ಕೇಂದ್ರ ಸರಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶವನ್ನು ಸಂಗ್ರಹಿಸಲುವ ಉದ್ದೇಶದಿಂದ 379 ವರ್ಗಗಳ ಎಲ್ಲ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ಮಾರ್ಚ 31, 2022 ವರೆಗೆ ನೋಂದಣಿಯಾಗಿ ಸದರಿ ಅವಧಿಯಲ್ಲಿ ಅಪಘಾತಗೊಂಡ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾಯೋಜನೆಯಡಿ 2 ಲಕ್ಷ ರೂ.ಗಳ ಅಪಘಾತ ಪರಿಹಾರಕ್ಕಾಗಿ ಮಾರ್ಚ 31 ರೊಳಗಾಗಿ ಜಿಲ್ಲೆಯ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://bhoomisuddi.com/labor-insurance-scheme-notice-to-register-labor-insurance/
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಶುಕ್ರವಾರ ಮುಂಜಾನೆ ಉತ್ತರ ಸಿರಿಯಾದ ಅಲೆಪ್ಪೋ ನಗರದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಲೆಬನಾನಿನ ಸಶಸ್ತ್ರ ಗುಂಪಿನ ಐವರು ಸದಸ್ಯರು ಸೇರಿದಂತೆ 38 ಮಂದಿ ಹತರಾಗಿರುವುದಾಗಿ ತಿಳಿಸಿವೆ. ಮೂಲಗಳು ಸಿರಿಯಾದಲ್ಲಿ ಇರಾನ್ ಮಿತ್ರರಾಷ್ಟ್ರಗಳ ವಿರುದ್ಧ ಇಸ್ರೇಲ್ ನಡೆಸಿದ ದಾಳಿಯ ಪರಿಣಾಮ ಹಲವು ಮಂದಿ ಹತರಾಗಿದ್ದಾರೆ ಎಂದು ವರದಿಯಾಗಿವೆ.
ಅಕ್ಟೋಬರ್ 7 ರಂದು ಇರಾನ್ ಬೆಂಬಲಿತ ಪ್ಯಾಲೇಸ್ಟಿನಿಯನ್ ಬಣ ಹಮಾಸ್ ಇಸ್ರೇಲ್‌ಗೆ ನುಗ್ಗಿದ ನಂತರ ಆರಂಭವಾದ ದಾಳಿಯಾ ನಂತರ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಸಿರಿಯಾದಲ್ಲಿ ಹಿಜ್ಜುಲ್ಲಾ ಮತ್ತು ಇರಾನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎರಡರ ಮೇಲೆಯೂ ತನ್ನ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ. ಇಸ್ರೇಲ್ ಈ ಪ್ರದೇಶದಲ್ಲಿ ಇರಾನ್‌ನ ಮಿತ್ರರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳ ಪೂರೈಸಲು ಅಡ್ಡಿಪಡಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗಿದೆ, ಆದರೆ ಅಕ್ಟೋಬರ್ 7 ರಿಂದ ದಾಳಿಗಳು ತುಂಬಾ ಭಯಾನಕವಾಗಿವೆ ಎಂದು ಹೇಳಲಾಗಿದೆ.
ಏಪ್ರಿಲ್ 12ರಂದು ಶ್ರೀರಾಮುಲು ನಾಮಪತ್ರ ಸಲ್ಲಿಕೆ
ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಸುವುದಾಗಿ ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಗುರುವಾರ ಹೇಳಿದ್ದಾರೆ. ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸದಿದ್ದರೂ, ಸಂಡೂರು ಶಾಸಕ ಇ ತುಕಾರಾಂ ಪಕ್ಷದ ಕಾರ್ಯಕರ್ತರೊಂದಿಗೆ ನಿಯಮಿತವಾಗಿ ಸಭೆ ನಡೆಸುತ್ತಿದ್ದು, ಪಕ್ಷದ ಟಿಕೆಟ್ ಸಿಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ. ಬಲ್ಲ ಮೂಲಗಳ ಪ್ರಕಾರ, ತುಕಾರಾಂ ಅವರು ತಮ್ಮ ಪುತ್ರಿಗೆ ಟಿಕೆಟ್ ಕೊಡಿಸಲು ಯತ್ನ ನಡೆಸಿದ್ದರು. ಆದರೆ, ಸಚಿವ ಸಂತೋಷ್ ಲಾಡ್ ಅವರು ತುಕಾರಾಂ ಅವರನ್ನೇ ಕಣಕ್ಕಿಳಿಯುವಂತೆ ಮನವೊಲಿಸಿದ್ದಾರೆ ಎಂದು ತಿಳಿಸಿವೆ.
ಈ ನಡುವೆ ಹೇಳಿಕೆ ನೀಡಿರುವ ಶ್ರೀರಾಮುಲು ಅವರು, ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಸುತ್ತೇನೆ. ಇದಕ್ಕೂ ಪೂರ್ವದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಪ್ರತೀ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸುವೆ ಎಂದು ಹೇಳಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಂಡೂರು ಶಾಸಕ ತುಕಾರಾಂ ಅವರನ್ನು ಕಣಕ್ಕಿಳಿಸುವ ತೀರ್ಮಾನವನ್ನು ಆ ಪಕ್ಷದ ಮುಖಂಡರು ಕೈಗೊಂಡಿದ್ದಾರೆ. ಆದರೆ, ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಇದು ಅವರ ಆಂತರಿಕ ವಿಚಾರ. ಪ್ರಬಲ ನಾಯಕರ ಹುಡುಕುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ತುಕಾರಾಂ ಸ್ಪರ್ಧೆಗಿಳಿದರೂ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುತ್ತೇನೆಂದು ಹೇಳಿದರು.
ಬಾಣಂತಿಯರ ನವಜಾತ ಶಿಶು ಆರೋಗ್ಯ ರಕ್ಷಣೆಗೆ ಆಧ್ಯತೆ ನೀಡಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ ಬಾಗಲಕೋಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಗುಂಡನಪಲ್ಲೆ ಗ್ರಾಮದಲ್ಲಿ ‘ಬಾಣಂತಿಯರ ನವಜಾತ ಶಿಶು ಆರೋಗ್ಯ ರಕ್ಷಣೆ” ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್ ಎಸ್ ಅಂಗಡಿಯವರು, “ನಿಮ್ಮ ಆರೋಗ್ಯ ನಮ್ಮ ಬದ್ಧತೆ” “ಆರೋಗ್ಯವಂತ ತಾಯಿ ಆರೋಗ್ಯವಂತ ಮಗು”ಸದೃಢ ಸಮಾಜಕ್ಕೆ ಪೂರಕ ಎಂಬ ಘೋಷಣೆಯೊಂದಿಗೆ, ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ತಾಯಿ ಎದೆ ಹಾಲು ಹೆಚ್ಚುವುದು, ವೈಯಕ್ತಿಕ ಸ್ವಚ್ಛತೆಗ ಆಧ್ಯತೆ ನೀಡಿ,ಮನೆಯ ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ನವಜಾತ ಶಿಶುಗಳ ಆರೋಗ್ಯ ರಕ್ಷಣೆಗೆ ಸಮಯಕ್ಕೆ ಸರಿಯಾಗಿ ಮಾರಕ ರೋಗಗಳ ತಡೆಗೆ, ಮುಂಜಾಗ್ರತೆಯಾಗಿ ತಪ್ಪದೇ ತಮ್ಮ ಮಕ್ಕಳಿಗೆ ಎಲ್ಲ ಲಸಿಕೆಗಳನ್ನು ಹಾಕಿಸಿ.
ತಾಯಿ ಮಗುವಿಗೆ ಆರೋಗ್ಯದ ಸಮಸ್ಯೆಗಳು ಕಾಣಿಸಿದರೆ ನಿರ್ಲಕ್ಷ್ಯ ಬೇಡ ಹತ್ತಿರ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ. ಹಾಗೂ ಎಲ್ಲ ತಾಲೂಕಾ, ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ವಿಶೇಷ ವಿಭಾಗದ ವಿಶೇಷ ತಜ್ಞರ ಚಿಕಿತ್ಸಾ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ತಾಯಿಂದಿರು ಬಾಣಂತಿಯರು ಆರೋಗ್ಯದ ದೃಷ್ಟಿಯಿಂದ ಅಂತರ ಹೇರಿಗೆ ಪಾಲಿಸಿ, ವಿವಿಧ ಕುಟುಂಬ ಕಲ್ಯಾಣ ಯೋಜನೆಗಳಾದ ತಾತ್ಕಾಲಿಕ ವಿಧಾನ ಹಾಗೂ ಶಾಶ್ವತ ವಿಧಾನ ಕುಟುಂಬ ಕಲ್ಯಾಣ ಸೇವೆಗಳ ಲಾಭ ಪಡೆಯಬೇಕು.
ತಾಯಿ ಬಾಣಂತಿಯರ ನವಜಾತ ಶಿಶು ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯ ಮುಂಜಾಗ್ರತೆ ಕ್ರಮಗಳ ಪಾಲಿಸಿ ಆರೋಗ್ಯಕರ ಜೀವನ ಸಾಗಿಸಿ. “ಸರ್ವರೂ ಆರೋಗ್ಯ ರಕ್ಷಣೆಯಿಂದ ಸ್ವಸ್ಥ ಸಮಾಜ ನಿರ್ಮಿಸೋಣ” ಎಂದು ಬಾಣಂತಿಯರಿಗೆ ತಾಯಿಂದಿರಿಗೆ ಪಾಲಕರಿಗೆ “ತಾಯಿ ನವಜಾತ ಶಿಶು ಆರೋಗ್ಯ ರಕ್ಷಣೆಗೆ” ಅರಿವು ಜಾಗೃತಿ ಮೂಡಿಸಿದರು.ತಾಯಿ ನವಜಾತ ಶಿಶು ಆರೋಗ್ಯ ರಕ್ಷಣೆಗೆ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ತಾಯಿಂದಿರು ಬಾಣಂತಿಯರು ಗರ್ಭಿಣಿಯರು, ಮುಖಂಡರು ಭಾಗವಹಿಸಿದ್ದರು.