ಆತ್ಮೀಯ ರೈತ ಬಾಂಧವರೇ, ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆಯು ರೈತರ ಬೆಳವಣಿಗೆಗಾಗಿ ಪಶು ಭಾಗ್ಯ ಯೋಜನೆಯನ್ನು ಅನುಷ್ಟಾನಗೋಳಿಸಿದೆ.ಇದು ಹಸು, ಕೋಳಿ, ಕುರಿ, ಮೇಕೆ ಸಾಕಲು ಪಶು ಭಾಗ್ಯ ಯೋಜನೆ.
ಯಾವ ಯಾವ ಘಟಕಕ್ಕೆ ಎಷ್ಟು ಸಹಾಯಧನ?
1)ಹೈನುಗಾರಿಕೆ ಘಟಕ-(62000 ಘಟಕದ ಮೊತ್ತ) SC/ST (ಶೇ 33): 20665 ಸಹಾಯಧನ,ಸಾಮಾನ್ಯ(ಶೇ 25): 15500ಸಹಾಯಧನ
2)ಕುರಿ ಅಥವಾ ಅಡುಗಳು ಘಟಕ (10 ಕುರಿ/ಅಡು)-(70000 ಘಟಕದ ಮೊತ್ತ)SC/ST : 25000 ಸಹಾಯಧನ
3)3 ಕುರಿ ಅಥವಾ ಅಡುಗಳು ಘಟಕ –(15000 ಘಟಕದ ಮೊತ್ತ) SC/ST (ಶೇ 90): 13500 ಸಹಾಯಧನ
ಸಾಮಾನ್ಯ(ಶೇ 50): 10000 ಸಹಾಯಧನ
ಈ ಯೋಜನಾ ವ್ಯಾಪ್ತಿ ಎಷ್ಟು? ರಾಜ್ಯದ 30 ಜಿಲ್ಲೆಗಳಲ್ಲಿ ಅನುಷ್ಠಾನ.
ಈ ಯೋಜನೆಗೆ ನೊಂದಣಿ ಮಾಡುವುದು ಹೇಗೆ?
ಈ ತಂತ್ರಾಂಶದ ಬಳಕೆಯಿಂದ ಫಲಾನುಭವಿಗಳಿಗೆ ಮತ್ತು ಇಲಾಖೆಗೆ ಅನುಕೂಲಗಳು ಆಗಲಿದೆ.ಎಲ್ಲಾ ಯೋಜನೆಗಳ ಫಲಾನುಭವಿಗಳಿಗೆ FRUITS ID ಇರುವುದು ಖಡ್ಡಾಯ.
ಫಲಾನುಭವಿಗಳಿಗೆ ಅನುಕೂಲಗಳು ಇಲ್ಲಿ ತಿಳಿಯೋಣ.
# ಒಂದು ಬಾರಿ ಇಲಾಖೆಯ ಯೋಜನೆಗಳಿಗೆ ಈ ತಂತ್ರಾಶದ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಸಾಕು.
# ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ರೈತ ಸಂಪರ್ಕ ಕೇಂದ್ರ, ಪಶುವೈದ್ಯಕೀಯ ಸಂಸ್ಥೆಗಳಲ್ಲಿ FRUITS ID (ಗುರುತಿನ ಸಂಖ್ಯೆ) ಪಡೆಯಬಹುದು.
#ಈ FRUITS ID ಗುರುತಿನ ಸಂಖ್ಯೆಯು, ಶಾಶ್ವತ ಗುರುತಿನ ಸಂಖ್ಯೆಯಾಗಲಿದ್ದು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗಳ ಸೌಲಭ್ಯ ಪಡೆಯಬಹುದು.
#ID ಪಡೆದ ರೈತರು ಸಂಬಂಧಿಸಿದ ಜಾತಿ ಪತ್ರ, ಜಮೀನು ಪತ್ರ ,ಬಿಪಿಎಲ್ ಕಾರ್ಡ್, ಫೋಟೊ ಮುಂತಾದ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ.
# ರೈತರು “ಪಶುಭಾಗ್ಯ” ತಂತ್ರಾಂಶದಲ್ಲಿ ಅರ್ಜಿಯನ್ನು ಇಲಾಖೆಯಲ್ಲಿನ ಸವಲತ್ತುಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.
# ರೈತರು ಅಗತ್ಯ ಮತ್ತು ಅರ್ಹತೆಗೆ ತಕ್ಕಂತೆ ವಿವಿಧ ಯೋಜನೆ ಹಾಗೂ ಘಟಕಗಳಿಗೆ ಬೇಡಿಕೆಯನ್ನು ಒಂದೇ ಬಾರಿಗೆ ನೀಡಬಹುದು.
ಫಲಾನುಭವಿ ಯೋಜನೆಗಳ ಮಾರ್ಗಸೂಚಿಗಳನ್ನು ಪಾಲಿಸುತ್ತಾ “ಪಶುಭಾಗ್ಯ’ ತಂತ್ರಾಂಶದಲ್ಲಿಯೇ ಎಲ್ಲಾ ಮಾಹಿತಿಯನ್ನು ಇಂದೀಕರಿಸಲು ಆದೇಶಿಸಿದೆ. ಈ ತಂತ್ರಾಂಶದಲ್ಲಿರುವ ಮಾಹಿತಿ ಆಧಾರದ ಮೇಲೆಯೆ ರಾಜ್ಯ, ಜಿಲ್ಲಾ, ತಾಲ್ಲೂಕುಗಳ ಪ್ರಗತಿಯನ್ನು ಪರಿಶೀಲಿಸಲಾಗುವುದು 33% ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ರೈತರಿಗೆ ಮತ್ತು 25% ಇತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ದನ, ಕುರಿ, ಮೇಕೆ, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ವಾಣಿಜ್ಯ ಬ್ಯಾಂಕ್‌ಗಳಿಂದ ಗರಿಷ್ಠ ರೂ.1.20 ಲಕ್ಷ ಸಾಲವನ್ನು (ಸಬ್ಸಿಡಿ) ಒದಗಿಸಲಾಗುವುದು. SC/ST ಗೆ ಪಶು ಭಾಗ್ಯ 33% ರಿಂದ 50% ಕ್ಕೆ ಪರಿಷ್ಕರಿಸಲಾಗಿದೆ.
ಅರ್ಹ ಫಲಾನುಭವಿಗಳು ಯಾರು ಎಂದು ತಿಳಿದುಕೊಳ್ಳಿ.
ಕೂಲಿ ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ. ಫಲಾನುಭವಿ ಆಧಾರಿತ ಕಾರ್ಯಕ್ರಮಕ್ಕೆ ಅಧ್ಯತೆಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ, ಅಲ್ಪಸಂಖ್ಯಾತರಿಗೆ (ಶೇ.15) ಮಹಿಳೆಯರಿಗೆ (ಶೇ.33.3) ವಿಶೇಷ ಚೇತನರಿಗೆ (ಶೇ.3) ಅದ್ಯತೆ ನೀಡಲಾಗುವುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು..ಸಹಾಯಕ ನಿರ್ದೇಶಕರು, ಮುಖ್ಯ ಪಶು ವೈದ್ಯಾಧಿಕಾರಿಗಳು ಆಸಕ್ತಿಯುಳ್ಳವರಿಂದ ಅರ್ಜಿ ಪಡೆದು, ಯೋಜನೆ, ಘಟಕ ಮತ್ತು ಗುರಿಗೆ ಅನುಗುಣವಾಗಿ ಆಯ್ಕೆ ಮಾಡುವುದು.
ಕೆಳಗಿನ ಎಲ್ಲ ದಾಖಲೆ ಪತ್ರಗಳ ಮೂಲ ಪ್ರತಿ ಬೇಕು
1)FRUITS ID ದೃಢೀಕರಣ ಪತ್ರ ಬೇಕು.
2) ಸಾಲ ಮಂಜೂರಾತಿ ಪತ್ರ ಬೇಕು.
3)ಸ್ವತ್ತು ಖರೀದಿ ನಗದು ರಸೀದಿ ಬೇಕು.
4) ಫಲಾನುಭವಿಯಿಂದ ಸಹಾಯಧನ ಸ್ವೀಕೃತಿ ಪತ್ರ ಬೇಕು.
5) ಫಲಾನುಭವಿಯೊಂದಿಗೆ ರಾಸುವಿನ ಭಾವಚಿತ್ರ – 3 ವಿವಿಧ ಕೋನಗಳಲ್ಲಿ ಬೇಕು.
6) ಜಾನುವಾರು ಆರೋಗ್ಯ ದೃಢೀಕರಣ ಪತ್ರ, ವಿಮಾ ಪಾಲಿಸಿ ಬೇಕು.
7) ಸಾಗಾಣಿಕೆ ವೆಚ್ಚದ ಬಿಲ್ ಬೇಕು.
8) ಪಶು ಆಹಾರ ಖರೀದಿ ಬಿಲ್‌ಗಳು ಬೇಕು.
ಸಮಿತಿ ಅಲ್ಲಿ ಇರುವ ಅಧಿಕಾರಿಗಳು.
ಅಧ್ಯಕ್ಷರು: ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಸದಸ್ಯರು: ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರ , ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ , ತಾಲ್ಲೂಕು ಸಹಾಯಕ ನಿರ್ದೇಶಕರು ,ಮುಖ್ಯ ಪಶು ವೈದ್ಯಾಧಿಕಾರಿ ಸದಸ್ಯರು ಸಮಿತಿಯ ಕಾರ್ಯವ್ಯಾಪ್ತಿ ತಿಳಿದುಕೊಳ್ಳಿ.
೧. ರೈತರನ್ನು ನಿರ್ದಿಷ್ಟ ಸಮಯದಲ್ಲಿ ವಿವಿಧ ಯೋಜನೆಗಳ ನಿಗದಿತ ಗುರಿಗಳನ್ವಯ ಆಯ್ಕೆ ಮಾಡುವುದು.
೨. ಯೋಜನೆಯಲ್ಲಿ ಲೋಪದೋಷಗಳು ಕಂಡುಬಂದರೆ ನಿವಾರಿಸುವುದು.
೩. ಗುಣಮಟ್ಟದ ಸ್ವತ್ತುಗಳನ್ನು ಖರೀದಿ ಮಾಡುವುದು.
೪. ಸರ್ಕಾರದಿಂದ ಬಿಡುಗಡೆ ಆದ ಅನುದಾನವು ಬಳಕೆಯಾಗದಿಂದರೆ ಅನುದಾನಕ್ಕೆ ಅನುಗುಣವಾಗಿ ರೈತರನ್ನು ಪರ್ಯಾಯ ಆಯ್ಕೆ ಮಾಡುವುದು.
ಯೋಜನಾ ಅನುಷ್ಠಾನ ವಿಧಾನ
೧) ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಅಗತ್ಯತೆಯನುಸಾರ ಗುರಿಗಳನ್ನು ನಿಗದಿಪಡಿಸುವುದು.
೨) ಜಿಲ್ಲಾ ಉಪ ನಿರ್ದೇಶಕರುಗಳು ಆಯಾ ತಾಲ್ಲೂಕಿನಲ್ಲಿರುವ ಜನಸಂಖ್ಯೆಗೆ ಅನುಸಾರವಾಗಿ ಹಂಚಿಕೆ ಮಾಡುವುದು ಹಾಗೂ ಅದಕ್ಕೆ ತಕ್ಕಂತೆ ಅನುದಾನವನ್ನು ಮರುಹಂಚಿಕೆ ಮಾಡುವುದು.
೩) ಸಹಾಯಕ ನಿರ್ದೇಶಕರು ಆಯಾ ತಾಲ್ಲೂಕಿಗೆ ನಿಗದಿಯಾದ ಗುರಿಗಳ ತಕ್ಕಂತೆ ಅನುದಾನವನ್ನು ಮರು ಹಂಚಿಕೆ ಮಾಡಿ, ಆಸಕ್ತ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡುವುದು.
೪) ಸಹಾಯಕ ನಿರ್ದೇಶಕರು ಅರ್ಹ ಫಲಾನುಭವಿಗಳ ಆಯ್ಕೆಗಾಗಿ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿನ ಸಮಿತಿ ಮುಂದೆ ಮಂಡಿಸಲು ಈಗಾಗಲೇ ಸ್ವೀಕರಿಸಿರುವ ಅರ್ಜಿಗಳ ಮಾಹಿತಿಯನ್ನು “ಪಶು ಭಾಗ್ಯ ತಂತ್ರಾಂಶ”ದ ಮೂಲಕ ಪಡೆದು ಮಂಡಿಸಿ, ನಿಗದಿತ ಗುರಿಗೆ ಅನುಗುಣವಾಗಿ ಆಯ್ಕೆ ಮಾಡುವುದು.
೫) ರೈತರನ್ನು ಆಯ್ಕೆಗೊಳಿಸುವಾಗ ಮುಖ್ಯ ಮಂತ್ರಿಗಳ ಕಾರ್ಯಾಲಯದಿಂದ, ಇಲಾಖಾ ಸಚಿವಾಲಯದಿಂದ, ಆಯುಕ್ತಾಲಯದಿಂದ “ಜನಸ್ಪಂದನ ಕೋಶದಿಂದ ಸ್ವೀಕರಿಸಿರುವ ಅರ್ಜಿಗಳನ್ನು ಸಹಾ ಫಲಾನುಭವಿಗಳ ಆಯ್ಕೆ ವೇಳೆ ಪರಿಗಣಿಸುವುದು.
೬) ತಾಲ್ಲೂಕು ಸಹಾಯಕ ನಿರ್ದೇಶಕರು/ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಇವರಿಂದ ಮಾಹಿತಿ ಪಡೆದು ,ಲೀಡ್ ಬ್ಯಾಂಕ್ ಮುಖಾಂತರ ಬ್ಯಾಂಕ್‌ವಾರು ನಿಗದಿಪಡಿಸಲು ಕ್ರಮವಹಿಸುವುದು.
೭) ಫಲಾನುಭವಿಗಳಿಂದ ವಂತಿಗೆ ಸ್ವೀಕರಿಸುವಂತಹ ಯೋಜನೆಗಳನ್ನು ವಂತಿಗೆ ಹಣವನ್ನು ಫಲಾನುಭವಿಗಳಿಂದ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿ, ನಂತರ ಸಹಾಯಧನವನ್ನು ಅದೇ ಖಾತೆಗೆ ಜಮಾ ಮಾಡುವುದು.
೮) ಸಹಾಯಕ ನಿರ್ದೇಶಕರು ವಿಳಂಬವಿಲ್ಲದೆ ಆಯ್ಕೆಯಾದ ರೈತರ ಅರ್ಜಿಯನ್ನು ದಾಖಲೆಗಳೊಂದಿಗೆ ಸಂಬಂಧಿಸಿದ ಪಶುವೈದ್ಯಾಧಿಕಾರಿಗಳ ಮುಖಾಂತರ ಸಾಲ ಮಂಜೂರಾತಿಗಾಗಿ ಬ್ಯಾಂಕ್‌ಗಳಿಗೆ ಸಲ್ಲಿಸುವುದು.
೯) ಅನುಷ್ಟಾನ ಅಧಿಕಾರಿಗಳಾದ ಸ್ಥಳೀಯ ಪಶುವೈದ್ಯಾಧಿಕಾರಿಗಳು ಸಂಬಂಧಿಸಿದ ಬ್ಯಾಂಕ್‌ಗಳಿಂದ
ಸಾಲ ಮಂಜೂರಾತಿ ಪತ್ರ ಪಡೆಯಬೇಕು.
೧೦) ಈ ಯೋಜನೆಯನ್ನು ರಾಷ್ಟ್ರೀಕೃತ ಬಾಂಕ್ಯಗಳು, ವಾಣಿಜ್ಯ ಬ್ಯಾಂಕ್ ಹಾಗು ಸಹಕಾರಿ ಸಂಘಗಳ ಮುಖಾಂತರವೂ ಸಹ ಸಾಲ ಪಡೆಯಬೇಕು.
೧೧) ಅನುಷ್ಟಾನಾಧಿಕಾರಿಗಳು ಆಯ್ಕೆಯಾದ ಫಲಾನುಭವಿಗಳ ಸಹಾಯಧನವನ್ನು ಆಯಾ ನಂಕುಗಳಿಗೆ ಬಿಡುಗಡೆಗೊಳಿಸುವುದು.
೧೨) ರಾಸುಗಳಿಗೆ UID ಸಂಖ್ಯೆ ಇರುವ ಟ್ಯಾಗ್‌ಗಳನ್ನು ಅಳವಡಿಸಿ, ಫಲಾನುಭವಿ, ಮಾರಾಟಗಾರ, ಬ್ಯಾಂಕ್ ಪ್ರತಿನಿದಿ ಮತ್ತು ಅನುಷ್ಟಾನಾಧಿಕಾರಿ ಸ್ವತ್ತಿನೊಂದಿಗೆ ಇರುವ ನೋವು “ಚಾಕಾರದಲ್ಲಿ ಎಲ್ಲಾ ವಿವರಗಳೊಂದಿಗೆ ದಾಖಲಿಸುವುದು.
೧೩) ಗ್ರಾಮೀಣ ಪ್ರದೇಶದ ರೈತರಿಗೆ ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶ ಕಲ್ಪಿಸಲು ಸ್ಥಳೀಯ ಗ್ರಾಮ ಪಂಚಾಯ್ತಿ ಪಿ.ಡಿ.ಓ.ಗಳಿಗೆ ಮಾಹಿತಿ ನೀಡುವುದು.
೧೪) ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಇಲಾಖೆಯಲ್ಲಿ ವಿವಿಧ ಯೋಜನೆಗಳಲ್ಲಿ ಸಹಾಯಧನದ ಸವಲತ್ತು ಪಡೆದಿರುವ ಕುಟುಂಬಗಳು ಮತ್ತೆ ಈ ಯೋಜನೆಯ ಸವಲತ್ತು ಪಡೆಯಲು ಅರ್ಹರಿರುವುದಿಲ್ಲ.
೧೫) ಈ ಯೋಜನೆಯಡಿಯ ಫಲಾನುಭವಿಗಳ ಸ್ವತ್ತುಗಳನ್ನು ವಿಮೆಗೊಳಪಡಿಸಲು ಕ್ರಮ ವಹಿಸುವುದು.
೧೬) ಆಯ್ಕೆಯಾದ ಫಲಾನುಭವಿಯು ಯೋಜನೆಯ ಅನುಷ್ಠಾನಕ್ಕೆ ಮೊದಲು ಮರಣ ಹೊಂದಿದಲ್ಲಿ ಅವರ ಅಧಿಕೃತ ವಾರಸುದಾರರಿಗೆ ಪಡೆಯಬಹುದು.
೧೭) ಅನುಷ್ಠಾನಗೊಳಿಸಿದ ಕೂಡಲೇ ಹಣ ಬಳಕೆ, ಪ್ರಮಾಣ ಪತ್ರ ಹಾಗೂ ಪ್ರಗತಿ ವಿವರಗಳನ್ನು ಸಲ್ಲಿಸಬೇಕು.
ಸಹಾಯದನ ಪಡೆಯುವ ವಿಧಾನ
1)ಸಮಿತಿ ಸದಸ್ಯರುಗಳ ಸಹಿಯೊಂದಿಗೆ ಪಟ್ಟಿಯನ್ನು ಪಶು ಭಾಗ್ಯ ತಂತ್ರಾಂಶದಲ್ಲಿರುವ ಮಾಹಿತಿಯೊಂದಿಗೆ ಉಪ ನಿರ್ದೇಶಕರು ಸಮೀಕರಿಸುವುದು
FRUIT ID ಇರುವ ದೃಡೀಕರಣ ಪತ್ರ ಬೇಕು.
- ಫಲಾಮಭವಿಯ ಭಾವಚಿತ್ರ ಬೇಕು.
- ಫಲಾನುಭವಿಯ ಕುಟುಂಬ ಈ ಹಿಂದೆ ಇಲಾಖೆಯಿಂದ ಸಹಾಯ ಪಡೆಯದಿರುವ ಬಗ್ಗೆ ದೃಢೀಕರಣ ಪತ್ರ ಬೇಕು.
- ಬ್ಯಾಂಕ್‌ಗಳಿಂದ ನಮೂನೆ ಮಂಜೂರಾತಿ ಬಗ್ಗೆ ಒಪ್ಪಿಗೆ ಪತ್ರ ಬೇಕು.
- ಫಲಾನುಭವಿಯಿಂದ ಸಹಾಯಧನ ಪಡೆದಿರುವ ಬಗ್ಗೆ ಮುಂಗಡ ರಸೀತಿ ಬೇಕು.
ಕ್ರಮಗಳು
- ಸ್ವತು ಖರೀದಿ ಸಮಯದಲ್ಲಿ ಆಯಾ ಪ್ರದೇಶಕ್ಕೆ ಸೂಕ್ತವಾದ ತಳಿಯನ್ನು ಖರೀದಿಗೆ ಆದ್ಯತೆ ನೀಡಿ.
- ವಿವಿಧ ಯೋಜನೆಗಳಲ್ಲಿ ಬರುವ ಘಟಕದಲ್ಲಿರುವಂತೆ ರಾಸುಗಳನ್ನು ಖರೀದಿಸಿ, ಮೂರು ವರ್ಷದ ವಿಮೆ ಕಡ್ಡಾಯವಾಗಿ ಮಾಡಿಸಿ.
- ಸ್ವತ್ತು ಖರೀದಿ ಮಾಡುವಾಗು ತುಂಬು ಗರ್ಭದಿಂದಿರುವ ಅಥವಾ ಇತ್ತೀಚೆಗೆ ಕರು ಹಾಕಿದ ದಿನಕ್ಕೆ 8 ರಿಂದ 10 ಲೀಟರ್ ಹಾಲು ನೀಡುವ ಸಾಮರ್ಥ್ಯ ಇರುವ ಮಿಶ್ರ ತಳಿ ಹಸು ಖರೀದಿ ಮಾಡುವುದು.
- ಹೈನುಗಾರಿಕೆ ಯೋಜನೆಯಡಿಯಲ್ಲಿ ಖರೀದಿ ಸಮಿತಿಯ ವಿವೇಚನೆಗೆ ಒಳಪಟ್ಟು ರಾಸುಗಳನ್ನು ಹೊರ ರಾಜ್ಯಗಳಿಂದ ಖರೀದಿಸುವುದು.
- ಮಿಶ್ರ ತಳಿ ಹಸು / ಸುಧಾರಿತ ಎಮ್ಮೆ / ರಾಸುಗಳನ್ನು ಖರೀದಿ ಸ್ಥಳದಿಂದ ಫಲಾನುಭವಿಯ ಕೊಟ್ಟಿಗೆಯವರೆಗೆ ಸಾಗಾಣಿಕೆ ಮಾಡಲು ಭರಿಸುವ ವೆಚ್ಚವನ್ನು ಯೋಜನಾ ವೆಚ್ಚದಿಂದಲೇ ನೀಡುವುದು.
ಈ ಯೋಜನೆಯಿಂದ ಆದ ಲಾಭ ಎಷ್ಟು?
ಒಟ್ಟು ಅಪ್ಲಿಕೇಶನ್‌ಗಳು – 110385 , ಒಟ್ಟು ಫಲಾನುಭವಿಗಳು- 40580 , ಒಟ್ಟು ಸಬ್ಸಿಡಿ- 16918.2 ಲಕ್ಷ
ವಿವಿದ ಘಟಕ ನಿರ್ಮಾಣಕ್ಕೆ ಎಷ್ಟು ಹಣ ಬೇಕು?
# ಮಿಶ್ರ ತಳಿ ಹಾಲು ಕರೆಯುವ ಹಸು (08-10 ಲೀ) / ಸುಧಾರಿತ ಎಮ್ಮೆ(01-06 ಲೀ)
# ಜಾನುವಾರು ವಿಮೆ ಮೊತ್ತ (ಮೂರು ವರ್ಷಕ್ಕೆ): 2500 # ಸಾಗಾಣಿಕೆ ವೆಚ್ಚ ಮತ್ತು ಇತರೆ ಪಶು ಅಹಾರ ಮತ್ತು ಲವಣ ಮಿಶ್ರಣ ವೆಚ್ಚ
ಕುರಿ ಅಥವಾ ಆಡುಗಳ ಘಟಕ (10)
2 ಕುರಿ/ಮೇಕೆಗೆ 6000ರಂತೆ ಆರು ತಿಂಗಳ ವಯಸ್ಸಿಗೆ ಮೇಲ್ಪಟ್ಟ ಒಂದು ಟಗರು / ಹೋತ ಖರೀದಿ 8000 ಆರು ತಿಂಗಳ ವಯಸ್ಸಿಗೆ ಮೇಲಟ್ಟ 10 ಕುರಿ/ಮೇಕೆ ಖರೀದಿಗೆ
ಕುರಿ/ಆಡುಗಳ ಘಟಕ
#ಆರು ತಿಂಗಳ ವಯಸ್ಸಿನ 03 ಕುರಿ / ಮೇಕೆ ಖರೀದಿಗೆ (ಒಂದು ಕುರಿ/ಮೇಕೆಗೆ 5000/-ರಂತೆ) ಗರಿಷ್ಟ ಮೊತ್ತ-15,000
ಪಶು ಭಾಗ್ಯ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಇಲಾಖೆಯ ಪಶುವೈದ್ಯಕೀಯ ಸಂಸ್ಥೆಗೆ /ನಿಮ್ಮ ತಾಲ್ಲೂಕಿನಲ್ಲಿರುವ ಸಹಾಯಕ ನಿರ್ದೇಶಕರ ಕಛೇರಿಗೆ ಅಥವಾ ನಿಮ್ಮ ಜಿಲ್ಲೆಯ ಉಪ ನಿರ್ದೇಶಕರ ಕಛೇರಿಗೆ ಭೇಟಿ ಕೊಡಿ.