Breaking
Sun. Dec 22nd, 2024

ರಾಜ್ಯ ಸರ್ಕಾರದಿಂದ 18,658 ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ, apply now

Spread the love

VA ಗ್ರಾಮ ಲೆಕ್ಕಾಧಿಕಾರಿ, KAS ಕರ್ನಾಟಕ ಆಡಳಿತ ಸೇವೆ, PDO ಪಂಚಾಯತ್ ಅಭಿವೃದ್ಧಿ, BMTC ನಿರ್ವಾಹಕ, GROUP C(JE) ಗ್ರೂಪ್‌ ಸಿ, LAND SURVEYAR, ಭೂ ಮಾಪಕ ಅಧಿಕಾರಿ,KARNATAKA APEX BANK, ಕರ್ನಾಟಕ ಅಪೇಕ್ಸ್‌ ಬ್ಯಾಂಕ್, RRB TECHNICIANS ರೈಲ್ವೆ ಇಲಾಖೆ ಟೆಕ್ನಿಷಿಯನ್, RRB-RPF PC-SI ರೈಲ್ವೆ ಇಲಾಖೆ ಆರ್ ಪಿ ಎಫ್.

ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ

ಬೇಸಿಗೆ ಇರುವದರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ಬರುವ ಸಂಭವವಿದ್ದು, ಜಿಲ್ಲೆಯ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. ನವನಗರದ ಜಿಲ್ಲಾ ಪಾಲಿಕ್ಲಿನಿಕ್‌ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆಸ್ತೋ ಎಂಬ ವೈರಾಣುವಿನಿಂದ ಬರುವ ಈ ರೋಗ ರೈತರಿಂದ ಆರ್ಥಿಕ ಸಂಕಷ್ಟ ಉಂಟು ಮಾಡುತ್ತದೆ. ಈ ರೋಗದಿಂದ ಜಾನುವಾರುಗಳನ್ನು ಮುಕ್ತಗೊಳಿಸಲು ಲಸಿಕೆ ಅವಶ್ಯವಾಗಿ ಹಾಕಿಸಬೇಕು ಎಂದರು.

ಈ ರೋಗದ ಲಕ್ಷಣ ಬಾಯಿಯಲ್ಲಿ ಹುಣ್ಣು, ಮೇವು ತಿನ್ನದೇ ಇರುವುದು, ಬಾಯಿಯಿಂದ ರಕ್ತ ಸ್ರಾವವಾಗುವುದು. ಇದು ಬಾಯಿ ಬೇಕೆ ಲಕ್ಷಣವಾದರೆ, ಕಾಲಿನ ಗೊರಸುಗಳಲ್ಲಿ ಹುಣ್ಣಾಗಿ ಕಾಲು ನೆಲಕ್ಕೆ ಉರಲಾಗದಂತಹ ಪರಿಸ್ಥಿತಿ ಬರುತ್ತದೆ. ಅದರಲ್ಲಿ ಮಿಶ್ರತಳಿ ರಾಸುಗಳಿಗೆ ಯಾವಾಗ ಬೇಕಾದರೂ ಬರಬಹುದಾಗಿದೆ. ಆದರೆ ಸ್ವದೇಶಿ ತಳಿಯ ರಾಸುಗಳಿಗೆ ಬೇಸಿಗೆಯಲ್ಲಿ ಮಾತ್ರ ಕಂಡು ಬರುತ್ತದೆ. ಈ ರೋಗದಿಂದ ಬಳಲುತ್ತಿರುವ ರಾಸುಗಳಿಂದ ರಾಸುಗಳಿಗೆ ಗಾಳಿ ನೀರಿನಿಂದ ಸೊಂಕು ಹರಡುತ್ತದೆ. ಇದರಿಂದ ಮುಕ್ತಿ ಹೊಂದಲು ಪ್ರತಿ 6 ತಿಂಗಳಿಗೊಮ್ಮೆ ಲಸಿಕೆಯನ್ನು ಹಾಕಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಾಗೃತಿಯ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್. ಎಚ್.ಕರಡಿಗುಡ್ಡ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಜಿ.ಬಿ.ಗುರವ, ಬಾಗಲಕೋಟೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಆ‌ರ್. ಎಸ್.ಪದರಾ, ನಿವೃತ್ತ ಉಪ ನಿರ್ದೇಶಕ ಡಾ.ವಿ.ಕೆ.ಕೋವಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಆಸ್ತಿ ಮಾಲೀಕರುಗಳ ಗಮನಕ್ಕೆ

ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮಾಲೀಕರುಗಳಿಗೆ/ಅನುಭೋಗದಾರರಿಗೆ ತಿಳಿಸುವುದೇನೆಂದರೆ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯ ಪ್ರಕಾರ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯದ ಅಧಿಸೂಚನೆ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ ತೆರಿಗೆ ದರಗಳನ್ನು ವಸತಿ / ವಾಣಿಜ್ಯ/ ಕೈಗಾರಿಕೆ/ ಖಾಲಿ ನಿವೇಶನಗಳಿಗೆ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ ಆಧಾರದ ಮೇಲೆ ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ತೆರಿಗೆ ಭರಣಾ ಮಾಡಲು ಕೋರಿದೆ.

2024-25 ನೇ ಸಾಲಿನ ಆಸ್ತಿ ತೆರಿಗೆ ಎಪ್ರಿಲ್ 1 ರಿಂದ 30 ರವರೆಗೆ ಪಾವತಿಸಿದ್ದಲ್ಲಿ ಶೇ.5 ರಷ್ಟು ರಿಯಾಯತಿ ಪಡೆಯಬಹುದು. 2024- 25 ನೇ ಸಾಲಿನ ದಂಡ ರಹಿತ ಆಸ್ತಿ ತೆರಿಗೆ ಪಾವತಿಸಲು ಮೇ 1 ರಿಂದ ಪ್ರತಿ ತಿಂಗಳು ಶೇ 2 % ರಷ್ಟು ದಂಡ ವಿಧಿಸಿ ಆಸ್ತಿ ತೆರಿಗೆ ವಸೂಲಾತಿ ಮಾಡಲಾಗುವುದು. ಸಾರ್ವಜನಿಕರು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿ ಗದಗ-ಬೆಟಗೇರಿ ಅಭಿವೃದ್ಧಿಗೆ ಸಹಕರಿಸಲು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೌಕರರಿಗೆ ವೇತನ ಸಹಿತ ಸಾವ್ರರ್ತಿಕ ರಜೆ ಘೋಷಣೆ

ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26, 2024ರ ಶುಕ್ರವಾರದಂದು ಹಾಗೂ ಎರಡನೇ ಹಂತದಲ್ಲಿ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಶೋರಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮೇ 07, 2024ರ ಮಂಗಳವಾರ ನಡೆಸಲಾತ್ತಿದ್ದು, ಮತದಾನ ನಡೆಯುವ ದಿನದಂದು ವೇತನ ಸಹಿತ ಸಾವ್ರರ್ತಿಕರಜೆ ಘೋಷಿಸಲಾಗಿದೆ. ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾ ಪ್ರತಿನಿಧಿ ಕಾಯ್ದೆ 1951 ಹಾಗೂ 1881 ರ ಪ್ರಕಾರ ವೇತನ ಸಹಿತ ರಜೆ ನೀಡಲು ಆದೇಶಿಸಿದೆ.

ಮೊದಲ ಹಂತದಲ್ಲಿ ಲೋಕಸಭಾ ಚುನಾವಣಾ ಕ್ಷೇತ್ರಗಳಾದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಎರಡನೇ ಹಂತದಲ್ಲಿ ಲೋಕಸಭಾ ಕ್ಷೇತ್ರಗಳಾದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರುಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಹಾಗೂ ವಿಧಾನಸಭಾ ಉಪಚುನಾವಣೆಯು ಯಾದಗಿರಿ ಜಿಲ್ಲೆಯ ಶೋರಾಪುರ ಕ್ಷೇತ್ರಗಳಿಗೆ ನಡೆಯಲಿದೆ ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ಏಪ್ರಿಲ್ 26 ಮತ್ತು ಮೇ 07, 2024 ರಂದು ನಡೆಯುವ ಚುನಾವಣೆಗೆ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ, ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು ಎಂದು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Related Post

Leave a Reply

Your email address will not be published. Required fields are marked *