ಈ ಕೃಷಿಯ ವೈಶಿಶ್ಯತೆಗಳು ಸಾಮಾನ್ಯ ನಿಂಬೆಗಿಂತ ಶೇಕಡ 90% ಇಳುವರಿ ಅಧಿಕ. (Seed Less Tissue Cultured Lemon Cultivation)
• ವರ್ಷದ 365.5 ದಿನಗಳ ಕಾಲವು ಇಳುವರಿ ಕೊಡುವಂತಹ ನಿಂಬೆ.
• ಒಂದು ವರ್ಷದ ಗಿಡವನ್ನು ರೈತರಿಗೆ ವಿತರಿಸಲಾಗುವುದು.
• ಒಂದು ವರ್ಷದ ನಂತರ ಫಸಲು ಪ್ರಾರಂಭ (ಇಳುವರಿ).
• ಮೂರುವರ್ಷದ ನಂತರ ಒಂದು ಗಿಡದಿಂದ 10 ರಿಂದ 15 ಕೆಜಿ. ಇಳುವರಿ.
• ಐದು ವರ್ಷದ ನಂತರ ಒಂದು ಗಿಡಕ್ಕೆ 50 ಕೆಜಿಯಷ್ಟು ಇಳುವರಿ.
• 20 ರಿಂದ 25 ವರ್ಷಗಳ ಜೀವಿತವಾದಿಯ ನಿಂಬೆಹಣ್ಣು.
• ಒಂದು ಎಕರೆಗೆ 350 ರಿಂದ 400 ಸಸ್ಯಗಳು ಬೇಕಾಗುವುದು.
• ಸಾಲಿನಿಂದ ಸಾಲಿಗೆ ಹತ್ತು ಅಡಿ ಅಂತರ ಮತ್ತು ಗಿಡದಿಂದ ಗಿಡಕ್ಕೆ ೫ ಅಡಿ ಅಂತರದಲ್ಲಿ ನಾಟಿಮಾಡಬೇಕು.
ವಿಶೇಷ ಸೂಚನೆಗಳು :
1) ಈ ಕೃಷಿಯನ್ನು ಅಂತರ ಬೇಸಾಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬಹುದು.
2) ಈ ಕೃಷಿಯಲ್ಲಿ ಅಂತರಬೇಸಾಯವಾಗಿ ಸೂರ್ಯಕಾಂತಿ ಬೆಳೆಯನ್ನು ಮತ್ತು ಹೆಚ್ಚಿನ ಇಳುವರಿಗಾಗಿ (ಶೇಕಡ 90%) ಜೇನುಕೃಷಿಯನ್ನು ಸಹ ಮಾಡಬಹುದು.
3 ) ಈ ಕೃಷಿಯನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿಯೇ ಮಾಡಬೇಕು.
4) ರೈತರು ಬೆಳೆದತಂಹ ನಿಂಬೆಯನ್ನು, ಜೇನು ಮತ್ತು ಸೂರ್ಯಕಾಂತಿ ಬೀಜಗಳನ್ನು ನಾವೇ ಖರೀದಿಸುತ್ತವೆ. (ಭೈಬ್ಯಾಕ್ ಸಿಸ್ಟಮ್ ).
ಬೀಜಗಳು ಸಿಗುವ ಸ್ಥಳ
ಬೀಜ ರಹಿತ ಅಂಗಾಂಶ ನಿಂಬೆ ಸಸ್ಯಗಳು, ಜೇನು ಕುಟುಂಬ, ಜೇನುಪಟ್ಟಿಗೆ ಮತ್ತು ಸೂರ್ಯಕಾಂತಿ ಬಿತ್ತನೆ ಬೀಜಗಳು ಸಿಗುವ ಸ್ಥಳ. ರೈತಾಪಿ ಭೂ-ಮಾಲಿಕರ ಸ್ವಯಂ ಸೇವಾ ಸಂಘ (ರಿ).ಸರೇ ನಂ. 31/B. ಘಟ್ಟಹಳ್ಳಿ ಗ್ರಾಮ, ಹುಸ್ಕೂರು ಅಂಚೆ, ಶಾಂತಿಪುರ ಗ್ರಾಮ ಪಂಚಾಯ್ತಿ, ಸರ್ಹಾಮರ ಹೊಬಳಿ, ಅನೇಕಲ್ ತಾಲ್ಲುಕು. ಬೆಂಗಳೂರು ನಗರ ಜಿಲ್ಲೆ – 9880474600/9880474640
ಬೆಲೆ ಏಷ್ಟು ನೋಡಿ?
ನಿಂಬೆ ಗಿಡ ತಿಂಗಳ ಮೇಲೆ
• 8 ತಿಂಗಳು 400 ರೂಪಾಯಿ.
• 10 ತಿಂಗಳು 450 ರೂಪಾಯಿ.
• 12 ತಿಂಗಳು 500ರೂ.
ಜೇನು ಕುಟುಂಬ : 2000ರೂ.
ಜೇನುಪೆಟ್ಟಿಗೆ : 3000ರೂ.
ಜೇನುಪಟ್ಟಿಗೆಯ ಸ್ಟಾಂಡ್ : 600ರೂ.
ಸೂರ್ಯಕಾಂತಿ : ಬೀಜ ತಳಿಗಳಿಗೆ ತಕ್ಕಂತೆ.
ಯುವಕರಿಗೆ ಉದ್ಯೋಗ ಸೃಷ್ಟಿ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ, ಕಳೆದ 10 ತಿಂಗಳಲ್ಲಿ ಜನರಿಗೆ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಇನ್ನು ನಾಲ್ಕು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ? ಹೆಬ್ಬಾಳ್ವರ್ ಹೇಳಿದ್ದಾರೆ.
ಸವದತ್ತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿಂದೋಗಿ, ಬಂಡಾರಹಳ್ಳಿ, ಹಿರೂರು ಹಾಗೂ ಹಳ್ಳೂರಿನಲ್ಲಿ ಸೋಮವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಚಿವರು, ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬೀಳಲಿದೆ ಎಂದೆಲ್ಲಾ ಹಗಲು ಕನಸು ಕಾಣುತ್ತಿದ್ದಾರೆ. ಜನರು 135 ಶಾಸಕರನ್ನು ಆರಿಸಿ ಕಳುಹಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದರು. ಉದ್ಯೋಗ ಸೃಷ್ಟಿ ಬೆಳಗಾವಿ ಜಿಲ್ಲೆಯ ಯುವಕರಿಗೆ ಜಿಲ್ಲೆಯಲ್ಲೇ ಉದ್ಯೋಗ ಒದಗಿಸುವ ಯೋಜನೆಗಳನ್ನು ತರಲಾಗುವುದು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕೊಟ್ಟ ಮಾತಿಗೆ ಚ್ಯುತಿ ಬರದಂತೆ ಕೆಲಸ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಮೃಣಾಲ್ ಎಲ್ಲರ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾನೆ ಮೃಣಾಲ್ ಹೆಬ್ಬಾಳ್ವರ್ ಯುವಕರು ಸೇರಿದಂತೆ ಎಲ್ಲರ ಪ್ರತಿನಿಧಿಯಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲಿದ್ದಾನೆ. ಯುವಕರ ಪಾಲಿಗೆ ಗೆಳೆಯ. ಅಣ್ಣ, ತಮ್ಮ ಆಗಿ ಕೆಲಸ ಮಾಡಲಿದ್ದಾನೆ. ಕ್ಷೇತ್ರದ ಮಗನಿಗೆ ಆಶೀರ್ವಾದ ಮಾಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ಮನವಿ ಮಾಡಿದರು. ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 2500 ಗ್ರಾಮಗಳಿದ್ದು, ಪ್ರತಿ ಗ್ರಾಮಕ್ಕೂ ಭೇಟಿ ಕೊಟ್ಟು ಸ್ಥಳೀಯರ ಸಮಸ್ಯೆ ಆಲಿಸಲಿದ್ದಾನೆ. ನಮ್ಮ ಕುಟುಂಬ ಸವದತ್ತಿ ಕ್ಷೇತ್ರದ ಜೊತೆ ಭಾವನಾತ್ಮಕ ನಂಟನ್ನು ಹೊಂದಿದೆ ಎಂದರು.
ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇಬ್ಬರೂ ಯುವ ಅಭ್ಯರ್ಥಿಗಳಾಗಿರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೋರಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕಳೆದ ವರ್ಷ ಶೆಟ್ಟರ್ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರ ಹಿರಿತನಕ್ಕೆ ಗೌರವ ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ಇದೀಗ ಪುನಃ ಬಿಜೆಪಿಗೆ ಜಾರಿಕೊಂಡರು. ಇಂತವರಿಗೆ ಜನರು ಸರಿಯಾದ ಪಾಠ ಕಲಿಸಬೇಕು ಎಂದು ಸಚಿವರು ಕರೆಕೊಟ್ಟರು.
ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಮಾತನಾಡಿ,ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕೆನ್ನುವ ಕನಸು ಹೊತ್ತು ಚುನಾವಣೆಗೆ ಸ್ಪರ್ಧಿಸಿದ್ದೇನೆ. ವಿಶೇಷವಾಗಿ ಯುವಕರಿಗೆ ಜಿಲ್ಲೆಯಲ್ಲೇ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದ್ದೇನೆ. ಉದ್ಯೋಗದ ಜೊತೆಗೆ ಯುವಕರನ್ನು ಉದ್ಯಮಿಗಳನ್ನಾಗಿಸಲು ಒತ್ತು ನೀಡಲಾಗುವುದು ಎಂದರು.ಸಚಿವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಡಿ.ಡಿ.ಟೋಪೋಜಿ ಸೇರಿದಂತೆ ಅಪಾರ ಸಂಖ್ಯೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.