ಈ ತಿಂಗಳ ರೇಷನ್ ಕಾರ್ಡ್ ರದ್ದು ಆಗಿರುವ ಪಟ್ಟಿಯನ್ನು ನೋಡುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.kar.nic.in/Home/EServices ನಂತರ ಎಲ್ಲಿ ಚಿತ್ರದಲ್ಲಿ ಕಾಣುವ arrow mark ನಲ್ಲಿ ಕಾಣುವ ಹಾಗೆ 3 ಡಾಟ್ ಮೇಲೆ ಕ್ಲಿಕ್ ಮಾಡಿ.
ನಂತರ e-Ration Card ಮೇಲೆ ಕ್ಲಿಕ್ ಮಾಡಿ. ಆಮೇಲೆ Show Cancelled/Suspended list click ಮಾಡಿ.
ನಂತರ ನೀವು ಅಲ್ಲಿ ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ಯಾವ ತಿಂಗಳಿನ ಹಣ ಮತ್ತು ಯಾವ ವರ್ಷ ಎಂದು ಸೆಲೆಕ್ಟ್ ಮಾಡಿ. ಆಗ ನಿಮ್ಮ ಮುಂದೆ ಒಂದು ಪಟ್ಟಿ ಬರುತ್ತದೆ. ಎಲ್ಲಿ ನಿಮ್ಮ ಹೆಸರು ಇದೆಯಾ ನೋಡಿ. ಎಲ್ಲಿ ನಿಮ್ಮ ಹೆಸರು ಇಲ್ಲ ಅಂದರೆ ನಿಮಗೆ ಹಣ ಬರುತ್ತದೆ. ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಈ ತಿಂಗಳ ಅನ್ನಭಾಗ್ಯ ಹಣ ನಿಮಗೆ ಬರುವುದಿಲ್ಲ.
ಯಾರಿಗೆ ರೇಷನ್ ಬರುತ್ತದೆ ಎಂದು ನೋಡುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.kar.nic.in/Home/EServices ನಂತರ ಅಲ್ಲಿ ಮೇಲೆ ಕಾಣುವ ಮೂರು ಡಾಟ ಮೇಲೆ ಕ್ಲಿಕ್ ಮಾಡಿ. ನಂತರ e ration card ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಬೇಕು.
ನಂತರದಲ್ಲಿ ಕಾಣುವ show village list ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಹೋಬಳಿ , ನಿಮ್ಮ ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿ.
ಆಗ ನಿಮ್ಮ ಮುಂದೆ ಒಂದು ಲಿಸ್ಟ್ ಬರುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ. ನಿಮ್ಮ ಹೆಸರು ಇದ್ದರೆ ನಿಮಗೆ ರೇಷನ್ ಬಂದೇ ಬರುತ್ತದೆ ಮತ್ತು ನನ್ನ ಭಾಗ್ಯದ ಹಣವು ಬರುತ್ತದೆ.
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರಕಾರ ಎಸ್.ಸಿ./ಎಸ್.ಟಿ. ಸಮುದಾಯಕ್ಕೆ ಮೀಸಲಾದ ಎಸ್.ಇ.ಪಿ. ಟಿ.ಇ.ಪಿ. ಯೋಜನೆಯಲ್ಲಿನ ಅಂದಾಜು 11,600 ಕೋಟಿ ಅನುದಾನವನ್ನು ಕಡಿತ ಮಾಡಿ ಬೇರೆ ಯೋಜನೆಗಳಿಗೆ ಉಪಯೋಗಿಸಿ ಈ ಸಮುದಾಯಕ್ಕೆ ಅನ್ಯಾಯ ಮಾಡಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮತ್ತು ಎಸ್.ಟಿ. ಮೋರ್ಚಾ ವತಿಯಿಂದ ಪ್ರತಿಭಟನೆ ಶುಕ್ರವಾರ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದ ಗಾಂಧಿ ಸರ್ಕಲ್‌ನಿಂದ ಪ್ರತಿಭಟನೆ ಹೊರಟು ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ರಾಜ್ಯ ಕಾಂಗ್ರೆಸ್ ಸರಕಾರದ ಬಿಟ್ಟಿ ಭಾಗ್ಯ ಯೋಜನೆಗಳಿಂದ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ T ಕೇಂದ್ರದಿಂದ ಪ್ರತಿ ವರ್ಷ 6 ಸಾವಿರ ರೂ. ರಾಜ್ಯ ಸರಕಾರದಿಂದ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ದೊರೆಯುತ್ತಿತ್ತು.
ಅದೇ ರೀತಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಜಾರಿಯಲ್ಲಿತ್ತು. ಇಂತಹ ಅನೇಕ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ಈ ಸರಕಾರ ಬಂದು 9 ತಿಂಗಳು ಗತಿಸುತ್ತ ಬಂದರೂ ಈ ವರೆಗೆ ಹೊಸ ಯೋಜನೆಗಳ ಜಾರಿಗೆ ಮುಂದಾಗಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕಾರಜೋಳ ಮಾತನಾಡಿ, ರಾಜ್ಯದಲ್ಲಿ ಭೀಕರ ಬರದಿಂದ ಜನರು, ರೈತರು ತತ್ತರಿಸಿದ್ದಾರೆ.