ನಿಮ್ಮ ಬೂತ್ ಸ್ಲಿಪ್ ಅನ್ನು ಪಡೆಯುವುದ್ದಕ್ಕಾಗಿ 1950 ಗೆ SMS ಮಾಡಿ. ECI<SPACE>(10 ಅಂಕಿಗಳ ಎಪಿಕ್ ಸಂಖ್ಯೆ) ಕೇವಲ 15 ಸೆಕೆಂಡ್ ಗಳಲ್ಲಿ ನಿಮ್ಮ ಬೂತ್ ಸ್ಲಿಪ್ ಅನ್ನು ಪಡೆಯಿರಿ. ನಿಮ್ಮ ಚುನಾವಣೆಯ ಗುರುತಿನ ಕಾರ್ಡ್ ನ ನಂಬರ್ ಹಾಕಿ ಮೆಸೆಜ್ ಮಾಡಿದ್ರೆ ಕ್ರಮ ಸಂಖ್ಯೆ ಹಾಗೂ ಭಾಗ ಸಂಖ್ಯೆಯ ಮಾಹಿತಿ ಕ್ಷಣಾರ್ಧದಲ್ಲಿಯೇ ಸಿಗುತ್ತದೆ ನೋಡಿ.
ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ ಉಳಿದ 17 ಅಭ್ಯರ್ಥಿಗಳು : ಚುನಾವಣಾಧಿಕಾರಿ ದಿವ್ಯ ಪ್ರಭು
11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ಅಭ್ಯರ್ಥಿಗಳಲ್ಲಿ ಎಂಟು ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆಯಲು ನೀಡಿದ್ದ ಸಮಯದಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದು, ಅಂತಿಮವಾಗಿ ಧಾರವಾಡ ಲೋಕಸಭಾ ಚುನಾವಣಾ ಸ್ಪರ್ಧೆಯಲ್ಲಿ 17 ಜನ ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಅಂತಿಮವಾಗಿ 11- ಧಾರವಾಡ ಚುನಾವಣಾ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿಯಿಂದ ಪ್ರಲಾದ ಜೋಶಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ವಿನೋದ ಅಸೂಟಿ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ನಾಕಿ ಭಾರತೀಯ ಏಕತಾ ಪಾರ್ಟಿಯಿಂದ ಜಾವೀದ ಅಹಮದ್ ಬೆಳಗಾಂವಕರ್, ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕರೆಣ್ಣವರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹಮ್ಮದ ಇಸ್ಮಾಯಿಲ್ ಮುಕ್ತಿ, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದಿಂದ ವಿನೋದ ದಶರಥ ಘೋಡಕೆ, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)ಯಿಂದ ವೆಂಕಟೇಶ ಪ್ರಸಾದ ಎಚ್.. ಸೋಷಲಿಸ್ಟ್ ಯೂನಿಟಿ ಸೆಂಟರ್ ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಗುರಪ್ಪ ಹೆಚ್.ಇಮ್ರಾಪೂರ, ಪ್ರವೀಣ ಹ.ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲ ಅಹ್ಮದ ಡಿ ಮುಲ್ಲಾ ಮತ್ತು ಎಸ್.ಎಸ್.ಪಾಟೀಲ್ ಸ್ಪರ್ಧಿಸಿದ್ದಾರೆ.
26 & 27 ರಂದು 85 ವರ್ಷ ಮೇಲ್ಪಟ್ಟ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ
ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲಿಕ್ಕೆ ಅವಕಾಶ ನೀಡಿದ್ದು, ಎಪ್ರೀಲ್ 26 ಮತ್ತು 27 ರಂದು 85 ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷ ಚೇತನರು ಹಾಗೂ ಕೋವಿಡ್-19 ಶಂಕಿತ ಅಥವಾ ಭಾದಿತ ವ್ಯಕ್ತಿಗಳು ಮನೆಯಿಂದಲೇ ಮತದಾನ ಮಾಡಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಬಾಗಲಕೋಟೆ ಮತಕ್ಷೇತ್ರದಲ್ಲಿ ನರಗುಂದ ಮತಕ್ಷೇತ್ರ ಸೇರಿದಂತೆ ಒಟ್ಟು 2139 ಮತದಾರರು ಮನೆಯಿಂದಲೇ ಮತದಾನ ಹಕ್ಕನ್ನು ಚಲಾಯಿಸಲಿದ್ದಾರೆ. ಅದರಲ್ಲಿ 85 ವರ್ಷ ಮೇಲ್ಪಟ್ಟವರು 1420 ಹಾಗೂ ವಿಶೇಷ ಚೇತನರು 719 ಜನ ಇದ್ದಾರೆ. ಮತದಾನಕ್ಕೆ 97 ಮಾರ್ಗಗಳನ್ನು ಮಾಡಲಾಗಿದ್ದು, ಇಬ್ಬರು ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಬರವರ್, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ತಲಾ ಒಬ್ಬರು ಸೇರಿದ ತಂಡವು ನೋಂದಾಯಿತ ಮತದಾರ ಮನೆಗೆ ತೆರಳಿ ಮತದಾನ ಮಾಡಿಸಲಿದ್ದಾರೆ. ಈ ಕಾರ್ಯಕ್ಕೆ ಒಟ್ಟಾರೆಯಾಗಿ 485 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ನಮೂನೆ-12ಡಿರಡಿ ಮನೆಯಿಂದ ಅಂಚೆ ಮತಪತ್ರ ಮೂಲಕ ಮತದಾನ ಮಾಡಲು ಅರ್ಜಿ ಸಲ್ಲಿಸಿ ಅರ್ಹರಾದ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲಿಕ್ಕೆ ನಿಯೋಜಿಸಲಾದ ತಂಡವು ಎಪ್ರೀಲ್ 26 ರಂದು ತಮ್ಮ ಮನೆಗೆ ತೆರಳಿದಾಗ ಅರ್ಹ ಮತದಾರರು ಮನೆಯಲ್ಲಿಯೇ ಇದ್ದು, ಅಂಚೆ ಮತಪತ್ರ ಮೂಲಕ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ. ಆ ಸಮಯದಲ್ಲಿ ಮತದಾರ ಲಭ್ಯವಿಲ್ಲದಿದ್ದರೆ, ಎಪ್ರಿಲ್ 27 ರಂದು ಮತ್ತೊಂದು ಬಾರಿ ಭೇಟಿ ಕೊಡಲಾಗುತ್ತದೆ. ಆಗಲೂ ಮತದಾರ ಲಭ್ಯವಾಗದಿದ್ದರೆ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಅಲ್ಲದೇ ಗೈರು ಹಾಜರಿ ಮತದಾರರು ಮತಗಟ್ಟೆಗೆ ಬಂದು ಮತ ಹಾಕಲು ಅವಕಾಶ ಇರುವುದಿಲ್ಲವೆಂದು ತಿಳಿಸಿದ್ದಾರೆ. ಮುಧೋಳ ಕ್ಷೇತ್ರದಲ್ಲಿ 188 ಹಿರಿಯ ನಾಗರಿಕರು, 101 ವಿಶೇಷ ಚೇತನರು ಸೇರಿ ಒಟ್ಟು 289 ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ.
ತೇರದಾಳ ಕ್ಷೇತ್ರದಲ್ಲಿ 206 ಹಿರಿಯ ನಾಗರಿಕರು, 117 ವಿಶೇಷ ಚೇತನರು ಸೇರಿ ಒಟ್ಟು 323, ಜಮಖಂಡಿ ಮತಕ್ಷೇತ್ರದಲ್ಲಿ 97 ಹಿರಿಯ ನಾಗರಿಕರು, 50 ವಿಶೇಷ ಚೇತನರು ಸೇರಿ ಒಟ್ಟು 147, ಬೀಳಗಿ ಮತಕ್ಷೇತ್ರದಲ್ಲಿ 292, 125 ವಿಶೇಷ ಚೇತನರು ಸೇರಿ ಒಟ್ಟು 417, ಬಾದಾಮಿ ಮತಕ್ಷೇತ್ರದಲ್ಲಿ 210 ಹಿರಿಯ ನಾಗರಿಕರು, 116 ವಿಶೇಷ ಚೇತನರು ಸೇರಿ ಒಟ್ಟು 326, ಬಾಗಲಕೋಟೆ ಮತಕ್ಷೇತ್ರದಲ್ಲಿ 198 ಹಿರಿಯ ನಾಗರಿಕರು, 82 ವಿಶೇಷ ಚೇತನರು ಸೇರಿ ಒಟ್ಟು 280 ಹಾಗೂ ಹುನಗುಂದ ಮತಕ್ಷೇತ್ರದಲ್ಲಿ 146 ಹಿರಿಯ ನಾಗರಿಕರು, 73 ವಿಶೇಷ ಚೇತನರು ಸೇರಿ ಒಟ್ಟು 219 ಹಾಗೂ ನರಗುಂದ ಮತಕ್ಷೇತ್ರದಲ್ಲಿ 83 ಹಿರಿಯ ನಾಗರಿಕರು. 55 ವಿಶೇಷ ಚೇತನರು ಸೇರಿ ಒಟ್ಟು 138 ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.