Breaking
Tue. Dec 17th, 2024

ಕೃಷಿ ಮೇಳ ನೋಂದಣಿಗಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ

Spread the love

ಆತ್ಮೀಯ ರೈತ ಬಾಂಧವರೇ,
ಪ್ರತಿ ವರ್ಷದ ಹಾಗೆ ಈ ವರ್ಷವೂ ಕೂಡ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಡೆಯಲಿದೆ. ರೈತರು ಈ ಅವಕಾಶವನ್ನು ಉಪಯೋಗಿಸಿಕೊಂಡು ಬರುವ ವರ್ಷದಲ್ಲಿ ನಿಮ್ಮ ಆದಾಯವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಲು ಬಳಸಿಕೊಳ್ಳಬಹುದು. ಅಂತೆಯೇ ನಿಮ್ಮ ಜೊತೆ ನೇರ ಸಂಪರ್ಕವನ್ನು ಮಾಡಲು ಕೃಷಿ ವಿಜ್ಞಾನಿಗಳು ಕೂಡ ಇರುತ್ತಾರೆ. ಅವರ ಮಾರ್ಗದರ್ಶನದೊಂದಿಗೆ ನೀವು ನಿಮ್ಮ ತೊಂದರೆಗಳನ್ನು ಹೇಳಿ ಅವುಗಳಿಗೆ ಸಲಹೆಗಳನ್ನು ಕೂಡ ಪಡೆದುಕೊಳ್ಳಬಹುದು.

21-24 ನೇ ತಾರೀಖು ದಿನಗಳ ಕಾಲ ರೈತರ ಆದಾಯವನ್ನೂ ದ್ವಿಗುಣಗೊಳಿಸುವುದು ಎಂಬುದೇ ಮುಖ್ಯ ಉದ್ದೇಶವಾಗಿದೆ ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಉಂಟಾಗುವ ಕೀಟಬಾಧೆಯ ತಡೆಗಟ್ಟುವಿಕೆಯನ್ನು ಸೇರಿ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಮೇಳದಲ್ಲಿ ತರಕಾರಿ, ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ ಹಾಗು ಕೃಷಿ ಬೆಳೆಗಳ ಪ್ರದರ್ಶನ ನಡೆಯಲಿದೆ.

ಪ್ರಮುಖ ಆಕರ್ಷಣೆಗಳು

• ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಪಾತ್ರ.

• ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ದ್ವಿತೀಯ ಕೃಷಿ.

• ಬರ ನಿರ್ವಹಣೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳು.

• ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿಗಳು ಹಾಗೂ ಕೃಷಿ ತಾಂತ್ರಿಕತೆಗಳು.

• ಎಣ್ಣೆ ಕಾಳು ಹಾಗೂ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಿಸಲು ಅಗತ್ಯ ಕೃಷಿ ತಾಂತ್ರಿಕತೆಗಳು.

• ಆಧುನಿಕ ಕೃಷಿ ತಾಂತ್ರಿಕತೆ ಅಳವಡಿಕೆಯಲ್ಲಿ ಯುವ ಪೀಳಿಗೆ ಮತ್ತು ನವೋದ್ಯಮಿಗಳ ಪಾತ್ರ.

ನೀವು ಅಂಗಡಿಗಳನ್ನು ಹಾಕಲು ಬಯಸಿದರೆ ಕೆಳಗೆ ಕಾಣುವ qr code annu ಸ್ಕ್ಯಾನ್ ಮಾಡಿಕೊಳ್ಳಬಹುದು ಮತ್ತು ನೋಂದಣಿ ಮಾಡಿಕೊಳ್ಳಬಹುದು.

12.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಬಿಟ್ಟು ಬಿಟ್ಟು ಎರಡು ಮೂರು ಮಳೆಯ ಮುನ್ಸೂಚೆನೆ ಇದೆ. ನಡುವೆ ಬಿಡುವಿನ ಅವಧಿ ಸ್ವಲ್ಪ ಜಾಸ್ತಿ ಇರಬಹುದು. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು.
ಈಗಿನಂತೆ ಸೆಪ್ಟೆಂಬರ್ 13ರಿಂದ ಮಳೆ ತುಂಬಾ ಕಡಿಮೆ ಆಗುವ ಮುನ್ಸೂಚೆನೆ ಇದ್ದು ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ.

ಮಲೆನಾಡು : ಕೊಡಗಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಸುತ್ತಮುತ್ತ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.
ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಸೆಪ್ಟೆಂಬರ್ 13ರಿಂದ ಮಳೆ ಸಂಪೂರ್ಣ ಕಡಿಮೆಯಾಗುವ ಲಕ್ಷಣಗಳಿವೆ.

ಒಳನಾಡು : ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಹಗುರವಾಗಿ ಮೋಡದ ವಾತಾವರಣ ಇರಲಿದ್ದು, ಸೆಪ್ಟೆಂಬರ್ 13ರಿಂದ ಎರಡು ದಿನಗಳ ಕಾಲ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

Related Post

Leave a Reply

Your email address will not be published. Required fields are marked *