2023-24 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಘಟಕಗಳ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯ ನಮೂನೆಗಳು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ರೈತರು ಕನಿಷ್ಟ 1 ಎಕರೆ ಜಮೀನನ್ನು ಹೊಂದಿರಬೇಕು. ಯೋಜನೆಯು ಒಣ ವಲಯ ಕ್ಷೇತ್ರದ ರೈತರಿಗೆ ಮಾತ್ರ ಸಂಬಂಧಪಟ್ಟಿರುತ್ತದೆ.
ಕ್ಷೇತ್ರಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಕೃಷಿ ಹೊಂಡದಿಂದ ನೀರು ಎತ್ತಲು ಡಿಸೇಲ್ / ಪೆಟ್ರೋಲ್ ಪಂಪ್ಲೆಟ್ ಹಾಗೂ ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು ಹನಿ) ನೀರಾವರಿ ಸೇರಿದಂತೆ ನಾನಾ ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುವುದು. ಒಂದುವೇಳೆ ಸಂಬಂಧಪಟ್ಟ ತಾಲೂಕಿಗೆ / ಹೋಬಳಿಗೆ ನಿಗದಿಪಡಿಸಿದ ಗುರಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾದರೆ ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಗುರಿಗಳನ್ವಯ ಆಯ್ಕೆ ಮಾಡಲಾಗುವುದು.
ಕೊಪ್ಪಳ- ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದ್ದು, ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕರಾದ ಪ್ರಾಣೇಶ್ ಆದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯನಗರ– ಆಸಕ್ತ ರೈತರು ಅರ್ಜಿ ನಮೂನೆಯನ್ನು ಸಂಬಂಧಿಸಿದ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಡಿ.31 ರೊಳಗಾಗಿ ಸಲ್ಲಿಸಬೇಕು. ಯೋಜನೆ ಸಂಪೂರ್ಣ ವಿವರ, ಅರ್ಹತೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನ
ಗದಗ : ಗದಗ ತಾಲೂಕಿನ ರೈತ ಭಾಂಧವರಿಗೆ ತಿಳಿಸುವುದೇನೆಂದರೆ 2023-24 ನೇ ಸಾಲಿನಲ್ಲಿ ಗದಗ ತಾಲೂಕಿನಲ್ಲಿ ಕೃಷಿಭಾಗ್ಯ ಯೋಜನೆಯನ್ನು ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರವು ಆದೇಶ ಹೊರಡಿಸಿರುತ್ತದೆ. ಕೃಷಿ ಭಾಗ್ಯ ಯೋಜನೆಯ ಎಲ್ಲಾ ಘಟಕಗಳನ್ನು (ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ (ಕೆಂಪು ಮಣ್ಣು), ಡಿಜೇಲ್/ ಪೆಟ್ರೋಲ್ / ಸೋಲಾರ್ ಪಂಪಸೆಟ್, ತಂತಿಬೇಲಿ, ನೆರಳು ಪರದೆ ಹಾಗೂ ಸೂಕ್ಷ್ಮ ನೀರಾವರಿ ಘಟಕ) ರೈತರು ಅನುಷ್ಠಾನಗೊಳಿಸುವುದು ಕಡ್ಡಾಯವಾಗಿರುತ್ತದೆ.
ಈ ಹಿಂದೆ ಕೃಷಿ ಇಲಾಖೆ ಅಥವಾ ಇತರೆ ಇಲಾಖೆಯಿಂದ ಯಾವುದೇ ಯೋಜನೆಯಡಿ ಕೃಷಿ ಹೊಂಡದ ಫಲಾನುಭವಿಯಾಗಿದ್ದಲ್ಲಿ ಅಂತಹ ರೈತರು ಈ ಯೋಜನೆಯಡಿ ಅರ್ಹರಾಗಿರುವುದಿಲ್ಲ. ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮುಖಾಂತರ ಆಯ್ಕೆ ಮಾಡಲಾಗುವುದು. ಆಸಕ್ತಿಯುಳ್ಳ ರೈತರು ತಮಗೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಗಳನ್ನು ಡಿಸೆಂಬರ್ 30 ರೊಳಗೆ ಸಲ್ಲಿಸಬಹುದಾಗಿದೆ ಎಂದು ಗದಗ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಸಿ.ಕೊರವನವರ ಪ್ರಕಟಣೆಯಲಿ ತಿಳಿಸಿದಾರೆ.
✅ ಕೃಷಿ ಹೊಂಡ ಯೋಜನೆ, ಸಾಮಾನ ವರ್ಗದ 80%, ಪರಿಶಿಷ್ಟ ಜಾತಿ, ಪಂಗಡ ರೈತರಿಗೆ 90% ಸಹಾಯಧನ
ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಆಹ್ವಾನ
ಗದಗ: ಸಜೀವ ನಾಲೆಗಳು, ಸಣ್ಣ ನೀರಾವರಿ ಕೆರೆ ಹಾಗೂ ಚೆಕ್ ಡ್ಯಾಮ್‌ಗಳ ಪಕ್ಕದಲ್ಲಿ ಜಮೀನು ಇರುವ ರೈತರು ಹಳ್ಳ, ಕೆರೆ ಹಾಗೂ ಚೆಕ್ ಡ್ಯಾಮ್ ನೀರನ್ನು ಬಳಸಿ ಬೆಳೆಗಳಿಗೆ ನೀರಾವರಿ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ರೈತರ ಸರ್ವೇ ನಂಬರ್ ಅನ್ವಯ ಸಣ್ಣ ನೀರಾವರಿ ಇಲಾಖೆಯ ದೃಢೀಕರಣ ಆಧರಿಸಿ ಶೇ. 90ರಷ್ಟು ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗುವುದು.
ಸಾಮಾನ್ಯ ವರ್ಗದ ರೈತರು ಕೇವಲ ಒಂದು ಬಾರಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಏಳು ವರ್ಷಗಳಲ್ಲಿ ಒಮ್ಮೆ ಮಾತ್ರ ಈ ಸಹಾಯಧನಕ್ಕೆ ಅರ್ಹರಿದ್ದು, ರೈತರು ಯೋಜನೆಯ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಮಾಹಿತಿಗಾಗಿ ಹುಲಕೋಟಿ ಹಾಗೂ ಬೆಟಗೇರಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ವೇಬ್ರಿಡ್ಜ್ಗಳಲ್ಲಿ ಉಚಿತ ತೂಕ ವ್ಯವಸ್ಥೆ
ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರು ಮಾರುಕಟ್ಟೆಗಳಿಗೆ ತರುವ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಪಡೆಯುವಂತೆ ಕ್ರಮವಹಿಸುವುದು ಇಲಾಖೆಯ ಪ್ರಮುಖ ಧೈಯೋದೇಶಗಳಲ್ಲೊಂದಾಗಿದೆ. ರೈತರು ಮಾರುಕಟ್ಟೆಗಳಿಗೆ ತರುವ ಕೃಷಿ ಉತ್ಪನ್ನಗಳಿಗೆ ನಿಖರವಾದ ತೂಕ ಮತ್ತು ಮೌಲ್ಯ ನಿರ್ಧರಣೆಯಲ್ಲಿ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಸಮಿತಿಯಿಂದ ಹಾಗೂ ಖಾಸಗಿ ಏಜೆನ್ಸಿ / ವ್ಯಕ್ತಿಗಳಿಗೆ ಲೀವ್ & ಲೈಸೆನ್ಸ್ ಮೇಲೆ ವೇ ಬ್ರಿಡ್ಜ್ ಹಂಚಿಕೆ ಮಾಡಿ ಮಾರುಕಟ್ಟೆಗೆ ಬರುವ ರೈತರ ಉತ್ಪನ್ನಗಳಿಗೆ ನಿಖರವಾದ ತೂಕದ ಸೌಲಭ್ಯ ಒದಗಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ.
ಕೃಷಿ ಉತ್ಪನ್ನಗಳಲ್ಲಿ ಕಬ್ಬು ಬೆಳೆ ಕೂಡ ಪ್ರಮುಖ ಉತ್ಪನ್ನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯುವ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಲ್ಲಿ ತೂಕದ ವ್ಯತ್ಯಾಸದಿಂದ ಉತ್ತಮ ಬೆಲೆ ದೊರೆಯದೆ ಇರುವುದೂ ಕೂಡ ಒಂದು ಕಾರಣವಾಗಿರುತ್ತದೆ. ಡಿಸೆಂಬರ್ 21 ರಂದು ಇಲಾಖೆಯ ಕೇಂದ್ರ ಕಚೇರಿಯಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಚಿವರು ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗಳು ಉಚಿತವಾಗಿ ನಿಖರವಾದ ತೂಕದ ಸೌಲಭ್ಯ ಒದಗಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ.
ಈ ಹಿನ್ನೆಲೆ ಕಬ್ಬು ಹಂಗಾಮಿ ಬೆಳೆಯಾಗಿರುವುದರಿಂದ ಹೆಚ್ಚು ಆವಕವಿರುವ ಸಮಯದಲ್ಲಿ ವೇಬ್ರಿಡ್ಜ್ ಗಳನ್ನು ಹೊಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳು ಮಾರುಕಟ್ಟೆಗೆ ಬರುವ ಕಬ್ಬು ಬೆಳೆಯುವ ರೈತರಿಗೆ ಉಚಿತವಾಗಿ ತೂಕದ ವ್ಯವಸ್ಥೆ ಒದಗಿಸಲು ಕ್ರಮ ತೆಗೆದುಕೊಳ್ಳುವುದು. ಮಾರುಕಟ್ಟೆಗೆ ಬರುವ ರೈತರ ಹೆಸರು, ಆಧಾರ್ ಸಂಖ್ಯೆ, ವಾಹನ ಸಂಖ್ಯೆ ಮಾರುಕಟ್ಟೆಗೆ ಬರುವ ಉತ್ಪನ್ನದ ಪ್ರಮಾಣ(ಕಬ್ಬು) ತೂಕದ ಮಾಹಿತಿ ಮತ್ತು ಪಹಣಿಯ
ವಿವರಗಳನ್ನು ಕಡತದಲ್ಲಿ ನಿರ್ವಹಿಸುವುದು. ಸಮಿತಿಗಳ ವೇ ಬ್ರಿಡ್ಜ್‌ಗಳನ್ನು ಖಾಸಗಿ ಏಜೆನ್ಸಿ/ವ್ಯಕ್ತಿಗಳು ನಿರ್ವಹಿಸುತ್ತಿದ್ದಲ್ಲಿ ಸದರಿಯವರಿಂದಲೂ ಕೂಡ ಉಚಿತವಾಗಿ ತೂಕದ ವ್ಯವಸ್ಥೆ ಒದಗಿಸಲು ಕ್ರಮವಹಿಸುವುದು. ಸದರಿಯವರು ನೀಡಿದ ಸೇವೆ ಶುಲ್ಕವನ್ನು ಮಾಸಿಕವಾಗಿ ಸಮಿತಿಗೆ ಭರಿಸುವ ಮೊತ್ತದಲ್ಲಿ ಕಡಿತಗೊಳಿಸುವುದು ಹಾಗೂ ಈ ಸಂಬಂಧ ರೈತರ ಎಲ್ಲಾ ದಾಖಲಾತಿಗಳನ್ನು ಕಡತದಲ್ಲಿ ನಿರ್ವಹಿಸಲು ತಿಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.