Breaking
Thu. Dec 19th, 2024

ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಕೊರೆಸಲು 3.5ಲಕ್ಷ ರೂಪಾಯಿ ಸಹಾಯಧನ ಈಗಲೇ ಅರ್ಜಿ ಸಲ್ಲಿಸಿ

Spread the love

ಆತ್ಮೀಯ ರೈತ ಬಾಂಧವರೇ,


ಗಂಗಾ ಕಲ್ಯಾಣ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ವರ್ಗದ ರೈತರ ಉದ್ದಾರಕ್ಕಾಗಿ ತಂದ ಯೋಜನೆಗಳಲ್ಲಿ ಒಂದು. ಗ್ರಾಮೀಣ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಕಡಿಮೆ ಇರುತ್ತದೆ ಆದ ಕಾರಣ ಕೊಳವೆ ಬಾವಿ ಕೊರೆಸುವುದು ಅತ್ಯಂತ ಅವಶ್ಯವಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಘಟಕದ ವೆಚ್ಚವನ್ನು 4 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. 3.5 ಲಕ್ಷ ಸಹಾಯಧನವಾಗಿದೆ. ಬಾಕಿ 50 ಸಾವಿರ
ರೂಪಾಯಿಗಳನ್ನು ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಇತರೆ ಎಲ್ಲಾ ಜಿಲ್ಲೆಗಳ ರೈತರಿಗೆ 2 ಲಕ್ಷ ಸಹಾಯಧನವಿದ್ದು 50 ಸಾವಿರವನ್ನು ವಾರ್ಷಿಕ ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ.ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನ ಗಂಗಾ ಕಲ್ಯಾಣ ನೀರಾವರಿ ಯೋಜನೆಯನ್ನು ಪ್ರವರ್ಗ-1ರಡಿಯಲ್ಲಿ ಬರುವ ಕ್ರಮ ಸಂಖ್ಯೆ: 53(ಎ) ಯಿಂದ 53(ಎ) ವರೆಗಿನ ಉಪ್ಪಾರ ಮತ್ತು ಇದರ ಉಪಜಾತಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ/ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ನಿಗಮದ ವೆಬ್‌ ಸೈಟ್ http://upparadevelopment.karnataka.gov.in d.
ನಿಗಮದ ಸಹಾಯವಾಣಿ ಸಂಖ್ಯೆ:7026288888ಗೆ ಬೆಳಿಗ್ಗೆ 10:00 ರಿಂದ ಸಂಜೆ 5:30ರವರೆಗೆ ಸಂಪರ್ಕಿಸಬಹುದಾಗಿದೆ

ಕರ್ನಾಟಕ ಗಂಗಾ ಕಲ್ಯಾಣ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ?

ಗ್ರಾಮ ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ. ಮೊದಲು ಕೆಳಗೆ ನೀಡಿರುವ ವೆಬ್ ಸೈಟ್ ಗೆ ಭೇಟಿ ನೀಡಿ
https://kmdc.karnataka.gov.in/ . ಆನ್‌ಲೈನ್ ಸರ್ವಿಸಸ್ ಟ್ಯಾಬ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ಕೆಳಗೆ ತೋರಿಸುವ “ಆನ್‌ಲೈನ್ ಅಪ್ಲಿಕೇಶನ್‌” ಲಿಂಕ್ ಅನ್ನು ಕ್ಲಿಕ್ ಮಾಡಿ. ಅದರ ನಂತರ https://kmdc.karnataka.gov.in/info-3/ONLINE+APPLICATION/kn ನೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆನ್‌ಲೈನ್ ಅಪ್ಲಿಕೇಶನ್ ಪುಟವು ತೆರೆಯುತ್ತದೆ.
ಅಲ್ಲಿ “ಗಂಗಾ ಕಲ್ಯಾಣ ಯೋಜನೆ – ಅಪ್ಲೈ ಮಾಡಲು ಇಲ್ಲಿ ಕ್ಲಿಕ್‌ ಮಾಡಿ” ಎಂಬ ಬಟನ್‌ ಒತ್ತಿರಿ. ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, KMDC ಕರ್ನಾಟಕ ಲೋನ್ ಲಾಗಿನ್ ಪುಟವು ಕಾಣಿಸಿಕೊಳ್ಳುತ್ತದೆ. ಈ ಪುಟದಲ್ಲಿ, ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆಯಲು “ಗಂಗಾ ಕಲ್ಯಾಣ ಯೋಜನೆ” ಲಿಂಕ್ ಅನ್ನು ಕ್ಲಿಕ್ ಮಾಡಿ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-01-2023 ರಿಂದ 02-03-2023 ರವರೆಗೆ ನಿಗದಿ ಪಡಿಸಲಾಗಿದೆ. ಅರ್ಜಿಯನ್ನು ರೈತರು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್‌ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ
ಸಲ್ಲಿಸಬಹುದಾಗಿರುತ್ತದೆ. ಗಂಗಾ ಕಲ್ಯಾಣ ನೀರಾವರಿ ಯೋಜನೆ. ಸೇವಾ ಸಿಂಧು ತಂತ್ರಾಂಶದ ಮೂಲಕ ಮಾತ್ರವೇ ಅರ್ಜಿಗಳನ್ನು ಸಲ್ಲಿಸಬೇಕು

ಯಾವ ಯಾವ ರೈತರು ಈ ಯೋಜನೆಯ ಸೌಲಭ್ಯವನ್ನು ಅನುಭವಿಸಬಹುದು?

ರೈತನು ಕನಿಷ್ಠ ಒಂದು ಎಕರೆ 20 ಗುಂಟೆಯಿಂದ ಗರಿಷ್ಠ 5 ಎಕರೆ ಹೊಲವನ್ನು ಹೊಂದಿರಬೇಕು. ಅವನು ವ್ಯವಸಾಯ ವೃತ್ತಿಯನ್ನು ಅವಲಂಬಿಸಬೇಕು. ಅವರು ಈ ರಾಜ್ಯದ ಕಾಯಂ ನಿವಾಸಿ ಆಗಿರಬೇಕು. ವಾರ್ಷಿಕ ಅವರ ಕುಟುಂಬದ ಆದಾಯ ಗ್ರಾಮೀಣ ಪ್ರದೇಶಗಳಿಗೆ 81,000 ಹಾಗೂ ನಗರ ಪ್ರದೇಶಗಳಿಗೆ ಒಂದು ಲಕ್ಷ ಮೀರಿರಬಾರದು.
ಅರ್ಜಿದಾರರ ವಯಸ್ಸು 18 ರಿಂದ 55 ಇರಬೇಕು. ಶೇ. 80 ಫಲಾನುಭವಿಗಳನ್ನು ಆಯಾ ಜಿಲ್ಲೆಗಳ ಹಾಗೂ ಮತಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಗಳು ಆಯ್ಕೆ ಮಾಡುತ್ತವೆ. ಉಳಿದ ಶೇ. 20 ಫಲಾನುಭವಿಗಳನ್ನು ಸಮಾಜಕಲ್ಯಾಣ ಸಚಿವರು (ಶೇ. 15) ಹಾಗೂ ನಿಗಮಗಳ ಅಧ್ಯಕ್ಷರು (ಶೇ.5) ಆಯ್ಕೆ ಮಾಡುತ್ತಾರೆ.

ಎಷ್ಟು ಅಡಿಗಳವರೆಗೆ ಈ ಕೊಳವೆ ಬಾವಿಯನ್ನು ಕೊರಿಸಬೇಕು?
ಬಯಲು ಸೀಮೆ ಭಾಗದ – 500 ರಿಂದ 1 ಸಾವಿರ ಅಡಿಯವರೆಗೆ, ಕರಾವಳಿ ಭಾಗದ – 300 ರಿಂದ 500 ಅಡಿಯವರೆಗೆ, ಮಲೆನಾಡು ಭಾಗದ – 100 ಅಡಿಯವರೆಗೆ ಉಚಿತವಾಗಿ ಬೋರ್ ವೆಲ್ ಕೊರೆಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ :- ಮತ್ತೊಂದು ಹಂತದ ಬೆಳೆಹಾನಿ ಪರಿಹಾರ ಬಿಡುಗಡೆ ಮೊಬೈಲ್ ನಂಬರ್ ಹಾಕಿ ಬೆಳೆಹಾನಿ ಪರಿಹಾರ ಚೆಕ್ ಮಾಡಿ

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ಜಮೀನಿನ ಪಹಣಿ (RTC), ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್, ಸಣ್ಣ/ಅತಿ ಸಣ್ಣ ರೈತರ ದೃಢೀಕರಣ ಪತ್ರ ರೈತರ FID ಸಂಖ್ಯೆ,ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಭೂ ಕಂದಾಯ ಪಾವತಿಸಿದ ರಸೀದಿ.

ಇದನ್ನೂ ಓದಿ :- ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ

ಇದನ್ನೂ ಓದಿರಿ:- ಕುರಿ ಹಾಗೂ ಮೇಕೆ ಖರೀದಿಸಲು ಪ್ರೋತ್ಸಾಹಧನ ಈಗಲೇ ಅರ್ಜಿ ಸಲ್ಲಿಸಿ

Related Post

Leave a Reply

Your email address will not be published. Required fields are marked *