ಆತ್ಮೀಯ ರೈತ ಬಾಂಧವರೇ, ಸರ್ಕಾರವು ರೈತರ ಉದ್ದಾರಕ್ಕಾಗಿ ಹಲವಾರು ಯೋಜನೆಗಳನ್ನು ತಂದು ರೈತರಿಗೆ ಹಲವಾರು ರೀತಿಯ ಸಹಾಯ ಮಾಡಿದೆ. ಈಗ ತೋಟಗಾರಿಕೆ ಇಲಾಖೆಯೂ 2023-24 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೈತರ ಉದ್ದಾರಕ್ಕಾಗಿ ಹಲವಾರು ರೀತಿಯ ಕೃಷಿ ಚಟುವಟಿಕೆಗೆ ಬಳಸುವಂತಹ ಘಟಕಗಳ ಸ್ಥಾಪನೆಗೆ ಸಹಾಯಧನವನ್ನು ನೀಡಲು ಅರ್ಜಿ ಆಹ್ವಾನ ಮಾಡಿದೆ. ಆದ ಕಾರಣ ರೈತರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ ಇದರಿಂದ ಲಾಭ ಪಡೆಯಬೇಕೆಂದು ನಾವು ಇಚ್ಚಿಸುತ್ತೇವೆ.
ಯಾವ ಚಟುವಟಿಕೆ ಮತ್ತು ಘಟಕಗಳಿಗೆ ಸಹಾಯಧನ ನೀಡುತ್ತಾರೆ?
ರೈತ ಬಾಂಧವರೇ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಲು ಹಲವಾರು ಕಾರ್ಯಕ್ರಮ ಮತ್ತು ಘಟಕದ ಸ್ಥಾಪನೆ ಮಾಡುವುದು ತುಂಬಾ ಅವಶ್ಯವಾಗಿದೆ. ಆದಕಾರಣ ಕೃಷಿಗೊಂಡ, ಬಸಿಗಾಲುವೆ, ಬದು ನಿರ್ಮಾಣ ಮಾಡುವುದು ಮತ್ತು ಇಂಗು ಗುಂಡಿ ಸ್ಥಾಪನೆ ಮಾಡಲು ತೋಟಗಾರಿಕೆ ಇಲಾಖೆಯೂ ಸಹಾಯಧನವನ್ನು ನೀಡಲು ನಿರ್ಧಾರ ಮಾಡಿ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಟ್ಟಿದೆ. ಕೂಡಲೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿ ಹೇಗೆ ಸಲ್ಲಿಸುವುದು ಎಂದು ತಿಳಿಯಿರಿ.
ಇಷ್ಟೇ ಅಲ್ಲದೆ ತೋಟಗಾರಿಕೆ ಇಲಾಖೆಯೂ ಅವರ ಬೆಳೆಗಳಾದ ದಾಳಿಂಬೆ ನಾವು ತಾವೇ ತೆಂಗು ಡ್ರ್ಯಾಗನ್ ಹಣ್ಣು ಪಪ್ಪಾಯ ಹಣ್ಣು ಪೇರಲು ಮತ್ತು ಸಪೋಟ ಬೆಲೆಗಳನ್ನು ಬೆಳೆಯಲು ಸಹಾಯಧನವನ್ನು ನೀಡಬೇಕೆಂದು ಅರ್ಜಿ ಆಹ್ವಾನ ಮಾಡಿದೆ. ಇದಕ್ಕೆ ಬರುವ ಎಲ್ಲಾ ಸಹಾಯಧನವನ್ನು ಆನ್ಲೈನ್ ಮೂಲಕವೇ ರೈತರ ಖಾತೆಗೆ ಡಿವಿಟಿ ಮುಖಾಂತರ ನೀಡಲು ಸರ್ಕಾರ ಯೋಚಿಸಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
ರೈತರು ತಮ್ಮ ಹೊಲದ ಪಹಣಿ ಅವರ ಉದ್ಯೋಗ ಚೀಟಿ ಅವರ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಬಿಪಿಎಲ್ ಕಾರ್ಡ್ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಎಸ್ಸಿ ಎಸ್ಟಿ ವರ್ಗದ ರೈತರು ಆಗಿದ್ದರೆ ಅವರು ತಮ್ಮ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಅನ್ನು ಕೂಡ ಇವೆಲ್ಲದರ ಜೊತೆಗೆ ತೆಗೆದುಕೊಂಡು ಹೋಗಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ವೆಬ್ ಸೈಟಿಗೆ ಭೇಟಿ ನೀಡಿ. https://nrega.nic.in/
ಅಥವಾ ನೀವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಈ ಯೋಜನೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ನಿಮಗೆ ತಿಳಿಸುತ್ತಾರೆ. 1800 425 8656 ಅಥವಾ ನೀವು ಹತ್ತಿರದ ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಅಥವಾ ಸಹಾಯಕ ತೋಟಗಾರಿಕೆ ಇಲಾಖೆ ಅವರ ಕಚೇರಿಗೆ ಹೋಗಿ ನಿಮ್ಮ ಹೆಸರನ್ನು ನೋಂದಣಿ ಮಾಡಬೇಕು ಆಗ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಲು ನೀವು ಅರ್ಹತೆ ಹೊಂದುತ್ತೀರಿ.
ಇದನ್ನೂ ಓದಿ :- ರೈತರು 50 ಶೇಕಡಾ ಸಬ್ಸಿಡಿ ದರದಲ್ಲಿ ನೀರಾವರಿ ಪೈಪ್ ಲೈನ್ ಪಡೆಯಿರಿ ಕೂಡಲೇ ಅರ್ಜಿ ಸಲ್ಲಿಸಿ