ಆತ್ಮೀಯ ನಾಗರಿಕರೇ, ಇಲ್ಲಿ ನಾವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಗ್ಗೆ ತಿಳಿಯೋಣ. ಮೊದಲು ಈ ಯೋಜನೆಯ ಸೇವೆಯನ್ನು ಪಡೆಯಲು ಉದ್ಯೋಗ ಚೀಟಿಯನ್ನು ಹೊಂದಲೇಬೇಕು. ಉದ್ಯೋಗ ಚೀಟಿಯನ್ನು ಪಡೆಯಲು ಯಾವ ಯಾವ ದಾಖಲೆಗಳು ಬೇಕು ಮತ್ತು ಹೇಗೆ ಅರ್ಜಿಯನ್ನು ಹಾಕಬೇಕು ಎಂದು ತಿಳಿಯೋಣ. ಈ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಲ್ಲಿ ಪುರುಷ ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶ ನೀಡಲಾಗುವುದು. ಇಲ್ಲಿ ನಾವು ಒಂದು ದಿನದ ದಿನಗೂಲಿ ಎಷ್ಟು ಎಂದು ತಿಳಿಯೋಣ ಮತ್ತು ಅಲ್ಲಿ ಮಾಡುವ ಕೆಲಸಗಳು ಯಾವು ಎಂದು ತಿಳಿಯಿರಿ.
ಪುರುಷ ಮತ್ತು ಮಹಿಳೆಯರಿಗೆ ಎಷ್ಟು ವೇತನ?
ನಮ್ಮ ಸರ್ಕಾರವು ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಕೊಡುತ್ತದೆ. ಮೊದಲು ಒಂದು ದಿನಕ್ಕೆ ದಿನಗೂಲಿ 309 ರೂಪಾಯಿಗಳು ಇತ್ತು. ಈಗ ನಮ್ಮ ಸರ್ಕಾರವು ಒಂದು ದಿನಕ್ಕೆ 316 ಕೊಡುತ್ತಿದೆ. ಅಕುಶಲ ದೈಹಿಕ ಕೆಲಸ ಬಯಸುವ ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಉದ್ಯೋಗವನ್ನು ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವುದು. ದೀರ್ಘ ಕಾಲ ಬಾಳಿಕೆ ಬರುವ ಅಸ್ತಿಗಳನ್ನು ಸೃಜಿಸುವುದು, ಮತ್ತು ಗ್ರಾಮೀಣ ಬಡವರ ಜೀವನೋಪಾಯ ಮಾರ್ಗಗಳನ್ನು ಬಲಪಡಿಸುವುದು.
ಉದ್ಯೋಗ ಚೀಟಿ ಪಡೆಯಲು ಬೇಕಾದ ಅಗತ್ಯ ದಾಖಲೆಗಳು ಮತ್ತು ಅರ್ಹತೆಗಳು
ಹದಿನೆಂಟು ವರ್ಷ ಮೇಲ್ಪಟ್ಟ ಅರ್ಹ ಕುಟುಂಬದ ಸದಸ್ಯರ ಭಾವಚಿತ್ರ-3, ಆಧಾರ್ ಕಾರ್ಡ್ ಪ್ರತಿ (ಎಲ್ಲಾ ಸದಸ್ಯರ), ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಎಲ್ಲಾ ಸದಸ್ಯರ),ರೇಶನ್ ಕಾರ್ಡ್ ಪ್ರತಿ. ಈ ಯೋಜನೆಗೆ ಯಾವ ಜನರು ಅರ್ಹರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟು ಜನಾಂಗ, ಬಿ.ಪಿ.ಎಲ್ ಕುಟುಂಬಗಳು, ಅಧಿಸೂಚನೆಯಿಂದ ಕೈ ಬಿಟ್ಟ ಬುಡಕಟ್ಟುಗಳು, ಮಹಿಳಾ ಪ್ರಧಾನ ಕುಟುಂಬಗಳು, ಭೂ ಸುಧಾರಣಾ ಪಲಾನುಭವಿಗಳು, ಅರಣ್ಯ ಹಕ್ಕುಗಳ ಕಾಯ್ದೆ 2006ರ ಫಲಾನುಭವಿಗಳು, ವಸತಿ ಯೋಜನೆಯಡಿ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು
ಅರ್ಹ ಕುಟುಂಬದ ವಯಸ್ಕ ಕೂಲಿ ಕಾರ್ಮಿಕರು ಬೇಡಿಕೆ ಸಲ್ಲಿಸಿದ 15 ದಿನಗಳ ಒಳಗೆ ಅಕುಶಲ ಉದ್ಯೋಗವನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಗುವುದು. ಕೂಲಿ ಮೊತ್ತವನ್ನು 15 ದಿನಗಳ ಒಳಗೆ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಪಾವತಿಸಲಾಗುವುದು. ತ್ವರಿತ ಕೂಲಿ ವೇತನಕ್ಕಾಗಿ ಪ್ರತಿಯೊಬ್ಬ ಕೂಲಿಕಾರರ ಬ್ಯಾಂಕ್ ಖಾತ ಮತ್ತು ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿರುತ್ತದೆ. ಯೋಜನೆಯಡಿ ಕೈಗೊಳ್ಳಬಹುದಾದಸಾರ್ವಜನಿಕ ಸಮುದಾಯ ಕಾಮಗಾಲಿಗಳು. ಉಚಿತ ಸಹಾಯವಾಣಿ ಸಂಖ್ಯೆ: 18004259666
ಇದನ್ನೂ ಓದಿ :- ಇ ಶ್ರಮ್ ಕಾರ್ಡ್ ಇದ್ದವರಿಗೆ ಸಿಗಲಿದೆ 1000 ರೂಪಾಯಿಗಳು ಅರ್ಜಿ ನೋಂದಣಿ ಮಾಡುವುದು ಹೇಗೆ ?
ಇದನ್ನೂ ಓದಿ :- 31 ಮಾರ್ಚ್ 2023 ರಂದು ಹಣ ಜಮಾ ನಿಮ್ಮ ಖಾತೆಗೆ ಜಮಾ ಆಗಿದಿಯ? ಕೂಡಲೇ ಚೆಕ್ ಮಾಡಿ ನೋಡಿ