ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರದ ಛಾಯೆಯಿಂದ ರೈತರ ಬೆಳೆ ಹಾನಿಗೊಳಗಾಗಿದ್ದು, ಹಾನಿಗೊಳಗಾದ 27 ಲಕ್ಷ ರೈತರಿಗೆ 1 ರಿಂದ 4 1.27 ಹಂತದಲ್ಲಿ ಒಟ್ಟು 25.29 ಕೋಟಿ ರೂ.ಗಳ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಬರದಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟು 193805 ಹೆಕ್ಟರ್ ಕ್ಷೇತ್ರದ ಬೆಳೆ ಹಾನಿಯಿಂದ 199776 ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಿ ನಿಯಮಾವಳಿಗಳನ್ವಯ 26469 ಲಕ್ಷ ರೂ.ಗಳ ಇನ್‌ಪುಟ್ ಸಬ್ಸಿಡಿ, ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಪೂಟ್ಟ ತಂತ್ರಾಂಶ ಹಾಗೂ ಬೆಳೆ ಸಮೀಕ್ಷೆ ವರದಿ ಆಧಾರದ ಮೇಲೆ ಪರಿಹಾರ ಪಾವತಿಸಲು ಕ್ರಮ ವಹಿಸಲಾಗಿರುತ್ತದೆ.
ಪ್ರಸ್ತುತ ಸರ್ಕಾರದಿಂದ 1 ರಿಂದ 4ನೇ ಹಂತದವರೆಗೆ ಜಿಲ್ಲೆಯ ಒಟ್ಟು 163184 ರೈತರಿಗೆ ತಲಾ 2 ಸಾವಿರ ರೂ.ಗಳಂತೆ ಒಟ್ಟು ರೂ 32.35 ಕೋಟಿ ಪರಿಹಾರ ಹಣ ಪಾವತಿಸಲು ಅನುಮೋದನೆ ನೀಡಲಾಗಿದ್ದು, ಈ ಪೈಕಿ ಪ್ರಸ್ತುತ 1 ರಿಂದ 4 ನೇ ಹಂತದವರೆಗೆ ಜಿಲ್ಲೆಯ ಒಟ್ಟು 127532 ರೈತರಿಗೆ ತಲಾ 2 ಸಾವಿರ ರೂ.ಗಳಂತೆ ಒಟ್ಟು 25.29 ಕೋಟಿ ರೂ.ಗಳ ಪರಿಹಾರ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬಾಕಿ ಉಳಿದ ರೈತರಿಗೂ ಕೂಡ ಈಗಾಗಲೇ ಡಿಬಿಟಿ ಮೂಲಕ ಪರಿಹಾರ ಜಮೆ ಮಾಡಲು ಅನುಮೋದನೆ ನೀಡಲಾಗಿದ್ದು, ಸದರಿ ಪ್ರಕ್ರಿಯೇ ಪ್ರಗತಿಲ್ಲಿರುತ್ತದೆ. ಜಿಲ್ಲೆಯಲ್ಲಿ ಆಕೌಂಟ್ ರೀಚ್ ಮಾಕ್ಸಿಮಮ್ ಕ್ರೆಡಿಟ್ ಲಿಮಿಟ್, ಅಕೌಂಟ್ ಬ್ಲಾಕ್ಸ್, ಇನ್‌ವಾಲಿಡ್ ಆಕೌಂಟ್, ಆಧಾರ ನಾಟ್ ಮ್ಯಾಪ್ಸ್, ಅಕೌಂಟ್ ಕ್ಲೋಸ್ಟ್, ಅಕೌಂಟ್ ಹೋಲ್ಡರ್ ಎಕ್ಸಪೈರ್, ಇನ್ ಆಕ್ಟಿವ್ ಆಧಾರ, ಎನ್ ಪಿಸಿಐ ಸೀಡಿಂಗ್ ಇಸು, ಎನಿ ಅದರ್ ರಿಜನ್ ಹೀಗೆ ವಿವಿಧ ಕಾರಣಗಳಿಂದ ಒಟ್ಟ 530 ರೈತರಿಗೆ ಬರ ಪರಿಹಾರ ಜಮೆಯಾಗಿರುವದಿಲ್ಲ ಎಂದು ತಿಳಿಸಿದ್ದಾರೆ.
1 ರಿಂದ 4 ನೇ ಹಂತದಲ್ಲಿ 530 ರೈತರಿಗೆ ವಿವಿಧ ಕಾರಣಗಳಿಂದ ಹಣ ಜಮೆಯಾಗದೇ ಇರುವುದರಿಂದ, ಸದರಿ ರೈತರ ಮಾಹಿತಿಯನ್ನು ತಹಶೀಲ್ದಾರರು ಪರಿಶೀಲಿಸಿ, ಆಯಾ ರೈತರಿಗೆ ಹೊಸ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಹಾಗೂ ಈಗಾಗಲೇ ಇರುವ ಬ್ಯಾಂಕ್ ಖಾತೆಯನ್ನು ಸರಿಪಡಿಸುಕೊಳ್ಳುವಂತೆ ಸಲಹೆ ನೀಡಲು ಕ್ರಮವಹಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಸೈನಿಕರಿಂದ ತಾತ್ಕಾಲಿಕವಾಗಿ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ
ವಿಜಯಪುರ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಕಚೇರಿಯ ಸಾಮಾನ್ಯ ಪತ್ರ ವ್ಯವಹಾರ, ಲೆಕ್ಕ ಪತ್ರ, ಪತ್ರ ವ್ಯವಹಾರ ಕಾರ್ಯ ನಿರ್ವಹಣೆಗಾಗಿ ಅರ್ಹರಿಂದ ತಾತ್ಕಾಲಿಕವಾಗಿ ಮಾಜಿ ಸೈನಿಕರಿಂದ ತಾತ್ಕಾಲಿಕವಾಗಿ ಕ್ಲರ್ಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್,ಲೆಕ್ಕಪತ್ರ ಜ್ಞಾನ,ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪತ್ರ ವ್ಯವಹಾರ ಮಾಡುವ ಅನುಭವ ಇರಬೇಕು. 50 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಉಪ ನಿರ್ದೇಶಕರ ಕಾರ್ಯಲಯ, ಸೈನಿಕ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆ, ಡಿ.ಸಿ ಕಾಂಪೌಂಡ್ ಹತ್ತಿರ ವಿಜಯಪುರ ಇವರಿಗೆ ಅರ್ಜಿಯನ್ನು ಸಲ್ಲಿಸುವಂತೆ ಪ್ರಕಟಣೆಯಲ್ಲಿ ಉಪ ನಿರ್ದೆಶಕರು ಸೈನಿಕ ಕಲ್ಯಾಣ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆ : ಜಿಲ್ಲೆಯಲ್ಲಿ ಶೇ.91 ರಷ್ಟು ನೋಂದಣಿ
ಜಿಲ್ಲೆಯಲ್ಲಿ 4,63,958 ಗೃಹ ಬಳಕೆ ಸ್ಥಾವರಗಳಿದ್ದು, ಅದರಲ್ಲಿ ಜನವರಿ 2024ರ ಅಂತ್ಯಕ್ಕೆ 4,21,240 ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 4,08,981 ಗ್ರಾಹಕರು ಗೃಹಜ್ಯೋತಿಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದಾರೆ. ಈ ಮೂಲಕ ಇಲಾಖೆಗೆ 17.67ಕೋಟಿ ರೂ ಅನುದಾನ ಲಭ್ಯವಾಗಿದೆ. ಗೃಹಜ್ಯೋತಿ ಯೋಜನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಗರಿಷ್ಠ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತದೆ.
ಗೃಹಜ್ಯೋತಿ ನೋಂದಣಿಗಾಗಿ ಸಾರ್ವಜನಿಕರು ಕರ್ನಾಟಕ ಒನ್ ಕೇಂದ್ರ, ಗ್ರಾಮ ಒನ್ ಕೇಂದ್ರ, ಸೇವಾ ಸಿಂಧು ಪೋರ್ಟಲ್, ಹೆಸ್ಕಾಂ ಉಪ ವಿಭಾಗದ ಕಚೇರಿಯ ಸೌಜನ್ಯ ಕೌಂಟರ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿ ನೋಂದಾಯಿಸಲು ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆ ಅವಶ್ಯಕತೆ ಇದೆ ಎಂದು ವಿಜಯಪುರ ಹೆಸ್ಕಾಂನ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಪ್ರತಿಶತ 90 ಗೃಹಲಕ್ಷ್ಮೀ ಯೋಜನೆ ನೋಂದಣಿ. ಗೃಹಲಕ್ಷ್ಮೀ ಯೋಜನೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಕುಟುಂಬದ ಯಜಮಾನಿಯಾಗಿರುವ ಪಡಿತರ ಚೀಟಿಗಳ ಸಂಖ್ಯೆ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮೊದಲನೇ ಕಂತಿನಲ್ಲಿ 4,05,651 ಫಲಾನುಭವಿಗಳಿಗೆ 8113.02 ಲಕ್ಷ ರೂ. ಎರಡನೇ ಕಂತಿನಲ್ಲಿ 4,22,799 ಫಲಾನುಭವಿಗಳಿಗೆ 8455.98 ಲಕ್ಷ ರೂ. ಮೂರನೇಯ ಕಂತಿನಲ್ಲಿ 4,30,048 ಫಲಾನುಭವಿಗಳಿಗೆ 8600.96 ಲಕ್ಷ ರೂ. ನಾಲ್ಕನೇ ಕಂತಿನಲ್ಲಿ 4,30,849 ಫಲಾನುಭವಿಗಳಿಗೆ 8616.98 ಲಕ್ಷ ರೂ. ಹಾಗೂ ಐದನೇ ಕಂತಿನಲ್ಲಿ 3,84.763 ಫಲಾನುಭವಿಗಳಿಗೆ 8455.98 ಲಕ್ಷ ರೂಗಳಂತೆ ಒಟ್ಟು 41,482.20 ಲಕ್ಷ ರೂ. ಅನುದಾನ ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ : ಐದು ವರ್ಷಗಳಲ್ಲಿ 1.88 ಕೋಟಿ ರೂ. ಕಡಿತ
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ 2017-18 ರಿಂದ ಕರ್ನಾಟಕಕ್ಕೆ 1.87.867 ಕೋಟಿ ರೂ.ಗಳ ನಷ್ಟವಾಗಿದ್ದು ಇದರಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಅವಕಾಶವನ್ನು ತಪ್ಪಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ಎಸಗಿರುವ ಆರ್ಥಿಕ ದೌರ್ಜನ್ಯದ ಕೇಂದ್ರ ದ ವಿರುದ್ದ ಜಂತರ್ ಮಂತರ್ ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.