ಒಂದು ಸ್ಥಳದಲ್ಲಿ ನಿರ್ದಿಷ್ಟ ಕಾಲಾವಧಿಯಲ್ಲಿ ಇರುವ ಸರಾಸಲ ವಾತಾವರಣ ಪರಿಸ್ಥಿತಿಯನ್ನು ಹವಾಮಾನ ಎಂದು ಕರೆಯಲ್ಪಡುತ್ತದೆ. ಮಳೆ, ಬಿಸಿಲು, ವಾಯುಭಾರ, ಗಾಳಿ ಹಾಗೂ ಉಷ್ಣತೆಗಳ ಆಧಾರದ ಮೇಲೆ ಆಯಾ ಸ್ಥಳದ ಹವಾಮಾನವನ್ನು ನಿರ್ಧಲಿಸಲಾಗುತ್ತದೆ. ವಾತಾವರಣದಲ್ಲಿನ ಬದಲಾವಣೆಯು ಆಕಸ್ಮಿಕವಾಗಿ ಆಗಬಹುದು ಮತ್ತು ಸರಿಯಾಗಿ ದೀರ್ಘಕಾಲದ ವಾತಾವರಣವನ್ನು ಗಮನಿಸಿದರೆ ಅಸಾದರಣವೂ ಆಗಿರುವುದು. ಭೂವಾತಾವರಣದಲ್ಲಿ ಸಾವಿರಾರು ವರ್ಷಗಳ ಇತಿಹಾಸದಲ್ಲಿ ನಿಧಾನವಾಗಿ ಹಲವಾರು ಬದಲಾವಣೆಗಳಾಗಿದ್ದು, ಬಹುತೇಕ ಬಗೆಯ ಜೀವಿಗಳು ಈ ಬದಲಾಣಿಗೆ ಸಹಜವಾಗಿ ಒಗ್ಗಿಕೊಂಡಿರುವವು. ಆದರೆ ಕಳೆದ 150-200 ವರ್ಷಗಆಂದೀಚೆ ಈ ಬದಲಾವಣೆಯು ಅತೀ ವೇಗ ಪಡೆದುಕೊಂಡಿದ್ದು, ಹಲವು ಬಗೆಯ ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳು ಇದಕ್ಕೆ ಒಗ್ಗಿಕೊಳ್ಳಲಾಗದೆ ನಶಿಸಿ ಹೋಗಿರುವವು. ಇಂತಹ ಬದಲಾವಣೆಗೆ ಮಾನವನ ಚಟುವಟಿಕೆಗಳೇ ಮುಖ್ಯ ಕಾರಣ ಎಂದು ವೈಜ್ಞಾನಿಕವಾಗಿ ಕಂಡುಬಂದಿದೆ.ಬೇಸಿಗೆ ಕಾಲದಲ್ಲಿ ಮಣ್ಣಿನ ತಾಪಮಾನ ಹೆಚ್ಚಿರುತ್ತದೆ ಹಾಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಕಡಿಮೆ ಇರುತ್ತದೆ. ಹಾಗಾಗಿ ರೈತರಿಗೆ ಯಾವ ಸಮಯದಲ್ಲಿ ಮಣ್ಣಿನ ತಾಪಮಾನ ವಾನ್ನು ಕಾಪಾಡಿಕೊಳ್ಳಲು ಎಸ್ಟು ನೀರನ್ನು ಬಿಡಬೇಕು ಎನ್ನುವ ಬುದ್ಧಿವಂತಿಕೆ ಮತ್ತು ಜ್ಞಾನ ಅವಶ್ಯವಾಗಿರುತ್ತದೆ. ಮಳೆಯ ಮುನ್ಸೂಚನೆ ನಿಮಗೆ ಗೊತ್ತಾದರೆ ಕೀಟನಾಶಕ ಶಿಲಿಂದ್ರಣಾಶಕ ಸಿಂಪರಣೆಯನ್ನು ಮಾಡಬೇಕೋ ಬೇಡೋ ಎಂಬುದರ ಬಗ್ಗೆ ಜ್ಞಾನ ಬರುತ್ತದೆ. ಇದರಿಂದ ನೀವು ಔಷಧಿಗಾಗಿ ಖರ್ಚು ಮಾಡಿರುವುದು ಮತ್ತು ಕೀಟನಾಶಕಗಳಿಗೆ ಖರ್ಚು ಮಾಡಿದ ಹಣದ ತ್ರುಪ್ತಿ ಸಿಗುತ್ತದೆ ಮತ್ತು ಅದರ ಉಪಯೋಗ ಕೂಡ ಕಂಡುಕೊಂಡು ಕೀತಾಭಾದೆಯ ಸಮಸ್ಯೆಯನ್ನು ಹೋಗಲಾಡಿಸಬಹುದು ಮತ್ತು ರೋಗದ ನಿಯಂತ್ರಣವನ್ನು ಮಾಡಲು ಮುಂದಾಗಬಹುದು ಮತ್ತು ಬಿತ್ತನೆಯ ಸಮಯದಲ್ಲಿ ಕೂಡ ಈ ಆ್ಯಪ್ ಗಳು ಬಿತ್ತನೆ ನಾಳೆ ಬಿತ್ತನೆ ಮಾಡಬೇಕೋ ಬೇಡವೋ ಎಂದು ತಿಳಿಯಲು ಸಹಾಯ ಮಾಡುತ್ತವೆ.
ಹವಾಗುಣ ಬದಲಾವಣೆಯು ಮಾನವನ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಭೂಮಿಯ ಸರಾಸಲ ಹೊರಮೈ ಉಷ್ಣತೆಯು 19 ನೇ ಶತಮಾನದ ಅಂತ್ಯದಿಂದೀಚೆಗೆ ಸರಾಸಲ 1 ಡಿಗ್ರಿ ಸೆಂ. ನಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯು ಕೃಷಿಗಾರಿಕೆ ಮೇಲೆ ಪ್ರತ್ಯೇಕ ಹಾಗೂ ಪರೋಕ್ಷ ಪಲಣಾಮಗಳನ್ನು ಉಂಟುಮಾಡುತ್ತದೆ. ಉಷ್ಣತೆ ಮತ್ತು ಮಳೆಯಲ್ಲಿನ ವ್ಯತ್ಯಾಸಗಳು ನೇರ ಪಲಣಾಮಗಳನ್ನು ಉಂಟುಮಾಡುತ್ತವೆ. ಭಾರತದಲ್ಲಿ ಬರುವ ದಶಕಗಳಲ್ಲಿ ತಾಪಮಾನ ಏಲಕೆಯಿಂದ ಹಲವಾರು ಬೆಳೆಗಳ, ಧಾನ್ಯಗಳ ಇಳುವಲ ಪ್ರಮಾಣದಲ್ಲಿ ಭಾಲೀ ಇಆಕೆಯಾಗದೆ ಎಂದು ಹೇಳಲಾಗುತ್ತಿದೆ. ಮಿತಿಮೀಲದ ಉಷ್ಣತೆ, ಏಪಲತ ಮಳೆ, ನೆರೆ ಪ್ರವಾಹಗಳು, ಬರಗಾಲಗಳು ಮೊದಲಾದವು ಕೂಡ ಹೆಚ್ಚಿನ ಬೆಳೆ ಉತ್ಪಾದನೆ ಮತ್ತು ಕೃಷಿ ಭೂಮಿಗಳ ಮೇಲೆ ದುಷ್ಪಲಣಾಮ ಚೀರುತ್ತವೆ. ಬಿಸಿ ಹವೆ ಹವಾಗುಣವು ಮಳೆಯ: ಏನ್ಯಾಸದಲ್ಲಿ ಬದಲಾವಣೆಯನ್ನು ತರುತ್ತದೆ. ಇದಲಂದಾಗಿ ಕ್ಷಾಮ ಮತ್ತು ಪ್ರವಾಹಗಳು ಹೆಜ್ಜೆಗೆ ಮತ್ತು ಮೇಅಂದ ಮೇಲೆ ಮರುಕಲಿಸುತ್ತವೆ.
ಬೆಳೆ ಬೆಳವಣಿಗೆ ಮತ್ತು ಉತ್ಪಾದನೆಯಲ್ಲಿ ಹವಾಮಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲ್ಲಾ ಇತರ ಬೌದ್ಧಿಕ ಅಂಶಗಳು, ಒಳಹರಿವು ಮತ್ತು ಕೃಷಿ ಪದ್ಧತಿಗಳನ್ನು ಕುಶಲತೆಯಿಂದ ನಿರ್ವಹಿಸಬಹುದು, ಆದರೆ ಹವಾಮಾನದ ವ್ಯತ್ಯಾಸಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹವಾಮಾನಕ್ಕೆ ತಕ್ಕಂತೆ ಕೃಷಿ ಚಟುವಣಕೆಗಳೂ ಸಹ ಬದಲಾಗಬೇಕಾಗಿದೆ. ಹವಾಮಾನ ಮಾಹಿತಿಯನ್ನು ಒದಗಿಸುವುದರ ಮೂಲಕ ಬೆಳೆಗಳ ಮೇಲೆ ಆಗಬಹುದಾದ ಪ್ರತಿಕೂಲ ಪಲಣಾಮಗಳನ್ನು ಬಹಳಷ್ಟು ಮಟ್ಟಗೆ ತಗ್ಗಿಸಬಹುದು. ಹೀಗಾಗಿ ಕೃಷಿ ಕಾರ್ಯಾಚರಣೆಗಳಲ್ಲಿನ ಅಪಾಯವನ್ನು ಕಡಿಮೆ ಮಾಡಬಹುದು. ಈ ನಿಟ್ಟನಲ್ಲಿ ಹವಾಮಾನ ಮುನ್ಸೂಚನೆಯು ಪ್ರಮುಖ ಪಾತ್ರವಹಿಸುತ್ತದೆ.
ಭಾರತೀಯ ಹವಾಮಾನ ಇಲಾಖೆ (IMD) :-
ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಒಂದು ಸಂಸ್ಥೆಯಾಗಿದೆ. ಇದು ಹವಾಮಾನ ಅವಲೋಕನಗಳು, ಹವಾಮಾನ ಮೂನ್ಸೂಚನೆ ಮತ್ತು ಭೂಕಂಪಶಾಸ್ತ್ರದ ಪ್ರಮುಖ ಸಂಸ್ಥೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD). ಭೂ ವಿಜ್ಞಾನ ಸಚಿವಾಲಯವು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಮೂನ್ಸೂಚನೆ ಮತ್ತು ಇತ್ತೀಚಿನ ಉಪಕರಣಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಎಚ್ಚಲಕೆ ಸೇವೆಗಳ ಪ್ರಸಾರದಲ್ಲಿ ಸುಧಾರಣೆಗಾಗಿ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ಈ ಉಪಕ್ರಮವನ್ನು ಇನ್ನಷ್ಟು ಹೆಚ್ಚಿಸಲು ಭಾರತೀಯ ಹವಾಮಾನ ಇಲಾಖೆ (IMD) ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ಪುಣಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಕರ್ನಾಟಕ ರಾಜ್ಯ ನೈಸರ್ಲಕ ವಿಕೋಪ ಉಸ್ತುವಾಲ ಕೇಂದ್ರವು (KSNDMC) ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರು ಮತ್ತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮೋಬೈಲ್ ಅಪ್ಲಿಕೇಶಗಳನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ಗಳ ಮಾಹಿತಿ, ಬಳಸುವ ವಿಧಾನ, ಅದರ ಉಪಯೋಗಗಳು ಈ ಕೆಳಗಿನಂತಿವೆ. ಭಾರತೀಯ ಹವಾಮಾನ ಇಲಾಖೆ (IMD) ತನ್ನ ಮೊದಲ ಆ್ಯಪ್ “ಮೌಸಮ್” 2020 ರ ಜುಲೈ 27 ರಂದು ಬಿಡುಗಡೆ ಮಾಡಿತು.
MAUSAM “ಮೌಸಮ್” ಅಪ್ಲಿಕೇಶನ್ ಒದಗಿಸುವ ಸೇವೆಗಳು:
- ಪ್ರಸ್ತುತ ಹವಾಮಾನ – ಸುಮಾರು 200 ನಗರಗಳಿಗೆ ಮಳೆ, ತಾಪಮಾನ, ಸಾಪೇಕ್ಷ ಆದ್ರತೆ, ಗಾಆಯವೇಗ ಮತ್ತು ಗಾಆಯವಿಕ್ಕುಗಳ ಮಾಹಿತಿಯನ್ನು ದಿನಕ್ಕೆ 8 ಬಾಲ ನವೀಕಲಸಿ ನೀಡುತ್ತದೆ. ಸೂರ್ಯೋದಯ/ಸೂರ್ಯಾಸ್ತ ಮತ್ತು ಚಂದ್ರೋದಯ/ಚಂದ್ರಾಸ್ತದ ಮಾಹಿತಿಯನ್ನು ಸಹ ನೀಡುತ್ತದೆ.
- ನಗರ ಹವಾಮಾನ ಮುನ್ಸೂಚನೆ ಕಳೆದ 24 ಗಂಟೆಗಳ ಹವಾಮಾನ ಸ್ಥಿತಿ ಮುಂದಿನ ಏಳು ದಿನಗಳ ಹವಾಮಾನ ಮುನ್ಸೂಚನೆ, ಭಾರತದ ಸುಮಾರು 450 ನಗರಗಳಿಗೆ ನೀಡುತ್ತದೆ.
- ಪ್ರಸ್ತುತ ಹವಾಮಾನ ಮುನ್ಸೂಚನೆ ರಾಜ್ಯ ಹವಾಮಾನ ಕೇಂದ್ರಗಳು ಪ್ರತಿ ಮೂರು ಗಂಟೆಗಳಿಗೊಮ್ಮೆ ಸ್ಥಳೀಯ ಹವಾಮಾನ ವಿದ್ಯಮಾನಗಳು ಮತ್ತು ಅವುಗಳ ತೀವ್ರತೆಯ ಎಚ್ಚರಿಕೆಯನ್ನು ಸುಮಾರು 800 ಕೇಂದ್ರಗಳು ಮತ್ತು ಜಿಲ್ಲೆಗಳಿಗೆ ನೀಡುತ್ತದೆ.
- ನಾಗರೀಕರನ್ನು ಎಚ್ಚರಿಸಲು ಎಲ್ಲಾ ಜಿಲ್ಲೆಗಳಿಗೆ ಮುಂದಿನ ಐದು ದಿನಗಳವರೆಗೆ ಅಪಾಯಕಾರಿ ಹವಾಮಾನ ಮುನ್ಸೂಚನೆಯನ್ನು ವಿವಿಧ ಬಣ್ಣದ ಕೋಡ್ ನಿಂದ ಎಂದರೆ ಕೆಂಪು ಕಿತ್ತಳೆ ಮತ್ತು ಹಳದಿ ಬಣ್ಣದಿಂದ ದಿನಕ್ಕೆ ಎರಡು ಬಾರಿ ಎಚ್ಚರಿಕೆಗಳನ್ನು ನೀಡುತ್ತದೆ.
MAUSAM ಅಪ್ಲಿಕೇಶನ್ ಡೌನ್ಲೋಡ್ ಮಾಡುವುದು ಹೇಗೆ?
- ಅಂಡೋಮ್ಸ್ playstore ಗೆ ಹೋಣ MAUSAM ಎಂದು ಟೈಪ್ ಮಾಡಿ
- ಮೌಸಮ್ ಐಎಂಡಿ-ಎಎಎಸ್ ಬೆಡಗ
3.Install/ಸ್ಥಾಪಿಸು - Open/ ತೆರೆಯಲ
- Use/ ಬಳಸಿ
ಮೇಘದೂತ MEGHDOOT APP
ಭಾರತ ಹವಾಮಾನ ಇಲಾಖೆ (IMD), ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ಪುಣಿ, ಭಾರತೀಯ ಕೃಷಿ ಅನುಸಂಧಾನ ಪಲಷತ್ (ICAR) ಜಂಟಿಯಾಗಿ ಏನಾಂಕ 7, ಆಗಷ್ಟ 2019 ರಂದು ಭೂ ವಿಜ್ಞಾನ ಸಚಿವಾಲಯದ ಸಂಸ್ಥಾಪನಾ ದಿನಾಚರಣೆ ದಿನದಂದು “ಮೇಘದೂತ” (MEGHDOOT) ಅಪ್ಲಿಕೇಷನ್‌ನನ್ನು ಬಿಡುಗಡೆ ಮಾಡಿತು.
MEGHDOOT “ಮೇಘದೂತ” ಅಪ್ಲಿಕೇಶನ್ ಒದಗಿಸುವ ಮಾಹಿತಿಗಳು:
ಹವಾಮಾನ ಮೂನ್ಸೂಚನೆ: ಈ ಅಪ್ಲಿಕೇಶನ್ ಮುಂದಿನ ಐದು ದಿನಗಳವರೆನ ಗಲಷ್ಟ ಮತ್ತು ಕನಿಷ್ಟ ತಾಪಮಾನ, ಮಳೆಯ ಪ್ರಮಾಣ, ಆದ್ರ್ರತೆ, ಗಾಆಯವೇಗ, ಗಾಳಿಯವಿತ್ತು, ಮೋಡದ ಪ್ರಮಾಣ ಇವುಗಳ ಮೂನ್ಸೂಚನೆ ಮಾಹಿತಿಯನ್ನು ಒದಲಸುತ್ತದೆ.
ಹವಾಮಾನ ಆಧಾಲತ ಬೆಳೆ ಸಲಹೆ :
ತಜ್ಞರ ಶಿಫಾರಸ್ಸಿನಂತೆ ನಿರ್ಲಷ್ಟ ಸ್ಥಳಗಳ ಕೃಷಿ ಚಟುವಟಿಕೆಗಳಿಗೆ ಅನುಗುಣವಾಗಿ ಹವಾಮಾನ ಆಧಾಲತ ಕೃಷಿ ಸಲಹೆಗಳನ್ನು ಅಪ್ಲಿಕೇಶನ್ ನೊಂದಿಗೆ ಸಂಯೋಜಿಸಲಾಗಿದೆ.ಕೃಷಿ, ಜಾನುವಾರು, ಮೀನುಗಾಲಕೆ, ರೇಷ್ಮೆ ಕೃಷಿ ಮತ್ತು ಜೇನು ಸಾಕಣಿಕೆ ಸಲಹೆಗಳು ಸಹ ಲಭ್ಯವಿರುತ್ತವೆ. ಆಯಾ ಪ್ರದೇಶದ ಪ್ರಮುಖ ಬೆಳೆಗಳಿಗೆ ಪ್ರಚಲಿತ ಹವಾಮಾನದಿಂದಾಗುವ ಪಲಣಾಮಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ತ್ವಲತ ಕೃಷಿ ಚಟುವಟಿಕೆಗಳು (ಚಿತ್ತನೆ ಮೇಲುಗೋಬ್ಬರ ಕೊಡುವುದು, ನೀರು ನಿರ್ವಹಣೆ, ಸಿಂಪರಣೆ, ಕಟಾವು) ಮತ್ತು ಇತರೆ ಕೃಷಿ ಚಟುವಟಿಕೆಗಳ ಯೋಜನೆ ರೂಪಿಸಲು ಸಹಾಯಕರವಾಗಿದೆ, ಈ ಎಲ್ಲಾ ಮಾಹಿತಿಯನ್ನು ಕನ್ನಡ, ಇಂಗ್ಲಿಷ್ ಸೇಲದಂತೆ 12 ಭಾರತೀಯ ಪ್ರಾದೇಶಿಕ ಭಾಷೆಯಲ್ಲಿ ಜಿಲ್ಲಾವಾರು ಮಾಹಿತಿ ಒದಗಿಸುತ್ತದೆ.
“ಮೇಘದೂತ” (MEGHDOOT) ಅಪ್ಲಿಕೇಶನ್ ಡೌನ್ಲೋಡ್ ಮಾಡುವುದು ಹೇಗೆ?
ಆಂಡ್ರಾಯ್ಡ್ play store ಗೆ ಹೋಗಿ MEGHDOOT ಎಂದು ಟೈಪ್ ಮಾಡಿ
ಮೇಘದೂತ್ IMD-AAS ಬೇಡ
Install / ಸ್ಥಾಪಿಸು
Open /ತೆರೆಯಲ
Feed your mobile number/ ಮೊಬೈಲ್ ನಂಬರ್ ಅನುಮೋದಿಸಿಆದ್ಯತೆಯ ಭಾಷೆ ಇವುಗಳನ್ನು ಆಯ್ಕೆಮಾಡಿ
Login /ಲಾನ್.
DAMINI (ದಾಮಿನಿ) :- ಗುಡುಗು ಮತ್ತು ಮಿಂಚಿನ ಮುನ್ಸೂಚನೆ ಮಾಹಿತಿಗೆ ದಾಮಿನಿ ಮತ್ತು ಸಿಡಿಲು ಆಪ್ ಬಳಸಿ
ಮಿಂಚು ಇದು ಸಾಮಾನ್ಯವಾಗಿ ಬಿರುಗಾಳಿ-ಮಳೆ ಸಮಯದಲ್ಲಿ ವಾಯುಮಂಡಲದಲ್ಲಿ ವಿದ್ಯುತ್ ಶಕ್ತಿ ಬಿಡುಗಡೆಯಾಗುವ ಪ್ರಕ್ರಿಯೆ, ಪ್ರತೀ ಸೆಕೆಂಡಿಗೆ 50 ಲಂದ 100 ಸಲ ಮಿಂಚು ಭೂಮಿಗೆ ಬಡಿಯುತ್ತದೆ, ಜಗತ್ತಿನಾದ್ಯಂತ 20,000 ಕ್ಕಿಂತಲೂ ಹೆಚ್ಚಿನ ಜನ ಮಿಂಚಿನಿಂದ ಬಾಧಿತರಾಗುತ್ತಾರೆ ಹಾಗೂ ಪ್ರತಿ ವರ್ಷ ಸಾವಿರಾರು ಜನ ಮಿಂಚಿನ ಬಡಿತದಿಂದ ಸಾವನಪ್ಪುತ್ತಾರೆ. ಗುಡುಗು ಮತ್ತು ಮಿಂಚಿನ ಮೂನ್ಸೂಚನೆಯ ಮಹತ್ವವನ್ನು ಗಮನಿದಲ್ಲಿಟ್ಟುಕೊಂಡು ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ಮಣಿ, ಮತ್ತು ಭಾರತ ಹವಾಮಾನ ಇಲಾಖೆ (IMD) ಜಂಟಿಯಾಗಿ “ದಾಮಿನಿ” ಮೊಬೈಲ್ ಅಪ್ಲಿಕೇಷನ್‌ನನ್ನು ಅಭಿವೃದ್ಧಿ ಪಡಿಸಿವೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾಲ ಕೇಂದ್ರವು(KSNDMC) “ಸಿಡಿಲು” ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಜಿಪಿಎಸ್ (GPS) ಮಾಹಿತಿ ಮೂಲಕ ಸಮೀಪದಲ್ಲಿ 20 ಲಂದ 40 ಕೀ.ಮಿ. ಅಂತರದಲ್ಲಿ ಸಂಭವಿಸಬಹುದಾದ ಮಿಂಚಿನ ಮೂನ್ಸೂಚನೆಯನ್ನು 30 ರಿಂದ 45 ನಿಮಿಷಗಳ ಮುಂಚಿತವಾಗಿ ಎಚ್ಚಲಕೆಯನ್ನು ನೀಡುತ್ತದೆ.
ಅಪಾಯದ ಮಟ್ಟವನ್ನು ತಿಆಸಲು ನಾಲ್ಕು ವಿವಿಧ ಬಣ್ಣಗಳ ವಿಭಾಗಗಳನ್ನು ಮಾಡಿದ್ದು, ಕೆಂಪು ಬಣ್ಣವು ಅಪಾಯದ ಮಟ್ಟ ಬಳಕೆದಾರರ ಸ್ಥಳದಿಂದ ಸುಮಾರು 1 ಕೀ.ಮೀ ವ್ಯಾಪ್ತಿಯಲ್ಲಿ ಶೇ. 90 ಸಿಡಿಲು ಬಡಿಯುವ ಸಾಧ್ಯತೆ ಇದೆ, ಹಳದಿ ಬಣ್ಣವು ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಬಡಿಯುವ ಸಾಧ್ಯತೆ ಇದೆ ಎಂದು ತಿಳಿಸುತ್ತದೆ ಮತ್ತು ಹಸಿರು ಬಣ್ಣವೂ ಸುರಕ್ಷಿತ ಎಂಬ ಸೂಚನೆ ನೀಡುತ್ತದೆ.
“ದಾಮಿನಿ” ಮತ್ತು ಸಿಡಿಲು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ವಿಧಾನ :
- ಆಂಡ್ರಾಯ್ಡ್ ಪ್ಲೇ ಸ್ಟೋರ್ ಗೆ ಹೋಗಿ ದಾಮಿನಿ ಅಥವಾ ಸಿಡಿಲು ಎಂದು ಟೈಪ್ ಮಾಡಿ
- ದಾಮಿನಿ ಅಥವಾ ಸಿಡಿಲು ಮೇಲೆ ಕ್ಲಿಕ್ ಮಾಡಿ
- Install / ಸ್ಥಾಪಿಸು
- Open/ ತೆರೆಯಲ
5.On GPS location / ನಿಮ್ಮ ಮೊಬೈಲ್ ಜಿಪಿಎಸ್ ಅನ್ನು ಚಾಲ್ತಿಗೊಳಿಸಿ. - Use/ಬಳಸಿ
HAVAAMAANA KRISHI (ಹವಾಮಾನ ಕೃಷಿ) :-
ಈ ಅನ್ನು ವಿಶೇಷವಾಗಿ ಉತ್ತರ ಕರ್ನಾಟಕ ಅಲ್ಲಿಗಳ ಹವಾಮಾನ ಮುನ್ಸೂಚನೆ ಮತ್ತು ಹವಾಮಾನ ಆಧಾಲತ ಕೃಷಿ ಸಲಹೆಗಳಗಾಗಿ ಅಭಿವೃದ್ಧಿ ಪಡಿಸಿ ರೈತರಿಗೆ ಸಮರ್ಪಿಸಲಾದ ಕೃಷಿ ವಿಶ್ವವಿದ್ಯಾಲಯ ಧಾರವಾಡ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಕೃಷಿ ಹವಾಮಾನಕ್ಕತ್ತದ ಸಮತ ಸಂಶೋಧನಾ ಯೋಜನೆಯ ಮೊದಲ ಭ್ರಮಣವಾಣಿಯಾಗಿದೆ.
“ಹವಾಮಾನ ಕೃಷಿ” ಆಪ್ ಮೂಲಕ ರೈತರು ತಮ್ಮ ಜಿಲ್ಲೆಯ ಹವಾಮಾನ ಮೂನ್ಸೂಚನೆ ಮಾಹಿತಿ ಹಾಗೂ ಸೂಕ್ತ ಕೃಷಿ ಸಲಹೆಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪಡೆಯಬಹುದು.
HAVAAMAANA KRISHI “ಹವಾಮಾನ ಕೃಷಿಗೆ ಭ್ರಮಣವಾಣಿ ಒದಗಿಸುವಸೇವೆಗಳು:
ಕೃಷಿ ವಿಶ್ವವಿದ್ಯಾಲಯ ಧಾರವಾಡ ವ್ಯಾಪ್ತಿಯಲ್ಲಿ ಬರುವ ಉತ್ತರ ಕರ್ನಾಟಕದ ಏಳು ಅಲ್ಲಿಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೆ, ಉತ್ತರ ಕನ್ನಡ ಹಾಗೂ ವಿಜಯಪುರ ಜಿಲ್ಲೆಗಳ ಪ್ರಸ್ತುತ ಹವಾಮಾನ, ಅಲ್ಪಾವಧಿ ಮತ್ತು ಮಧ್ಯಮಾವಧಿ ಮೂನ್ಸೂಚನೆ ಹಾಗೂ ಕೃಷಿ ಸಲಹೆಗಳನ್ನು ಒದಗಿಸುತ್ತದೆ.