ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://landrecords.karnataka.gov.in/Service2/
ಜಿಲ್ಲೆಯ ಆಯ್ಕೆ, ತಾಲ್ಲೂಕಿನ ಆಯ್ಕೆ, ಹೋಬಳಿಯ ಆಯ್ಕೆ, ಗ್ರಾಮದ ಆಯ್ಕೆ, ಸರ್ವೆ ನಂಬರ್, ಸರ್ ನಾಕ್ ಆಯ್ಕೆ, ಹಿಸ್ಸಾ ನಂಬರಿನ ಆಯ್ಕೆ.
ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಕೊಪ್ಪಳ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಸ್ವಯಂ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತರು ತಮ್ಮ ಆಧಾರ ಕಾರ್ಡ ಜೆರಾಕ್ಸ್ ಪ್ರತಿ, ರೇಶನ್ ಕಾರ್ಡ ಜೆರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಸೈಜ್ ಮೂರು ಫೋಟೋ, ಮಾರ್ಕ್ಸಕಾರ್ಡ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ. ಕೊಪ್ಪಳ ದೂ.ಸಂ: 08539-231038, 9483618178, 9481085217, 7259073827, 9448941414 ಇಲ್ಲಿಗೆ ಸಲ್ಲಿಸಬೇಕು.
ಸ್ವಯಂ ಉದ್ಯೋಗ ತರಬೇತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿಗಾಗಿ ಆಗಸ್ಟ್ 16ರಂದು ಸಂದರ್ಶನ ನಡೆಯಲಿದ್ದು, ಆಗಸ್ಟ್ 19ರಿಂದ ತರಬೇತಿಗಳು ಪ್ರಾರಂಭವಾಗಲಿವೆ ಎಂದು ಕೊಪ್ಪಳ ಎಸ್‌ಬಿಐ ಆರ್‌ಸಿಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಕ್ಕೆಜೋಳದಲ್ಲಿನ ಕೀಟ ಭಾದೆ, ರೋಗದ ನಿಯಂತ್ರಣಕ್ಕೆ ಸಲಹೆ
ಪ್ರಸಕ್ತ ಮುಂಗಾರು ಹಂಗಾಮಿನ ಮೆಕ್ಕೆಜೋಳದಲ್ಲಿ ಕಂಡು ಬರುತ್ತಿರುವ ವಿವಿಧ ಕೀಟ ಭಾದೆ ಹಾಗೂ ರೋಗದ ನಿಯಂತ್ರಣಕ್ಕೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಸಕಾಲದಲ್ಲಿ ಆಗಿದ್ದು, ಆರಂಭ ಹಂತದಲ್ಲಿ ರೈತರಿಗೆ ಹರ್ಷ ತಂದಿತ್ತು. ರೈತರು ಮೊದಲ ಬಾರಿಗೆ ಹೆಸರು ಬೆಳೆಯನ್ನು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದರು. ಅದೇ ರೀತಿ ಈ ಮುಂಗಾರಿನಲ್ಲಿ ಅತಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದಾರೆ. ಆದರೆ ನಂತರ ಮೂರು ನಾಲ್ಕು ವಾರಗಳ ಕಾಲ ಮಳೆ ಬಾರದೆ ಬೆಳೆಗಳು ಒಣಗುತ್ತ ಬಂದವಲ್ಲದೆ ಗಾಯದ ಮೇಲೆ ಬರೆ ಎಳೆದಂತೆ ಕೀಟ ರೋಗಗಳ ಬಾಧೆ ಹೆಚ್ಚಾಗಿ ರೈತರು ಆತಂಕ ಪಡುವಂತಾಯಿತು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮತ್ತು ಕೃಷಿ ಇಲಾಖೆ ಹಾಗೂ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದಿದ ವಿಜ್ಞಾನಿಗಳು ಆಗಮಿಸಿ ಹೆಸರು ಬೆಳೆ ಸಮೀಕ್ಷೆ ಮಾಡಿ ಬೆಳೆಯು ಕುಡಿ ಸಾಯುವ ರೋಗಕ್ಕೆ ಬಲಿಯಾಗಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ. ಬಿತ್ತಿದ ಒಂದು ತಿಂಗಳೊಳಗೆ ಮೆಟಲಾಕ್ಸಿಲ ಎನ್ನುವ ಶಿಲೀಂದ್ರನಾಶಕವನ್ನು ಎರಡುವರೆ ಗ್ರಾಂ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಈ ಎಲ್ಲಾ ಸಿಂಪರಣಾ ಕ್ರಮಗಳನ್ನು ಸಮುದಾಯ ರೀತಿಯಲ್ಲಿ ಮಾಡಿದಲ್ಲಿ ಪರಿಣಾಮಕಾರಿಯಾಗಿ ಕೀಟ ಮತ್ತು ರೋಗಗಳ ಹತೋಟಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳಾದ ಡಾ. ಎಂ.ವಿ.ರವಿ ಮೊ.ಸಂ: 9480247745 ಹಾಗೂ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಮೊ.ಸಂ: 8217696837 ಗೆ ಸಂಪರ್ಕಿಸುವಂತೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.
ಕೀಟ ರೋಗ ಭಾದೆಯಿಂದ ಬೆಳೆ ರಕ್ಷಣೆಗೆ ಕೃಷಿ ಇಲಾಖೆ ಸಲಹೆ
ಸುಮಾರು 4.5ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದ್ದು, ಅಲ್ಲಲ್ಲಿ ಗೊಣ್ಣೆ ಹುಳುವಿನ ಬಾಧೆ ಕಂಡು ಬಂದಿದ್ದು, ರೈತರು ವಿಜ್ಞಾನಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದು ತೊಗರಿ ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಡಿ.ಡಬ್ಲು ರಾಜಶೇಖರ ಮನವಿ ಮಾಡಿಕೊಂಡಿದ್ದಾರೆ. ಗೊಣ್ಣೆ ಹುಳು ಮಣ್ಣಿನ ಒಂದು ಕೀಟವಾಗಿದ್ದು, ಆರಂಭಿಕ ಹಂತದಲ್ಲಿ ಮರಿಹುಳುಗಳು ಸಾವಯವ ಪದಾರ್ಥದ ಮೇಲೆ ತನ್ನ ಜೀವನ ಚಕ್ರವನ್ನು ಮುಗಿಸುತ್ತವೆ ಆದರೆ ನಂತರದ ಹಂತದಲ್ಲಿ ಅವು ಬೇರುಗಳನ್ನು ಹಾಳು ಮಾಡುತ್ತವೆ. ಬಾಧೆಗೊಳಗಾದ ಸಸ್ಯಗಳು ಒಣಗುತ್ತವೆ ಮತ್ತು ಸುಲಭವಾಗಿ ಕಿತ್ತು ತೆಗೆಯಬಹುದು.
ಮುಸುಕಿನ ಜೋಳದಲ್ಲಿ ಲದ್ದಿಹುಳುವಿನ ಬಾಧೆ ಕಂಡು ಬಂದಿದ್ದು, ಇಮಾಮೆಕ್ಟಿನ್ಜೋಯೇಟ್ 5 ಎಸ್.ಜಿ. ಅಥವಾ 0.5 ಮಿ.ಲೀ. ಸ್ಟೈನಟೊರಾಮ್ 11.7 2.4. 5 0.2 ಮಿ.ಲೀ ಕ್ಲೋರಾಂಟ್ರಿನಿಪ್ರೋಲ್ ಬೆರೆಸಿ ಸಿಂಪರಣೆ ಮಾಡಬೇಕು. ಕಬ್ಬಿನಲ್ಲಿ ಬಿಳಿ ನೊಣದ ಬಾಧೆ ನಿರ್ವಹಣೆಗೆ ಲೆಸೆಂಟಾ 1 ಗ್ರಾಂ ಅಥವಾ ಲ್ಯಾನ್ಸರ್‌ಗೋಲ್ಡ್ 0.3 ಗ್ರಾಂ ಅಥವಾ ಅಡೈರ್ 0.3 ಗ್ರಾಂ ಅಥವಾ ಅಸಿಟಾಮ್‌ಪ್ರಿಡ್ 0.3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಟಿಎಂ ಕಾರ್ಡ್ ಬದಲಿಸಿ ರೈತನಿಗೆ 95 ಸಾವಿರ ವಂಚನೆ
ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯ ಎಟಿಎಂನಲ್ಲಿ ರೈತನೊಬ್ಬರ ಎಟಿಎಂ ಕಾರ್ಡ್ ಬದಲಾಯಿಸಿ 95 ಸಾವಿರ ವಂಚಿಸಿರುವುದು ಈಚೆಗೆ ನಡೆದಿದೆ. ತಾಲ್ಲೂಕಿನ ಮಿರಾಕೊರನಹಳ್ಳಿ ಗ್ರಾಮದ ರೈತ ಎ. ಈಶಪ್ಪ ಹಣ ಕಳೆದುಕೊಂಡವರು. ಕಳೆದ ಜೂನ್ 15ರಂದು ಪಟ್ಟಣದ ಎಸ್‌ಬಿಐ ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳುವಾಗ ವ್ಯಕ್ತಿಯೊಬ್ಬ ಹಿಂದೆ ನಿಂತು ಹೊಂಚು ಹಾಕಿದ್ದಾನೆ. ಡ್ರಾ ಮಾಡಿದ ಹಣ ಎಣಿಕೆ ಮಾಡಿಕೊಳ್ಳುವಾಗ ಹಿಂದೆ ನಿಂತಿದ್ದ ವ್ಯಕ್ತಿ ಅರಿವಿಗೆ ಬಾರದಂತೆ ಮಷಿನ್‌ನಲ್ಲಿದ್ದ ಕಾರ್ಡ್ ಕಿತ್ತು, ತನ್ನಲ್ಲಿದ್ದ ಬೇರೆ ಕಾರ್ಡ್ ನೀಡಿದ್ದಾನೆ. ಹಿಂದೆ ನಿಂತು ಪಿನ್ ಸಂಖ್ಯೆ ನೋಡಿಕೊಂಡಿದ್ದಾನೆ. ನಂತರ 48 ಗಂಟೆಯೊಳಗೆ ರೈತನ ಖಾತೆಯಲ್ಲಿದ್ದ ಹಣವನ್ನೆಲ್ಲ ಹಾವೇರಿ, ಬೆಂಗಳೂರಿನ ಎಟಿಎಂಗಳಲ್ಲಿ ದೋಚಿದ್ದಾರೆ.
ಹಣ ಬಿಡಿಸಿದ ಸಂದೇಶ ಮೊಬೈಲ್‌ಗೆ ಹೋಗದಂತೆ ಮಾಡಿ ವಂಚಿಸಿದ್ದಾರೆ. ಆಭರಣ ಸಾಲದ ಹಣವನ್ನು ಬ್ಯಾಂಕ್‌ನವರು ಖಾತೆಗೆ ಜಮೆ ಮಾಡಿದ್ದರು. ಬೀಜ ಗೊಬ್ಬರಕ್ಕೆಂದು 4,500 ಬಿಡಿಸಿಕೊಳ್ಳುವಾಗ ವಂಚಕ ಮೋಸ ಭದ್ರತೆ ಇಲ್ಲದಿರುವುದರಿಂದ ಕಳ್ಳರಿಗೆ ಹಬ್ಬವಾಗಿದೆ. ಘಟನೆ ನಡೆದು ಬಹಳ ದಿನಗಳಾದರೂ ಬ್ಯಾಂಕ್‌ನವರು ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸರಿಗೆ ನೀಡಿ ಕಳ್ಳರ ಪತ್ತೆಗೆ ಸಹಕರಿಸುತ್ತಿಲ್ಲ’ ಎಂದು ರೈತ ಈಶಪ್ಪ ಅಳಲು ತೋಡಿಕೊಂಡರು. ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಖಾತೆಯಲ್ಲಿ ಉಳಿಸಿದ್ದ ಹಣವನ್ನು ವಂಚಕ ದೋಚಿದ್ದಾನೆ. ಈ ಕುರಿತು ದೂರು ನೀಡಲಾಗಿದ್ದು, ಪೊಲೀಸರು ವಂಚಕನನ್ನು ಪತ್ತೆ ಹಚ್ಚಿ ಹಣ ವಾಪಾಸ್ ಕೊಡಿಸಬೇಕು’ ಎಂದು ಮನವಿ ಮಾಡಿದ್ದಾರೆ.