ಆತ್ಮೀಯ ರಾಜ್ಯ ನಾಗರಿಕರೇ,
ನಮ್ಮ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರು 17 ಫೆಬ್ರುವರಿ 2023 ರಲ್ಲಿ ನಡೆದ ಕರ್ನಾಟಕ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ನೀವು ನಮ್ಮ ಕರ್ನಾಟಕ ರಾಜ್ಯದಲ್ಲಿ ವ್ಯಾಸಾಂಗವನ್ನು ನಡೆಸುತ್ತಿದ್ದರೆ, ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ಯಾವುದಪ್ಪ ಈ ಯೋಜನೆ, ಈ ಯೋಜನೆ ಹೆಸರು ‘ಸಿಎಂ ವಿದ್ಯಾ ಶಕ್ತಿ ಯೋಜನೆ’.
ವಿದ್ಯಾ ಶಕ್ತಿ ಯೋಜನೆಯ ಮೂಲ ಉದ್ದೇಶ ಏನು?
ನಮ್ಮ ರಾಜ್ಯದಲ್ಲಿ ಪದವಿ ಕೋರ್ಸುಗಳನ್ನು ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಹಂಬಲಿಸುವ ವಿದ್ಯಾರ್ಥಿಗಳು ಆರ್ಥಿಕ ಪರಿಸ್ಥಿತಿ ಉತ್ತಮವಾಗದಿದ್ದರೆ ಆ ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಆದಕಾರಣ ನಮ್ಮ ಕರ್ನಾಟಕ ಸರ್ಕಾರವು ಅವರಿಗೆ ಶುಲ್ಕ ನೀಡುವ ಮುಖಾಂತರ ಹಣಕಾಸಿಗೆ ನೆರವಾಗಿ ಮಕ್ಕಳು ತಮ್ಮ ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
CM ವಿದ್ಯಾ ಶಕ್ತಿ ಯೋಜನೆಯ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳು
ಈ ಮುಖ್ಯಮಂತ್ರಿ ವಿದ್ಯಾ ಶಕ್ತಿ ಯೋಜನೆಯನ್ನು Feb 17 2023-24 ನೇ ಸಾಲಿನ ಬಜೆಟ್ ಘೋಷಣೆಯ ಸಮಯದಲ್ಲಿ ಆರಂಭಿಸಲಾಯಿತು. ಈ ಯೋಜನಾ ಅಡಿಯಲ್ಲಿ ಕರ್ನಾಟಕ ಸರ್ಕಾರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ದೊರಕಿಸಲು ಸಹಾಯಧನವನ್ನು ಮತ್ತು ಅವರ ಕಾಲೇಜಿಗೆ ತುಂಬ ಶುಲ್ಕವನ್ನು ನೀಡಲು ಮುಂದಾಗಿದೆ. ಈ ಯೋಜನೆಯಿಂದ ಕರ್ನಾಟಕದ ಸುಮಾರು 8 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನಕರವಾಗುತ್ತದೆ. ಯೋಜನೆಯು ವಿದ್ಯಾರ್ಥಿಗಳಲ್ಲಿ ಅಧ್ಯಯನದ ಹವ್ಯಾಸ ಮತ್ತು ಆಸಕ್ತಿಯನ್ನು ವೃದ್ಧಿಗೊಳಿಸಲು ಸಹಾಯ ಮಾಡಿಯೇ ಮಾಡುತ್ತೇವೆ ಎಂದು ಬಜೆಟ್ ನಲ್ಲಿ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಹೇಳಿದರು.
ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಹತೆ
ಮೊದಲು ಆ ವಿದ್ಯಾರ್ಥಿ ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿ ಆಗಿರಬೇಕು. ಬಡ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಯು ಶಿಕ್ಷಣದಲ್ಲಿ ಉತ್ತೀರನಾಗಿರಬೇಕು ಮತ್ತು ಪದವಿ ಕೋರ್ಸ್ ಅನ್ನು ಮುಂದುವರಿಸಲು ಅರ್ಹರಾಗಿರಬೇಕು. ಅಂದಾಗ ಮಾತ್ರ ಈ ಯೋಜನೆಗೆ ಅರ್ಜಿಯನ್ನು ಹಾಕಬಹುದು.
ಇದನ್ನೂ ಓದಿ :- ಮನೆ ಕಟ್ಟಲು ಸಿಕ್ಕಿತು ಸಹಾಯಧನ
ಕೇವಲ ಆಧಾರ್ ಕಾರ್ಡ್ ಮತ್ತು ವೋಟಿಂಗ್ ಕಾರ್ಡ್ ಇದ್ದರೆ ಸಾಕು ನಿಮಗೆ ಸಿಗುತ್ತೆ 1.75ಲಕ್ಷ ರೂಪಾಯಿ