Breaking
Thu. Dec 19th, 2024
Spread the love

‌ನನ್ನ Canara Bank ಖಾತೆಗೆ INR 2,874.00 ಹಣ 11/07/2024 ರಂದು ಜಮಾ ಆಗಿದೆ. ಈ ಹಣವು ಯಾರ ಬಳಿ 5 ಎಕರೆ ಕಿಂತ ಕಡಿಮೆ ಹೊಲ ಇರುತ್ತದೆ ಅವರ ಖಾತೆಗೆ ಹಣ ಬರುತ್ತದೆ.

ನಿಮ್ಮ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://parihara.karnataka.gov.in/service92/

Year/ವರ್ಷ = 2023-24
Season = Kharif
Calamity Type = Drought
Get Data/ ಹುಡುಕು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆಮೇಲೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದು ಮಾಡಿ. Fetch ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಮುಂದೆ ಒಂದು ಲಿಸ್ಟ್ ಬರುತ್ತದೆ. ಎಲ್ಲಿ ನಿಮ್ಮ ಹೆಸರು ಹುಡುಕಿ.

18 ಲಕ್ಷಕ್ಕೆ ಎತ್ತು ಖರೀದಿ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ದ್ಯಾವನಗೌಡ ಪಾಟೀಲ ಅವರು ಸಾಕಿದ ಎತ್ತನ್ನು ರಾಯಬಾಗ ತಾಲ್ಲೂಕಿನ ಇಡ್ನಾಳ ಗ್ರಾಮದ ರೈತ ಸದಾಶಿವ ಢಾಂಗೆಅವರು 18 ಲಕ್ಷಕ್ಕೆ ಖರೀದಿಸಿದ್ದಾರೆ. ಆರು ವರ್ಷ ವಯಸ್ಸಿನ ಈ ಎತ್ತಿನ ಮೂಲ ಹೆಸರು ‘ಹಿಂದೂಸ್ತಾನ್’. ಈಗ ರೈತ ಇಟ್ಟ ಹೆಸರು ‘ಟೈಗ‌ರ್’. ಶರ್ಯತ್ತಿನಲ್ಲಿ ಇದರ ಹೆಸರು ಚಿರತೆ. ದ್ಯಾವನಗೌಡ ಅವರು ಇದನ್ನು ಮೂರು ವರ್ಷ ವಯಸ್ಸಿನ ಕರು ಇದ್ದಾಗ 1 ಲಕ್ಷಕ್ಕೆ ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಅದು 17 ಲಕ್ಷ ಲಾಭ ಮಾಡಿಕೊಟ್ಟಿದೆ. ದಿನವೂ ಎರಡು ಹೊತ್ತು ಮೈ ತೊಳೆದು, ಹಾಲು, ಮೊಟ್ಟೆ, ಕಾರೀಖು, ಗೋಡಂಬಿ, ಜವಿಗೋಧಿ, ಗೋವಿನ ಜೋಳ, ಹಸಿರು ಮೇವು ಮುಂತಾದವು ತಿನ್ನಿಸಿ ಪೈಲ್ವಾನನಂತೆ ಬೆಳೆಸಿದ್ದಾರೆ. ತೆರೆದ ಬಂಡಿ ಓಟದ ಸ್ಪರ್ಧೆಯಲ್ಲಿ ಈ ಎತ್ತು ದಾಖಲೆ ಬರೆದಿದೆ.

ಮೂರು ವರ್ಷಗಳಲ್ಲಿ 25 ಮೈದಾನಗಳಲ್ಲಿ ಓಡಿ ಬಹುಮಾನ ಗಿಟ್ಟಿಸಿದೆ. ಈವರೆಗೆ 60 ಗ್ರಾಂ ಚಿನ್ನ, 4 ಬೈಕ್, 10 ಲಕ್ಷಕ್ಕೂ ಅಧಿಕ ನಗದು ಗೆದ್ದಿದೆ. ಹಾಗೂ ಮಹಾರಾಷ್ಟ್ರದ ಜತ್, ಉಮರಾಣಿ, ಬಿಳ್ಳೂರ ಮುಂತಾದ ಕಡೆಗೆ ಮೈದಾನಗಳಲ್ಲಿ ‘ಟೈಗರ್’ ದಾಖಲೆ ಬರೆದಿದೆ. ಜೂನ್‌ನಲ್ಲಿ ಮೂಡಲಗಿಯ ಶಿವಬೋಧರಂಗ ಜಾತ್ರೆಯಲ್ಲಿ ಸದಾಶಿವ ಢಾಂಗೆ ಅವರ ‘ಸಿದ್ಧ’ ಎಂಬ ಎತ್ತು ಹಾಗೂ ಇದೀಗ ಖರೀದಿಸಿದ ‘ಟೈಗ‌ರ್’ ಜೋಡೆತ್ತಿನ ಸ್ಪರ್ಧೆಯಲ್ಲಿ ಪ್ರಥಮ ಬಂದಿವೆ. 50 ಸಾವಿರ ನಗದು ಬಹುಮಾನ ಗೆದ್ದಿವೆ. ಬಾಗಲಕೋಟೆ ಜಿಲ್ಲೆಯ ಕೆಸರಕೊಪ್ಪದಲ್ಲಿ ಕೂಡ 50 ಸಾವಿರ ಗೆದ್ದಿವೆ. ಟೈಗರ್ ಎತ್ತನ್ನು 18 ಲಕ್ಷಕ್ಕೆ ಖರೀದಿಸಿದ್ದೇನೆ. ‘ಸಿದ್ಧ’ ಎತ್ತಿಗೂ ಮಹಾರಾಷ್ಟ್ರದ ಪುಣೆ ಮೂಲದ ರೈತರೊಬ್ಬರು 21 ಲಕ್ಷ ಬೆಲೆ ಕಟ್ಟಿದ್ದರು. ಆದರೂ ನಾನು ಮಾರಲಿಲ್ಲ’ ಎಂದು ಇಟ್ನಾಳ ರೈತ ಸದಾಶಿವ ಢಾಂಗೆ ತಿಳಿಸಿದರು.

ಅಕ್ರಮ ಮನೆ ಸಕ್ರಮ ಗೊಳಿಸಲು ಮನವಿ

ತಾಲೂಕ ಪೈಕಿ ಯಲಿಶಿರೂರ ಗ್ರಾಮ ಪಂಚಾಯತಿಗೆ ಒಳಪಡುವ ಶಿರುಂಜ ಗ್ರಾಮದ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವಂತೆ ತಹಶೀಲ್ದಾರರಿಗೆ ಗ್ರಾಮದ ಅಕ್ರಮ ಸಕ್ರಮ ನಿವಾಸಿಗಳು ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು ಯಲಿಶಿರೂರ ಗ್ರಾಮ ಪಂಚಾಯತಿಗೆ ಒಳಪಡುವ ಶಿರುಂಜ ಗ್ರಾಮದ 40 ಬಡ ಕುಟುಂಬಗಳು ವಾಸಿಸುವುದಕಕೆ ಮನೆ ಇಲ್ಲದ ಕಾರಣ ಸರ್ಕಾರಿ ಜಾಗೆಯಲ್ಲಿ ಸುಮಾರು ದಿನಗಳಿಂದ ಸಾಲ ಸೂಲ ಮಾಡಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ.

ಈ ಜಾಗೆಯನ್ನು ಅಕ್ರಮ ಸಕ್ರಮ ಯೋಜನೆಯಲ್ಲಿ ತಮ್ಮ ಸನ್ನಿಧಿಗೆ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಿ ಸುಮಾರು 5 ವರ್ಷ ಕಳೆದರು ಈ ಯೋಜನೆ ಕಾನೂನಿನ ಕ್ರಮದಲ್ಲಿ ನೋಂದಾಯಿಸಿಕೊಡುವ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿದ್ದು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೊಂದರೆಯಲ್ಲಿ ಇರುವುದಿರಿಂದ ಮಾನ್ಯರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಡ ಕುಟುಂಬಗಳಿಗೆ ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಫಕ್ಕೀರೇಶಪ್ಪ ಶಿಂಧೆ, ಲಕ್ಷ್ಮೀ ಮಂ. ನಿಂಗರಡ್ಡಿ ಹೆಸರಡ್ಡಿ, ಬಸವರಾಜ ಪೂಜಾರ, ಉಡಚಪ್ಪ ಪೂಜಾರ, ಅರ್ಜುನ ಲೆಂಕೆನ್ನವರ, ಸುಭಾಸ ಮಳ್ಳಣ್ಣವರ, ಬಸವರಾಜ ಹುಲಿಕಟ್ಟಿ, ಅಲ್ಲಿಸಾಬ ನದಾಫ, ಚನ್ನವೀರಪ್ಪ ಹಡಪದ, ರಂಗಪ್ಪ ಲೆಂಕೆಣ್ಣವರ, ಮಾರುತಿ ಪೂಜಾರ, ಇಬ್ರಾಹಿಂಸಾಬ ನದಾಫ, ಹನಮಂತ ಲೆಂಕೆಣ್ಣವರ, ಅಶೋಕ ಶಿಂಧೆ, ಶರಣಪ್ಪ ಲೆಂಕೆಣ್ಣವರ, ಇಬ್ರಾಹಿಂಸಾಬ ನದಾಫ, ಮುತ್ತುಂಸಾಬ ನದಾಫ ಉಪಸ್ಥಿತರಿದ್ದರು.

ಹಾಲಿನ ಹೆಚ್ಚುವರಿ ಹಣ ರೈತರಿಗೆ ನೀಡಲಿ : ಲಿಂಗರಾಜ

ಅಧಿಕಾರ ಹಿಡಿಯುವದಕ್ಕಾಗಿ ಮತದಾರರಿಗೆ ಆಮಿಷ ಯೋಜನೆಗಳನ್ನ ಜಾರಿ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಪ್ರತಿಯೊಬ್ಬರಿಂದಲೂ ಹಗಲು ದರೋಡೆ ಮಾಡುತ್ತಿರುವದನ್ನ ನಿಲ್ಲಿಸಲಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾಲ್ಲಾಪೂರ ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊಟ್ಟು ಮೇವು ಧಾನ್ಯ ಹಿಂಡಿ ಬೆಲೆ, ಆಳಿನ ಕೂಲಿ ಹೆಚ್ಚಾಗಿರುವ ಕಾರಣ ಪಶುಪಾಲನೆ ಲಾಭದಾಯಕವಾಗಿ ಉಳಿದಿಲ್ಲ, ಪರ್ಯಾಯ ಆದಾಯವು ಇಲ್ಲದ ಕಾರಣಕ್ಕಾಗಿ ಉಪಕಸಬು ಆಗಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಸಮರ್ಪಕ ಮಳೆ ಬೆಳೆ ಬೆಲೆ ಇಲ್ಲದ ಕಾರಣಕ್ಕಾಗಿ ಕೃಷಿ ರೈತರ ಪಾಲಿಗೆ ಜೂಜಾಟವಾಗಿದೆ ಕಾರಣ ರೈತರ ಹಿತ ಕಾಪಾಡುವದು ಸರ್ಕಾರದ ಹೊಣೆಗಾರಿಕೆಯಾಗಿದ್ದು ಹೆಚ್ಚುವರಿ ಹಾಲಿನ ದರದ ಹಣವನ್ನು ಹಾಲಿನ ಉತ್ಪಾದಕರಿಗೆ ನೀಡಬೇಕು ಎಂದು ಹೇಳಿರುವರು.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಜೊತೆಗೆ ನಾಲ್ಕು ಸಾವಿರ ಸಹಾಯಧನ ಯೋಜನೆ, ಹನ್ನೊಂದು ಲಕ್ಷ ರೈತ ಕುಟುಂಬಗಳ ಹೊಂದಿರುವ ರೈತರಿಗೆ ಹತ್ತು ಸಾವಿರ ಸಹಾಯಧನದ ಭೂ ಸಿರಿ ಯೋಜನೆ, ಭೂ ರಹಿತ ಮಹಿಳಾ ಕಾರ್ಮಿಕರಿಗೆ ಮಾಸಿಕ ಐದನೂರು ನೀಡುವದು, ಪ್ರತಿ ಎಕರೆಗೆ ಡೀಜಲ್ ಸಹಾಯ ಧನವಾಗಿ ಎರಡುನೂರಾ ಐವತ್ತು ರೂ ನೀಡುವ ರೈತ ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸಿದ ಸಿದ್ದರಾಮಯ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5ರೂ ನಂತೆ ನೀಡುವ ಸಹಾಯಧನವನ್ನು ಈವರೆಗೂ ನೀಡದೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಏರಿಕೆ ಮಾಡಿರುವ ಹಾಲಿನ ಬೆಲೆಯ ಹಣವನ್ನು ಉತ್ಪಾದಕ ರೈತರಿಗೆ ನೀಡುವ ಆದೇಶವನ್ನು ಸರ್ಕಾರ ಕೂಡಲೇ ಹೊರಡಿಸಬೇಕು ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದ ರೈತಪರ ಯೋಜನೆಗಳನ್ನ ಮರಳಿ ಜಾರಿಗೆ ತರಬೇಕು ಎಂದು ಆಗ್ರಹಿಸಿರುವರು.

ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳ ದಾಳಿ : 15 ಟನ್ ನಿಷೇಧಿತ ಪ್ಲಾಸ್ಟಿಕ್ ವಶ

ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದ ಮೊದಲ ಹಂತದಲ್ಲಿರುವ ರಜನಿ ಪಾಲಿಪ್ಯಾಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ನಿಷೇಧಿತ ಏಕಬಳಕೆಯ 15 ಟನ್‌ಗೂ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಮಂಗಳವಾರ ಮಧ್ಯಾಹ್ನ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ತಪಾಸಣೆ ನಡೆಸಿ ಪ್ಲಾಸ್ಟಿಕ್ ಜಪ್ತಿ ಮಾಡಿದರು.

ನಿಷೇಧಿಕ ಪ್ಲಾಸ್ಟಿಕ್ ಬಳಕೆ ತಡೆಗೆ ಮಾರುಕಟ್ಟೆ ಪ್ರದೇಶದಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅಲ್ಲಿ ಸಿಕ್ಕ ಪ್ಲಾಸ್ಟಿಕ್ ಎಲ್ಲಿಂದ ಪೂರೈಕೆಯಾಗಿದೆ ಎಂಬುದನ್ನು ಪರಿಶೀಲಿಸಿದಾಗ ಅದು ನಗರದಲ್ಲಿ ಉತ್ಪಾದನೆಯಾಗಿದ್ದು ಎಂಬುದು ತಿಳಿಯಿತು ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು. ಈ ಕಂಪನಿ 2011ರಲ್ಲಿ ಆರಂಭವಾಗಿದೆ. ಗುಜರಾತ್‌ ನಿಂದ ಕಚ್ಚಾ ವಸ್ತುಗಳನ್ನು ಖರೀದಿಸಿ ಇಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿದ್ದರು. ಕಂಪನಿ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಸಿಬ್ಬಂದಿ ಅಲ್ಲಿ ಉತ್ಪಾದನೆ ಮಾಡುತ್ತಿರುವ ಪ್ಲಾಸ್ಟಿಕ್ 50 ಮೈಕ್ರಾನ್‌ಗಿಂತ ಹೆಚ್ಚಿದೆ ಎಂದು ಹೇಳಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸಿದಾಗ ಅವು 30-35 ಮೈಕ್ರಾನ್ ಇರುವುದು ತಿಳಿಯಿತು ಎಂದರು.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಏಕಬಳಕೆ ನಿಷೇಧಿತ ಪ್ಲಾಸ್ಟಿಕ್ ನಿರ್ಮೂಲನೆಗೆ ಮಹಾನಗರ ಪಾಲಿಕೆಯಿಂದ ಎಲ್ಲ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಈಶ್ವರ ಉಳ್ಳಾಗಡ್ಡಿ ಆಯುಕ್ತ ಮಹಾನಗರ ಪಾಲಿಕೆ ಆಯುಕ್ತ ಪ್ರಕಾರ 50 ಮೈಕ್ರಾನ್‌ಗಿಂದ ಹೆಚ್ಚಿರುವ ಪ್ಲಾಸ್ಟಿಕ್ ಉತ್ಪಾದನೆ ಮಾಡಲು ಮಾತ್ರ ಅವಕಾಶ ಇದೆ. ಏಕಬಳಕೆಯ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುವುದು ಕಾನೂನುಬಾಹಿರ, ಕಂಪನಿಯಲ್ಲಿ 20 ಟನ್‌ಗೂ ಹೆಚ್ಚು ಕಚ್ಚಾವಸ್ತು ಪತ್ತೆಯಾಗಿದೆ ಎಂದು ಹೇಳಿದರು. ಎಷ್ಟು ವರ್ಷಗಳಿಂದ ಈ ರೀತಿ ಪ್ಲಾಸ್ಟಿಕ್ ಉತ್ಪಾದನೆ ಮಾಡಲಾಗುತ್ತಿದೆ.

ಎಲ್ಲೆಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಕಂಪನಿಯ ವಾಪಾರ ಪರವಾನಗಿ (ಟ್ರೇಡ್ ಲೈಸನ್ಸ್) ರದ್ದು ಪಡಿಸಲು ಅವಕಾಶ ಇದ್ದು, ಈ ಬಗ್ಗೆ ಕೈಗಾರಿಕಾ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲ ಕೈಗಾರಿಕೆಗಳ ಮುಖ್ಯಸ್ಥರ ಸಭೆಯನ್ನು ಶೀಘ್ರದಲ್ಲಿ ಕರೆಯಾಲಾಗುವುದು. ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡದಂತೆ ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗುವುದು ಎಂದರು. ಹುಬ್ಬಳ್ಳಿ ಧಾರವಾಡದಲ್ಲಿಯೂ ಕೆಲವು ಕಂಪನಿಗಳು ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಅಕ್ರಮವಾಗಿ ಪ್ಲಾಸ್ಟಿಕ್ ಉತ್ಪಾದನೆ ಪತ್ತೆಗೆ ವಲಯ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುವುದು. ಒಂದು ವೇಳೆ ನಿಷೇಧಿತ ಪ್ಲಾಸ್ಟಿಕ್ ಕಂಡು ಬಂದರೆ ದಂಡ ವಿಧಿಸುವ ಜತೆಗೆ ಟ್ರೇಡ್ ಲೈಸನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಹಾನಗರ ಪಾಲಿಕೆ ಅಧಿಕಾರಿ ಮಲ್ಲಿಕಾರ್ಜುನ ಬಿ.ಎಂ., ಇದ್ದರು.

Related Post

Leave a Reply

Your email address will not be published. Required fields are marked *