ಆತ್ಮೀಯ ರೈತ ಬಾಂಧವರೇ, ನಿಮಗೆ ತಿಳಿದಿರಬಹುದು ಎಸ್‌ಬಿಐ ಬ್ಯಾಂಕಿಂದ ನಿಮಗೆ ತುಂಬಾ ಉಪಯೋಗಕಾರಿ ಕಾರ್ಯಗಳು ಮತ್ತು ಯೋಜನೆಗಳು ಬಂದಿವೆ. ಹಾಗೆಯೇ ಎಸ್ ಬಿ ಐ ಇನ್ನೊಂದು ಯೋಜನೆಯನ್ನು ರೈತರಿಗಾಗಿ ಹೊರಡಿಸಿದೆ. ಏನಿದು ಯೋಜನೆ ಎಂದು ತಿಳಿಯೋಣ. ಈ ಯೋಜನೆಯ ಹೆಸರು ಸಂಗೋಪನೆ ಸಾಲ ಯೋಜನೆ. ಈ ಯೋಜನೆಯಿಂದ ರೈತರು ಪಶುಗಳನ್ನು ಸಾಕಲು ಸರಕಾರದಿಂದ ಸಾಲವನ್ನು ಪಡೆಯಲು sbi ಮೂಲಕ ಒಂದು ಉಪಯುಕ್ತವಾದ ಕಾರ್ಯವನ್ನು ಮಾಡಿದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಎಸ್‌ಬಿಐ ಈ ಸಾಲವನ್ನು ನೀಡಲು ತಯಾರಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸಾಲವನ್ನು ಪಡೆಯುವುದು ಹೇಗೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಎಷ್ಟು ಹಣ ಸಾಲವಾಗಿ ನೀಡುತ್ತಾರೆ?
ರೈತರು ಈಗಾಗಲೇ ಹಲವಾರು ಹೈನುಗಾರಿಕೆ ಉದ್ಯೋಗವನ್ನು ಕೈಗೆತ್ತಿಕೊಂಡು ಅದರಲ್ಲಿ ಹಲವಾರು ಲಾಭಗಳನ್ನು ಪಡೆದುಕೊಂಡಿದ್ದಾರೆ. ಆದಕಾರಣ ಈ ಎಸ್ ಬಿ ಐ ಪ್ರತಿಯೊಂದು ಪಾಣೆಗೆ 50,000 ವರೆಗೆ ಸಾಲವನ್ನು ನೀಡಲು ನಿರ್ಧರಿಸಿದೆ. ಆದಕಾರಣ ರೈತರು ಆ ಪ್ರಾಣಿಗಳನ್ನು ಕರುಣಿಸಲು ಅದಕ್ಕಾಗಿ ಮನೆಯನ್ನು ಕಟ್ಟಲು ಮತ್ತು ಅದಕ್ಕೆ ಊಟ ಮತ್ತು ಉಪಚಾರ ಮಾಡಲು ತುಂಬಾ ಖರ್ಚು ಬರುತ್ತದೆ. ಅದಕ್ಕಾಗಿ ಎಸ್‌ಬಿಐ ಸಾಲವನ್ನು ನೀಡಿ ರೈತರ ಉದ್ಧಾರಕ್ಕಾಗಿ ಒಂದು ಉತ್ತಮ ವ್ಯವಹಾರವನ್ನು ಪ್ರಾರಂಭಿಸಿದೆ. ನೀವು ತಿಳಿದುಕೊಳ್ಳಬೇಕು ಈ ಎಸ್ ಬಿ ಐ ಸಾಲ ಕೇಂದ್ರ ಸರ್ಕಾರದಿಂದ ಅನುದಾನವಾದ ಸಾಲವಾಗಿದೆ. ನಮ್ಮ ಪ್ರಧಾನ ಮಂತ್ರಿಗಳಾದ ಮೋದಿಯವರು ಈ ಯೋಜನೆಗೆ ಅಡಿಪಾಯ ಹಾಕಿದ್ದಾರೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಎಸ್ ಬಿ ಐ ಸಾಲವು ಸಂಬಂಧಪಟ್ಟಿದೆ.
ಅರ್ಜಿ ಸಲ್ಲಿಸಲು ದಾಖಲಾತಿಗಳು ಮತ್ತು ಅರ್ಜಿ ಎಲ್ಲಿ ಸಲ್ಲಿಸಬೇಕು?
ಅರ್ಜಿದಾರ ಅಂದರೆ ರೈತನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಒಂದು ಪಾಸ್ಪೋರ್ಟ್ ಫೋಟೋ, ಗುರುತಿನ ಚೀಟಿ ,ಅವನ ಭೂ ದಾಖಲೆ ಪತ್ರಗಳು ಮತ್ತು ಆ ಪ್ರಾಣಿಯ ಗುರುತಿನ ಐಡಿ. ರೈತನ ಮೇಲೆ ದಾಖಲಿಸಿರುವ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ನೀವು ಯಾವ ಬ್ಯಾಂಕಿನಲ್ಲಿ ನಿಮ್ಮ ಖಾತೆಯನ್ನು ಹೊಂದಿರುತ್ತೀರೋ, ಆ sbi ಖಾತೆಯ ಶಾಖೆಗೆ ನೀವು ಭೇಟಿ ಕೊಡಬೇಕು. ನಂತರ ನೀವು ಅಲ್ಲಿ ಕ್ಲರ್ಕ್ ನ ಸಹಾಯದಿಂದ ಮ್ಯಾನೇಜರ್ ಹತ್ತಿರ ಹೋಗಿ, ಈ ಯೋಜನೆಯ ಮಾಹಿತಿಯನ್ನು ತಿಳಿದುಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅನಿಮಲ್ ಹಸ್ಬೆಂಡರಿ ಸಾಲ ಅಡಿಯಲ್ಲಿ ನಿಮಗೆ ಈ ಸಾಲ ಸೌಲಭ್ಯವು ದೊರೆಯಲಿದೆ.
ಈ ಯೋಜನೆಯನ್ನು ಪಡೆಯುವ ರೈತನು ಮೊದಲು ಭಾರತದಲ್ಲಿ ನೆಲೆಸಬೇಕು ಮತ್ತು ಈತನು sbi ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರಬೇಕು, ಅರ್ಜಿದಾರನು ವಯಸ್ಕರಣೆ ಆಗಿರಬೇಕು ಅಂದರೆ 18 ವರ್ಷಕ್ಕಿಂತ ಮೇಲೆ ಇರಬೇಕು. ರೈತರಿಗೆ ತಿಳಿದಿರಬಹುದು ನಿಮ್ಮ ಬ್ಯಾಂಕಿನ ಖಾತೆಯ ಸಿವಿಲ್ ಸ್ಕೋರ್ ಅದು ಕಡಿಮೆ ಇದ್ದರೆ ನಿಮಗೆ ಈ ಯೋಜನೆಯ ಫಲವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗೆ ರೈತರ ಜೀವನ ದಾರಕ್ಕಾಗಿ ಈ ಯೋಜನೆಯನ್ನು ತಂದು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಿ ರೈತರು ಹೈನುಗಾರಿಕೆ ಮತ್ತು ವಿವಿಧ ಪಶು ಸಾಕಾಣಿಕೆಯನ್ನು ಪ್ರಾರಂಭಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಅವರ ಜೀರ್ಣೋದ್ಧಾರಕ್ಕೆ ಸಹಕಾರಿಯಾಗಿ ನಿಂತಿದೆ.
ಇದನ್ನೂ ಓದಿ :- ಹಾಗಾದರೆ ಈ ರೈತ ಮಾಡಿದ್ದು ಆದರೂ ಏನು, ಈತನ ಬೆಳೆ ಪದ್ದಿತಿಯನ್ನು ನೀವೆಲ್ಲೂ ನೋಡಿಲ್ಲ
ಇದನ್ನೂ ಓದಿ :- ಮೊಬೈಲ್ ಸಂಖ್ಯೆ ಅಥವಾ ರಶೀದಿ ಸಂಖ್ಯೆ ಹಾಕಿ ಸ್ಟೇಟಸ್ ಚೆಕ್ ಮಾಡಿ