ಆತ್ಮೀಯ ರೈತರೇ,ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಅನುಕೂಲವಿದೆ. ಈ ಯೋಜನೆಯನ್ನು ಭಾರತದ ಅರ್ಹ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸರ್ಕಾರ ಈ ಯೋಜನೆ ಅನ್ನು ಜಾರಿಗೊಳಿಸಿದೆ. ರೈತರಿಗೆ ಸಹಾಯಧನ ನೀಡುವ ಮೂಲಕ ಈ ಯೋಜನೆಯು ರೈತರಲ್ಲಿ ಕೃಷಿ ಬಗ್ಗೆ ಪ್ರೋತ್ಸಾಹ ನೀಡಿದೆ. ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆದುಕೊಳ್ಳಲು ಸರ್ಕಾರ ತಿಳಿಸಿದೆ. ರೈತರು ಯೋಜನೆಗೆ ಈಗ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಇದರ ಅನುಕೂಲವನ್ನು ಪಡೆಯಬಹುದಾಗಿದೆ.
ಈಗ ಒಟ್ಟಾರೆ 13 ಕಂತುಗಳು ನಿಮ್ಮ ಖಾತೆಗೆ ಬಂದಿದೆ. ನಿಮಗೆ ತಿಳಿದಿರಬಹುದು ಈ ಫೆಬ್ರವರಿ ತಿಂಗಳದಲ್ಲಿ ಈ 13ನೇ ಕಂತು ನಿಮ್ಮ ಖಾತೆಗೆ ಜಮಾ ಆಗಿದೆ. ಕೆಲವೊಂದು ರೈತರಿಗೆ ತಮ್ಮ ಖಾತೆಗೆ ಈ ಹಣ ಬಂದಿದೆ ಇಲ್ಲವೋ ಎಂದು ಸಂದೇಹವಿದೆ. ಈ ಸಂದೇಹವನ್ನು ಪರಿಹಾರ ಮಾಡಲು ಸರ್ಕಾರ ಇನ್ನೊಂದು ಸುಲುಭ ವಿಧಾನವನ್ನು ನೀಡಿದೆ. ಅದೇನೆಂದರೆ ಈಗ ನಾವು ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಹಳ್ಳಿಯ ಯಾವ ಯಾವ ರೈತರಿಗೆ ಹಣ ಬರುತ್ತದೆ ಮತ್ತು ಇಲ್ಲಿವರೆಗೆ ಅವರಿಗೆ ಎಷ್ಟು ಹಣ ಅವರ ಖಾತೆಗೆ ಬಂದಿದೆ ಅಥವಾ ಎಷ್ಟು ಕಂತುಗಳು ಅವರ ಖಾತೆಗೆ ಜಮಾ ಆಗಿವೆ ಎಂದು ತಿಳಿಯಲು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.
ನಿಮ್ಮ ಹಳ್ಳಿಯ ಯಾವ ಯಾವ ರೈತರಿಗೆ ಹಣ ಬರುತ್ತದೆ ಎಂದು ತಿಳಿಯುವುದು ಹೇಗೆ?
ಮೊದಲು ರೈತರು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://pmkisan.gov.in/VillageDashboard_Portal.aspx
ನಂತರ ನೀವು ಪಿಎಂ ಕಿಸಾನ್ ಯೋಜನೆಯ ಮುಖಪುಟಕ್ಕೆ ಹೋಗುತ್ತೀರಿ. ಅಲ್ಲಿ ನೀವು ನಿಮ್ಮ ರಾಜ್ಯ, ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಹೋಬಳಿ, ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ಮೇಲೆ ನಿಮಗೆ ನಿಮ್ಮ ಗ್ರಾಮದ ಯಾವ ಯಾವ ರೈತರಿಗೆ ಈ ಪಿಎಂ ಕಿಸಾನ್ ಹಣ ಬರುತ್ತದೆ ಎಂದು ಅವರ ಒಂದು ದೊಡ್ಡ ಪಟ್ಟಿ ಬರುತ್ತದೆ. ಅಲ್ಲಿ ನೀವು ಯಾವ ರೈತ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆ ಅಥವಾ ಎಷ್ಟನೇ ಸೀರಿಯಲ್ ನಂಬರ್ ಎಂದು ನೋಡಿ ಯಾರಿಗೆ ಪಿಎಂ ಕಿಸಾನ್ ಹಣ ಬರುತ್ತದೆ ಎಂದು ತಿಳಿಯಬಹುದು.
ಯೋಜನೆ ಅಡಿಯಲ್ಲಿ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ 2000 ರೂ. ಅಂತೆ ವಾರ್ಷಿಕವಾಗಿ 6000ರೂ. ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗಿದೆ.ಈಗಾಗಲೇ ಯೋಜನೆಯಡಿಯಲ್ಲಿ 12 ನೇ ಕಂತಿನ ವರೆಗೆ ಹಣ ವರ್ಗಾವಣೆ ಆಗಿದ್ದು,13 ನೇ ಕಂತಿನ ಹಣಕ್ಕಾಗಿ ಕಾದಿದ್ದು ಸಾಕು. ದಿನಾಂಕ 27/02/2023 ರಂದು ಮಧ್ಯಾನ 3 ಕ್ಕೇ ರೈತರ ಖಾತೆಗೆ 2000 ರೂಪಾಯಿ ಜಮಾ ಆಗಿದೆ.