಅಥವಾ ಇನ್ನೂ ಕೆಲವು ದಿನಗಳಲ್ಲಿ ನಮ್ಮ ವೆಬ್ಸೈಟ್ ನಲ್ಲಿ ಎಂದರೆ ಮುಂದಿನ ಅಂಕಣದಲ್ಲಿ ಪ್ರಕಟಿಸುತ್ತೇವೆ.