Breaking
Tue. Dec 17th, 2024

ಹೆಚ್ಚುವರಿ ರೈತರಿಗೆ 3000 ರೂಪಾಯಿ ಜೀವನೋಪಾಯವಾಗಿ ಜಮಾ ಆಗಿದೆ.

Spread the love

ಆತ್ಮೀಯ ರೈತ ಬಾಂಧವರೇ, ಈಗಾಗಲೇ 7.04 ಲಕ್ಷ ರೈತರಿಗೆ ರೂಪಾಯಿ ರೂ. 3000 ಹಣವು ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಜೀವನೋಪಾಯವಾಗಿ ಸರ್ಕಾರವು ಬಿಡುಗಡೆ ಮಾಡಿ ಆ ಹಣವು ನಿಮ್ಮ ಖಾತೆಗೆ ಜಮಾ ಕೂಡ ಆಗಿದೆ. ಅದೇ ರೀತಿಯಾಗಿ ಹೆಚ್ಚುವರಿ ರೈತರು ಎಂದರೆ ಮೊದಲಿಗೆ ಜಮಾ ಆಗದ ರೈತರಿಗೆ ಈಗ ಮತ್ತೆ ರೂ.3,000 ಜಮಾ ಆಗುತ್ತದೆ. ಅದರ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡುವುದು ಎಂದು ಈ ಕೆಳಗೆ ತಿಳಿಸಿದ್ದೇವೆ. ಮೊದಲಿಗೆ ಈ ಕೆಳಗೆ ಕಾಣುತ್ತಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ. https://parihara.karnataka.gov.in/service89/PaymentDetailsReport.aspxಇದಾದ ನಂತರ ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಹೋಬಳಿ ಹಾಗೂ ವರ್ಷ ಇದ್ದಲ್ಲಿ 2023-24 ಮತ್ತು ವೃತವನ್ನು ಆಯ್ಕೆ ಮಾಡಿ ಹಾಗೆಯೇ ಗೆಟ್ ರಿಪೋರ್ಟ್ ಎಂದು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮ್ಮ ಊರಿನ ಯಾವ ಯಾವ ಜನತೆಗೆ 3000 ಹಣಗಳು ಬರುತ್ತದೆ ಎಂದು ಒಂದು ಲಿಸ್ಟ್ ಅನ್ನು ನಿಮಗೆ ಕೊಡುತ್ತಾರೆ. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿ. ನಿಮ್ಮ ಹೆಸರು ಅದರಲ್ಲಿ ಕಾಣುತ್ತಿದ್ದರೆ ನಿಮಗೆ 3000 ಹಣಗಳು ಬರುತ್ತವೆ ಎಂದು ಅರ್ಥ. ನಿಮ್ಮ ಹೆಸರು ಅಲಿಸ್ನಲ್ಲಿ ಇರದೆ ಹೋದಲ್ಲಿ ಪೇಮೆಂಟ್ ಫೀಲ್ಡ್ ಎಂಬ ಕಾಲಂ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಿ. ಅದರಲ್ಲೂ ನಿಮ್ಮ ಹೆಸರು ಇದ್ದರೆ ನಿಮಗೆ 3000 ಗಳು ಜಮವಾಗುವುದಿಲ್ಲ ಎಂದು ಅರ್ಥ. ಯಾಕೆ ಸರ್ಕಾರವು ಜೀವನೋಪಾಯವಾಗಿ 3000 ಹಣವನ್ನು ಕೊಡುತ್ತಿದ್ದಾರೆ??ಹಲವಾರು ರೈತರು ಪ್ರತಿ ವರ್ಷವೂ ಕೂಡ ಬರಗಾಲ ಅಥವಾ ಪ್ರವಾಹದಿಂದ ಅಥವಾ ಕೀಟಗಳಿಂದ ರೋಗಗಳಿಂದ ಹಾಗೆಯೇ ಹತ್ತು ಹಲವು ಕಾರಣದಿಂದ ತಮ್ಮ ಫಸಲುಗಳನ್ನು ತೆಗೆಯಲು ಅಸಹಾಯಕವಾಗಿರುತ್ತಾರೆ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ರೈತರಿಗೆ ಉಪಯೋಗವಾಗಲಿ ಎಂದು 3000 ಜೀವನೋಪಾಯವಾಗಿ ನಿರುತ್ತಿದ್ದಾರೆ. ಈಗಾಗಲೇ ಬೆಳೆ ಪರಿಹಾರ, ಬೆಳೆ ವಿಮೆ, ಕಿಸಾನ್ ಸಮ್ಮಾನ್ ನಿಧಿ ಇಂತಹ ಹಲವಾರು ಯೋಜನೆಗಳನ್ನು ರೈತರಿಗಾಗಿ ಮೀಸಲಿಟ್ಟ ಸರ್ಕಾರ ಪ್ರತಿಯೊಂದು ಯೋಜನೆಯನ್ನು ರೈತರಿಗೆ ಉಪಯೋಗವಾಗುವಂತೆ ಹಣವನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೀವನೋಪಾಯವಾಗಿ 3000 ಹಣಗಳನ್ನು ಕೂಡ ನೀಡುತ್ತಿದ್ದಾರೆ. ಹಾಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಹಣದಿಂದ ತಮಗೆ ಉಪಯುಕ್ತವಾಗಿ ಜೀವನ ಸಾಗಿಸಬಲ್ಲರು. 26.06.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಸ್ವಲ್ಪ ಕಡಿಮೆ ಇರಬಹುದು. ಕೊಡಗಿನ ಭಾಗಮಂಡಲ, ತಲಕಾವೇರಿ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದ್ದರೆ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನ ಪ್ರಕಾರ ಜೂನ್ 28ರಿಂದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ರಾಜ್ಯದಾದ್ಯಂತ ಮುಂಗಾರು ಮಳೆ ಕ್ಷೀಣಿಸದರೂ, ಜುಲೈ ಮೊದಲ ವಾರದಲ್ಲಿ ಮತ್ತೆ ಚುರುಕಾಗುವ ಲಕ್ಷಣಗಳಿವೆ.25.06.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ ಜಿಲ್ಲೆಯಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದೊಂದಿಗೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನ ಪ್ರಕಾರ ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲವಾಗಿರುವ ಲಕ್ಷಣಗಳಿದ್ದು, ಮಳೆಯ ಕೊರತೆ ಉಂಟಾಗಲಿದೆ.* ಕರಾವಳಿ, ಮಲೆನಾಡು ಹಾಗೂ ಒಳನಾಡು ಭಾಗಗಳಲ್ಲಿ ಮುನ್ಸೂಚನೆಯಲ್ಲಿ ಇದ್ದಷ್ಟು ಮಳೆಯಾಗುತ್ತಿಲ್ಲ. ಜೂನ್ 28ರ ನಂತರ ಕರಾವಳಿ ಭಾಗಗಳಲ್ಲಿಯೂ ಮಳೆ ಕ್ಷೀಣಿಸುವ ಲಕ್ಷಣಗಳಿವೆ.24.06.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :ಉಡುಪಿ ಜಿಲ್ಲೆಯಾದ್ಯಂತ ಭಾರಿ (red alert) ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ ಉಡುಪಿ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಉತ್ತಮ ಮಳೆ ಇದ್ದರೆ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ (red alert) ಮಳೆಯ ಮುನ್ಸೂಚೆನೆ ಇದೆ. ಕೊಡಗು ಸಹ ಭಾರಿ ಮಳೆಯ ಮುನ್ಸೂಚೆನೆ ಇದೆ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತಗಳು ಉತ್ತಮವಾಗಿ ಬೀಸುತ್ತಿದ್ದರೂ ಕರಾವಳಿಯಿಂದ ಈಚೆ ಬರುತ್ತಿದ್ದಂತೆ ದುರ್ಬಲಗೊಳ್ಳುತ್ತಿದೆ. ಆ ಕಾರಣದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಥವಾ ಮುನ್ಸೂಚನೆಯಲ್ಲಿ ಕಾಣಿಸುವಷ್ಟು ಮಳೆಯಾಗುತ್ತಿಲ್ಲ. ಜುಲೈನಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ರಾಜ್ಯದ ಈಗಿನ ಈ ಮಳೆಯ ವಾತಾವರಣವು ಜೂನ್ 28ರ ತನಕ ಮುಂದುವರಿಯುವ ಲಕ್ಷಣಗಳಿವೆ. ಜೂನ್ 29ರಿಂದ ಉತ್ತರ ಭಾರತದಲ್ಲಿ ಮಳೆ ಹೆಚ್ಚಾಗುವ ಸೂಚನೆ ಇದೆ.

Related Post

Leave a Reply

Your email address will not be published. Required fields are marked *