Breaking
Wed. Dec 18th, 2024
Spread the love

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಸೌಲಭ್ಯ ಯೋಜನೆಗಳಿಗೆ ಅರ್ಜಿ ಆಹ್ವಾನ

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನ ಬೆಸ್ತ, ಅಂಬಿಗ/ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ ಯೋಜನೆಗಳ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಆ.31 ರೊಳಗಾಗಿ https://ambigaradevelopment.karnataka.gov.in

ಸೇವಾಸಿಂಧು ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ ಸೈಟ್ ಅಥವಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಅಥವಾ ಕಚೇರಿಯ ದೂರವಾಣಿ:0831-2402163 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಸಾಲ ಸೌಲಭ್ಯ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು- ಶೈಕ್ಷಣಿಕ ನೇರಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ ಈ ಯೋಜನೆಯಲ್ಲಿ ಕನಿಷ್ಠ 2 ಎಕರೆ ಹೊಂದಿರಬೇಕು, ಸ್ವಯಂ ಉದ್ಯೋಗ ನೇರಸಾಲ (ಬ್ಯಾಂಕ್‌ಗಳ ಸಹಯೋಗದೊಂದಿಗೆ), ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವ್ಯಾಸಂಗ ಯೋಜನೆ, ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆಗಳ ಸಹಾಯಧನ ಸಾಲ ಸೌಲಭ್ಯಗಳನ್ನು ನೀಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆಗಳು

ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಸರ್ಕಾರದ ಆದೇಶ ಸಂಖ್ಯೆ ಸಕಇ 225/ಬಿಸಿಎ/2000 ದಿನಾಂಕ 30-03-2002 ರನ್ವಯ ವಿಶ್ವಕರ್ಮ ಸಮುದಾಯ ಹಾಗು ಅದರ ಉಪ ಜಾತಿಗಳಿಗೆ ಸೇರಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು, ನಿಗಮದ/ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗರ ಮಾತ್ರ ಸೌಲಭ್ಯ ಒದಗಿಸಲಾಗುವುದು.

ಆಸಕ್ತರು ಆ.31 ರೊಳಗಾಗಿ ಅರ್ಜಿಗಳನ್ನು ಸೇವಾ ಸಿಂಧು ಮೂಲಕ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ನಿಗಮದ https://kvcdcl.karnataka.gov.in ಅಥವಾ ಕಛೇರಿಯ ದೂರವಾಣಿ:080-22374848/2402163, 7899899039 ಸಂಖ್ಯೆಗೆ ಅಥವಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ) ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಎ ವಿದ್ಯಾರ್ಥಿನಿಗೆ ಸಹಾಯಧನ ವಿತರಣೆ

ಗದಗ : ಗದಗ ಬೆಟಗೇರಿ ಕೆ.ಹೆಚ್.ಡಿ.ಸಿ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಡಿಯಲ್ಲಿ ಹತ್ತನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಹಿರಿಯ ಜೀವಿಗಳಿಗೆ ಸನ್ಮಾನ, ವಾಕಿಂಗ್ ಸ್ಟಿಕ್, ಸಿಎ ಓದುತ್ತಿರುವ ವಿದ್ಯಾರ್ಥಿನಿಗೆ ಸಹಾಯಧನ ವಿತರಿಸಿ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳು ಕೇವಲ ದಿನಾಚರಣೆ ಆಚರಿಸಿ ಕೈ ತೊಳೆದುಕೊಳ್ಳಬಾರದು ಇಲಾಖೆ ಸರ್ಕಾರ ಜನಪ್ರತಿನಿಧಿಗಳು ಎಲ್ಲ ವೃತ್ತಿಪರ ನೇಕಾರರೊಂದಿಗೆ ಸಭೆ ನಡೆಯಿಸಿ ಸಮಸ್ಯೆಗಳನ್ನು ಅರಿತು ಅವನತಿಯ ಹಂತದಲ್ಲಿರುವ ನೇಕಾರಿಕೆ ಮತ್ತು ನೇಕಾರರನ್ನು ಮೇಲೇತ್ತಲು ಶಾಶ್ವತ ಸಮರ್ಪಕ ಯೋಜನೆ ಜಾರಿಗೆ ತರಬೇಕು.

ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಂತೆ ನೇಕಾರ ಸಮ್ಮಾನ ಯೋಜನೆ, ಕಟ್ಟಡ ಕಾರ್ಮಿಕರಂತೆ ಕಾರ್ಮಿಕ ಸೌಲಭ್ಯ, ನೇಕಾರರ ಉತ್ಪಾದನೆಯ ನೇರಮಾರುಕಟ್ಟೆಗೆ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಹಾನಗರಗಳಲ್ಲಿ ಮಾರಾಟ ಮಳಿಗೆಗಳನ್ನು ಒದಗಿಸಿಕೊಡಬೇಕು ಸರ್ಕಾರದ ಅನೇಕ ಇಲಾಖೆಗಳಿಗೆ ನೇಕಾರರಿಂದಲೇ ಬಟ್ಟೆಗಳನ್ನು ಸರ್ಕಾರ ಒದಗಿಸಿ ನಿರಂತರವಾಗಿ ಉದ್ಯೋಗ ಸಿಗುವಂತಾಗಬೇಕು, ಮಾನ್ಯ ಪ್ರಧಾನಮಂತ್ರಿಗಳು ವಾರಾಣಸಿ ದತ್ತು ಪಡೆದುಕೊಂದಂತೆ ಕರ್ನಾಟಕದ ನೇಕಾರರನ್ನು ದತ್ತು ಪಡೆದುಕೊಂಡು ಉತ್ತೇಜಿಸಬೇಕೆಂದರು ಅಲ್ಲದೆ ಕಳೆದ ಸರ್ಕಾರದ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದ್ದು ಮರುತನಿಖೆ ಮಾಡಿ ಖಜಾನೆಗೆ ಹಣ ಮರಳಿ ಪಡೆದು ನಿಗಮದ ಅಧ್ಯಕ್ಷರು ಶಾಮಿಲಾಗಿದ್ದರಿಂದ ಅವರನ್ನು ಶಿಕ್ಷೆಗೊಳಪಡಿಸಬೇಕು ಇಲ್ಲವಾದರೆ ಸಾಲದ ಸುಳಿಯಲ್ಲಿರುವ ನಿಗಮ ಮುಚ್ಚುವ ಸ್ಥಿತಿಯಲ್ಲಿದೆ ನೇಕಾರರು ಬೀದಿಗೆ ಬರುತ್ತಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಕಾಕಿಯವರು ಕಾರ್ಯಕ್ರಮ ಆಯೋಜನೆ ಮಾಡಿ ಅನೇಕರಿಗೆ ಸನ್ಮಾನ ಸಹಕಾರ ಎಲ್ಲ ನೇಕಾರ ಬಾಂಧವರಿಗೆ ಖುಷಿ ಎಂದರು ಮಧುಸಾ ಮೆಹರವಾಡೆ, ರಮೇಶ್ ಹತ್ತಿಕಾಳ ಹಾಗೂ ಜನಸ್ನೇಹಿ ಪೊಲೀಸ್ ಇಲಾಖೆಯ ಪಿಎಸ್‌ಐ ಮಾತನಾಡಿ ಕಾನೂನಿನ ಕುರಿತು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ರಾಜು ದಡಿ, ವಿರೂಪಾಕ್ಷ ಐಲಿ, ಶಂಕ್ರಪ್ಪ ಮಾದಗುಂಡಿ, ಮಲ್ಲೇಶಪ್ಪ ಕರಾಬ್ಬಿನ್ನಿ, ಎಲ್ಲಪ್ಪ ಕುಣಿ, ಪ್ರಭು ಅನ್ನಪೂರ್ಣ ಹುಳ್ಳಿ ಇನ್ನೂ ಅನೇಕ ನೇಕಾರರು ಭಾಗವಹಿಸಿದ್ದರು. ಶಂಕರ ಕಾಕಿ ನಿರೂಪಿಸಿದರು.

ಲೈಸೆನ್ಸ್ ಇಲ್ಲದೇ ವ್ಯಾಪಾರ ವಹಿವಾಟು ಅಪರಾಧ : ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ

ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ಪ್ರಕರಣ 256ರ ಪ್ರಕಾರ ಯಾವುದೇ ವ್ಯಕ್ತಿಯು ಮುನ್ಸಿಪಲ್ ಕಮಿಷನರ್ ಅಥವಾ ಚೀಪ್ ಆಫೀಸರನು ಮಂಜೂರು ಮಾಡಿದ ಲೈಸೆನ್ಸ್ ಇಲ್ಲದೇ ಅಥವಾ ಅದರ ನಿಬಂಧನೆಗಳಿಗೆ ಆನುಗುಣವಾಗಿ ಯಾವುದೇ ವ್ಯಾಪಾರವನ್ನು ಮಾಡತಕ್ಕದ್ದಲ್ಲ. ಒಂದು ವೇಳೆ ಮುನ್ಸಿಪಲ್ ಕೌನ್ಸಿಲ್‌ನ ಪರವಾನಿಗೆ ಇಲ್ಲದೇ ವ್ಯಾಪಾರ ಮಾಡಿದ್ದಲ್ಲಿ ಅಂತವರ ವಿರುದ್ಧ ದಂಡ ವಿಧಿಸಿ. ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕರ್ನಾಟಕ ಮುನ್ಸಿಪಲ್ ಕಾಯ್ದೆ ಅವಕಾಶ ಕಲಿಸಿದೆ ಎಂದು ರಾಯಚೂರು ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯ ಹಿರೇಮಠ ಅವರು ತಿಳಿಸಿದ್ದಾರೆ.

ರಾಯಚೂರು ನಗರದ ಎಲ್ಲಾ ವಹಿವಾಟು ಉದ್ಯಮಿಗಳು ತಾವು ಮಾಡುತ್ತಿರುವ ವ್ಯಾಪಾರದ ಅಂಗಡಿಗಳ ಕಡ್ಡಾಯವಾಗಿ ಲೈಸೆನ್ನು ಪಡೆಯಬೇಕು. ತಪ್ಪಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ 257ನೇ ಪ್ರಕರಣದಡಿ ತಮ್ಮ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು. ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಪಿಓಪಿ ಗಣಪತಿ

ಮೂರ್ತಿಗಳ ನಿಷೇಧ

ನಗರದ ಎಲ್ಲಾ ಉದ್ಯಮೆದಾರರು ರಾಯಚೂರು ನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್ ಮತ್ತು ಪಿ.ಓ.ಪಿಗಳಿಂದ ಹಾಗೂ ಆಯಿಲ್ ಪೇಂಟಿಂಗ್‌ಳಿಂದ ತಯಾರಿಸಿದ ಗಣಪತಿ ಮೂರ್ತಿಗಳ ಉತ್ಪಾದನೆ, ಸಾಗಾಟ, ಮಾರಾಟ ಹಾಗೂ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಒಂದು ವೇಳೆ ಯಾವುದೇ ಉದ್ಯಮೆದಾರರು ಏಕಬಳಕೆ ಪ್ಲಾಸ್ಟಿಕನ್ನು ಉಪಯೋಗ ಮಾಡುತ್ತಿರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ವಹಿಸುವುದಲ್ಲದೇ 25,000/- ໖໐໖ 2,50,000/-. ದಂಡ ವಿಧಿಸಲಾಗುವುದು. ಎಲ್ಲಾ ಉದ್ಯಮ ಮಿತ್ರರು ಕಡ್ಡಾಯವಾಗಿ ಏಕಬಳಕೆ ಪ್ಲಾಸ್ಟಿಕ್ ಅನ್ನು ಬಳಸುವುದು ಮಾರಾಟ ಮಾಡುವುದು ಸಾಗಾಟ ಮಾಡುವುದು ಹಾಗೂ ಬಳಕೆಗೆ ಉತ್ತೇಜಿಸುವುದನ್ನು ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ ನಿಬರ್ಂಧಿಸಿದೆ.

ಯಾವುದೇ ಕಾರಣಕ್ಕೂ ಬಳಕೆ ಪ್ಲಾಸ್ಟಿಕ್ ಪಿ.ಓ.ಪಿ. ಹಾಗೂ ಆಯಿಲ್ ಪೇಂಟ್ ಗಳಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಉತ್ಪಾದನೆ, ಸಾಗಾಟ, ಮಾರಾಟ ಹಾಗೂ ಪ್ರಚಾರ ಮಾಡುವುದು ಕಂಡಬದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ರಸ್ತೆಗಳ ಮೇಲೆ ಬೀಡಾಡಿ ದನಗಳ ನಿಯಂತ್ರಣ: ನಗರದ ಮುಖ್ಯ ರಸ್ತೆಗಳ ಮೇಲೆ ಕೆಲವು ಸಾಕು ದನಗಳು ಆಡ್ಡಾದಿಡ್ಡಿಯಾಗಿ ಸಂಚರಿಸಿ, ಅಪಘಾತಗಳು ಸಂಭವಿಸುತ್ತಿರುವುದು. ನಗರಸಭೆಯ ಗಮನಕ್ಕೆ ಬಂದಿದ್ದು, ಈಗಾಗಲೇ ಹಲವಾರು ಬಾರಿ ಬಿಡಾಡಿ ದನಗಳನ್ನು ನಿಯಂತ್ರಿಸಲು ನಗರಸಭೆ ಪ್ರಯತ್ನಿಸಿ, ಸಂಬಂಧಪಟ್ಟವರಿಗೆ ದಂಡ ವಿಧಿಸಿದೆ ಹಾಗಾಗಿಯೂ ಕೂಡ ಬಿಡಾಡಿ ದನಗಳು ನಗರದ ರಸ್ತೆಗಳು ಅಥವಾ ಇಕ್ಕೆಲಗಳಲ್ಲಿ ಸಂಚರಿಸುವುದು ಕಂಡುಬಂದಿದೆ. ಕೂಡಲೇ ಜಾನುವಾರು ಮಾಲೀಕರು ಅವುಗಳನ್ನು ಕಟ್ಟಿ ಹಾಕಲು ಸೂಚಿಸಿದೆ. ತಪ್ಪಿದ್ದಲ್ಲಿ ಅವುಗಳನ್ನು ಬಿಡಾಡಿ ದನಗಳು ಎಂದು ಪರಿಗಣಿಸಿ ದಂಡ ವಿಧಿಸುವುದಲ್ಲದೆ ದನಗಳ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಾಣಿಕೆ ಮಾಡಲಾಗುವುದು.

ನಿವೇಶನಗಳಲ್ಲಿ ಸ್ವಚ್ಚತೆ ಕಾಪಾಡುವುದು; ನಗರದಲ್ಲಿ ಯಥೇಚ್ಛವಾಗಿ ಖಾಲಿ ನಿವೇಶನಗಳಿದ್ದು, ಖಾಲಿ ನಿವೇಶನಗಳು ಆಸ್ವಚ್ಛತೆಯಿಂದ ಕೂಡಿರುತ್ತವೆ. ಹಾಗಾಗಿ ನಿವೇಶನದ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಒಂದು ವೇಳೆ ಅಸ್ವಚ್ಚತೆಯಿಂದ ಕೂಡಿದ್ದಲ್ಲಿ ಅದರಿಂದಾಗುವ ಅನಾಹುತಗಳಿಗೆ ನಿವೇಶನದ ಮಾಲೀಕರನ್ನು ಹೊಣೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ನಿವೇಶನದ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದ ಕಸ, ಕಡ್ಡಿ, ಜಾಲಿ ಇನ್ನಿತರ ಅನುಪಯೋಗಿ ವಸ್ತುಗಳನ್ನು ತಾವೇ ತಮ್ಮ ಸ್ವಂತ ಖರ್ಚಿನಿಂದ ಸ್ವಚ್ಛತೆಗೊಳಿಸಿ ಸ್ವಚ್ಛತೆಯನ್ನು ಕಾಪಾಡಬೇಕು.

ತಪ್ಪಿದ್ದಲ್ಲಿ ನಿವೇಶನಗಳನ್ನು ನಗರಸಭೆಯ ವಶಕ್ಕೆ ಪಡೆದು ಸ್ವಚ್ಛತೆಗೊಳಿಸಿ ಅಂತವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು. ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತರೆವುಗೊಳಿಸಿ; ನಗರದ ಮುಖ್ಯ ರಸ್ತೆಗಳಾದ ಲಿಂಗಸೂಗುರು ರೋಡ್, ಗಂಜ್ ರಸ್ತೆ, ಚಂದ್ರ ಮೌಳೇಶ್ವರ ರಸ್ತೆ, ಕಿರಾಣಿ ಬಜಾರ್, ಪಾಟೀಲ್ ರೋಡ್, ಬಸ್ ಸ್ಟಾಂಡ್ ರೋಡ್, ಟಿಪ್ಪು ಸುಲ್ತಾನ ರೋಡ್ ಹಾಗೂ ಹಲವಾರು ಕಡೆ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಪುಟ್ ಪಾತನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡುವುದು ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಸಂಬಂಧಿಸಿದ ಪುಟ್ ಪಾತ್ ಮೇಲೆ ವ್ಯಾಪಾರ ವಹಿವಾಟು ಮಾಡುವವರು ಕೂಡಲೇ ತಮ್ಮ ಅಂಗಡಿಗಳನ್ನು ತೆರವುಗೊಳಿಸಿಬೇಕು. ಒಂದು ವೇಳೆ ಪುಟ್ಪಾತ ಮೇಲೆ ವ್ಯಾಪಾರ ಮಾಡುತ್ತಿದ್ದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ರಾಯಚೂರು ನಗರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *