ಆತ್ಮೀಯ ರೈತ ಬಾಂಧವರೇ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರ್ಕಾರದಿಂದ ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯಧನವನ್ನು ನೀಡುತ್ತಿದ್ದಾರೆ. ಈ ಸಹಾಯಧನವನ್ನು ಪಡೆಯಲು ರೈತರ ಏನು ಮಾಡಬೇಕು ಎಂದು ತಿಳಿಯಲು ಲೇಖನವನ್ನು ಸಂಪರ್ಕವಾಗಿ ಓದಿ.
ಸರ್ಕಾರದಿಂದ ಯಾವ ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ?
ಡ್ರಾಗನ್ ಫೂಟ್, ದಾಳಿಂಬೆ, ಕಾಳು ಮೆಣಸು ಮತ್ತು ಅಡಿಕೆ ಈ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಸಹಾಯಧನವನ್ನು ಈ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಇಷ್ಟೇ ಅಲ್ಲದೆ ನಿಮ್ಮ ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಅಂತರ ಬೆಳೆಗಳನ್ನು ನೀವು ಬೆಳೆಯುತ್ತಿದ್ದರೆ ಅದಕ್ಕೂ ಈ ಸಹಾಯಧನವನ್ನು ಪಡೆಯಬಹುದು. ಕೆಲವೊಂದು ಅಂತರ ಬೆಳೆಗಳಾದ ಕೊಕ್ಕೋ, ಲವಂಗ, ಜಾಲಿ ಕಾಯಿ ಮತ್ತು ಬೆಣ್ಣೆ ಹಣ್ಣಿಗೆ ಸಹಾಯಧನ ನೀಡಲಾಗಿದೆ.
ಈ ಯೋಜನೆಗೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ನಮ್ಮ ರೈತರು ಈ ಯೋಜನೆಗೆ ಸಲ್ಲಿಸಬೇಕಾದ ಎಲ್ಲ ದಾಖಲಾತಿಗಳನ್ನು ಮೊದಲು ತೆಗೆದುಕೊಂಡು ನಿಮ್ಮ ತೋಟಗಳ ವ್ಯಾಪ್ತಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶನ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ಈ ಯೋಜನೆಗೆ ಸಂಬಂಧಪಟ್ಟ ಎಲ್ಲ ವಿಚಾರಗಳನ್ನು ತಿಳಿದು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಹಾಯಧನವನ್ನು ಪಡೆಯಬೇಕು.
ಯೋಜನೆಯ ಸಹಾಯಧನವನ್ನು ಯಾರು ಪಡೆಯಬಹುದು?
ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು. ಇಲ್ಲವಾದರೆ ನಿಮ್ಮ ಹತ್ತಿರ ಸಣ್ಣ ಹಿಡುವಳಿ ಪ್ರಮಾಣ ಪತ್ರ ಹೊಂದಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಜನರು ಬೇಗನೆ ನಿಮ್ಮ ತಾಲೂಕಿನಲ್ಲಿರುವ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ಈ ಯೋಜನೆಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಿ.
*ನಿಮ್ಮ ಹೊಲದ ಸರ್ವೆ ನಂಬರ್ ಇಂದ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಿರಿ*
*ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ಕಿಟ್ ಗಳನ್ನು ನೀಡುತ್ತಿದ್ದಾರೆ*
*ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರರಿಗೆ ವಿಶೇಷ ಪ್ಯಾಕೇಜ್ ಯೋಜನೆಯ ಅರ್ಜಿ*