Breaking
Wed. Dec 18th, 2024

ನಿಮ್ಮ ಊರಿನಲ್ಲಿ ಏಷ್ಟು ಜನರ ಆಧಾರ್ ಸೀಡಿಂಗ್ ಆಗಿಲ್ಲ ಎಂದು ಇಲ್ಲಿ ನೋಡಿ.

Spread the love

ರೈತರು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://fruitspmk.karnataka.gov.in/MISReport/AadharNotSeededReport.aspx
ಎಲ್ಲಿ ನೀವು ನಿಮ್ಮ ಜಿಲ್ಲೆ ಹುಡುಕಿ select ಮಾಡಿ.

ಇಲ್ಲಿ ನಿಮ್ಮ ತಾಲೂಕು ನೋಡಿಕೊಳ್ಳಿ ಆಮೇಲೆ ನಿಮ್ಮ ಹೋಬಳಿ, ನಿಮ್ಮ ಊರು ಸೆಲೆಕ್ಟ್ ಮಾಡಿ ಆಗ್ ನಿಮ್ಮ ಊರಿನಲ್ಲಿ ಏಷ್ಟು ಜನರ ಆಧಾರ್ ಸೀಡಿಂಗ್ ಆಗಿಲ್ಲ ಅಂತ ತಿಳಿಯುವುದು.

Aadhar seeding ಮಾಡಿಸಿಕೊಳ್ಳಲು ನಿಮ್ಮ ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಿ.

ಉಚಿತ ಕೌಶಲ್ಯ ಆಧಾರಿತ ತರಬೇತಿ

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆ ಟಿ, ತರಬೇತಿ ಸಂಸ್ಥೆಯಿಂದ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕಾ ತರಬೇತಿ ಹಾಗೂ ಮಾರ್ಚ ತಿಂಗಳಲ್ಲಿ ಬ್ಯೂಟಿ ಪಾರ್ಲರ್ ಮ್ಯಾನೆಜಮೆಂಟ್ ತರಬೇತಿಗಳು ಪ್ರಾರಂಭವಾಗಲಿವೆ. ಆಸಕ್ತ 18 ರಿಂದ 45 ವಯಸ್ಸಿನವರು ತಮ್ಮ ಹೆಸರನ್ನು ನೊಂದಾಯಿಸಲು ಫೆಬ್ರುವರಿ 15 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ,ಉತ್ತರ ಕನ್ನಡ ಜಿಲ್ಲೆ ಹಾಗೂ 9980510717,9483485489 ಸಂಪರ್ಕಿಸಬಹುದಾಗಿದೆ.

ಹುಣಸಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಬೆಳೆ ಪರಿಹಾರ ಹಣ ಗೋಲ್ಕಾಲ್

ಹುಣಸಗಿ ತಾಲೂಕು ಸೇರಿದಂತೆ ತಾಲೂಕಿನ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ. ಅಗ್ನಿ. ಅಗತಿರ್ಥ ಕರಿಬಾವಿ . ಎಲ್ಲ ಗ್ರಾಮಗಳ, ರೈತರಿಗೆ 2018- 19 ರಿಂದ 2022-23ನೇ ಸಾಲಿನಲ್ಲಿ ಬರುವಂತಹ ಸರ್ಕಾರದ ಬೆಳೆ ಪರಿಹಾರದ ಹಣವನ್ನು ಬೆಳೆ ಹಾನಿಗೊಳಗಾದ ಜಮೀನಿನ ಫಲಾನುಭವಿ ರೈತರಿಗೆ ನೀಡದೆ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದ ಬೆಳೆ ಪರಿಹಾರಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಕೈಚಳಕದಿಂದ ಮಧ್ಯವರ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ರೈತರ ಜಮೀನುಗಳಿಗೆ ರೈತರು ಇಲ್ಲದ ಸಮಯದಲ್ಲಿ ಆ ಜಮೀನುಗಳ ಜಿಪಿಎಸ್ ಅನ್ನು ಮಾಡಿಕೊಂಡು ರೈತರಿಗೆ ಬರುವ ಬೆಳೆ ಪರಿಹಾರ ಹಣವನ್ನು ಗ್ರಾಮ ಲೆಕ್ಕಪಾಲರು ತಮಗೆ ಬೇಕಾದ ಖಾಸಗಿ ವ್ಯಕ್ತಿಗಳ ಖಾತೆಗೆ ಪರಿಹಾರದ ಎಲ್ಲಾ ಹಣವನ್ನು ಜಮಾ ಮಾಡಿರುತ್ತಾರೆ.

ಇದರಿಂದ ನಿಜವಾದ ಬೆಳೆಗೆ ಹಾನಿಗೊಳಗಾದ ಫಲಾನುಭವಿ ರೈತರಿಗೆ ಅನ್ಯಾಯವಾಗಿರುತ್ತದೆ ಇದಲ್ಲದೆ ಸರ್ಕಾರಿ ಅಧಿಕಾರಿಗಳಾದ ಗ್ರಾಮ ಲೇಕಪಾಲರು ಹಾಗೂ ಮಧ್ಯವರ್ತಿಗಳ ಕೈಚಳಕದಿಂದ ಲಕ್ಷಾಂತರ ಸರ್ಕಾರದಿಂದ ಮಂಜೂರಾದ ಬೆಳೆ ಪರಿಹಾರದ ಹಣವನ್ನು ದೋಚಿದ್ದಾರೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳಿಂದ ಜಮೀನು ಇಲ್ಲದವರ ಖಾತೆಗೆ ಹಣವನ್ನು ಜಮಾ ಮಾಡಿ ನಿಜವಾದ ರೈತರಿಗೆ ಮೋಸ ಮಾಡಿರುತ್ತಾರೆ ಈ ಮೋಸದಲ್ಲಿ ಸಂಬಂಧಿಸಿದ ಕಂದಾಯ ಇಲಾಖೆಯ ಬೆಳೆ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಕೈವಾಡವಿದ್ದು ಇದರ ಬಗ್ಗೆ ಖಾರವಾಗಿ ವಿಚಾರಣೆ ಮಾಡಿ ಬೆಳೆ ಪರಿಹಾರದಿಂದ ವಂಚಿತಗೊಂಡ ರೈತರಿಗೆ ಅತಿ ಶೀಘ್ರದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣವನ್ನು ಜಮಾ ಮಾಡಬೇಕೆಂದು ಹುಣಸಗಿ ತಶಿಲ್ದಾರ್ ಬಸಲಿಂಗಪ್ಪ ನೈಕೋಡಿಯವರಿಗೆ ಮನವಿ.

ಬಾಡಿಗೆ ಕಟ್ಟಡಕ್ಕಾಗಿ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಎಪ್ರಿಲ್ 1, 2024 ರಿಂದ ಹೊಸದಾಗಿ ಮಿಷನ್ ಶಕ್ತಿಯೋಜನೆಯಡಿಯಲ್ಲಿ ಶಕ್ತಿಸದನ ಗೃಹವನ್ನು ಪ್ರಾರಂಭ ಮಾಡಬೇಕಾಗಿದೆ. ಸಂಪೂರ್ಣ ಮೂಲಭೂತ ಸೌಕರ್ಯ ಹೊಂದಿರುವ 1,000 ವಿಸ್ತೀರ್ಣದ ಕಟ್ಟಡವನ್ನು ಬಾಡಿಗೆ ಆಧಾರದ ಮೇಲೆ ಪಡೆಯಬೇಕಾಗಿದೆ.

ಆಸಕ್ತ ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸೂಕ್ತ ಕಟ್ಟಡವನ್ನು ಹೊಂದಿರುವ ಖಾಸಗಿ ಕಟ್ಟಡ ಮಾಲೀಕರು ತಮ್ಮ ಕಟ್ಟಡದ ಛಾಯಾಚಿತ್ರಗಳು ಹಾಗೂ ದಾಖಲೆಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿ ಧಾರವಾಡ ಇವರಿಗೆ ಫೆಬ್ರುವರಿ 15, 2024 ರ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಧಾರವಾಡ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಕಲಚೇತನರಿಂದ ಬ್ಯಾಟರಿ ಚಾಲಿತ ವಿಲ್‌ಚೇರಗಾಗಿ ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2023-24 ನೇ ಸಾಲಿನಲ್ಲಿ ಬ್ಯಾಟರಿ ಚಾಲಿತ ವೀಚೇರಗಾಗಿ 15 ವರ್ಷ ಮೇಲ್ಪಟ್ಟ ದೈಹಿಕ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಈ ಹಿಂದೆ ಯಾವುದೇ ಮೂಲದಿಂದ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಪಡೆದಿರಬಾರದು. ಫೆಬ್ರವರಿ 10, 2024 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಸೂಕ್ತ ದಾಖಲಾತಿಗಳೊಂದಿಗೆ ತಾಲೂಕಾ ಪಂಚಾಯತಿಯ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ (ಎಂ.ಆರ್. ಡಬ್ಲ್ಯೂ) ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0836-274447, 9742757903, 9164347001, 6363695794, 9663271200, 8880570833 ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *